ಸ್ವೋಪಜ್ಞ ಮನಸ್ಸಿನ ಉದಾತ್ತ ಮಾನವ: ರಂಜಾನ್ ದರ್ಗಾ ಸರಣಿ
ಹೊರಗೆ ಸ್ಥಿತಪ್ರಜ್ಞರಂತೆ ಇದ್ದ ಅನಂತಮೂರ್ತಿ ಅವರು ಒಳಗೆ ಸ್ಥಿತಿಪ್ರಜ್ಞರಾಗಿದ್ದರು. ಕುಹಕ ಮಾತುಗಳಿಗೆ ಅವರೆಂದೂ ವಿಚಲಿತರಾಗುತ್ತಿರಲಿಲ್ಲ. ಎಲ್ಲ ಟೀಕೆಗಳನ್ನು ಸಹಿಸಿಕೊಳ್ಳುತ್ತ ಸಮಾಧಾನ ಚಿತ್ತದಿಂದಲೇ ತಾವು ಕಂಡುಕೊಂಡ ನಿಜದ ನಿಲವಿಗೆ ಬದ್ಧರಾಗಿರುತ್ತಿದ್ದರು. ಮನುಷ್ಯನ ಒಳಿತಿಗಾಗಿ ಅವರು ಎಂಥ ಅವಮಾನವನ್ನೂ ಎದುರಿಸಲು ಸಿದ್ಧರಾಗಿದ್ದರು. ಮನುಷ್ಯತ್ವಕ್ಕಿಂತ ಯಾವುದೇ ಧರ್ಮ, ಜಾತಿ, ಕ್ರಾಂತಿ ಮತ್ತು ದೇಶ ಕೂಡ ದೊಡ್ಡದಲ್ಲ ಎಂಬುದರಲ್ಲಿ ಅವರಿಗೆ ಅಚಲವಾದ ವಿಶ್ವಾಸವಿತ್ತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 75ನೇ ಕಂತು ನಿಮ್ಮ ಓದಿಗೆ