Advertisement

Tag: Kallesh Kumbar

ಕಾಣದ್ದು ಕಾಣಿಸಿದ್ದು…!: ಸುಭಾಷ್‌ ರಾಜಮಾನೆ ವಿಮರ್ಶಾ ಕೃತಿಯ ಕುರಿತು ಕಲ್ಲೇಶ್ ಕುಂಬಾರ್ ಬರಹ

ಜಗತ್ತಿನ ಬಹುಮುಖ್ಯ ಕೃತಿಗಳನ್ನು ಗುರುತಿಸುವ, ಪರಿಚಯಿಸುವ, ಆ ಮೂಲಕ ಓದುಗರಿಗೆ ದಾಟಿಸುವಂಥ ಪ್ರಾಮಾಣಿಕ ಕೆಲಸವನ್ನು ಸುಭಾಷ್ ರಾಜಮಾನೆ ಅವರು ಮಾಡುತ್ತಿದ್ದಾರೆ. ಅವರ ಈ ಬರಹಗಳನ್ನು ಓದುವುದರ ಮೂಲಕ ಓದುಗನು ಸ್ವಯಂ ಮರಳಿ ಮೂಲ ಕೃತಿಗಳನ್ನು ಓದುವುದಕ್ಕೆ ಉತ್ಸುಕನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಇಲ್ಲ! ಇನ್ನೂ ಹೇಳಬೇಕೆಂದರೆ, ಕೃತಿಕಾರ ಮರೆಯಾಗಿ ಕೃತಿಯೇ ಮುಖ್ಯವಾಗುವುದು, ಹಾಗೂ ಆ ಕೃತಿಯ ಮೂಲಕವೇ ಕೃತಿಕಾರ ಗುರುತಿಸಿಕೊಳ್ಳುವಂತಾಗುವುದು ಒಂದು ಕ್ರಿಯೆ. ಅಂಥ ಲೇಖಕ ಮತ್ತು ಆ ಲೇಖಕನ ಕೃತಿಗಳು ಶಾಶ್ವತವಾಗಿ ನಿಲ್ಲುತ್ತವೆ! ಹಾಗೆ ನಿಲ್ಲಬಹುದಾದ ಲೇಖಕರ ಕೃತಿಗಳನ್ನು ಓದುಗರಿಗೆ ಸುಭಾಷ್ ರಾಜಮಾನೆ ಅವರು ಪರಿಚಯಿಸಿದ್ದಾರೆ.
ಸುಭಾಷ್‌ ರಾಜಮಾನೆ ವಿಮರ್ಶಾ ಕೃತಿ “ಕಂಡದ್ದು ಕಾಣದ್ದು” ಕುರಿತು ಕಲ್ಲೇಶ್‌ ಕುಂಬಾರ್‌ ಬರಹ

Read More

ಮನುಷ್ಯ ಬದುಕಿನೊಂದಿಗೆ ಮುಖಾಮುಖಿಯಾಗುವ ಪದ್ಯಗಳು: ಕಲ್ಲೇಶ್ ಕುಂಬಾರ್ ಬರಹ

ಕವಿಯಾಗಿ ಮಾಲತಿಯವರಿಗೆ ಕತ್ತಲು ಮತ್ತು ಬೆಳಕಿನ ಕುರಿತಾಗಿ ವಿಶಿಷ್ಟವಾದ ಆಕರ್ಷಣೆಯಿದೆ ಎನ್ನಬಹುದು. ಈ ಮಾತಿಗೆ ಸಾಕ್ಷಿಯಾಗಿ ಈ ಕವನಸಂಕಲನದಲ್ಲಿ ‘ಅಜ್ಜಿ ಮತ್ತು..’ ಎಂಬ ಪದ್ಯವೊಂದಿದೆ. ಇಲ್ಲಿ, ಕತ್ತಲು–ಬೆಳಕಿನ ಆಟವನ್ನು ಕೇಂದ್ರವಾಗಿರಿಸಿಕೊಂಡು ಮನುಷ್ಯ ಬದುಕಿನ ಕ್ರಿಯೆಗಳನ್ನು ಅವರು ಶೋಧಿ‌ಸಲು ಪ್ರಯತ್ನಿಸಿದ್ದಾರೆ.‌ ಈ ಪದ್ಯದ ಶೀರ್ಷಿಕೆಯಲ್ಲಿರುವ ‘ಅಜ್ಜಿ’ ಬೇರಾರೂ ಆಗಿರದೇ ನಮ್ಮೊಳಗಿನ ಅರಿವಿನ ಕೇಡು ಕಳೆಯಲೆಂದು ನಮ್ಮ ಎದೆಯಂಗಳದಲ್ಲಿ ಮುಡಿಸಿಟ್ಟ ಅರಿವಿನ ದೀವಿಗೆಯೇ ಆಗಿದ್ದಾಳೆ!
ಮಾಲತಿ ಗೋರೆಬೈಲ್ ಬರೆದ “ಗುಬ್ಬಿ ಲಾಟೀನು” ಕವನ ಸಂಕಲನದ ಕುರಿತು ಕಲ್ಲೇಶ್‌ ಕುಂಬಾರ್‌ ಬರಹ

Read More

ಕಲ್ಲೇಶ್ ಕುಂಬಾರ್ ಕಥಾಸಂಕಲನದ ಕುರಿತು ವೇದಾಂತ ಏಳಂಜಿ ಬರಹ

“ಗ್ರಾಮೀಣ ಭಾಗದ ಜನಜೀವನವನ್ನು ಆರಂಭದ ಎರಡು ಕಥೆಗಳಲ್ಲಿ ತೋರ್ಪಡಿಸುತ್ತಲೇ ಜಾಗತೀಕರಣದ ಸಮಸ್ಯೆಗಳಿಗೆ ಹಾರೊಗೇರಿ ತೆರೆದುಕೊಳ್ಳುವ ಕಥನಗಾರಿಕೆ ವಿಶಿಷ್ಟವಾದದ್ದು. ಆಧುನಿಕ ಕಾಲದಲ್ಲೂ ಊಳಿಗಮಾನ್ಯ ಪದ್ಧತಿಯನ್ನು ಅನುಸರಿಸುವ ‘ನಿಂದ ನಿಲುವಿನ ಘನ’ ಕಥೆಯ ಮಾನಿಂಗಯ್ಯನಂತವರು ದಲಿತ ಮಹಿಳೆಯರ ಮೇಲೆ ನೀರೆರೆಚುವ ಪದ್ಧತಿಯು ಆತನ ರಾಕ್ಷಸ ಸ್ವಭಾವ ತೋರುತ್ತದೆ. ಮೇಲ್ವರ್ಗದ ಈ ಸಂಪ್ರದಾಯವನ್ನು ರಮೇಶನ ಪ್ರಭಾವದಿಂದ ಕೆಂಚವ್ವಳು ನೀರೋಕುಳಿ ಆಚರಣೆಗೆ ವಿರೋಧಿಸುತ್ತಾಳೆ.”
ಕಲ್ಲೇಶ್ ಕುಂಬಾರ್ ಬರೆದ‌ ‘ನಿಂದ ನಿಲುವಿನ ಘನʼ ಕಥಾಸಂಕಲನದ ಕುರಿತು ಡಾ.ಎಂ.ವೇದಾಂತ ಏಳಂಜಿ ಬರಹ

Read More

ದೊಡ್ಡವರಿಗೂ ಸಲ್ಲುವ ಮಕ್ಕಳ ಕಥೆಗಳು

“ಒಂದರ್ಥದಲ್ಲಿ ಪಲ್ಲವಿಯವರು ಹೇಳುವಂತೆ ಭೂಮ್ತಾಯಿಯ ಒಡಲೆಲ್ಲ ಬರಿದಾಗಿ ನಿಜವಾಗಿಯೂ ರೋಗ ಪೀಡಿತ ಅಜ್ಜಿಯೇ ಆಗಿದ್ದಾಳೆ! ಅಂದರೆ, ಮನುಷ್ಯನ ದುರಾಶೆಯ ದೆಸೆಯಿಂದಾಗಿ ಭೂಮಿಯ ಅಂತ್ಯದ ದಿನಗಳು ಸನ್ನಿಹಿತವಾದವೆ ಎಂಬ ಆತಂಕ ಉಂಟಾಗುತ್ತದೆ! ಹೀಗೆ, ಈ ಕಥೆ ಮಕ್ಕಳಿಗೆ ಪರಿಸರ ಸಂರಕ್ಷಣೆಯನ್ನು ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಖಂಡಿತವಾಗಿಯೂ ಉಳಿಗಾಲವಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ಹಾಗೆಯೇ, ದೃಷ್ಟಾಂತವೊಂದರ ಮೂಲಕ ತೆರೆದುಕೊಳ್ಳುವ ‘ಎಂದೂ ಮುಗಿಯದ ಕಥೆ’ ಎಂಬ ಕಥೆ, ಮಕ್ಕಳ ಕಲ್ಪನೆಯ ಕ್ಷಿತಿಜವನ್ನು ವಿಸ್ತರಿಸುವ ನಿಟ್ಟಿನಲ್ಲಿದೆ.”

Read More

ಲಕ್ಷ್ಮಣ ಬಾದಾಮಿ ಅವರ ಕಥಾಸಂಕಲನ ಕುರಿತು ಕಲ್ಲೇಶ್ ಕುಂಬಾರ್ ಬರಹ

“ಈ ಸಂಕಲನದ ಶೀರ್ಷಿಕೆಯೂ ಆಗಿರುವ ‘ಒಂದು ಚಿಟಿಕೆ ಮಣ್ಣು’ ಕಥೆ, ಇಡಿಯಾಗಿ ಭೂಮಿಯನ್ನು ಕಾಂಕ್ರೀಟ್ ಕಾಡಾಗಿಸುವುದರ ಮೂಲಕ ಅದರ ಸ್ವರೂಪವನ್ನು ವಿಕಾರಗೊಳಿಸುತ್ತಿರುವ ಮನುಷ್ಯನ ಸ್ವಾರ್ಥ ಮನೋಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ಕಥೆಯಲ್ಲಿ ಬರುವ ಕಲ್ಲಪ್ಪನಿಗಿರುವ ಮಣ್ಣು ತಿನ್ನುವ ಹವ್ಯಾಸದ ಮೂಲಕ ಅನ್ನ ಬೆಳೆಯುವ ಭೂಮಿಯ ಮಹತ್ವವನ್ನು ಕಥೆಗಾರ ಸಾರುತ್ತಾನೆ. ಇಂಚಿಂಚೂ..”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ