Advertisement

Tag: Kannada Literature

ಗಾಂಧಿ ಕಥನ ಕುರಿತು ನಾಗಭೂಷಣ ಕಥನ

ನಿನ್ನೆ ಇರುಳು ತೀರಿಹೋದ ನಿಷ್ಠುರ ಮನಸಿನ ಕನ್ನಡದ ವಿಮರ್ಶಕ ಡಿ.ಎಸ್.ನಾಗಭೂಷಣ ಕೈಗೆತ್ತಿಕೊಂಡ ಕೆಲಸವನ್ನು ತಪಸ್ಸಿನಂತೆ ಕುಳಿತು ಮುಗಿಸುತ್ತಿದ್ದ ಶ್ರಮಜೀವಿ ಬರಹಗಾರರಾಗಿದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಆಕಾಶವಾಣಿ ದೆಹಲಿಯಿಂದ ಬರುತ್ತಿದ್ದ ಕನ್ನಡ ವಾರ್ತೆಗಳ ಪರಿಚಿತ ಮತ್ತು ಜನಪ್ರಿಯ ರೇಡಿಯೋ ಧ್ವನಿಯಾಗಿದ್ದರು.. ಮಹಾ ಜಗಳಗಂಟರೂ ಮತ್ತು ಅಷ್ಟೇ ಮುಗ್ಧರೂ ಆಗಿದ್ದ ನಾಗಭೂಷಣರು ತಮ್ಮ ರೇಡಿಯೋ ಕಾರ್ಯಕ್ರಮ, ಪತ್ರಿಕಾ ಸಂಪಾದಕೀಯ ಬರಹಗಳು ಮತ್ತು ಸಾರ್ವಜನಿಕ ಭಾಷಣಗಳಿಂದ ಬಹಳ ಕಾಲ ನೆನಪಿನಲ್ಲಿ ಉಳಿಯಬಲ್ಲವರು. ಈ ಸಲದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಪುಸ್ತಕದ ಕುರಿತು ಈ ಹಿಂದೆ ಅವರು ಬರೆದಿದ್ದ ಲೇಖನವೊಂದು ಅವರ ನೆನಪಿಗಾಗಿ ಇಲ್ಲಿದೆ.

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಟ್‌ ಕತೆ

ಮದುವೆಯಾಗಿ ಬಂದಮೇಲೆ ಮಾಕುಚಿಕ್ಕಿಯ ಮಾತು ಸೊಟ್ಟಗಾಗಲು ಬಹಳ ದಿನ ಹಿಡಿಸಲಿಲ್ಲ, ಕರಿಮಣಿ ಕಟ್ಟಿಕೊಂಡವರೆಲ್ಲ ಉರಿದು ಬೀಳುವುದು ಸಂಪ್ರದಾಯವಿರಬೇಕು ಅಂತ ಆಶ್ಚರ್ಯ ಪರಮುಗೆ. ತನ್ನ ಹಡೆದಬ್ಬೆಯ ಪ್ರೀತಿಯಲ್ಲಿಯೂ ಹೆಚ್ಚೇನೂ ಓಲಾಡಿದವನಲ್ಲ ಪರಮು. ಅಬ್ಬೆ ವರ್ಷಕ್ಕೊಮ್ಮೆ ಹೊಟ್ಟೆ ಡುಬ್ಬ ಮಾಡಿಕೊಂಡು ಹೆರಿಗೆ ನೋವು ಬಂದೊಡನೆ ಕೊಂಕಣಿ ಅಜ್ಜಿಗೆ ಬರ ಹೇಳುವುದು, ಒಂದಲ್ಲ ಒಂದು ಕಾರಣಕ್ಕೆ ಮಗು ಹುಟ್ಟುತ್ತಲೇ ಕೈಲಾಸ ವಾಸಿಯಾಗುವುದು ಇದ್ದಿದ್ದೇ. ಮಗುವಿಲ್ಲದ ಬಾಳಂತನದಲ್ಲಿ ಅಳುವ ಅಬ್ಬೆ, ಕಂಡವರ ಶಿಶುಗಳಿಗೆಲ್ಲ ಹಾಲೂಡಿಸಿ ಎದೆ ಭಾರ ಕಳೆದ ಮೇಲೆ ಮತ್ತೆ ಮೊದಲಿನಂತೆ…

Read More

‘ಕಾವ್ಯದ ಕನ್ನಡಿಯಲ್ಲಿ ಕಂಡ ಜೀವನಪಥ’

ಅನುಭವಕ್ಕೆ ಸ್ವತಃ ಯಾವುದೇ ರೀತಿಯ ಆಕೃತಿ ಇಲ್ಲ. ಆದರೆ ನಾವು ಮಾತ್ರ ಇದು ಸುಖದ ಅನುಭವ, ಇದು ದುಃಖದ ಅನುಭವ, ಇದು ವಿಹ್ವಲತೆ, ತಲ್ಲಣ, ಇದು ವಿಷಾದದ ಅನುಭವ ಎಂದೆಲ್ಲ ಹೆಸರಿಡುತ್ತೇವೆ ಎಂದು  ಹೇಳುವ ಆನಂದ ಝುಂಜರವಾಡ ಮೂಲತಃ ಕಾವ್ಯಶಕ್ತಿಯನ್ನು ಒಲಿಸಿಕೊಂಡ ಕವಿ. ಇತ್ತೀಚೆಗೆ ಅವರ ಹೊಸ ಕವನ ಸಂಕಲನ ಶಬ್ದ ಸುಪಾರಿ ಬಿಡುಗಡೆಯಾಯಿತು.

Read More

ಅಬ್ದುಲ್ ರಶೀದ್ ವಿರಚಿತ ‘ರಕ್ತಚಂದನ’ ಎಂಬ ನೀಳ್ಗತೆಯು

ಚಾರುದತ್ತರ ಮರಣದ ಸುದ್ದಿ ನನಗೆ ಗೊತ್ತಾಗಿದ್ದು ಅವರು ತೀರಿಹೋಗಿ ಮಾರನೇ ದಿನ ಮಧ್ಯಾಹ್ನ. ಕೊರೋನಾದ ಮೊದಲ ಅಲೆ ಅದಾಗ ತಾನೇ ಉಲ್ಬಣಿಸುತ್ತಿದ್ದ ಕಾರಣ ಫೇಸ್ ಬುಕ್ಕು ಲೈವಿನಲ್ಲೇ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. ಲೇಖಕಿ ವಿಲಾಸಿನಿ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಗೋಡೆಗೆ ಒರಗಿ ಕುಳಿತು ಕಣ್ಣು ಮುಖ ಊದಿಸಿಕೊಂಡು ಲೈವಿನಲ್ಲಿ ಮುಳುಮುಳು ಅಳುತ್ತಾ ನಡುನಡುವೆ ಸ್ಪಷ್ಟವಾಗಿ ಮಾತಾಡುತ್ತಿದ್ದಳು. …”

Read More

ಹಲವು ಬಣ್ಣದ ಹಗ್ಗ: ಸುರೇಶ ನಾಗಲಮಡಿಕೆ ಪುಸ್ತಕದ ಕೆಲವು ಪುಟಗಳು

“ಬಹುದಿಕ್ಕುಗಳಿಂದ, ಬಹು ಅನುಭವಗಳಿಂದ ಬರುವ ಸತ್ಯಗಳೂ ಇಲ್ಲಿ ಮುಖ್ಯವೇ. ಒಂದು ಸಂಕಲನದಲ್ಲಿ ಒಂದು ಪದ್ಯ ಇಡೀ ಸಮಾಜಕ್ಕೆ ಕನ್ನಡಿ ಹಿಡಿದರೆ ಅಷ್ಟರ ಮಟ್ಟಿಗೆ ಅದು ಸಫಲ ಕವಿತೆಯೇ ಆಗಿರುತ್ತದೆ. ಇಂದಿನ ಜೀವನವೇ ಹಲ ಬಗೆಯ ಛಿದ್ರತೆ ಮತ್ತು ಕಣ್ಣೋಟಗಳಿಂದ ಕೂಡಿರುವಾಗ ಯಾವೊದೋ ಒಂದು ಬಗೆಯ ಬದುಕಿನ ದರ್ಶನವನ್ನು ಕಾಣುವುದಕ್ಕೇ ಹೇಗೆ ಸಾಧ್ಯ?”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ