Advertisement

Tag: Kannada Theatre

ಅಭಿಮಾನಿಗಳ ಆಯರಿಯೂ, ಅಮ್ಮ ಹಾಕುತ್ತಿದ್ದ ಬರೆಗಳೂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂದೊಂದು ಪ್ರಯೋಗದಲ್ಲೂ ಲೋಹಿತಾಶ್ವನ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚುಮಾಡಿಕೊಳ್ಳುತ್ತಿದ್ದೆ. ಜನರೆಲ್ಲ ಮನೆಗೆ ಬರಲು ಶುರುವಿಟ್ಟರು. ಭಾಗಮ್ಮನವರು ಇಂತಹದಕ್ಕೆಲ್ಲ ಸೊಪ್ಪೇ ಹಾಕುತ್ತಿರಲಿಲ್ಲ. ಎಂಟು ವರ್ಷ ಮೀರಿದಂತೆ ದೇಹ ಬದಲಾವಣೆಯಾಗುತ್ತಿತ್ತು. ನನ್ನ ಮುಖ, ಗಲ್ಲ, ಎದೆ, ಕೈ ತೋಳುಗಳು, ಇಡೀ ದೇಹವೇ ಅಗಲಿಸುತ್ತಿದ್ದ ವಯಸ್ಸು. ಅದಕ್ಕಾಗೋ ಅಥವಾ ಅಸೂಯೆಯಿಂದಲೋ ನಾನ್ಯಾರ ಬಳಿಯಾದರೂ ಮಾತಿಗೆಂದು ನಿಂತರೂ ಬೈದು, ಹೊಡೆದು ರಾದ್ಧಾಂತ ಮಾಡುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಎಂಟನೆಯ ಕಂತು

Read More

ನಾಟಕರಂಗದ ತಮಾಷೆ ಪ್ರಸಂಗಗಳು: ಚಿತ್ರಾ ವೆಂಕಟರಾಜು ಸರಣಿ

ಬರುವಾಗ ಸುಳ್ಯ, ಪುತ್ತೂರಿನ ಸಮೀಪ ಬೆಳಗಿನ ಜಾವ ಸುಮಾರು ೪ ಗಂಟೆಗೆ ಮೂತ್ರವಿಸರ್ಜನೆಗಾಗಿ ಗಾಡಿ ನಿಲ್ಲಿಸಿದರು. ನಂತರ ಹೊರಟು ಇನ್ನೇನು ಮೈಸೂರು ಹತ್ತಿರ ಬರುತ್ತಿದ್ದಂತೆ ಎಲ್ಲರಿಗೂ ಸಂಪೂರ್ಣ ಎ‍ಚ್ಚರವಾಯಿತು. ಇದ್ದಕ್ಕಿದ್ದಂತೆ ಯಾರೋ ‘ರಾಜಪ್ಪ ಎಲ್ಲಿ’ ಅಂತ ಕೇಳಿದರು. ಟೆಂಪೋ ಎಲ್ಲಾ ಹುಡುಕಿದರೂ ರಾಜಪ್ಪ ಇಲ್ಲ. ಎಲ್ಲಿ ಬಿಟ್ಟು ಬಂದ್ವಿ ಗೊತ್ತಿಲ್ಲ. ಅವರು ಪಾಪ ಒಂದು ಪಟಾಪಟಿ ಲುಂಗಿ ಬನಿಯನ್ ಮತ್ತು ಟವೆಲ್ ಸುತ್ತಿಕೊಂಡು ಇಳಿದವರು ವಾಪಸ್ ಬರುವ ಹೊತ್ತಿಗೆ ಟೆಂಪೋ ಹೊರಟಾಗಿತ್ತು. ಕಾಲಲ್ಲಿ ಚಪ್ಪಲಿಯೂ ಇಲ್ಲದಂತೆ ಯಾರದ್ದೋ ಸಹಾಯ ಕೇಳಿ ಕೊನೆಗೆ ಚಾಮರಾಜನಗರದಲ್ಲಿ ಕಾಣಿಸಿಕೊಂಡರು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಹಿರಿಯ ರಂಗನಟಿ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಂದಿನಿಂದ

“ಕಲಾವಿದರ ಮಾತಂತಿರಲಿ, ಊರೂರಿಗೆ ಬರುತ್ತಿದ್ದ ನಾಟಕವನ್ನೂ ನೋಡದ ಮನೆತನ ಎನ್ನಬಹುದೇನೊ. ಕಾಳಮ್ಮನಿಂದ ಮಲ್ಲಮ್ಮನಾಗಿ, ಮಲ್ಲಮ್ಮನಿಂದ ಸರಸ್ವತಿಯಾಗಿ, ಕೊನೆಗೆ ಸರಸ್ವತಿಯಿಂದ ಜುಲೇಖಾ ಬೇಗಂ ಆದೆ. ಕಲೆಯ ಹಿನ್ನೆಲೆಯಿಲ್ಲದೆ ಬೆಳೆದ ನನಗೆ ಅದ್ಹೇಗೆ ಈ ಅಭಿನಯ ಕಲೆ ಒದಗಿಬಂತೋ!”
ಕನ್ನಡ ರಾಜ್ಯೋತ್ಸವದ ಶುಭ ದಿನದಂದು ಹಿರಿಯ ರಂಗ ಕಲಾವಿದೆ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಜುಲೈಕಾ ಬೇಗಂ ಅವರ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”.
ನಿರೂಪಿಸುತ್ತಾರೆ ಕೀರ್ತಿ ಬೈಂದೂರು.

Read More

ಮಳೆ ನಕ್ಷತ್ರಗಳ ಲೆಕ್ಕಾಚಾರದ ನಡುವೆ

ಹಳ್ಳಿಗರು ನಮಗಿಂತ ಬೆಸ್ಟ್. ಅವರಲ್ಲೂ ನಾಟಕ ಮಾಡುವ ಉಮೇದು ಇದೆ. ಹಾಗೆ ನೋಡಿದರೆ ನಮಗಿಂತ ಹೆಚ್ಚು ಇದೆ. ಆದರೆ ಅವರಿಗೆ ನಾಟಕ ಎನ್ನುವುದು ತಮ್ಮ ಬಿಡುವಿನ ದಿನಗಳ ಒಂದು ದಿವ್ಯ ಬಾಬ್ತು. ಮಳೆಗಾಲ ಆರಂಭವಾಗಿ ಬೇಸಾಯ ಆರಂಭಿಸಿ ಉತ್ತುಬಿತ್ತು ಫಸಲು ಕೈಗೆ ಬರುತ್ತದೆ ಅನಿಸಿದಾಗ ಅವರು ನಾಟಕದ ಪ್ರಾಕ್ಟೀಸ್ ಮಾಡಿ ಬಣ್ಣ ಹಚ್ಚಿ ಸಂಭ್ರಮಿಸುತ್ತಾರೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

Read More

ನಾಟಕವೆಂದರೆ ಶೃತಿಗೆ ಅಣಿಗೊಳಿಸಿದ ವೀಣೆಯಂತೆ

ರಂಗದ ಕಾಯಕ ಅಂದರೆ ಮೊದಲು ನಮ್ಮ ಮನೋಧರ್ಮ ಗುರುತಿಸಿಕೊಂಡು ನಾಟಕ ಕಟ್ಟಿ ಅದು ಪ್ರೇಕ್ಷಕರ ಕಣ್ಣುಗಳ ಫ್ರೇಮಿನಲ್ಲಿ ಸರಿಯಾಗಿ ಫಿಟ್ಟಾಗುತ್ತದೆಯೇ ಎಂದು ಅಂದಾಜು ಮಾಡಿಕೊಳ್ಳಬೇಕು. ನಂತರ ಜನರಿಗೆ ಕಾಯಬೇಕು. ಪಾರ್ಕಿಂಗ್ ಕಡೆ ಕಣ್ಣು ಹಾಯಿಸುತ್ತಿರಬೇಕು. ಇಷ್ಟಾದ ಮೇಲೆ ಭರ್ಜಿಯ ಮೊನೆಗಳಿಗೆ ಮೈ ಒಡ್ಡಿ ನಿಲ್ಲಬೇಕು ಮತ್ತು ನೋವಿನಲ್ಲೂ ನಗಬೇಕು. ನಗಲು ಸಾಧ್ಯವಾಗದಿದ್ದರೆ ಮನಸ್ಸಿನ ಹದ ಕೆಡುತ್ತದೆ. ಮನಸ್ಸು ಕೆಟ್ಟರೆ ಬದುಕಿನ ನೋಟಕ್ರಮದ ಜಾಡು ತಪ್ಪುತ್ತದೆ. ಒಟ್ಟು ಚಿತ್ರವೇ ಕಲಕಿಹೋಗುತ್ತದೆ.
‘ರಂಗ ವಠಾರ’ ಅಂಕಣದಲ್ಲಿ ಮತ್ತೆ…

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ