Advertisement

Tag: ಕೆಂಡಸಂಪಿಗೆ

ಟೀವಿ’ಯಿದ್ದವರು ‘ಠೀವಿ’ಯಿಂದ ಬೀಗುತ್ತಿದ್ದ ಕಾಲ!: ಬಸವನಗೌಡ ಹೆಬ್ಬಳಗೆರೆ ಸರಣಿ

ದಿನ ಸಂಜೆ ಒಂದು‌ ಧಾರವಾಹಿ, ಶುಕ್ರವಾರ ‘ಚಿತ್ರಮಂಜರಿ’ ಹೆಸರಿನಲ್ಲಿ‌ ಕನ್ನಡ ಚಲನಚಿತ್ರ ಗೀತೆಗಳು ಬರುತ್ತಿದ್ದವು. ಇವನ್ನ ನೋಡಲು ನಾವು ತುಂಬಾ ಕಾತುರರಾಗಿ ಸಂಜೆ ಏಳು ಗಂಟೆಗೆಲ್ಲಾ ಟಿವಿ ಮುಂದೆ ಹಾಜರಾಗುತ್ತಿದ್ದೆವು. ನಮ್ಮಜ್ಜನ ಮನೆಯಲ್ಲಿ ಟಿವಿ ಇರಲಿಲ್ಲ. ನಾವು ಬೇರೆಯವರ ಮನೆಗೆ ಟಿವಿ‌ ನೋಡಲು ಹೋಗಬೇಕಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಕಳೆದ ವರ್ಷದ ಹಲವು ಬಣ್ಣಗಳು..: ವಿಶ್ವನಾಥ ಎನ್ ನೇರಳಕಟ್ಟೆ ಬರಹ

ಐಸ್‌ಕ್ಯಾಂಡಿ ತೆಗೆದುಕೊಳ್ಳಬೇಕೆಂಬ ಯೋಚನೆ ಮೊದಲು ಬಂದದ್ದು ಅಣ್ಣನಿಗೆ. ಹೋಗಿ ನಿಂತ ನಾವು ಮೂರು ಐಸ್‌ಕ್ಯಾಂಡಿ ಕೊಡಲು ಹೇಳಿದೆವು. ನನಗೆ ಆಮೇಲೆಯೇ ಹೊಳೆದದ್ದು, ಮನೆಯಲ್ಲಿ ಅಮ್ಮ ಇದ್ದಾಳೆ. ಅಮ್ಮನಿಗೆಂದು ಇನ್ನೊಂದು ಐಸ್‌ಕ್ಯಾಂಡಿ ಕೊಡಲು ಹೇಳಿದೆ. ನಾನು ಎರಡು ಕೈಗಳಲ್ಲಿಯೂ ಐಸ್‌ಕ್ಯಾಂಡಿ ಹಿಡಿದು ಹೊರಟೆ. “ಮನೆ ಮುಟ್ಟುವಷ್ಟರಲ್ಲಿ ಅದು ಕರಗಿಹೋಗಿರುತ್ತದೆ. ಬೇಡ” ಎಂದು ಹೇಳಿದ ಅಪ್ಪನ ಮಾತು ನನ್ನ ಕಿವಿಯನ್ನೇ ಹೊಕ್ಕಿರಲಿಲ್ಲ.
೨೦೨೩ನೇ ವರ್ಷ ಬದುಕಿಗೆ ಹಚ್ಚಿದ ಹಲವು ಬಣ್ಣಗಳ ಕುರಿತು ವಿಶ್ವನಾಥ ಎನ್.‌ ನೇರಳಕಟ್ಟೆ ಬರಹ

Read More

ಹೊಸ ವರುಷಕೆ… ಹೊಸ ಹರುಷಕೆ..: ಪ್ರಕಾಶ್ ಪೊನ್ನಾಚಿ ಬರಹ

ಬದುಕು ನಿಂತ ನೀರಲ್ಲ, ಬದಲಾವಣೆ ಜಗದ ನಿಯಮ ಎಂದುಕೊಂಡೇ ಮನುಷ್ಯ ಬದಲಾವಣೆಗೊಳಪಟ್ಟುಕೊಂಡು ಹೊಸ ರೂಪಾಂತರಗಳನ್ನು ಆವಿಸ್ಕರಿಸಿ ಹೊಸ ಜಗದ ಸೃಷ್ಟಿಗೆ ನಾಂದಿ ಹಾಡುತ್ತಾ ಬಂದ. ಪ್ರತಿ ವರ್ಷವೂ ಹೊಸದೊಂದು ಜನ್ಮವೆಂದುಕೊಂಡೆ ಹೊಸ ಸೃಷ್ಟಿಗಳಿಗೆ ಬುನಾದಿ ಹಾಕಲಾರಂಭಿಸಿದ. ಎಲ್ಲಾ ಎಲ್ಲೆಗಳನ್ನು ಮೀರಿ ಲೋಕದೊಳಿತಿಗೆ ಸ್ಪೃಷ್ಯ ಯಾವುದೋ ಅವುಗಳ ಸೃಷ್ಟಿಯಲ್ಲಿ ತಲ್ಲೀನನಾದ.
ಹಳ್ಳಿಗಳಲ್ಲಿನ ಹೊಸ ವರ್ಷದಾಚರಣೆಯ ಕುರಿತು ಪ್ರಕಾಶ್‌ ಪೊನ್ನಾಚಿ ಬರಹ ನಿಮ್ಮ ಓದಿಗೆ

Read More

ಅಂಕುಡೊಂಕಿನ ಪಯಣ: ಡಾ. ಎಂ ಉಷಾ ಕಾದಂಬರಿಯ ಪುಟಗಳು

ಮೊದಲೇ ಅಸಮಧಾನಗೊಂಡಿದ್ದ ಪುಟ್ಟಮ್ಮನಿಗೆ ಮಕ್ಕಳ ಈ ಕಳ್ಳಾಟದಿಂದ ಪಿತ್ತ ನೆತ್ತಿಗೇರಿತು. ಕಂಕುಳಲ್ಲಿದ್ದ ಮಲ್ಲಿಯನ್ನು ಕೆಳಕ್ಕೆ ಕುಕ್ಕಿದವಳೆ ಸರೋಜಳ ಮೇಲೆ ಮುಗಿಬಿದ್ದಳು. ‘ಮನೆ ಕೆಲಸ ಮಾಡದು ಬುಟ್ಟು ಸೂಳೆರಂಗೆ ಅಲಂಕಾರ ಮಾಡ್ಕತಾ ಕೂತಿದಿಯಾ ಇಲ್ಲಿ? ಯಾವ ನಾಯಕಸಾನಿ ಕೊಟ್ಲೆ ಇದ್ನ ನಿಂಗೆ… ʼ ಎಂದು ಸಿಕ್ಕಸಿಕ್ಕಲ್ಲಿ ಬಡಿಯ ತೊಡಗಿದಳು. ಈ ಬಾರಿ ಗೌರಿಹಬ್ಬಕ್ಕೆಂದು ರಾಜಶೇಖರ ದಾಕ್ಷಾಯಿಣಿಗೆ ಹೊಸ ಸ್ನೋಪೌಡರ್ ಡಬ್ಬಿಗಳನ್ನು ತಂದುಕೊಟ್ಟಿದ್ದನ್ನು ಗಮನಿಸಿದ ಸರೋಜ ಚಿಕ್ಕಮ್ಮನಲ್ಲಿ ಹಳೆಯ ಡಬ್ಬಿಯನ್ನು ಕೇಳಿ ಪಡೆದಿದ್ದಳು. ಇವತ್ತು ಹಬ್ಬದ ದಿನವಾಗಿದ್ದುದು ಮತ್ತು ಕೆಲಸದಲ್ಲಿ ಮುಳುಗಿ ಹೋಗಿರುವ ಅಮ್ಮ ಗಮನಿಸುವುದಿಲ್ಲ ಎನ್ನುವ ಧೈರ್ಯದಲ್ಲಿ ಹಚ್ಚಿಕೊಂಡಿದ್ದಳು.
ಡಾ. ಎಂ. ಉಷಾ ಹೊಸ ಕಾದಂಬರಿ “ಬಾಳ ಬಟ್ಟೆ”ಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಗೋಧಿ ತೆನೆ ತೊಟ್ಟಿಲು…: ಚೈತ್ರಾ ಶಿವಯೋಗಿಮಠ ಸರಣಿ

ಪ್ರಕೃತಿ ಜೊತೆಗಿನ ಅವಳ ಪಿಸುಮಾತು ನಮ್ಮನ್ನೆಲ್ಲಾ ಒಂದು ನಳನಳಿಸುವ ಹೂದೋಟದಲ್ಲಿ ನಿಲ್ಲಿಸುತ್ತದೆ. ಮಕ್ಕಳಿಗಾಗಿ ಬರೆದ ಉಪ್ಪು, ರೊಟ್ಟಿ, ನೀರಿನ ಕವಿತೆಗಳು ಬಾಯಾರಿದವರ ದಾಹವನ್ನು ಹಿಂಗಿಸುವಂಥವು. ಅವಳ ತಾಯಿಗರುಳಿನಿಂದ ಉಣಿಸುವ ನೆಲದ ಸೊಗಡಿನ ಅಮೃತದಂತಹ ಕವಿತೆಗಳು ಮನುಕುಲದ ಎದೆ ತುಂಬಿಸುವಂಥವು.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ಗೇಬ್ರಿಯಲ್ಲ ಮಿಸ್ತ್ರಾಲ್ ಅವರ ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ