Advertisement

Tag: Sanjotha Purohith

ಕೂರಾಪುರಾಣ ೫: ಸೂಜಿಗಳು ಮತ್ತು ಸಂಕಷ್ಟಗಳು

ಲೀಶ್ ಹಾಕಿ ಸೂಜಿ ಚುಚ್ಚುವುದಿಲ್ಲ ಎಂದು ಅವನಿಗೆ ತಿಳಿಯುವ ಹಾಗೆ ನಯವಾಗಿ ವರ್ತಿಸುತ್ತ ನಿಧಾನವಾಗಿ ಲೀಶ್ ಅಭ್ಯಾಸ ಮಾಡಿಸಲು ಸುಮಾರು ಮೂರು ತಿಂಗಳುಗಳೇ ಹಿಡಿಯಿತು. ನಾಯಿಗಳ ಮನಸ್ಸಿನಲ್ಲಿ ಯಾವುದರ ಬಗ್ಗೆಯಾದರು ಭಯ ಕೂತು ಬಿಟ್ಟರೆ ಅವುಗಳಿಗೆ ಆ ವಿಷಯದ ಬಗ್ಗೆ ಅದೆಷ್ಟು ಭಯವಿರುತ್ತದೆ ಎಂದು ಗೊತ್ತಾಗಿದ್ದು ಆಗಲೇ. ಚಿಕ್ಕವರಿದ್ದಾಗ ನಾಯಿಯ ಬಾಲಕ್ಕೆ ಹುಡುಗರು ಪಟಾಕಿ ಕಟ್ಟಿ ಅದು ಸಿಡಿದಾಗ ಕುಂಯ್ಯ ಕುಂಯ್ಯ ಎಂದು ಓಡಿ ಹೋದದ್ದು, ಅದನ್ನು ನೋಡಿ ನಾವು ನಕ್ಕಿದ್ದನ್ನೆಲ್ಲ ನೆನೆದು ಅದೆಷ್ಟು ಪ್ರಾಣಿಗಳು ನಮ್ಮಿಂದ ಹಿಂಸೆ ಪಟ್ಟಿವೆಯೋ ಎನ್ನಿಸುತ್ತದೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ

Read More

ಕೂರಾಪುರಾಣ ೪: ಸೂಜಿಗಳೆಂದರೆ ಸಂಕಷ್ಟವೇ…

ಎರಡು ನಿಮಿಷಗಳ ಕಾಲ ಕೂರಾ ಅವಳನ್ನು ನಮ್ಮೊಡನೆ ಮಾತನಾಡಲು ಬಿಡಲೇ ಇಲ್ಲ. ಅವಳ ಮೇಲೆ ಹತ್ತುವುದು, ಅವಳ ಸುತ್ತ ಸುತ್ತುವುದು, ಅವಳ ಕೆನ್ನೆಯನ್ನು ನೆಕ್ಕುವುದು.. ಎಲ್ಲ ಮಾಡುತ್ತಿದ್ದ. ಒಳಗೆ ಬಂದಾಗ ಆಕೆ ಅವನಿಗೆ ಒಂದೆರಡು ಟ್ರೀಟಿನ ತುಂಡುಗಳನ್ನು ಕೊಟ್ಟಿದ್ದಳು. ಇದೆಲ್ಲ ಅವಳನ್ನು ಒಲಿಸಲಿಕ್ಕೆ ಮತ್ತು ಇನ್ನೆರಡು ತುಂಡುಗಳನ್ನು ಪಡೆಯಲಿಕ್ಕೆ ಎಂದು ನಮಗೆ ಗೊತ್ತಿತ್ತು. ನಿಧಾನವಾಗಿ ಆಕೆ ನಮ್ಮೊಡನೆ ಮಾತನಾಡುತ್ತ ನಾಯಿಗಳ ಆರೋಗ್ಯದ ಬಗ್ಗೆ ವಿವರಿಸತೊಡಗಿದಳು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ನಾಲ್ಕನೆಯ ಕಂತು

Read More

ಕೂರಾಪುರಾಣ ೨: ಏನೆಂದು ಹೆಸರಿಡುವುದು ಈ ಚೆಂದದ ಕೂಸಿಗೆ?

ಹಾಸಿಕೊಳ್ಳುತ್ತಿದ್ದ ಹಾಸಿಗೆಗಳನ್ನು ಅದಕ್ಕೆಂದು ಹಾಸಿ ಮೆತ್ತನೆಯ ಹಾಸಿಗೆ ಸಿದ್ಧವಾಯಿತು. ಅದನ್ನು ಅದರೊಳಗೆ ಕಳಿಸಿ ಹೊರಗಿನಿಂದ ಚಿಲಕ ಹಾಕಿದರೆ ಎಷ್ಟೊತ್ತು ಮಲಗಲೇ ಇಲ್ಲ! ನಮ್ಮನ್ನೇ ನೋಡುತ್ತ ಕೂತು ಬಿಟ್ಟಿತ್ತು. ನಾವು ಮಲಗುವ ಕೋಣೆಯಲ್ಲಿ ಎರಡು ಕಣ್ಣುಗಳು ನಮ್ಮ ಮೇಲೆಯೇ ನೆಟ್ಟಿವೆ ಎಂದರೆ ನಮಗೆ ನಿದ್ದೆಯಾದರೂ ಹೇಗೆ ಬಂದೀತು? ಅದೂ ಕತ್ತಲಲ್ಲಿ ಹೊಳೆಯುವ ಅದರ ಕಣ್ಣುಗಳು!
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ

Read More

ಸಂಜೋತಾ ಪುರೋಹಿತ್ ಅನುವಾದಿಸಿದ ರಾಬರ್ಟ್‌ ಬಾರ್ರ್ ಕತೆ

ಹ್ಯಾಂಗಿಂಗ್ ಒವರ್‌ಲುಕ್ ತಲುಪಲು ಕೆಲವೇ ಹೆಜ್ಜೆಗಳು ಬಾಕಿಯಿದ್ದವು. ಅದನ್ನು ತಲುಪುವವರೆಗೂ ಆಕೆ ‘ನಾವು ಒಬ್ಬರಿಗೊಬ್ಬರು ತಳುಕು ಹಾಕಿಕೊಂಡಿದ್ದೇವೆ’ ಎಂದು ಮತ್ತೆ ಮತ್ತೆ ತನಗೊಬ್ಬಳಿಗೇ ಕೇಳಿಸುವಂತೆ ಹೇಳಿಕೊಂಡಳು. ಜಾನ್ ಬೋಡಮ್ಯಾನ್ ಶಿಥಿಲವಾಗಿದ್ದ ಆ ಗೋಡೆಯ ಮೇಲೆ ಕುಳಿತ. ಕೈಯ್ಯಲ್ಲಿದ್ದ ಕೋಲನ್ನು ಬಂಡೆಯ ಮೇಲಿಟ್ಟು ಆಕೆ ಅತ್ತಿಂದಿತ್ತ ಓಡಾಡಿದಳು. ಅವಳ ಹೆಜ್ಜೆಗಳಲ್ಲಿ ಭಯ ಇಣುಕುತ್ತಿತ್ತು.
ಸಂಜೋತಾ ಪುರೋಹಿತ್ ಅನುವಾದಿಸಿದ ಸ್ಕಾಟಿಶ್‌- ಕೆನಡಿಯನ್‌ ಕತೆಗಾರ ರಾಬರ್ಟ್‌ ಬಾರ್ರ್ ಕತೆ “ಒಂದು ಆಲ್ಪೈನ್‌ ವಿಚ್ಛೇದನ” ನಿಮ್ಮ ಓದಿಗೆ

Read More

ಹೂದೋಟದ ಹೂಗಳಂಥಾ “ಸಂಗಮ”

‘ಸಂಗಮ’ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಕತೆಗಳಿಗೆ ಆಯ್ದುಕೊಂಡಿರುವ ಶೀರ್ಷಿಕೆಗಳು. ಓದಿದ ತಕ್ಷಣ ಕತೆಯ ಬಗ್ಗೆ ಯಾವ ತರಹದ ಸುಳಿವನ್ನೂ ಬಿಟ್ಟು ಕೊಡುವುದಿಲ್ಲ ಅವು. ಆ ಶೀರ್ಷಿಕೆ ಯಾಕೆ ಎಂದು ತಿಳಿಯಬೇಕಿದ್ದರೆ ನೀವು ಇಡೀ ಕತೆಯನ್ನು ಓದಬೇಕು. ಉದಾಹರಣೆಗೆ ಎರಡನೇಯ ಕತೆ ‘ಮೈ ದಾಸ್’ ಅನ್ನೇ ತೆಗೆದುಕೊಳ್ಳಿ. ಊಹುಂ.. ನೀವು ಗೆಸ್ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಮುಟ್ಟಿದೆಲ್ಲವೂ ಚಿನ್ನ ಎಂಬ ಗಾದೆ ಮಾತಿದೆಯಲ್ವ.. ಅದನ್ನು ನಿಜವಾಗಿಯೂ ಸಾಧ್ಯವಾಗಿಸಲು ಯತ್ನಿಸುವ ವೈಜ್ಞಾನಿಕ ಸಂಶೋಧಕನ ಕತೆ.
ರಾಜಲಕ್ಷ್ಮಿ ಎನ್.‌ ರಾವ್‌ ಅವರ “ಸಂಗಮ” ಕಥಾಸಂಕಲನದ ಕುರಿತು ಸಂಜೋತಾ ಪುರೋಹಿತ್‌ ಬರಹ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ