Advertisement

Tag: ಕೆಂಡಸಂಪಿಗೆ

ಆಕ್ಸಿಡೆಂಟೂ… ಅಜ್ಜಿಯ ಆರೈಕೆಯೂ: ಸುಮಾವೀಣಾ ಸರಣಿ

ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡು ಬಿಟ್ಟಳು. ನನಗೋ ಕೋಪವೆಂದರೆ ಕೋಪ. “ನಾನು ಪಾಯಸ ಕುಡಿದಿದ್ದೇನೆ’’ ಅಂದರೆ ಕೇಳಲೇ ಇಲ್ಲ. ಗಲ್ಲ ಸವರಿ, ತಲೆ ಸವರಿ “ಊಟ ವೇಸ್ಟ್ ಮಾಡಬಾರದು….!” ಎನ್ನುತ್ತಾ ತಿನ್ನಿಸಲು ಬಂದರೆ ನಾನು ತಿನ್ನುತ್ತೇನೆಯೇ? ಸಾಧ್ಯನಾ? ತುತ್ತನ್ನಷ್ಟೇ ತಿಂದೆ ಕೋಪದಿಂದ. ತನ್ನ ಕೈಯ್ಯಲ್ಲೇ ನನ್ನ ಬಾಯೊರೆಸಿ “ಜಾಗ್ರತೆ ಈಗ್ ಹೋಗು ಸಂಜೆ ಬೇಗ ಸೈಡಲ್ಲಿ ಬಾ” ಎಂದು ಟಾಟಾ ಹೇಳಿಬಿಟ್ಟಳು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಹೋಮ್‌ವರ್ಕ್‌ ಎಂದರೇನು?: ಅನುಸೂಯ ಯತೀಶ್ ಸರಣಿ

ಆ ಮೂವರು ಮಕ್ಕಳು ನಮ್ಮ ಶಾಲೆಯಲ್ಲಿ ಹೋಮ್ ವರ್ಕ್ ಮಾಡದೇ ಬರುವ ಶುದ್ಧ ಸೋಂಬೇರಿಗಳು. ಇವರದು ಮುಗಿಯದ ಅನುದಿನದ ಕಥೆ. ಅವರನ್ನ ನಿತ್ಯ ಹೀಗೆ ಕಾರಣಗಳನ್ನು ಹುಡುಕಿ ವಹಿಸಿಕೊಳ್ಳುತ್ತಾ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುತ್ತಿರುವ ವ್ಯಾಮೋಹಿ ಅಮ್ಮಂದಿರು ಅವರು ಎಂದರು. ಈ ಮಾತು ಕೇಳಿ ನನ್ನ ಕೈಗೆ ಸಿಕ್ಕಂತಾಗಿದ್ದ ಆಕಾಶ ತಲೆ ಮೇಲೆ ಅಪ್ಪಳಿಸಿದಂತಾಯಿತು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

Read More

ಸೈಕಲ್‌ನಿಂದ ಮೋಟಾರ್ ಸೈಕಲ್‌ಗೆ ಸಿಕ್ಕ ಪ್ರಮೋಷನ್: ಮಾರುತಿ ಗೋಪಿಕುಂಟೆ

ರಜಾ ದಿನಗಳಲ್ಲಿ ಊಟ ಮಾಡುತ್ತಿದ್ದುದೆ ಕಡಿಮೆ. ಒಮ್ಮೊಮ್ಮೆ ಇದೇ ಕಾರಣಕ್ಕೆ ಏಟುಗಳು ಬೀಳುತ್ತಿದ್ದವು. ನಾನು ಅದರಲ್ಲಿ ಸೈಕಲ್ ಚಕ್ರವನ್ನು ದಾನ ಮಾಡುತ್ತಿದ್ದೆ. ಇದಕ್ಕೆ ಕಾರಣವು ಇತ್ತು. ಪಕ್ಕದ ಬರಗೂರು ನಮ್ಮಮ್ಮನ ತವರು ಮನೆಯಾದ್ದರಿಂದ ನಮ್ಮ ಮಾವ ಬಳಸಿ ಬಿಸಾಡಿದ ಚಕ್ರಗಳನ್ನು ಸುಲಭವಾಗಿ ತಂದುಕೊಡುತ್ತಿದ್ದ. ಒಂದೊಂದ್ಸಾರಿ ನಮ್ಮ ಚಿಕ್ಕಪ್ಪನೂ ತಂದುಕೊಟ್ಟಿದ್ದು ಉಂಟು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ಕತೆ

ಸೂರ್ಯನಿಗೋ ಯಾರು ಹುಟ್ಟಿದರೆಷ್ಟು? ಯಾರು ಸತ್ತರೆಷ್ಟು? ಅವನ ಕೆಲಸ ಅವನದ್ದೇ. ಬೆಳಗಿನ ಮೋಟಾರು ಗಾಡಿ ಬಂದು ಹೋದ ಸದ್ದಾಯಿತು. ಬಸವಣ್ಣನ ಅಣ್ಣನ ಮಗ ಮಲ್ಲೇಶ ಬಾಗಿಲಲ್ಲಿ ಬಂದು ನಿಂತಿದ್ದ. ನಿಧಾನಕ್ಕೆ ಬಸವಣ್ಣನ ಬಳಿಗೆ ಬಂದ. ಬೆನ್ನು ಸವರಿದ. ಅವರಿಬ್ಬರೆ ತಾನೆ ಗೋಪುವನ್ನು ಕೊನೆಯ ಬಾರಿಗೆ ನೋಡಿದವರು. ಕಾಣುತ್ತಿದ್ದಂತೇ ಕೈಜಾರಿ ಬಿದ್ದ ಗೋಪು ಅಪ್ಪಾ ಅಪ್ಪಯ್ಯಾ ಎಂದು ಕೂಗಿದ್ದೊಂದೇ ಗೊತ್ತು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ಕತೆ “ಭೂಮಿಯೊಳಗಿದೆ ಬದುಕು” ನಿಮ್ಮ ಓದಿಗೆ

Read More

ಊರೆಂಬ ಹರಿಗೋಲು: ಚಂದ್ರಮತಿ ಸೋಂದಾ ಸರಣಿ

ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂದು ನಮಗೆಲ್ಲ ಸಂಭ್ರಮವೋ ಸಂಭ್ರಮ. ಹಿಂದಿನ ದಿನವೇ ನಮ್ಮ ಮೇಷ್ಟ್ರು ಯಾರ‍್ಯಾರಿಗೆ ಏನೇನು ಕೆಲಸ ಎಂದು ತಿಳಿಸುತ್ತಿದ್ದರು. ಸ್ವಲ್ಪ ದೊಡ್ಡ ಮಕ್ಕಳು ಹಿಂದಿನ ಸಂಜೆಯೇ ತಮ್ಮನೆಯ ಹಿತ್ತಲಿನಲ್ಲಿರುವ ಮಾವಿನ ಗಿಡದಿಂದ ಮಾವಿನ ಸೊಪ್ಪನ್ನು ತಂದು ಅದನ್ನು ದಾರದಲ್ಲಿ ಪೋಣಿಸಿ ಶಾಲೆಯ ಬಾಗಿಲಿಗೆ ಕಟ್ಟುತ್ತಿದ್ದರು. ಹೆಚ್ಚಾಗಿ ಇದು ಗಂಡುಮಕ್ಕಳ ಕೆಲಸವಾಗಿತ್ತು. ಆಗ ನಮಗೆ ಸಮವಸ್ತ್ರದ ಕಟ್ಟುಪಾಡಿರಲಿಲ್ಲ. ಹಾಗಾಗಿ ನಮ್ಮ ಬಳಿ ಇರುವ ಒಳ್ಳೆಯ ಬಟ್ಟೆಯನ್ನು ಧರಿಸಿ, ಎಂಟುಗಂಟೆಗೆ ನಾವು ಶಾಲೆಯಲ್ಲಿರುತ್ತಿದ್ದೆವು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ