ಬಾವೋಬಾಬ್ ಗುಲಾಬ್ ಸೆನೆಗಲ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಬರ ಬಂದದ್ದರಿಂದಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿತ್ತು. ಮಾಲಿ ಪ್ರದೇಶದ ಮನಾಂತಲಿ ಅಣೆಕಟ್ಟಿನ ನೀರನ್ನು ಬಳಸಿಕೊಂಡ ಕಾರಣ ಈ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಯಿತು. ಸೆನೆಗಲ್‌ನ ಹವಾಮಾನ ಜಾನುವಾರುಗಳ ಸಾಕಣೆಗೆ ಪೂರಕವಾಗಿದೆ. ಸವನ್ನಾ ವಿಧದ ಸಸ್ಯವರ್ಗ ಇರುವುದರಿಂದಾಗಿ ಜಾನುವಾರುಗಳ ಆಹಾರಕ್ಕೆ ಯಾವುದೇ ತೊಂದರೆಯಿಲ್ಲ. ದನ, ಮೇಕೆ, ಕುರಿ, ಕುದುರೆ, ಒಂಟೆ, ಕತ್ತೆ, ಹಂದಿ ಮೊದಲಾದ ಪ್ರಾಣಿಗಳನ್ನು ಸಾಕುತ್ತಾರೆ ಸೆನೆಗಲ್ ಜನರು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಸೆನೆಗಲ್ ದೇಶದ ಕುರಿತ ಬರಹ ನಿಮ್ಮ ಓದಿಗೆ
