Advertisement

Tag: ಕೆಂಡಸಂಪಿಗೆ

ಯೆಲ್ಲೋಸ್ಟೋನ್ : ಸತ್ಯಂ ಶಿವಂ ಸುಂದರಂ

ಇಲ್ಲಿನ ಬಿಸಿನೀರ ಬುಗ್ಗೆಯ ಅನುಭವವನ್ನು ಸ್ವಲ್ಪವಾದರೂ ಪಡೆದುಕೊಳ್ಳಬೇಕೆಂದಲ್ಲಿ ನೀವು ಈ ಪರೀಕ್ಷೆ ಉತ್ತರ ಬಾಗಿಲಿನ ಹೊರಗೆ ಅನತಿ ದೂರದಲ್ಲಿ ಹರಿವ ಗಾರ್ಡನರ್ ನದೀತೀರಕ್ಕೆ ನಡೆದುಕೊಂಡು ಹೋಗಬೇಕು. ಅಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ತಣ್ಣಗೆ ಹರಿವ ನದಿಗೆ ಪಕ್ಕದ ಭೂಮಿಯಾಳದೊಳಗಿಂದ ಬಿಸಿನೀರ ಬುಗ್ಗೆಯೊಂದು ಹರಿದು ಬಂದು ಸೇರಿಕೊಳ್ಳುತ್ತೆ. ಇಲ್ಲಿ ಕೂತರೆ ಸ್ನಾನದ ನೀರನ್ನು ಹದಮಾಡಿಕೊಳ್ಳುವಂತೆ ಬಿಸಿ ನೀರು ತಣ್ಣೀರು ಬೆರೆಸಿಕೊಳ್ಳುತ್ತ ಬೆಚ್ಚಗೆ ಕುಳಿತುಕೊಳ್ಳಬಹುದು.
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ಅಮೆರಿಕಾದ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನದ ಕುರಿತು ಬರೆದಿದ್ದಾರೆ ವೈಶಾಲಿ ಹೆಗಡೆ

Read More

ಕತೆ ಹೇಳಿಸಿಕೊಳ್ಳುವ ಉಮ್ಮ, ಪುಸ್ತಕ ಕೊಡಿಸು ಎನ್ನುವ ಬಾಪಾ

ತಾನು ಕತೆಗಾರನೆಂದು ಹೇಳಿಕೊಳ್ಳುವ ಮುನವ್ವರ್‌ ಜೋಗಿಬೆಟ್ಟು ಅವರ ಅಂತರಂಗದಲ್ಲೊಂದು ಹಾಡಿದೆ. ಅದು ಅವರ ಪರಿಸರ ಪ್ರೀತಿಯ ಹಾಡು. ಅದೇ ಪ್ರೀತಿಯಲ್ಲಿ ಅವರು ಕೆಂಡಸಂಪಿಗೆಗೆ ಸರಣಿ ಬರಹಗಳನ್ನು ಬರೆಯುತ್ತಾ ತಮ್ಮ ಬರವಣಿಗೆಯನ್ನು ಮತ್ತಷ್ಟು ಚಂದಮಾಡಿಕೊಂಡರು. ʻಇಷ್ಕಿನ ಒರತೆಗಳುʼ ಎಂಬ ಕವನ ಸಂಕಲನ ಪ್ರಕಟಿಸಿದರು. ಅವರಿಗೆ ಇಂದು ವಿಜಯಕರ್ನಾಟಕ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿದೆ. ಈ ಬಹುಮಾನ ಬಂದ ಖುಷಿಯಲ್ಲಿ ತುಂಬಾ ಮಾತನಾಡಿದರು.

Read More

ಜಿ.ಟಿ. ನಾರಾಯಣರಾವ್ ಹೇಳುವ ಎನ್‌ಸಿಸಿ ದಿನಗಳ ಕಥೆಗಳು

ಇಲ್ಲಿ ಬರುವ ವೈಜ್ಞಾನಿಕ ವಿವರಣೆಗಳು ಮಾತ್ರ ಎಲ್ಲರಿಗಲ್ಲ. ಅದು ವಿಜ್ಞಾನದಲ್ಲಿ ಆಸಕ್ತಿಯಿದ್ದು ಅರ್ಥಮಾಡಿಕೊಳ್ಳಲು ಶ್ರಮ ಹಾಕಲು ಸಿದ್ಧರಿರುವವರಿಗೆ ಮಾತ್ರ. ಕನ್ನಡದಲ್ಲಿ ಇರುವ ಕಾರಣ ಕೆಲ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಅದು ಈ‌ ಪುಸ್ತಕ ಅಂತಲ್ಲ. ಎಲ್ಲಾ ವೈಜ್ಞಾನಿಕ ಗ್ರಂಥಗಳನ್ನು ಕನ್ನಡೀಕರಿಸಬೇಕಾದರೆ ಆಗುವ ಸಾಮಾನ್ಯ ಸಮಸ್ಯೆ. ಪದಗಳನ್ನು ಕನ್ನಡದಕ್ಕೆ ತರುವುದು ಬಹಳ ಕಷ್ಟ. ನನ್ನ ಪ್ರಕಾರ ಅವುಗಳನ್ನು ಆಂಗ್ಲದಿಂದ ನೇರವಾಗಿ ಬಳಕೆ ಮಾಡುವುದೇ ಉತ್ತಮ‌. ಕನ್ನಡ ಸಂಸ್ಕೃತ, ಪರ್ಶಿಯನ್ ಮೊದಲಾದ ನುಡಿಗಳಿಂದ ಪದಗಳನ್ನು ಸ್ವೀಕರಿಸಿರುವ ಹಾಗೇ ಆಂಗ್ಲದಿಂದಲೂ ಸ್ವೀಕರಿಸುತ್ತದೆ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

Read More

ಅವಳನ್ನು ಅನ್ಯಗ್ರದ ಏಲಿಯನ್‌ಳಂತೆ ನೋಡತೊಡಗಿದ್ದರು

ಆಧುನಿಕತೆಯ ಬಣ್ಣ ಅಷ್ಟೊಂದು ಮೆತ್ತಿಕೊಂಡಿರದಿದ್ದ ನಮ್ಮ ಕಾಲೇಜಿಗೆ ಆಗ ಒಂದು ಹುಡುಗಿ ಜೀನ್ಸ್ ತೊಟ್ಟು ಬಂದಿರುವುದೇ ದೊಡ್ಡ ವಿಷಯ ಆಗಿಹೋಯಿತು. ಅಂದು ಅವಳನ್ನು ಯಾವುದೋ ಅನ್ಯಗ್ರಹವೊಂದರಿಂದ ಬಂದಿಳಿದ ಏಲಿಯನ್‌ಳಂತೆ ಎಲ್ಲಾ ಹುಡುಗರು ಅವಳನ್ನೆ ದಿಟ್ಟಿಸತೊಡಗಿದ್ದರು. ಅವಳ ಆ ಬಟ್ಟೆ ಕಂಡು ಆಡಿಕೊಂಡು ನಗುವುದು ಕೊಂಕು ಮಾತನಾಡುವುದು ಶುರು ಮಾಡಿದ್ದರು. ಹುಡುಗರ ವರ್ತನೆ ಎಷ್ಟು ಅತಿರೇಕಕ್ಕೆ ಹೋಯಿತೆಂದರೆ ಆ ಹುಡುಗಿ ತಾನೇನೋ ಮಹಾಪರಾಧ ಮಾಡಿ ಸಿಕ್ಕಿಬಿದ್ದಳೇನೋ ಎನ್ನುವ ಮನೋಭಾವನೆಯಲ್ಲಿ ಕಾಲೇಜು ಮುಗಿಯುವವರೆಗೂ ತಲೆ ತಗ್ಗಿಸಿಕೊಂಡೆ ಕೂಡಬೇಕಾಯಿತು.
ಇಸ್ಮಾಯಿಲ್‌ ತಳಕಲ್‌ ಅಂಕಣ

Read More

ಪದಗಳಿಗೆ ಸಿಗದ ಫಕೀರ

ಭಾರತದಿಂದ ಹೊರಡುವ ಮೊದಲು ಮಾಂಸಾಹಾರ ಮಾಡುವುದಿಲ್ಲ, ವೈನ್ ಕುಡಿಯುವುದಿಲ್ಲ ಎಂದು ತಾಯಿಗೆ ಮಾತು ಕೊಟ್ಟು ಹೊರಟವರು ಗಾಂಧೀಜಿ . 20 ಬ್ಯಾರನ್ ಕೋರ್ಟ್ ರಸ್ತೆಯಲ್ಲಿ ಇನ್ನರ್ ಟೆಂಪಲ್‌ಗೆ ಭರ್ತಿ ಆಗುವಾಗ ಉಳಿದಿದ್ದ ಮನೆಯ ಮಾಲಕಿ ವಾರಕ್ಕೆ ಮೂವತ್ತು ಶಿಲ್ಲಿಂಗ್ ಬಾಡಿಗೆ ಪಡೆಯುತ್ತಿದ್ದಳು. ಆದರೆ ಸಸ್ಯಾಹಾರ ಒದಗಿಸುವುದು ಆಕೆಗೆ ಕಷ್ಟ ಆಗುತ್ತಿತ್ತು. ಊಟ ಕೆಟ್ಟದಾಗಿರುವುದು, ಹಸಿದುಕೊಂಡೇ ದಿನಕಳೆಯುತ್ತಿದ್ದುದನ್ನು ಗಾಂಧೀಜಿ ಬೇರೆ ಬೇರೆ ಸಂದರ್ಭದಲ್ಲಿ ನೆನಪಿಸಿದ್ದಿದೆ. ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಗಾಂಧೀಜಿಯವರ ಲಂಡನ್‌ ವಾಸದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ