ನೀನೆ ಕೊನೆ-ಮೊದಲೆಂಬ ಕಾಲಾತೀತ ಪ್ರೇಮಗಾಥೆ: ರಾಮ್ ಪ್ರಕಾಶ್ ರೈ ಕೆ ಸರಣಿ
ಅವಳ ಹಾಡು, ಭೇಟಿಗೆ ಸಾಕ್ಷಿಯಾಗುತ್ತಿದ್ದ ಸೇತುವೆ ಎಲ್ಲವೂ ಪ್ರತ್ಯಕ್ಷವಾಗಿ ಮಾಯವಾಗುತ್ತದೆ. ಸಂವಾದ ಸಾಗುತ್ತಿರಬೇಕಾದರೆ ವಿದ್ಯುತ್ ರೆಪ್ಪೆಯ ಮುಚ್ಚುತ್ತದೆ. ದೀಪ ತರಲೆಂದು ರಾಮ್ ಹೋದಾಗ, ಜಾನು ಹಾಡನೊಂದು ಹಾಡುತ್ತಾಳೆ. ಬೇರೆ ಯಾವ ಹಾಡೂ ಅಲ್ಲ. ಪ್ರತಿ ಬಾರಿ ಅವಳು ವೇದಿಕೆಯೇರಿದಾಗ, ಅವನು ಕೋರಿಕೆಯಿಡುತ್ತಿದ್ದದ್ದೇ ಆ ಹಾಡಿಗಾಗಿ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ