Advertisement

Tag: Yogindra Maravanthe

ಇಲ್ಲಿ ಉಳಿದರು ಹೀಗೆ ನಡೆದರು ಅಂಬೇಡ್ಕರ್

ಗಾಂಧೀಜಿ ಹಳ್ಳಿಗಳನ್ನು ಭಾರತದ ಬೆನ್ನೆಲುಬು, ನಾಗರಿಕತೆಯ ತೊಟ್ಟಿಲು ಎಂದು ವೈಭವೀಕರಿಸಿದರೆ ಅಂಬೇಡ್ಕರರಿಗೆ ಅವು ಜಾತ್ಯಾಧಾರಿತ ತಾರತಮ್ಯವನ್ನು ಸ್ಥಿರಗೊಳಿಸಿ ಆಳುವ ಕೂಪಗಳಾಗಿ ಕಾಣುತ್ತಿದ್ದವು. ಒಡಹುಟ್ಟಿದವರಿಗೆ ಸೇವೆಗಳು ನಿರ್ಬಂಧಿಸಲಾದ, ಕೆಲವು ಜಾತಿಗಳವರನ್ನು ಹೀನರೆಂದು ತಿಳಿಯುವ ಹಳ್ಳಿಯಲ್ಲಿ ಅವರು ವಾಸಿಸಿದವರು. ಪಟ್ಟಣಗಳು ಅವಕಾಶಗಳನ್ನು ಒದಗಿಸುವ, ಶಿಕ್ಷಣಕ್ಕೆ ಉತ್ತೇಜನ ನೀಡುವ ಜಾತಿಯನ್ನು ಆಧರಿಸದೇ ಉದ್ಯೋಗ ಬದುಕು ನೀಡುವ ತಾಣಗಳಾಗಿ ಕಂಡಿದ್ದವು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಲಂಡನ್‌ ವಾಸದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಎರಡು ತೀರಗಳ ಸೇರಿಸಿದ ಹಿರಿಯಜ್ಜ

ಮೂರು ದಶಕಗಳ ರಾಜಕೀಯ ಜೀವನದಲ್ಲಿ ದಾದಾಬಾಯಿ ನವರೋಜಿ ಏಳು ಬಾರಿ ಬ್ರಿಟನ್‌ಗೆ ಭೇಟಿ ನೀಡಿದರು, ಐದು ಬಾರಿ ಲಂಡನ್ ನ ಬೇರೆ ಬೇರೆ ವಿಳಾಸಗಳಲ್ಲಿ ಉಳಿದರು. ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಬ್ರಿಟನ್ನಿನ ಬೇರೆ ಬೇರೆ ಭಾಗಗಳಿಗೆ ತನ್ನ ಯೋಚನೆಗಳನ್ನು ತಿಳಿಸಲು ತಿರುಗಾಡಿದರು. 1906, ಎಂಭತ್ತರ ವಯಸ್ಸಿನಲ್ಲಿ ಮತ್ತೆ ಸಂಸತ್ತಿಗೆ ಮರಳುವ ಯತ್ನ ಮಾಡಿದರು. ಆದರೆ ಚುನಾವಣೆಯಲ್ಲಿ ಸೋತರು. ಲಂಡನ್‌ನ ಲಾಂಬೆತ್ ಪ್ರದೇಶದಲ್ಲಿ, ಒಂದು ಕಾಲಕ್ಕೆ ತಾವು ಸಮರ್ಥಿಸುತ್ತಿದ್ದ ಲಿಬರಲ್ ಪಕ್ಷದ ಅಭ್ಯರ್ಥಿಯ ಎದುರು ಅವರು ನಿಂತಿದ್ದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ದಾದಾಬಾಯಿ ನವರೋಜಿ ಅವರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಪಡುವಣದ ಗಾಳಿಯಲಿ ಅಧ್ಯಾತ್ಮದ ಗಂಧ ಹರಡಿದ ಅಲೆಮಾರಿ ಬೋಧಕ

ವಿವೇಕಾನಂದರು ನೀಡಿದ ಅನೇಕ ಉಪನ್ಯಾಸಗಳು  1896ರಲ್ಲಿ ಪ್ರಕಟವಾಗಿವೆ. ಪಶ್ಚಿಮದ ಅಧ್ಯಾತ್ಮ ಓದುಗರ ಕುತೂಹಲ ಆಸಕ್ತಿಗಳನ್ನು ಹೆಚ್ಚಿಸಿವೆ. ಹಿಂದೂ ನಂಬಿಕೆಗಳಲ್ಲಿ ಅಂತರ್ಗತವಾಗಿರುವ ದೇವರ ಕಲ್ಪನೆಯ ಪ್ರಚಾರಕನಾಗಿ ಬ್ರಿಟನ್ನಿಗೆ ಬಂದರು , ಎಲ್ಲ ಧರ್ಮಗಳ ಅರಿವಿನ ಪರಿಧಿಯನ್ನು ಹೆಚ್ಚಿಸಿ ಹೋದರು. ಭಾರತದಲ್ಲಿ ಜನಪ್ರಿಯವಾಗಿರುವ ವಿವಿಧ ನಂಬಿಕೆಗಳಿಂದ ನೇರ ಉದಾಹರಣೆಗಳನ್ನು ಆಧಾರವಾಗಿಸಿ ವಿವರಿಸುತ್ತಿದ್ದರು.ಎಲ್ಲ ನಂಬಿಕೆಗಳ ಒಳಹರಿವಾಗಿ , ಭಾರತೀಯ ಯೋಚನಾಕ್ರಮವನ್ನು ಆಧರಿಸಿದ ತತ್ವಶಾಸ್ತ್ರವನ್ನು ಬೋಧಿಸಿದರು. ವೇದ ಉಪನಿಷತ್ತು ಭಗವದ್ಗೀತೆಗಳನ್ನು ಉಲ್ಲೇಖಿಸಿದರು. ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ ಇಲ್ಲಿದೆ.

Read More

ಪ್ರತಿಭೆಯ ತಿಜೋರಿಯಿಂದ ಜಗತ್ತನ್ನು ಶ್ರೀಮಂತಗೊಳಿಸಿದವನು

ಬರಹಗಾರನಾಗಲು ಲಂಡನ್ ಗೆ ಬಂದಿಳಿದ ಷಾ ಸರಿಯಾದ ಉದ್ಯೋಗ ಇಲ್ಲದೆ ತಾಯಿಯಿಂದ ಮತ್ತು ಆಕೆಯ ಹೊಸ ಗಂಡನಿಂದ ವಾರಕ್ಕೆ ಸಿಗುವ ಒಂದು ಪೌಂಡ್ ಹಣದ ಮೇಲೆ ಅವಲಂಬಿತನಾಗಿದ್ದ. ಮಧ್ಯಾಹ್ನಗಳನ್ನು ಬ್ರಿಟಿಷ್ ಮ್ಯೂಸಿಯಮ್‌ನ ಓದುವ ಕೋಣೆಯಲ್ಲಿ ಕಳೆಯುತ್ತಿದ್ದ. ಶಾಲೆಯಲ್ಲಿ ಯಾವುದನ್ನು ಪಡೆಯಲಾಗಲಿಲ್ಲವೋ ಲೈಬ್ರರಿಯ ಓದಿನಲ್ಲಿ ಅವನ್ನು ಓದಿ ಗಳಿಸುವ ಪ್ರಯತ್ನ ಮಾಡುತ್ತಿದ್ದ. ಕಾದಂಬರಿ ಬರೆಯಲು ಶುರು ಮಾಡಿದ. ಇನ್ನು ಸಂಜೆಯ ಹೊತ್ತಿಗೆ ಉಪನ್ಯಾಸಗಳು ಚರ್ಚೆಗಳು ನಡೆಯುವ ಲಂಡನ್ ನ ತಾಣಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ನಾಟಕಕಾರ ಬರ್ನಾರ್ಡ್‌ ಷಾ ಬಗ್ಗೆ ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಲಂಡನ್ನನ್ನು ಪ್ರಧಾನ ಪಾತ್ರವಾಗಿಸಿದ ಕಾದಂಬರಿಕಾರ

ಕಿರಿಯ ಓದುಗರಿಂದ ಹಿಡಿದು ಹಿರಿಯ ಪುಸ್ತಕಪ್ರಿಯರ ತನಕ ಜನಪ್ರಿಯವಾದ “ಆಲಿವರ್ ಟ್ವಿಸ್ಟ್” ಹುಟ್ಟಿದ್ದು ಲಂಡನ್ ನ ಬೀದಿಗಳಿಂದಲೇ. ಲಂಡನ್ ನ ಬಡತನ ಕ್ರೌರ್ಯ ಅಪರಾಧಗಳೇ ಪ್ರಧಾನ ಭೂಮಿಕೆಯಲ್ಲಿರುವ ಕಥೆ. ಸಾಲವನ್ನು ತೀರಿಸಲಾಗದೇ ತಂದೆ ಜೈಲಿನಲ್ಲಿ ದಿನಕಳೆಯುವುದನ್ನು, ನಿರಾಶ್ರಿತ ವಸತಿಗಳಲ್ಲಿ ಅನಾಥ ಮಕ್ಕಳ ಹತಾಶೆಯನ್ನು ಬಾಲ್ಯದಲ್ಲಿ ಡಿಕನ್ಸ್ ಕಂಡವನು. ಖ್ಯಾತ ಕಾದಂಬರಿಕಾರ ಡಿಕನ್ಸ್‌ನ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ