Advertisement

Tag: ಕೆಂಡಸಂಪಿಗೆ

ಹಂಚಿ ಹಗೂರಾಗಿ, ಬೇಗುದಿಗಳನೆಲ್ಲ…

ಎಲ್ಲದರಲ್ಲೂ ಹುಳುಕು ಹುಡುಕುತ್ತಾ, ಗೋಳುಗುಟ್ಟುತ್ತಾ, ಆಪಾದಿಸುತ್ತಾ, ಕೊಂಕು ತೆಗೆಯುತ್ತಾ ಕೂರುವುದು ಸರಿಯಲ್ಲ. ಆದರೆ ಬದುಕೆಂದರೆ ಸಿಹಿ-ಕಹಿಗಳೆರಡೂ ಇರುವಾಗ, ಸಿಹಿಯ ಮಾತನ್ನೇ ಹಂಚುತ್ತಾ, ಕಹಿಯನ್ನೆಲ್ಲಾ ಒಳಗೇ ನುಂಗಿ ನುಂಗಿ ನಂಜುಂಡರಾಗುವುದು ನಮ್ಮ ಮೇಲೆ ನಾವೇ ಹೊರೆಸಿಕೊಳ್ಳುವ ಭಾರ. ಹತ್ತರಲ್ಲಿ ಒಂದು ಸಲವಾದರೂ ನೋವನ್ನು ನೋವಾಗಿ, ಅಳುವನ್ನು ಅಳುವಾಗಿ, ಸೋಲನ್ನು ಸೋಲಾಗಿ ತೋರಿಸಿಕೊಳ್ಳುವ ಸ್ವಾತಂತ್ರ್ಯ ನಾವು ರೂಢಿಸಿಕೊಳ್ಳಬೇಕಿದೆ.
ಎಸ್ ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

Read More

ಮಸಲ್‌ ಮೆಮೊರಿ ಮತ್ತು ನಾವು….

ಬರೇ ಜ್ಞಾನ, ವಿಪರೀತ ಮಾಹಿತಿಯಿಂದ ಏನೂ ಪ್ರಯೋಜನವಿಲ್ಲ. ಮನುಷ್ಯನ ನೋವನ್ನು ಗೌರವಿಸುವ, ಅರ್ಥಮಾಡಿಕೊಳ್ಳುವ ಭಾಗವಾಗಿ ಜ್ಞಾನ, ಪುಸ್ತಕಗಳು ಮೂಡಿ ಬರಬೇಕು. ಇಲ್ಲದಿದ್ದರೆ ಜ್ಞಾನ, ಮಾಹಿತಿಯೆಲ್ಲ ಮನುಷ್ಯನಿಂದ, ಬದುಕಿನಿಂದ ವಿಮುಖವಾಗುತ್ತದೆ, ಇದ್ದೂ ಇಲ್ಲದಂತೆ. ಏನೂ ಪ್ರಯೋಜನವಾಗುವುದಿಲ್ಲ. ಇಂತಹ ಜ್ಞಾನ, ಮಾಹಿತಿಯ ಆಧಾರದ ಮೇಲೆ ಬದುಕು, ನಾಗರಿಕತೆ ಯಾಂತ್ರಿಕವಾಗಿರುತ್ತದೆ, Muscle memoryಯನ್ನು ಪ್ರೋತ್ಸಾಹಿಸುತ್ತದೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿ

Read More

ದಾರಾಸುರಂನ ಐರಾವತೇಶ್ವರ ದೇಗುಲದ ಒಳಗೂ… ಹೊರಗೂ…

ನಮಗೆ ರಥ ಅಂದ ಕೂಡಲೇ ನೆನಪಾಗುವುದು ಹಂಪಿಯ ವಿಜಯ ವಿಠ್ಠಲ ದೇವಾಲಯದ ರಥ, ಆಮೇಲೆ ಕೋನಾರ್ಕಿನ ಸೂರ್ಯ ದೇವಾಲಯದ ಚಕ್ರಗಳು. ಆದರೆ ಅದೇ ರೀತಿ ಇರುವ ರಥದ ಕಲ್ಪನೆಯಲ್ಲಿ ಕಟ್ಟಿರುವ ಇನ್ನೂ ಹಲವು ದೇವಾಲಯಗಳಿವೆ. ತಾಡಿಪತ್ರಿಯ ರಥದ ಮಾದರಿಯಲ್ಲಿರುವ ಗರುಡಗಂಬ, ಕುಂಭಕೋಣಂನ ಸಾರಂಗಪಾಣಿ ದೇವಾಲಯ ಹಾಗೂ ದಾರಾಸುರಮ್‌ನ ದೇವಾಲಯ ತಕ್ಷಣಕ್ಕೆ ನೆನಪಿಗೆ ಬರುವ ನಾನು ಕಂಡ ರಥದ ದೇವಾಲಯಗಳು.
‘ದೇವಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ಬರಹ

Read More

ರಘುನಾಥ್‌ ಕೆ. ಅನುವಾದಿಸಿದ ಭೂಮಿಕಾ ರಾಜನ್‌ ಕಥೆ

ಅವಳು ಕಿರುನಿದ್ದೆಯಿಂದ ಎದ್ದಾಗ ಈಗಾಗಲೇ ಅಜ್ಜಯ್ಯನ ಅಂಗಡಿಗೆ ಸಾಮಾನಗಳ ಪಟ್ಟಿ ಕೊಟ್ಟು ನಾಲ್ಕು ಗಂಟೆಗಳಾದ ನೆನಪು ಆಯಿತು. ಮೊದಲು ತಡವಾಗಬಹುದೆಂದು ಅಮ್ಮನಿಗೆ ಬೇಕಾದ ಅಕ್ಕಿಯನ್ನು ತರಲು ಚೀಲ ಒಯ್ಯುವುದು ಎಂದುಕೊಂಡಳು. ಅಂಗಡಿಯವನು ಇನ್ನೊಂದು ಗಂಟೆಯಲ್ಲಿ ಸಾಮಾನು ತಂದುಕೊಡುವುದಾಗಿ ಹೇಳಿದ್ದರಿಂದ ಆ ಯೋಚನೆ ಕೈಬಿಟ್ಟಳು. ಕಿರಿಕಿರಿ ಉಂಟಾಗಿ ಅಂಗಡಿಗೆ ಫೋನ್ ಮಾಡಿದಳು “ತಲುಪಲು ಸಾಧ್ಯವಾಗುತ್ತಿಲ್ಲ” ಎಂಬ ಉತ್ತರ ಬಂದಿತು.
ರಘುನಾಥ್‌ ಕೆ. ಅನುವಾದಿಸಿದ ಭೂಮಿಕಾ ರಾಜನ್‌ ಕಥೆ “ಶಾಹೀನಳ ದುಃಸ್ವಪ್ನ” ನಿಮ್ಮ ಈ ಭಾನುವಾರದ ಓದಿಗೆ

Read More

ಅನ್ ರಿಯಲ್ ಲೋಕದಲ್ಲಿ ಶಾಂತಿ ಮಂತ್ರ ಜಪ

ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾಗ ಈ ಬಲು ದೀರ್ಘ ಪ್ರೋಸ್/ ಪೊಯೆಟ್ರಿ, ನವ್ಯ ಕಾವ್ಯ ಬಹಳ ದಿನಗಳ ಕಾಲ ನನ್ನನ್ನು ಕಾಡಿತ್ತು. ಅದನ್ನು ಕೈಲಿ ಹಿಡಿದುಕೊಂಡು ಎಲ್ಲವನ್ನೂ ಬಿಟ್ಟು ಯಾವುದೊಂದೂ ವ್ಯವಸ್ಥೆಗೆ ಸಿಲುಕದೆ ಪ್ರಪಂಚ ಸುತ್ತುವ ಇರಾದೆ ಹುಟ್ಟಿತ್ತು. ಆ ಕಾಲದಲ್ಲಿ ಅವು ನಾನು ಮನೆಬಿಟ್ಟು ಹೋಗುವ, ಹುಟ್ಟಿ ಬೆಳೆದ ಕುಟುಂಬವನ್ನು ತ್ಯಜಿಸುವ ನಿರ್ಧಾರ ತೆಗೆದುಕೊಂಡಿದ್ದ ದಿನಗಳು. ಕಾಲೇಜು ಹುಡುಗಿ ಮನೆಬಿಟ್ಟು ಹೋದಮೇಲೆ ಹೇಗೆ ಬದುಕುವುದು ಎನ್ನುವ ಚಿಂತನೆಯಲ್ಲಿದ್ದ ದಿನಗಳು. ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ