Advertisement

Tag: Indian Festivals

ಗೌರಮ್ಮನ ಜತ್ಯಾಗೇ ಬರಾ ಗಣಪ್ಪ: ಸುಮಾ ಸತೀಶ್ ಸರಣಿ

ನಮ್ಮೂರಿನ್ ಗೌರೀಗೆ ಪೂಜೆ ಮಾಡ್ತಿದ್ದಿದ್ದು ವಸಿ ಜನ್ವೇಯಾ. ಆದ್ರೆ ಗಣೇಶುನ್ನ ಬಿಡಾಕೇಂತ್ಲೇ ಊರಿನ್ ಜನ್ವೆಲ್ಲಾ ಮೇಲ್ ಬಿದ್ದು ಕಾದ್ಕಂಡು ಕುಂತಿರ್ತಿದ್ವಿ. ಐದನೇ ದಿನ ಸಂಜೀ ಹೊತ್ನಾಗೆ, ಗೌರಮ್ಮುಂಗೆ ಮಡ್ಲು ತುಂಬಿ, ಮಗುನ್ನ ಮುಂದಿಟ್ಗಂಡು, ಅವ್ವನ್ನ ಹಿಂದ್ ಕುಂಡ್ರಿಸಿ ಮೆರೋಣಿಗೆ ಹೊಂಡುತಿತ್ತು. ರಾಮ ದ್ಯಾವ್ರ ಗುಡೀಗ್ಳಿಂದ ನಮ್ಮನೆ ಆಸಿ, ಕೆರೆ ಏರಿ ಕಡೆ ಊರ ಗಂಡಸರು, ಹೆಂಗಸರು, ಚಳ್ಳೆ ಪಿಳ್ಳೆಗ್ಳು ಜೈಕಾರ ಹಾಕ್ಕಂಡು ಗಣಪತಿ ಬಾಪ್ಪ ಮೋರ್ಯಾ ಅಂತ ಕಿರುಚ್ಕಂಡು ಅವುರ್ ಹಿಂದಿಂದ್ಲೇ ಸಾಗುಸ್ಕಂಡು ಹೋಗ್ತಿದ್ವಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಗಣೇಶ ಚತುರ್ಥಿಯ ಆಚರಣೆಯ ಕುರಿತು ಹೇಳುತ್ತಲೇ ಈ ಸರಣಿ ಇಲ್ಲಿಗೆ ಮುಕ್ತಾಯವಾಗುತ್ತದೆ

Read More

ಮಲೆನಾಡಿನ ಹಬ್ಬಗಳ ಸಂಭ್ರಮ: ರೂಪಾ ರವೀಂದ್ರ ಜೋಶಿ ಸರಣಿ

ಅಂಥ ಬಡತನದಲ್ಲೂ, ಅಪ್ಪಯ್ಯ ಉಮೇದಿಯಿಂದ, ಅದಕ್ಕೆ ಬೇಕಾಗುವ ವಿವಿಧ ಬಣ್ಣದ ಹಾಳೆ, ಝರಿ ಎಲ್ಲವನ್ನೂ ಕೊಂಡು ತರುತ್ತಿದ್ದರು. ಆಗೆಲ್ಲ ಈಗಿನಂತೆ ವಿದ್ಯುತ್ ಸೌಲಭ್ಯ ನಮ್ಮಲ್ಲಿ ಇರಲಿಲ್ಲ. ಆದರೂ ಅದೊಂದು ಬಗೆಯ ಬಣ್ಣದ ಹಾಳೆಗಳನ್ನು ಕಲಾತ್ಮಕವಾಗಿ ಕತ್ತರಿಸಿ ಅಂಟಿಸಿ, ಕೇವಲ ಎಣ್ಣೆಯ ದೀಪದಲ್ಲೂ ಆ ಮಂಟಪ ಝಗಮಗಿಸುವಂತೆ ಮಾಡುತ್ತಿದ್ದರು. ಕೈಲಿ ಹಿಡಿದರೆ, ಸಣ, ಸಣ ಎಂದು ಸದ್ದಾಗುವಂತಿದ್ದ ಆ ಬಣ್ಣದ ಕಾಗದವನ್ನು “ಸಂತ್ರ ತಗಡು” ಅಂತ ಕರೆಯುತ್ತಿದ್ದರು. ಅದನ್ನು ಕಲಾತ್ಮಕವಾಗಿ ಕತ್ತರಿಸಿ, ಗುಬ್ಬಿ ಮಾಡಿ, ಮಂಟಪದ ಕಂಬಕ್ಕೆ, ಅಕ್ಕ ಪಕ್ಕದ ಪಟ್ಟಿಗಳಿಗೆ ಅಂಟಿಸಿ, ಅದಕ್ಕೆ ಝರಿಯ ಪುಡಿಯನ್ನು ಅಂಟಿಸಿ, ನಮ್ಮಣ್ಣ ಅದ್ಭುತವಾದ ಝಗಮಗ ಮಂಟಪ ಮಾಡುತ್ತಿದ್ದ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಯುಗಾದಿ ಸಂಭ್ರಮ: ಸುಮಾವೀಣಾ ಸರಣಿ

ಮಾನವನ ಜೀವನ ಸುಖ-ದುಃಖಗಳ ಮಿಶ್ರಣ. ಸುಖ ಬಂದಾಗ ಹಿಗ್ಗಬಾರದು, ದುಃಖ ಬಂದಾಗ ಕುಗ್ಗಬಾರದು ಇವೆರಡನ್ನೂ ಸಮಾನವಾಗಿ ಕಾಣಬೇಕೆಂಬುದೇ ಬೇವು-ಬೆಲ್ಲ ಸೇವನೆಯ ಸಂಕೇತ. ಭಗವದ್ಗೀತೆಯಲ್ಲಿಯೂ ಸಹ “ಸುಖದುಃಖೇ ಸಮೇಕೃತ್ವಾ” ಎಂದು ಉಪದೇಶಿಸಲಾಗಿದೆ. ಕೆಲವರ ಜೀವನದಲ್ಲಿ ಬೆಲ್ಲ ಹೆಚ್ಚಾಗಿರಬಹುದು. ಆದರೂ ಈ ದ್ವಂದ್ವಗಳನ್ನು ಸಂಭ್ರಮದಿಂದಲೇ ಸ್ವೀಕರಿಸಬೇಕು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಮೈಸೂರಿನ ಸಂಕ್ರಾಂತಿಯ ವೈಶಿಷ್ಟ್ಯ: ಡಾ. ಪುನೀತ್ ಕುಮಾರ್ ಪದ್ಮನಾಭನ್ ಬರಹ

ಪ್ರಕೃತಿಮಾತೆಯು ಹೇಗೆ ಸೂರ್ಯನ ಮುಖಾಂತರ ನಮಗೆ ಬೇಕಾದ್ದನ್ನು ಕೊಡುತ್ತಾಳೆಯೋ, ಬದಲಿಗೆ ಯಾವುದನ್ನೂ ನಮ್ಮಿಂದ ಅಪೇಕ್ಷಿಸುವುದಿಲ್ಲವೋ, ಅಂತಹಾ ಒಂದು ಶಕ್ತಿಗೆ, ಪ್ರಕೃತಿಗೆ ನಮ್ಮ ಸಂಕ್ರಾಂತಿಯ ಪೂಜೆ. ಸಂಕ್ರಾಂತಿಯ ದಿನದಂದು ಪೂಜೆಯನ್ನು ಕೃತಜ್ಞತಾ ಭಾವದಿಂದ ಪ್ರಕೃತಿಮಾತೆಗೆ ಮಾಡುವುದೆ ಸಂಕ್ರಾಂತಿಹಬ್ಬದ ವಿಶೇಷತೆ.
ಸಂಕ್ರಾಂತಿ ಹಬ್ಬದ ನಿಮಿತ್ತ ಮೈಸೂರಿನ ಸಂಕ್ರಾಂತಿಯ ಹಿನ್ನೆಲೆ ಹಾಗೂ ಅದರ ವೈಶಿಷ್ಟ್ಯತೆಗಳ ಕುರಿತು ಡಾ. ಪುನೀತ್ ಕುಮಾರ್ ಪದ್ಮನಾಭನ್ ಬರಹ

Read More

ಹಬ್ಬಗಳಿರಬೇಕು… ಬದುಕನ್ನು ಸವಿಯಲು

ಹಬ್ಬಗಳ ಮಹತ್ವವನ್ನು ಇತ್ತೀಚಿನ ದಿನಗಳಲ್ಲಿ ನಾವು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಹಬ್ಬಗಳ ಹೆಸರೆ ಸರಿಯಾಗಿ ಗೊತ್ತಾಗದಾಗಿರುವುದು ವಿಪರ್ಯಾಸ. ಹಬ್ಬಗಳ ಪರಿಚಯವೇ ತಿಳಿಯದಿದ್ದಾಗ, ಅದರ ಪರಂಪರೆ
ಅರಿಯುವುದು ದೂರದ ಮಾತು.  ಯಾವುದೇ ಹಬ್ಬವಿರಲಿ, ಯಾವುದೇ ಜನಾಂಗಕ್ಕೆ ಸೇರಿದ್ದಾಗಿರಲಿ, ಅದರ ಬಗ್ಗೆ ತಿಳಿದಾಗ ಆಚರಣೆ ಬಗ್ಗೆ ಗೌರವ ಹೆಚ್ಚುತ್ತದೆ. ಹಿಂದುಗಳಾದವರು ಕ್ರೈಸ್ತರ ಹಬ್ಬಕ್ಕೆ ನಿರ್ಲಕ್ಷ್ಯ ಮಾಡುವುದು, ಕ್ರೈಸ್ತರು ಮುಸಲ್ಮಾನರ ಹಬ್ಬಕ್ಕೆ ಅಗೌರವ ತೋರುವುದು, ಮುಸಲ್ಮಾನರು ಹಿಂದುಗಳ ಹಬ್ಬಕ್ಕೆ…

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ