Advertisement

Tag: ಕೆಂಡಸಂಪಿಗೆ

ಕ್ರೌರ್ಯಕ್ಕೆ ಸಿಕ್ಕ ಮಕ್ಕಳು…: ಜಯಲಕ್ಷ್ಮಿ ಪಾಟೀಲ್ ಅಂಕಣ

ನಮ್ಮಲ್ಲೂ ಕೆಲಸ ಕೇಳಿ ಬಂದ ನೂರಾರು ಜನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ ರಾಜಕಾರಣಿ ಇದ್ದಾನೆ, ಹೈಸ್ಕೂಲು ಓದುತ್ತಿದ್ದ ದಾನಮ್ಮ ಎಂಬ ಹೆಣ್ಣುಮಗುವನ್ನು ಅತ್ಯಾಚಾರವೆಸಗಿ ಕೊಂದ ಸಹಪಾಠಿಗಳಿದ್ದಾರೆ, ಸೌಜನ್ಯಾ ಎಂಬ ಹುಡುಗಿ ಕಾಲೇಜಿಗೆ ಹೋದವಳು ಮರಳಿ ಮನೆ ತಲುಪದಂತೆ ಅತ್ಯಾಚಾರವೆಸಗಿ ಕೊಂದುಹಾಕಿದ ದುರುಳರಿದ್ದಾರೆ, ಜಾತಿಯ ಕಾರಣಕ್ಕಾಗಿ ಕರುಳ ಕುಡಿಯನ್ನೆ ಹೊಸಕಿಹಾಕಿದ ಹೆತ್ತವರಿದ್ದಾರೆ, ಧರ್ಮದ ಹೆಸರಲ್ಲಿ ಒಂಬತ್ತು ವರ್ಷದ ಹೆಣ್ಣುಮಗುವಿನ ಮೇಲೆ ದೇವಸ್ಥಾನದಲ್ಲೆ ಮುಗಿಬಿದ್ದು ಅತ್ಯಾಚಾರವೆಸಗಿದ ಮಹಾಮಹಿಮರಿದ್ದಾರೆ, ಹೆಂಗಸರು ಮನೆಯ ಹೊರಗೆ ದುಡಿಯತೊಡಗಿದರೆ ಅತ್ಯಾಚಾರಗಳಾಗುವುದು ಸಹಜ ಎಂಬರ್ಥದಲ್ಲಿ ಮಹಾಜ್ಞಾನಿ ರಾಜಕಾರಣಿಯೊಬ್ಬ ಹೇಳಿಕೆ ನೀಡಿ ಮೀಸೆ ತಿರುವುತ್ತಾನೆ…
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

Read More

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಕ್ರಮ ತಪ್ಪಿದ ನಗರ”

“ನೀವು ಎಂದಾದರೂ ಆಕಾಶದ ನಕ್ಷತ್ರಗಳನ್ನು ಗಮನಿಸಿದ್ದೀರಾ?” ಅವನು ಕೇಳಿದ. ಅವನ ಧ್ವನಿ ಹಳೆಯ ರೇಡಿಯೋ ಸ್ಟೇಷನ್‌ನಿಂದ ಬರುವ ಸಿಗ್ನಲ್‌ನಂತೆ ಇತ್ತು. ಅದಕುತ್ತರವಾಗಿ “ಹೌದು, ನೋಡಿದ್ದೇನೆ.” ಎಂದೆ. “ಆಕಾಶದಲ್ಲಿ ನಕ್ಷತ್ರಗಳು ಸುಮ್ಮನೆ ಬಿದ್ದಿಲ್ಲ” ಅವನು ಹೇಳುತ್ತಾ ಒಂದು ನೋಟಿನ ಮೇಲೆ ಒಂದು ನಾಣ್ಯವನ್ನು ಇಟ್ಟ. “ಅವುಗಳಿಗೊಂದು ಕ್ರಮವಿದೆ. ಆ ಕ್ರಮ ತಪ್ಪಿದರೆ ಈ ಜಗತ್ತು ಕುಸಿದು ಬೀಳುತ್ತದೆ. ಈ ಸ್ಕೈವಾಕ್ ಕೆಳಗೆ ಹರಿಯುವ ಸಾವಿರಾರು ಕಾರುಗಳು, ಈ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ನಿಮ್ಮ ಕೈಯಲ್ಲಿರುವ ಈ ಕಾಫಿ ಕಪ್… ಎಲ್ಲವೂ ಒಂದು ನಿಖರವಾದ ಜಾಗದಲ್ಲಿ ಇರಬೇಕು.”
ಕಾರ್ತಿಕ್ ಕೃಷ್ಣ ಬರೆದ ಕತೆ “ಕ್ರಮ ತಪ್ಪಿದ ನಗರ” ನಿಮ್ಮಈ ಭಾನುವಾರದ ಬಿಡುವಿನ ಓದಿಗೆ

Read More

ಅಭಿಮಾನಿಗಳ ಆಯರಿಯೂ, ಅಮ್ಮ ಹಾಕುತ್ತಿದ್ದ ಬರೆಗಳೂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂದೊಂದು ಪ್ರಯೋಗದಲ್ಲೂ ಲೋಹಿತಾಶ್ವನ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚುಮಾಡಿಕೊಳ್ಳುತ್ತಿದ್ದೆ. ಜನರೆಲ್ಲ ಮನೆಗೆ ಬರಲು ಶುರುವಿಟ್ಟರು. ಭಾಗಮ್ಮನವರು ಇಂತಹದಕ್ಕೆಲ್ಲ ಸೊಪ್ಪೇ ಹಾಕುತ್ತಿರಲಿಲ್ಲ. ಎಂಟು ವರ್ಷ ಮೀರಿದಂತೆ ದೇಹ ಬದಲಾವಣೆಯಾಗುತ್ತಿತ್ತು. ನನ್ನ ಮುಖ, ಗಲ್ಲ, ಎದೆ, ಕೈ ತೋಳುಗಳು, ಇಡೀ ದೇಹವೇ ಅಗಲಿಸುತ್ತಿದ್ದ ವಯಸ್ಸು. ಅದಕ್ಕಾಗೋ ಅಥವಾ ಅಸೂಯೆಯಿಂದಲೋ ನಾನ್ಯಾರ ಬಳಿಯಾದರೂ ಮಾತಿಗೆಂದು ನಿಂತರೂ ಬೈದು, ಹೊಡೆದು ರಾದ್ಧಾಂತ ಮಾಡುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಎಂಟನೆಯ ಕಂತು

Read More

ಪುಸ್ತಕ ಲೋಕಾರ್ಪಣೆ ಮತ್ತು ಮಾರಾಟ: ಎಚ್. ಗೋಪಾಲಕೃಷ್ಣ ಸರಣಿ

ಯಾರೋ ನನ್ನನ್ನು ಗಮನಿಸುತ್ತಾ ಇದ್ದಾರೆ ಎಂದೂ ಅನಿಸಬೇಕೇ..? ನರಸಿಂಹಯ್ಯನವರ ಕಾದಂಬರಿ ಓದಿ ಬೆಳೆದವರಿಗೆ ಈ ಸನ್ನಿವೇಶ ಒಟ್ಟಿಗೇ ಎಂಟೋ ಹತ್ತೋ ಭಯಾನಕ ಭೂತಗಳು, ನಡು ಹಗಲಿನಲ್ಲಿ ಮೋಹಿನಿಯ ಕಾಟ, ಮಟಮಟ ಮಧ್ಯಾಹ್ನ ಕಾಡಿತ್ತು ಕರಿ ಮೋಹಿನಿ… ಮೊದಲಾದ ಆಕರ್ಷಕ ಶೀರ್ಷಿಕೆಗಳು ಇರುವ ಹಲವಾರು ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ಮತ್ತು ಬರಹದಲ್ಲಿ ತಾನೇ ಸೆಂಟರ್ ಫಿಗರ್ ಆಗಿ ಮಿಂಚುವ ಅವಕಾಶಗಳೂ ಸಹ ಹೇರಳವಾಗಿದ್ದವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೭ನೇ ಬರಹ ನಿಮ್ಮ ಓದಿಗೆ

Read More

ಗೃಹ ತಪಸ್ವಿನಿಯ ಮೌನದ ಮಾತು: “ಊರ್ಮಿಳಾ” ಕಾದಂಬರಿಯ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರಹ

ನಿದ್ರೆಯನ್ನು ಯಾರಾದರು ಸ್ವಿಕರಿಸಿದರೆ ಮಾತ್ರ ನಾನು ಒಪ್ಪುವೆ ಎಂದಾಗ ಲಕ್ಷ್ಮಣ ನನ್ನ ನೆನಪಲ್ಲೆ ವಿರಹದಲ್ಲಿರುವೆ ಪತ್ನಿ ಊರ್ಮಿಳೆಗೆ ನನ್ನ ಪರವಾದ ನಿದ್ರೆ ಕರುಣಿಸು. ವನವಾಸದ ಅವಧಿ ಮುಗಿಯುವರೆಗೂ ಎಂದಾಗ ನಿದ್ರಾ ದೇವತೆ ಹಾಗೆ ಆಗಲಿ ತಥಾಸ್ತು ಎಂದು ಊರ್ಮಿಳೆ ಬಳಿ ಬಂದ ದೇವಿ ಊರ್ಮಿಳೆ ನಿನ್ನ ಪತಿ ನಿನಗೆ ಅವನ ಪರವಾದ ನಿದ್ರೆಯನ್ನು ಸ್ವಿಕರಿಸಲು ಹೇಳಿರುವನು.
ವಿಜಯಾ ವಿಷ್ಣುಭಟ್ ಬರೆದ “ಊರ್ಮಿಳಾ” ಕಾದಂಬರಿಯ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ್ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ