Advertisement

ಪುಸ್ತಕ ಸಂಪಿಗೆ

ದೊಡ್ಡ ದೇಶದ  ಸಂಗತಿಗಳು  ಚಿಕ್ಕ ಚಿಕ್ಕ  ಟಿಪ್ಪಣಿಗಳಲ್ಲಿ: ಶಶಿಧರ ಹಾಲಾಡಿಯವರ ಕೃತಿಯ ಕುರಿತು ನಾರಾಯಣ ಯಾಜಿ ಬರಹ

ದೊಡ್ಡ ದೇಶದ  ಸಂಗತಿಗಳು  ಚಿಕ್ಕ ಚಿಕ್ಕ  ಟಿಪ್ಪಣಿಗಳಲ್ಲಿ: ಶಶಿಧರ ಹಾಲಾಡಿಯವರ ಕೃತಿಯ ಕುರಿತು ನಾರಾಯಣ ಯಾಜಿ ಬರಹ

ಅಮೆರಿಕದಂತಹ ವಿಶಾಲ ದೇಶವನ್ನು ಸಾವಿರಾರು ಪ್ರವಾಸಿಗರು ನೋಡಿರಬಹುದು. ಆದರೆ ಎಲ್ಲರೂ ಅದನ್ನು ಓದುಗರ ಕಣ್ಮುಂದೆ ಜೀವಂತಗೊಳಿಸಲು ಸಾಧ್ಯವಿಲ್ಲ. ಒಂದು ಸ್ಥಳದ ಸೌಂದರ್ಯವನ್ನು ವರ್ಣಿಸುವುದು ಸುಲಭ; ಆದರೆ ಆ ಸ್ಥಳದ ಇತಿಹಾಸ, ಸಾಮಾಜಿಕ ಹಿನ್ನೆಲೆ, ವೈಜ್ಞಾನಿಕ ಅಂಶಗಳು, ಅಲ್ಲಿನ ಜನಜೀವನ ಮತ್ತು ಮಾನವ ನಾಗರಿಕತೆಯ ಪಯಣವನ್ನು ಒಂದೇ ಬರಹದಲ್ಲಿ ಬೆರೆಸಿ ಹೇಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಲಾಡಿಯವರು ಅದನ್ನು ಸಾಧಿಸಿದ್ದಾರೆ. ಈ ಕೃತಿಯ ಅತ್ಯಂತ ದೊಡ್ಡ ಶಕ್ತಿ ಅವರ ‘ಸೂಕ್ಷ್ಮ ಅವಲೋಕನ’. ಸಾಮಾನ್ಯ ಪ್ರವಾಸಿಗನ ಕಣ್ಣಿಗೆ ಕಾಣದ ಸಂಗತಿಗಳನ್ನೂ ಲೇಖಕರು ಹಿಡಿದುಕೊಡುತ್ತಾರೆ.
ಶಶಿಧರ ಹಾಲಾಡಿ ಬರೆದ ಪ್ರವಾಸ ಕಥನ “ಇಲ್ಲಿ ಶಾಸ್ತ್ರ ಹೇಳಲಾಗುವುದು” ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

read more
ಹಾಡೊಂದು ವಾಪಸ್ಸು ಕೈ ಬೀಸಿ ಕರೆದಿತ್ತು…: ವಿನಾಯಕ ಅರಳಸುರಳಿ ಕೃತಿಯ ಆಯ್ದ ಭಾಗ

ಹಾಡೊಂದು ವಾಪಸ್ಸು ಕೈ ಬೀಸಿ ಕರೆದಿತ್ತು…: ವಿನಾಯಕ ಅರಳಸುರಳಿ ಕೃತಿಯ ಆಯ್ದ ಭಾಗ

ಡಾ. ಪುರುಷೋತ್ತಮ್ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡೆ. ಮೊಬೈಲನ್ನು ಆನ್ ಮಾಡಿ ಅಪ್ಪನ ಇಷ್ಟದ ಹಾಡುಗಳನ್ನು ಹಾಕಿ ಇಯರ್ ಫೋನನ್ನು ಅಪ್ಪನ ಕಿವಿಗೆ ತೊಡಿಸಿದೆ. ಒಂದಿಡೀ ಬದುಕಿನುದ್ದಕ್ಕೂ ಅವನ ಬೆಳಗು, ಮಧ್ಯಾಹ್ನ, ಸಂಜೆಗಳನ್ನು ಸಲಹಿದ, ‘ಇದೀಗ ಚಿತ್ರಗೀತೆಗಳು’ ಎಂಬ ಘೋಷಣೆಯ ಮೂಲಕ ಅವನ ಹೃದಯದಲ್ಲಿ ದೀಪ ಹಚ್ಚಿದ, ಅವನ ಬಾಲ್ಯ, ಪ್ರೀತಿ, ನೆನಪುಗಳ ಸರ್ವಸ್ವವೂ ಆದ ಹಾಡುಗಳನ್ನು ಒಂದೊಂದಾಗಿ ನೇರ ಅವನ ಹೃದಯಕ್ಕೇ ಕೇಳುವಂತೆ ಹಾಕಿದೆ…
ವಿನಾಯಕ ಅರಳಸುರಳಿ ಬರೆದ “ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ” ಹೊಸ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

read more
ಅರ್ಥಗಾರಿಕೆಯ ಆಂತರ್ಯ ಮತ್ತು “ಮಾತು ಮದ್ದಳೆ”: ನಾರಾಯಣ ಯಾಜಿ ಬರಹ

ಅರ್ಥಗಾರಿಕೆಯ ಆಂತರ್ಯ ಮತ್ತು “ಮಾತು ಮದ್ದಳೆ”: ನಾರಾಯಣ ಯಾಜಿ ಬರಹ

ಯಕ್ಷಗಾನದಲ್ಲಿ ಭೀಷ್ಮ ವಿಜಯ, ವಾಲಿವಧೆ, ಕೃಷ್ಣ ಸಂಧಾನ ಇವೆಲ್ಲವೂ ವಾದಕೇದ್ರಿತವಾಗಿ, ರಸವೆನ್ನುವುದನ್ನು ಹುಡುಕಬೇಕಾಗಿದೆ. ವಾಲಿ ಸುಗ್ರೀವ ಎದುರಾದಾಗ “ಮತ್ತು ಮತ್ತೆನ್ನೆಡೊನೆ ನಿತ್ತುಕೊಂಡೀರಣದಿ ಉತ್ತರವ ಕೊಡುವೆ” ಎನ್ನುವ ಭರದಲ್ಲಿ ಉದ್ದುದ್ದು ಮಾತನಾಡುವ ಪ್ರವೃತ್ತಿಯನ್ನು ನಿರಾಕರಿಸುವಾಗ ಗ ನಾ ಭಟ್ಟರಿಗೆ ವರ್ತಮಾನದ ತಾಳಮದ್ದಳೆಯ ಅಪಸವ್ಯಗಳು ಎದುರಾಗಿವೆ. ವೀರ ರಸದ ಭಾಗದಲ್ಲಿ ಮಾತು ಕಡಿಮೆ ಆಡಬೇಕೆನ್ನುವ ಔಚಿತ್ಯಪ್ರಜ್ಞೆಯನ್ನು ಅವರು ವಿವರಿಸುತ್ತಾರೆ. ರಾಮ ಧರ್ಮಸೂಕ್ಷ್ಮವನ್ನು ವಿವರಿಸಬೇಕೆ ಹೊರತೂ ತರ್ಕದ ಹಾದಿ ಹಿಡಿಯ ಬಾರದು. ಜೊತೆಗೆ ಪಾರ್ತಿಸುಬ್ಬ ವಾಲಿಯನ್ನು ಉದಾತೀಕರಣಕೊಳಿಸಿರುವುದನ್ನು ಕಟುವಾಗಿ ಟೀಕಿಸುತ್ತಾರೆ. ಇದು ಓರ್ವ ವಿಮರ್ಶಕನಿರಬೇಕಾದ ನಿಲುವು.
ಗ.ನಾ. ಭಟ್ಟ ಬರೆದ “ಮಾತು ಮದ್ದಳೆ” ಕೃತಿಯ ಕುರಿತು ನಾರಾಯಣ ಯಾಜಿ ಬರಹ

read more
ಯಾಕೆ ಸಾರ್ ನೀವು  ಎಲ್ಲವನ್ನೂ ಉಲ್ಟಾ ಬರೆಯುತ್ತೀರಿ…?

ಯಾಕೆ ಸಾರ್ ನೀವು  ಎಲ್ಲವನ್ನೂ ಉಲ್ಟಾ ಬರೆಯುತ್ತೀರಿ…?

ನಾವು ನೋಡುತ್ತಿರುವುದೇ ಸತ್ಯ ಎಂದು ಯಾಕೆ ಹೇಳುತ್ತೇವೆ…? ಗೂಬೆ ಅಂದುಕೊಂಡಿರುವುದು ಸರಿ ಆಗಿರಬಹುದು… ನಾಯಿ ನೋಡುತ್ತಿರುವುದೇ ಸರಿ ಇರಬಹುದಲ್ಲ…! ಹೀಗಾಗಿ ಭೂಮಿಗೆ ಅದರದೇ ಒಂದು ಕ್ಯಾರೆಕ್ಟರ್ ಇಲ್ಲ. ಎಲ್ಲಾ ನಾವು ಮಾಡಿಕೊಂಡಿರುವುದು. ನೀರಿಗೆ ಹೆಣ್ಣಿನ ಹೆಸರನ್ನೇ ಯಾಕೆ ಇಟ್ಟಿದ್ದಾರೆ..? ಅದು ಹೇಳಿತ್ತೇ ನಾನು ಹೆಣ್ಣೆಂದು ಆದರೆ ನಾವು ಹೆಣ್ಣು ಎಂದು ಮಾಡಿಕೊಂಡಿದ್ದೇವೆ. ಇವೆಲ್ಲ ನಮ್ಮ ಕಲ್ಪನೆಗಳು ಇದನ್ನು ಮೀರಿ ಹೇಳಬೇಕು. ಈ ಪ್ರಪಂಚ ಎನ್ನುವುದು ನಾವು ನೋಡಿದಂತೆ ಅದಕ್ಕೆ ತನ್ನದೇ ಆದ ಕ್ಯಾರೆಕ್ಟರ್ ಇಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

read more
ಕೆ.ಟಿ. ಹೇಳಿದ ನಾಲ್ಕು ಪ್ರಸಂಗಗಳು

ಕೆ.ಟಿ. ಹೇಳಿದ ನಾಲ್ಕು ಪ್ರಸಂಗಗಳು

ಸ್ವಲ್ಪ ಹೊತ್ತು ಯೋಚಿಸಿದ ನಾಗಾರ್ಜುನ ಪಂಡಿತನ ಮುಖ ನೋಡಿ ಹೇಗಿಂದ. ಅಲ್ಲಿ ಬಿಂದಿಗೆ ಇದೆ ಎಂದು ನೀವು ಹೇಳುತ್ತಿದ್ದೀರಿ. ಆದರೆ ಈಗ ನಾನು `ಇಲ್ಲ’ ಎಂದೇ ಹೇಳುತ್ತೇನೆ. ಏಕೆಂದರೆ ಅಲ್ಲಿ ಇದೆಯೇ..? ಇಲ್ಲವೇ..? ಎಂದು ನೋಡಿಲ್ಲ. ಮೇಲಾಗಿ ನನ್ನ ಸ್ಪರ್ಶಕ್ಕೆ ಬಂದಿಲ್ಲ. ಎಲ್ಲಿಯವರೆಗೆ ಅದು ನನ್ನ ಸ್ಪರ್ಷ ಜ್ಞಾನಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ಅಲ್ಲಿ ಏನೂ ಇಲ್ಲ ಎಂದೇ ಹೇಳುತ್ತೇನೆ. ಅದೇ ರೀತಿ ದೇವರು ಎಂಬುದು ನನ್ನ ಸ್ಪರ್ಶ ಜ್ಞಾನಕ್ಕೆ ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ದೇವರು ಎಂಬುದು ಇಲ್ಲ ಎಂದೇ ಅರ್ಥ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

read more
ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಕ್ಕೆ ಸಾಕ್ಷಿ ‘ಬದುಕೆಂಬ ಮಾಯೆ’: ಸುನಂದಾ ಕಡಮೆ ಬರಹ

ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಕ್ಕೆ ಸಾಕ್ಷಿ ‘ಬದುಕೆಂಬ ಮಾಯೆ’: ಸುನಂದಾ ಕಡಮೆ ಬರಹ

‘ಭೂಮಿಗೆ ಗಟ್ಟಿಯಾಗಿ ಬಂಧಿಸಿದ ಯಾವ ಅನುಬಂಧವೂ ನನಗೆ ಒದಗಿ ಬಂದಿಲ್ಲ ಹಾಗಾಗಿ ಕಳೆದುಕೊಳ್ಳುವ ಭಯ ನನಗಿರಲಿಲ್ಲ’ ಎಂಬಂತಹ ಮಾತುಗಳನ್ನು ಒಬ್ಬ ಹೆಣ್ಣು ಹೇಳಬೇಕಾದರೆ, ಈ ಸಮಾಜ ಮತ್ತು ಈ ವ್ಯವಸ್ಥೆಯ ಪಾಲು ಎಷ್ಟು ಎಂಬ ಪ್ರಶ್ನೆಯನ್ನೂ ಸಹ ನಮಗೆ ನಾವೇ ಕೇಳಿಕೊಳ್ಳುವಂತಿದೆ. ‘ಹೆಣ್ಣಾಗಿ ಹುಟ್ಟಿದ ನನ್ನನ್ನು ಒಂದು ವ್ಯಕ್ತಿತ್ವವಾಗಿಸಿದ್ದು ಈ ಬಂಡಾಯದ ವಿಚಾರಧಾರೆ’ ಎನ್ನುವ ಸುಕನ್ಯಾ ಅವರ ಗುಂಡಿಗೆಯನ್ನು ಇನ್ನಷ್ಟು ಗಟ್ಟಿ ಮಾಡಿದ್ದು ತಾನು ಕಲಿತ ವಿದ್ಯೆ ಎಂದೇ ಮತ್ತೆ ಮತ್ತೆ ಅವರು ಸ್ಮರಿಸಿಕೊಳ್ಳುತ್ತಾರೆ.
ಕನ್ನಡದ ಹಿರಿಯ ಕವಿ ಪ್ರೊ. ಸುಕನ್ಯಾ ಮಾರುತಿಯವರ ಆತ್ಮಕತೆ ‘ಬದುಕೆಂಬ ಮಾಯೆ’ ಕುರಿತು ಸುನಂದಾ ಕಡಮೆ ಬರಹ ನಿಮ್ಮ ಓದಿಗೆ

read more
ಯೂ ಆರ್ ಹರ್ಟಿಂಗ್ ಮೀ ತೇಜಸ್ವಿ…

ಯೂ ಆರ್ ಹರ್ಟಿಂಗ್ ಮೀ ತೇಜಸ್ವಿ…

ಧ್ಯಾನಸ್ಥ ಪೀಠದ ಕಡೆ ಹಾಕಿದ್ದ ಕಲ್ಲುಗಳ ಮೇಲು ಚಪ್ಪಡಿಗಳನ್ನು ತೆಗೆಯಬೇಕೆಂದು ತೇಜಸ್ವಿಗೆ ಒತ್ತಡ ಪ್ರಾರಂಭವಾಯಿತು. ಈ ಬಗ್ಗೆ ಕೆಟಿ ಯೊಂದಿಗೆ ಸಾಕಷ್ಟು ಚರ್ಚೆ ಮಾಡಿದರೂ ಕೆಟಿ ಒಪ್ಪಲಿಲ್ಲ. ತೇಜಸ್ವಿಗೆ ಒತ್ತಡ ಅತಿಯಾದಾಗ ‘ಒಂದು ದಿನ ರಾತ್ರಿ ಹನ್ನೆರೆಡು ಗಂಟೆವರೆಗೂ ಕರೆ ಮಾಡಿ ತೆಗೆಯಲೇ ಬೇಕು ಸ್ವಲ್ಪ ಚೇಂಜ್ ಆಗಬೇಕೆಂದು ತೇಜಸ್ವಿ ಒತ್ತಡ ಹಾಕಿದಾಗ ಬೇಸತ್ತ ಕೆಟಿ ಫೋನಿನಲ್ಲಿ ‘ಯೂ ಆರ್ ಹರ್ಟಿಂಗ್ ಮೀʼ ಎಂದು ಫೋನಿಟ್ಟರಂತೆ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

read more
ಕುಪ್ಪಳ್ಳಿ ಪ್ರವೇಶಿಸುತ್ತಿದ್ದಂತೆ ಕೆಟಿ ಭಾವುಕ

ಕುಪ್ಪಳ್ಳಿ ಪ್ರವೇಶಿಸುತ್ತಿದ್ದಂತೆ ಕೆಟಿ ಭಾವುಕ

ಕವಿ ಸಮಾಧಿಯ ಎದುರು ನಿಂತು ಒಮ್ಮೆ ನಮಿಸಿ ಧನ್ಯರಾದೆವು. ಸುತ್ತಲೂ ಹಚ್ಚಹಸಿರು. ದನಕರುಗಳು ಧನ್ಯತೆಯಿಂದ ಮೇಯುತ್ತಿದ್ದವು. ಸುತ್ತಲೂ ನಿಲ್ಲಿಸಿರುವ ಕಲ್ಲುಗಳನ್ನು ನೋಡಿ ದಂಗಾದೆವು. ಸದಾ ಚಲನೆಯನ್ನು ಸಾರುವ ಈ ಕಲ್ಲುಗಳು ಕುವೆಂಪುರ ಅನಿತ್ಯವಾದ, ಆಗು ನೀ ಅನಿಕೇತನವನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದವು. ಧ್ಯಾನಪೀಠ ನೋಡಿ ಬಂಡೆ ಮೇಲೆ ಕುವೆಂಪು ಕುಳಿತುಕೊಂಡು ಸುತ್ತಲೂ ಗಿರಿಸಾಲುಗಳ ನೋಡಿಯೇ ‘ಹಸಿರಿನ ಗಿರಿಗಳ ಸಾಲೇ ನಿನ್ನಯ ಕೊರಳಿನ ಮಾಲೆ’ ಎಂದು ಬರೆದಿದ್ದಾರೆ ಎಂದು ಕಲ್ಪಿಸಿಕೊಂಡೆವು.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

read more
“ಎನಫ್ ಕಣೋ ಅವನ ನಗು ಮುಖ ನೋಡಿದ್ಯಲ್ಲ. ಸಾಕು ಇಷ್ಟೆ”

“ಎನಫ್ ಕಣೋ ಅವನ ನಗು ಮುಖ ನೋಡಿದ್ಯಲ್ಲ. ಸಾಕು ಇಷ್ಟೆ”

ಹಾಗೆ ಮುಂದೆ ಸಾಗುತ್ತಾ ಬಲಬದಿಯ ರಸ್ತೆ ಯೊಂದನ್ನು ತೋರಿಸಿ “ಇಲ್ಲೊಂದು ಮಜಾ ಇತ್ತು ಕಣಯ್ಯಾ. ಹೀಗೆ ಇಲ್ಲಿ ಒಮ್ಮೆ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದೆ. ಆಗೆಲ್ಲ ಅಂಬಾಸಿಡರ್ ಮಾತ್ರ ಇದ್ವು. ಸಾರ್ ಈ ದಾರಿ ಚಿಕ್ಕಮಗಳೂರಿಗೆ ಹೋಗುತ್ತೆ ಷಾರ್ಟ್ ಕಟ್ ಅಂದ. ಸರಿ ನೋಡೇ ಬಿಡೋಣ ಎಂದು ಹೊರಟೆವು. ಹೋಗ್ತೀವಿ ಬರಿ ಅಪ್ಪು ಕಣೋ. ಕಾರ್ ಬೇರೆ ಹತ್ತಂಗಿಲ್ಲ ಸಾಕಾಗಿ ಹೋಯ್ತು. ನಾನು ಕಾರ್ ಇಳಿದು ವಾಪಾಸ್ ಬಾರದಿರಲು ಚಪ್ಪಡಿ ಕಲ್ಲು ಹಿಡಿದುಕೊಂಡು ಹಿಂದೆ ಕಲ್ ಇಡೋದು, ಡ್ರೈವರ್ ಹತ್ಸದು, ಸಾಕಾಗಿ ಹೋಯ್ತು ಕಣಯ್ಯ.”
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ