Advertisement

Tag: ಅಂಕಣ

ಎಂಜಿ ರೋಡಿನಲ್ಲೊಂದು ಸುತ್ತು: ವಿನಾಯಕ ಅರಳಸುರಳಿ ಅಂಕಣ

ಅದೇನೂ ಭಾರೀ ದೊಡ್ಡ ಪಬ್ಬಲ್ಲದಿದ್ದರೂ ಅಲ್ಲಿ ವೈಭವಗಳಿಗೇನೂ ಕಮ್ಮಿಯಿರಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ಆ ಪಬ್ಬು ಮುಚ್ಚಲ್ಪಟ್ಟು, ಮುಂದೊಮ್ಮೆ ಆ ರಸ್ತೆಯಲ್ಲಿ ಹೋಗುವಾಗ ಮತ್ಯಾವುದೋ ಹೆಸರಿನ ಕಂಪನಿಯೊಂದು ಬೋರ್ಡು ತೊಟ್ಟುಕೊಂಡು ನಿಂತಿರುವುದು ಕಣ್ಣಿಗೆ ಬಿದ್ದಿತ್ತು. ಈ ಮಹಾನಗರಿಯ ಚಂಚಲತೆಯೇ ಅಂಥದ್ದು‌. ನೆನ್ನೆ ಹಳಕಲು-ಪೊದೆಗಳಿದ್ದ ಜಾಗದಲ್ಲಿ ಬೆಳಗಾಗುವಷ್ಟರಲ್ಲಿ ರಂಗ್ ಬಿರಂಗೀ ಕಟ್ಟವೊಂದು ತಲೆಯೆತ್ತಿಬಿಡುತ್ತದೆ. ಮನೆಯಂತೆ ಕಾಣುವ ಬಿಲ್ಡಿಂಗ್ ನೊಳಗೆ ನೂರಿನ್ನೂರು ಉದ್ಯೋಗಿಗಳಿರುವ ಕಂಪನಿಯೇ ಅಡಗಿಕೊಂಡಿರುತ್ತದೆ. ನೆನ್ನೆಯಷ್ಟೇ ಪ್ರಾರ್ಥನಾ ಮಂದಿರವಾಗಿದ್ದು, ಹತ್ತಾರು ಜನರ ಓಂಕಾರದಿಂದ ತುಂಬಿಹೋಗಿದ್ದ ಸಮುಚ್ಚಯವೊಂದು ನಾಳೆಯಾಗುವಷ್ಟರಲ್ಲಿ ಹತ್ತಾರು ಬಾಡಿಬಿಲ್ಡರ್‌ಗಳ ಕಸರತ್ತು ಶಾಲೆಯಾಗಿ ಬದಲಾಗಿಬಿಡುತ್ತದೆ!
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಬಿಡುಗಣ್ಣಿನ ಎರಡು ಬಿಡಿನೋಟಗಳು: ಸುಕನ್ಯಾ ಕನಾರಳ್ಳಿ ಅಂಕಣ

ಉತ್ಪಾದನೆ ಯಾರು ಮಾಡ್ತಾರೋ ಅವರಿಗೆ ಅದರ ಮೇಲೆ ಅಧಿಕಾರ ಇರಬೇಕು ಅಂತ ಒಪ್ಪಿಕೊಂಡಿರೋ ವ್ಯವಸ್ಥೆ ಒಳಗೇ ಇದ್ದುಕೊಂಡು ತಾನು ಹೊತ್ತು, ಹೆತ್ತು, ಬೆಳೆಸಿದ ಮಕ್ಕಳ ಅಧಿಕಾರವನ್ನ ವ್ಯವಸ್ಥೆಗೆ ಬಿಟ್ಟುಕೊಡಬೇಕಾದ ಅಸಹಾಯಕತೆಯಲ್ಲಿಯೂ ಸಹ ಹೆಣ್ಣು ಬದುಕಿ ಉಳಿತಾಳೆ. ವ್ಯವಸ್ಥೆ ತಮ್ಮ ತಮ್ಮ ಹುಚ್ಚಾಟಗಳಿಗೆ ಆ ಮಕ್ಕಳನ್ನ ಯುದ್ಧಕ್ಕೆ ಕಳುಹಿಸಿ ಅವಳ ಕಣ್ಣೆದುರೇ ಅವು ಹೊಸಕಿ ಹೋದರೂ ಸಹ ಮತ್ತೆ ಮತ್ತೆ ಯಾವುದೋ ನಂಬಿಕೆಯಲ್ಲಿ ಮಕ್ಕಳನ್ನ ಹುಟ್ಟಿಸಿ ಬೆಳೆಸುತ್ತಲೇ ಹೋಗುತ್ತಾಳಲ್ಲ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಕೋಮಾವೂ, ಮಂಜನ ಚಕ್ಕುಲಿಯೂ… : ವಿನಾಯಕ ಅರಳಸುರಳಿ ಅಂಕಣ

ತೊಡೆಯ ಮೇಲೆ ಪೆಟ್ಟು ತಿಂದ ಶಿವುವಿಗೆ ತಾನು ಮಂಜುವನ್ನು ಸೋಲಿಸಲಾರೆ ಎಂಬುದು ಅರ್ಥವಾಯಿತೋ ಏನೋ? ಇನ್ನೂ ಬೀಳಲಿರುವ ಒದೆಗಳಿಂದ ತಪ್ಪಿಸಿಕೊಳ್ಳಲು ಇರುವ ಏಕಮಾತ್ರ ಉಪಾಯವೆಂಬಂತೆ ಅವನು ತನ್ನ ಕಾಲು ಹಿಡಿದುಕೊಂಡು ನೆಲಕ್ಕೆ ಬಿದ್ದುಕೊಂಡು “ಅಯ್ಯೋ.. ಅಮ್ಮಾ.. ಅಯ್ಯಯ್ಯಮ್ಮಾ” ಎನ್ನುತ್ತಾ ಒದ್ದಾಡತೊಡಗಿದ. ತಾನಾಗಿ ಹೊಡೆಯಲಾಗದ ಮಂಜುವಿಗೆ ಮೇಷ್ಟರ ಕೈಯಿಂದ ಹೊಡೆಸುವ ಉಪಾಯವೂ ಅವನದಾಗಿತ್ತೋ ಏನೋ? ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿ, ಬೇಗ ಈ ವಿಷಯ ಮೇಷ್ಟರನ್ನು ಮುಟ್ಟುವಂತೆ ಮಾಡಲೆಂದು ಎದೆ, ಕಾಲು ಹಿಡಿದುಕೊಂಡು ಒದ್ದಾಡುತ್ತಾ “ಅಯ್ಯೋ.. ಅಮ್ಮಾ‌‌.. ನಂಗ್ ಉಸಿರಾಡುಕಾತಿಲ್ಯೋ.. ಅಪ್ಪಯ್ಯೋ.. ಅಬ್ಯೋ” ಎಂದು ಇನ್ನೇನು ಐಸಿಯುಗೆ ಸೇರಿಸಬೇಕಾದ ರೋಗಿಯಂತೆ ನಟಿಸತೊಡಗಿದ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಮಳೆ, ನೆನಪು ಮತ್ತು ಸಂಬಂಧ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಯಾವುದೂ ಕಳೆದು ಹೋಗದ ಹೊರತಾಗಿ ಅದರ ಮೌಲ್ಯ ನಮಗೆ ಗೊತ್ತಾಗುವುದಿಲ್ಲ ಅನ್ನುವುದೇ ಈ ಬದುಕಿನ ಅತಿದೊಡ್ಡ ವಿಪರ್ಯಾಸ. ಪ್ರತೀ ಕ್ಷಣವನ್ನೂ ಉತ್ಕಟವಾಗಿ ಜೀವಿಸಬೇಕು ಅಂದುಕೊಳ್ಳುವ ಒಂದು ಫಿಲಾಸಫಿ ಶುರು ಆಗುವುದೇ ಈ ಕಳೆದುಹೋದ ಫೀಲ್ ಬಂದ ನಂತರವೇ. ಅಷ್ಟರಲ್ಲಾಗಲೇ ನಮ್ಮ ಅರ್ಧ ಆಯುಷ್ಯ ಮುಗಿದುಹೋಗಿರುತ್ತದೆ. ಇನ್ನು ದಿನಗಳು ಕಮ್ಮಿ ಅನ್ನುವ ಅರಿವಾಗುವಾಗ ಈ ಪ್ರತೀಕ್ಷಣವನ್ನೂ ಉತ್ಕಟವಾಗಿ ಬದುಕುವ ಆಸೆಯೊಂದು ಹುಟ್ಟಿಕೊಳ್ಳುತ್ತದೆ. ಆದರೆ ಹಾಗೆ ಬದುಕುತ್ತೇವಾ? ಹೇರಿಕೊಂಡ ಜವಾಬ್ದಾರಿಯ ಮೂಟೆಗಳನ್ನು ಇಳಿಸಿ ಹಗುರ ಆಗುವುದು ಸಾಧ್ಯನಾ?
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಮೂರನೆಯ ಬರಹ

Read More

ಗುರು ಮತ್ತು ಹಕ್ಕಿಗೂಡು: ಸುಕನ್ಯಾ ಕನಾರಳ್ಳಿ ಅಂಕಣ

ಗಾಂಧೀಜಿ ಒಮ್ಮೆ ಯರವಾಡ ಜೈಲಿನಲ್ಲಿದ್ದಾಗ ಒಂದು ರಾತ್ರಿ ಬರಿಯ ದುಃಸ್ವಪ್ನಗಳೇ ಬಿದ್ದು ಬೆಚ್ಚಿದ್ದಾಗ ವಿಚಾರಿಸಿದರಂತೆ. ಹಿಂದಿನ ರಾತ್ರಿಯ ಅಡಿಗೆಯನ್ನು ಒಬ್ಬ ಕೊಲೆಗಡುಕ ಅಪರಾಧಿ ಮಾಡಿದ್ದಾನೆಂದು ತಿಳಿದು ಅಂದಿನಿಂದ ರಾತ್ರಿಯ ಊಟವನ್ನೇ ಬಿಟ್ಟರಂತೆ. ನಮ್ಮ ಸೂಕ್ಷ್ಮ ಶರೀರದ ಚೈತನ್ಯ ಇನ್ನೊಬ್ಬರಿಗೂ ಅನುಭವಕ್ಕೆ ಬರುತ್ತದೆ ಎಂದು ಅರಿವಾಗುವುದು ಬ್ರಹ್ಮವಿದ್ಯೆಯೇನೂ ಅಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ