Advertisement

Tag: Kannada Literature

ಇರುವುದೆಲ್ಲವ ಹೇಳಿಬಿಡು…: ಸುಶೀಲಾ ಡೋಣೂರ ಕಾದಂಬರಿಯ ಪುಟಗಳು

‘ಈ ಮಾತು ಚರ್ಚೆಗೆ ಬರದೆ ಹೋಗಿದ್ರ ನಾನು ಈ ಸುಳ್ಳು ಹೇಳಬಹುದಿತ್ತು ಪೂಣ, ಈಗ ಎಲ್ಲಾನೂ ಒಪ್ಗೊಂಡ ಮ್ಯಾಲ ಮತ್ತ ಅದೇ ಸುಳ್ಳನ್ನ ಆರಂಭದಿಂದ ಹೇಳು ಅಂದ್ರ ಹೇಳಾಕ ಆಗೂದಿಲ್ಲ. ಏನು ಶಿಕ್ಷೆ ಕೊಡ್ತೀಯೊ ಕೊಡು. ನಾ ನಿನ್ನ ಪ್ರೀತಿಸ್ತೀನಿ ಅನ್ನೂದು ಖರೆ, ಅದೇ ಅಂತಿಮ. ನೀ ಸಿಕ್ರೂ ಸರಿ, ಸಿಗಲಿಲ್ಲ ಅಂದ್ರೂ ಸರಿ. ಜೀವನಪೂರ್ತಿ ನಿನ್ನ ನೆನಪಿನ್ಯಾಗ ಸಾಗಿಸುವಷ್ಟು ಸುಂದರ ಕ್ಷಣಗಳನ್ನ ಕಳದೀನಿ ನಿನ್ನ ಜೋಡಿ, ಅವೇ ಸಾಕು’.
ಪತ್ರಕರ್ತೆ ಸುಶೀಲಾ ಡೋಣೂರ ಹೊಸ ಕಾದಂಬರಿ “ಪೀಜಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಬೆಂಗಳೂರು ವಸತಿ ಪುರಾಣ-1: ರಂಜಾನ್‌ ದರ್ಗಾ ಸರಣಿ

ಮೊದಲ ದಿನವಾದ ಕಾರಣ ಲೈಟ್ ಹಚ್ಚಿಕೊಂಡೇ ಮಲಗಿದೆ. ಬೇಗ ನಿದ್ರೆ ಬರಲಿಲ್ಲ. ಆ ಮೇಲೆ ಮಧ್ಯರಾತ್ರಿ ಎಚ್ಚರವಾಯಿತು. ಕಣ್ಣು ತೆರೆದಾಗ ಗಾಢಾಂಧಕಾರ ಆವರಿಸಿದ್ದು ಗಾಬರಿ ಹುಟ್ಟಿಸಿತು. ಕರೆಂಟ್ ಹೋಗಿರಬಹುದು ಎಂದು ಭಾವಿಸಿ ಹಾಗೆ ಮಲಗಿದೆ. ಬೆಳಿಗ್ಗೆ ಬಹಳ ಹೊತ್ತಿನವರೆಗೆ ಎಚ್ಚರಾಗಲಿಲ್ಲ. ಕೊನೆಗೆ ಎಚ್ಚರವಾದಾಗ ಸೊಳ್ಳೆಪರದೆ ಮೇಲೆಲ್ಲ ಸೊಳ್ಳೆಗಳು ಸುತ್ತಿಕೊಂಡಿದ್ದರಿಂದ ಕತ್ತಲು ಆವರಿಸಿದ್ದು ಗೊತ್ತಾಯಿತು!
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಕುರ್ ಮಾವಡ ಕೊಂಡ ದೇವಡಾ…..: ಸುಧಾ ಆಡುಕಳ ಅಂಕಣ

ಮೊದಲು ಯಾರೆಲ್ಲ ಹೋಗುವವರೆಂದು ಪಟ್ಟಿಯಾಗಬೇಕು, ನಾಟಕದ ಟಿಕೇಟಿಗೆ ಹಣದ ಹೊಂದಿಕೆಯಾಗಬೇಕು, ಹುಡುಗಿಯರ ಅಣಿಯಾದ ದಿನ ಊರ ಹುಡುಗಿಯರಿಗೆ ಹಬ್ಬ. ತೋಟದ ತುಂಬೆಲ್ಲ ಅಲೆದು ಅಬ್ಬಲಿಗೆ ಹೂವನ್ನಾಯ್ದು ಕಟ್ಟುವ ಸಂಭ್ರಮವೇನು? ನಾಟಕ ನೋಡುವಾಗ ತಿನ್ನಲೆಂದು ಶೇಂಗಾ ಹುರಿಯುವ ಸಡಗರವೇನು? ಅತ್ತರಿನೆಣ್ಣೆಯನ್ನು ಪೂಸಿ ತಲೆಬಾಚುವ ಸಂಭ್ರಮವೇನು?
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹತ್ತನೆಯ ಕಂತು ನಿಮ್ಮ ಓದಿಗೆ

Read More

ನೀಲಿ ನೋಡಿದ ಕಾಡು: ಸುಧಾ ಆಡುಕಳ ಅಂಕಣ

ಒಮ್ಮೆ ಅವನೂ, ನೀಲಿಯ ತಂದೆಯೂ ಅಂಟುವಾಳದ ಕಾಯಿಗಳನ್ನು ಹುಡುಕುತ್ತ ಕಾಡಿನಲ್ಲಿ ಬಹುದೂರದವರೆಗೆ ಸಾಗಿದರಂತೆ. ಚೀಲಗಟ್ಟಲೆ ಕಾಯಿಗಳನ್ನು ಕೊಯ್ದು ಮೂಟೆಗಟ್ಟಿ ದಣಿವಾರಿಸಿಕೊಳ್ಳಲೆಂದು ಮರವೊಂದರ ಬೇರಿನ ಮೇಲೆ ಕುಳಿತು ಕವಳ ತಿನ್ನತೊಡಗಿದರಂತೆ. ಸುಮಾರು ಹೊತ್ತಿಗೆ ನೋಡಿದರೆ ಅವರು ಕುಳಿತಿದ್ದ ಬೇರು ನಿಧಾನಕ್ಕೆ ಚಲಿಸಲು ಪ್ರಾರಂಭವಾಯಿತಂತೆ. ಅರೆ! ಇದೇನಿದು? ಎಂದು ಎದ್ದು ದೂರ ನಿಂತರೆ ಮರದ ಬೇರೆಂದು ಅವರು ಕುಳಿತದ್ದು ಮಾದೊಡ್ಡ ಹೆಬ್ಬಾವಿನ ಮೇಲಂತೆ!
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಎಂಟನೆಯ ಕಂತು ನಿಮ್ಮ ಓದಿಗೆ

Read More

ಒಡಹುಟ್ಟಿದವನ ಒಡಲಾಳದ ನೋವು!: ಶರಣಗೌಡ ಪಾಟೀಲ ತಿಳಗೂಳ ಪ್ರಬಂಧ

ಬಸ್ ಡಾಂಬರ್ ರಸ್ತೆ ಸೀಳಿಕೊಂಡು ಅರ್ಧ ದಾರಿ ಕ್ರಮಿಸಿತು. ಇದ್ದಕ್ಕಿದ್ದಂತೆ ಬಸ್ಸಿನಲ್ಲಿ ಜೋರಾಗಿ ಅಳುವ ಧನಿಯೊಂದು ಕೇಳಿ ಬಂದಿತು. ಎಲ್ಲರೂ ಗಾಬರಿಯಾಗಿ ಅತ್ತಕಡೆ ಗಮನ ಹರಿಸಿದರು. ನಾಗಚಂದ್ರನೂ ಆ ಕಡೆ ಹೊರಳಿ ನೋಡಿದ. ಇವನಿಗೆ ಆಶ್ಚರ್ಯದ ಜೊತೆಗೆ ಗಾಬರಿಯೂ ಆಯಿತು. ಅಳುವ ವ್ಯಕ್ತಿ ಸಾಮಾನ್ಯನಂತೆ ಕಾಣಿಸುತ್ತಿರಲಿಲ್ಲ. ಆತ ಬಟ್ಟೆ ಶಿಸ್ತಿನ ವ್ಯಕ್ತಿಯಾಗಿದ್ದ.
ಶರಣಗೌಡ ಬಿ. ಪಾಟೀಲ ತಿಳಗೂಳ ಪ್ರಬಂಧ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ