Advertisement

Tag: ಸಣ್ಣಕತೆ

ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಸಮಯ ಮುಂದುವರಿಯಲಾಗಲಿಲ್ಲ ಅಕರಿಗೆ. ಭಾವನೆಯ ನಿರಂತರತೆಗೆ ಒಗ್ಗಿಹೋಗಿದ್ದ ಅವಳಿಗೆ ಭಾವನೆಗಳನ್ನು ತುಂಡುತುಂಡಾಗಿಸಿ ಜೋಡಿಸಿಕೊಳ್ಳುವ ಬಗೆ ಅರ್ಥವಾಗುತ್ತಲೇ ಇರಲಿಲ್ಲ. ಪಾತ್ರವೇ ತಾನಾಗಿ, ಪರಕಾಯಪ್ರವೇಶ ಮಾಡಿ, ಅಭಿನಯಿಸುತ್ತಿದ್ದ ಅವಳಿಗೆ ಬಿಡಿ ಬಿಡಿ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವುದು ಇಷ್ಟವಾಗುತ್ತಿರಲಿಲ್ಲ. ಸಿನಿಮಾ ಶೂಟಿಂಗ್ ಅಸಹನೀಯ ಎನಿಸತೊಡಗಿತ್ತು. ಸಂಪಾದನೆಯೇನೋ ಆಗುತ್ತಿತ್ತು. ಆದರೆ ಕೆಲಸದಿಂದ ದೊರೆಯುವ ಆನಂದ ಕಳೆದುಹೋಗಿತ್ತು.
ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಕತೆ “ಕರುಳಬಳ್ಳಿ ಬಾಡಿಗೆಗಿದೆ!”

Read More

ಮುದಿರಾಜ್‌ ಬಾಣದ್ ಬರೆದ ಈ ಭಾನುವಾರದ ಕತೆ

ಬಿದ್ದಿದ್ದ ಜಡೆಗುಂಡು ರಿಬ್ಬನ್‌ ತಗಂಡು ನೀಲೇಶ್‌ ಜೇಬಲ್ಲಿ ಇಟ್ಟಿಕೊಳ್ಳುವದಕ್ಕೂ ಅವನ ತಾಯಿ ಅಲ್ಲಿಗೆ ಬರುವುದಕ್ಕೂ ಸರಿ ಹೋಯಿತು. “ಏನ್‌ ನಿಮ್ಮ ಜಗಳ ಹಾವು ಮುಂಗಸಿ ಆಡಿದಂಗಾ, ಏನಾಯ್ತು? ಹೇ ಮುದುಕ ಅದೇನ್‌ ಚಡ್ಡಿ ಬಕಣದಾಗ ಇಟ್ಟಿಕಂಡಿದ್ದು?” ಅಂತ ಕೇಳಿದಳು. ಅಕ್ಕ ತಮ್ಮ ಇಬ್ಬರೂ ಒಮ್ಮೆ ಮುಖ ಮುಖ ನೋಡಿಕೊಂಡರು. “ಅಮ್ಮ ಅದು ಅದು…” ಅಂತ ರಾಗ ಎಳೆಯುವಷ್ಟರಲ್ಲಿ, “ಲೇ ತಾರ ಅವ ಸಿಕ್ಕನಾ ಬಾರೇ ಜಲ್ದಿ” ಅಂತ ನೀಲೇಶನ ತಂದೆ ಜೋರು ಜೋರಾಗಿ ಕೂಗಿದ.
ಮುದಿರಾಜ್‌ ಬಾಣದ್‌ ಬರೆದ ಈ ಭಾನುವಾರದ ಕಥೆ “ಗಂಡುಮಲಿ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೇಶವ ಮಳಗಿ ಬರೆದ ಕತೆ

ಭಾಳ ಸಿಹಿಸುದ್ದಿಯೇನೂ ಅಲ್ಲ. ಆದರೂ, ಕಹಿಯಂತೂ ಅಲ್ಲಲ. ತೇರಿಗೆ ಹೂವುಹಣ್ಣು ಹಾಕವರಿದ್ರ ಇವತ್ತೇ ತಗೊಂಡು ತಯಾರಾಗ್ರಿ. ನಾಳೆ ಶಿಗತಾವೋ ಇಲ್ಲೋ. ಭಯಂಕರ ತುಟ್ಟಿನು ಇರತಾವು. ಬಿಸಿಲು ಏರಾಕ ಹೊಂಟೈತಿ. ಜರಾ ಚಹಾ ಕುಡೀತಿರೇನು ನೋಡ್ರಿ, ಹೇಳುತ್ತ ತಾನೂ ಹಗುರಾದಂತೆ ಬೋಲ್ಡಿ ಬಾಬಾ ಕೊಳವೆಗೆ ತಂಬಾಕು ತುಂಬಿ ಕಿಡಿ ಹಚ್ಚಿದ. ರುಕುಮವ್ವ, ಚಂದ್ರವ್ವಳನ್ನು ಕೈಯಿಂದ ಎಳೆದುಕೊಳ್ಳುತ್ತ ಬೆನ್ನು ಸವರಿ, ಸಮಾಧಾನ ಆತಿಲ್ಲವಾ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೇಶವ ಮಳಗಿ ಬರೆದ ಕಥೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ

ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ‘ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ..
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ “ಜೀ ಗಾಂಧಿ” ನಿಮ್ಮ ಓದಿಗೆ

Read More

ಎ. ಬಿ. ಪಚ್ಚು ಬರೆದ ಈ ಭಾನುವಾರದ ಕತೆ

ಆ ರಾತ್ರಿ ಯಕ್ಷಗಾನ ಎಲ್ಲಾ ನೋಡಿ ಮುಗಿದು ಬೆಳಿಗ್ಗೆ ಮನೆಗೆ ತಲುಪಿದೆ. ಕಣ್ಣೀರಿನ ಹೊರತು ಆ ದಿನ ಸಮಜಾಯಿಷಿ ಕೊಡಲು ನನ್ನಲ್ಲಿ ಯಾವ ಮಾತುಗಳೂ ಇರಲಿಲ್ಲ. ನಿಜ ನಾನೇನು ತಪ್ಪು ಮಾಡಿರಲಿಲ್ಲ, ಆದರೆ ಯಾಕೋ ನನಗೆ ಅಮ್ಮನನ್ನು ಒಬ್ಬಳನ್ನೇ ಬಿಟ್ಟು ಹೋದ ಆ ತಪ್ಪಿತಸ್ಥ ಭಾವ ಆ ದಿನದಿಂದ ಬಹಳವಾಗಿ ಕಾಡಿತು ಮಹೇಶ. ಆ ನೋವಿನಿಂದಾಗಿ ಆ ದಿನದಿಂದ ನಾನು ಎಂದಿಗೂ ಯಕ್ಷಗಾನದತ್ತ ಕಣ್ಣು ಹಾಯಿಸಲೇ ಇಲ್ಲ.
ಎ.ಬಿ. ಪಚ್ಚು ಬರೆದ ಕತೆ “ಮೈಸಾಸುರ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ಚದುರಂಗ”ದ ಕುರಿತು ತೇಜಸ್ವಿನಿ ಹೆಗಡೆ ಬರಹ

ಹೀಗೇ ಎಲ್ಲವನ್ನೂ ಓದುತ್ತಾ, ಮಥಿಸುತ್ತಾ ಹೋದರೆ, ಆ ಕಾಲಕ್ಕೆ ಹುಟ್ಟಿದ್ದ ಉತ್ತಮ ಗುರಿಯುಳ್ಳ ಸಿದ್ಧಾಂತಗಳು ಕ್ರಮೇಣ ಅಧಿಕಾರದ ಲಾಲಸೆ ಹೇಗೆ ಬದಲಾದವು, ಹೋರಾಟವೇ ಬದುಕಾಗಿದ್ದ ಒಂದು ಪರ್ವ…

Read More

ಬರಹ ಭಂಡಾರ