ಮಲೆನಾಡಿನ ಗದ್ದೆಗಳಲ್ಲಿ ನೆಟ್ಟಿ ಸಂಭ್ರಮ: ಭವ್ಯ ಟಿ. ಎಸ್. ಸರಣಿ
ಹೂಟಿ ಮಾಡಿದ ನೆಲದ ಮಣ್ಣು ಉಬ್ಬು ತಗ್ಗುಗಳಿಂದ ಕೂಡಿದ್ದು ಅದನ್ನು ನೆಟ್ಟಿಗೆ ಸಹಾಯಕವಾಗುವಂತೆ ಸಮತಟ್ಟು ಮಾಡಲು ನಳ್ಳಿ ಬಳಸುತ್ತಾರೆ. ಹಿಂದೆ ಎತ್ತುಗಳನ್ನು ಬಳಸಿ ಹೂಟಿ ಮಾಡುತ್ತಿದ್ದರಿಂದ ಇದಕ್ಕಾಗಿ ಬಳಸುವ ನೊಗ ಮತ್ತು ನೇಗಿಲು ಪ್ರತಿ ಮನೆಗಳಲ್ಲಿ ಇರುತ್ತಿತ್ತು. ಕಾಲ ಬದಲಾದಂತೆ ಇವುಗಳ ಸ್ಥಾನವನ್ನು ಆಧುನಿಕ ಕೃಷಿ ಸಲಕರಣೆಗಳು ಆಕ್ರಮಿಸಿವೆ. ಈ ಎತ್ತುಗಳಿಗೆ ಆಹಾರವಾಗಿ ಕೊಡಲು ಹುರುಳಿಯನ್ನು ಬೇಯಿಸುತ್ತಿದ್ದರು. ಇದನ್ನು ಬೇಯಿಸಿದ ನೀರೇ ಹುರುಳಿಕಟ್ಟು. ಮಳೆಗಾಲದಲ್ಲಿ ಹುರುಳಿ ಕಟ್ಟಿನ ಘಮ ತೇಲಿ ಬಂದರೆ ಆಹಾ ಎಷ್ಟು ಸುಂದರ ಅನುಭೂತಿ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ
