Advertisement

ಸಂಪಿಗೆ ಸ್ಪೆಷಲ್

ಯಾರಿಗೂ ಹೇಳದೇ ಬರೇ ನಾವಿಬ್ಬರೇ: “ಹಳೆಯ ಪುಟಗಳಿಂದ…” ಸರಣಿಯಲ್ಲಿ ಸಿಂಧುರಾವ್‌ ಟಿ. ಬರಹ

ಯಾರಿಗೂ ಹೇಳದೇ ಬರೇ ನಾವಿಬ್ಬರೇ: “ಹಳೆಯ ಪುಟಗಳಿಂದ…” ಸರಣಿಯಲ್ಲಿ ಸಿಂಧುರಾವ್‌ ಟಿ. ಬರಹ

ಗೈಡು ಗಂಟೆ ಹನ್ನೆರಡಾಯಿತು ಹೋಗುವ ಬನ್ನಿ ಅಂತ ಅವಸರಿಸಿದ ಮೇಲೂ ಇನ್ನೊಂದು ಅರ್ಧ ಗಂಟೆ ಅಲ್ಲೇ ಕೂತು ಕೆಳಗಿಳಿಯತೊಡಗಿದರು. ಏರಿದ ಹಾದಿಯನ್ನೆಲ್ಲ ಇಳುಕಲಲ್ಲಿ ಇಳಿವಾಗ ಮೈಭಾರ ಜಾಸ್ತಿಯಾಗಿ ಕಾಲು ನೋಯುತ್ತಿದ್ದವು. ಹಾಗೂ ಹೀಗು ಬೆಟ್ಟ ಹೊಳೆಗಳ ಹಾದು ಗೆಸ್ಟ್ ಹೌಸ್ ಸೇರುವಾಗ ಎರಡುಗಂಟೆ. ಸ್ನಾನ ಮುಗಿಸಿ ಬಂದಾಗ ಅಡಿಗೆಭಟ್ಟರು ಏನು ಬಡಿಸಿದರು ಅಂತ ನೋಡದೆ ಮುಕ್ಕಿ ಇಬ್ಬರೂ ಹೋಗಿ ಹೊಳೆದಂಡೆಯ ಮೇಲೆ ಮಲಗಿದರೆ ಎಚ್ಚರಾದಾಗ ಬಿಸಿಲು ತಣ್ಣಗಾಗುತ್ತಿತ್ತು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಸಿಂಧುರಾವ್‌ ಟಿ. ಬರಹ ನಿಮ್ಮ ಓದಿಗೆ

read more
 ಬೆಳಕಿನ ವರ್ಣ ವಿಭಜನೆ ಮತ್ತು ದುರ್ಯೋಧನ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

 ಬೆಳಕಿನ ವರ್ಣ ವಿಭಜನೆ ಮತ್ತು ದುರ್ಯೋಧನ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಅತೀವ ಸಂತಸ ಮತ್ತು ವಿಪರೀತ ವಿಷಾದ- ಇವೆರಡು ಭಾವಗಳು ಮನುಜನ ಅಂತರಂಗವನ್ನು ತೆರೆದಿಡುವ ಅತೀ ಮಹತ್ವದ ಹಂತಗಳು. ಈ ಎರಡು ಹಂತಗಳಲ್ಲಿ ಹರಿದುಬಂದವರ ವ್ಯಕ್ತಿತ್ವದೊಳಗಿರುವ ಸಕಲ ಸಂಗತಿಗಳೂ ಬಹಿರಂಗಗೊಳ್ಳುತ್ತವೆ. ಈ ಬಗೆಯ ಮನೋಭೂಮಿಕೆಯನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ ಯುದ್ಧಾನಂತರದ ಕುರುಕ್ಷೇತ್ರ ಭೂಮಿ ದುರ್ಯೋಧನನ ವ್ಯಕ್ತಿತ್ವದ ಬಹುಮುಖತೆಯನ್ನು ಹೊರಗೆಡಹುವಲ್ಲಿ ಸಫಲವಾಗಿದೆ. ಅಶೃಗದಿಂದಾಗಿ ಬಿಳಿಯ ಬೆಳಕಿನ ಹಲವು ಬಣ್ಣಗಳು ವ್ಯಕ್ತಗೊಂಡಂತೆ, ದುರ್ಯೋಧನನ ಛಲದ ಪರ್ಯಾವಸಾನವನ್ನು ಸಾರುವ ಕುರುಭೂಮಿ ಛಲದ ಹೊರತಾಗಿ ಆತನಲ್ಲಿದ್ದ ಗುಣಸ್ವಭಾವಗಳನ್ನು ಮೂರ್ತಗೊಳಿಸುತ್ತದೆ.
ಡಾ. ವಿಶ್ವನಾಥ ನೇರಳಕಟ್ಟೆ ಬರಹ

read more
ಹಳ್ಳಿಯೂರುಗಳಲ್ಲಿ ಗೌರಿಯ ಸಡಗರ: ಸುಮಾ ಸತೀಶ್ ಬರಹ

ಹಳ್ಳಿಯೂರುಗಳಲ್ಲಿ ಗೌರಿಯ ಸಡಗರ: ಸುಮಾ ಸತೀಶ್ ಬರಹ

ಗಣಪತಿ ಬಪ್ಪ ಮೋರೆಯಾ ಅಂತ ಹಬ್ಬದ ಸಂಜೆ ಊರಿನ ಹೈಕಳೆಲ್ಲಾ ಗುಂಪುಗೂಡಿ ಮನೆಮನೆಗೆ ಹೋಗಿ ಗಣೇಶ ದರ್ಶನ ಮಾಡಿಕೊಂಡು ಬರುತ್ತಿದ್ದೆವು. ಗಣೇಶನ ಮೇಲೆ ಕಣ್ಣು ಅಂತ ನೋಡುವವರಿಗೆ ಅನ್ನಿಸಿದರೂ, ವಾರೆಗಣ್ಣಿನಲ್ಲಿ ಅವರ ಮನೆಯ ಚರ್ಪನ್ನು ಅಳೆಯುತ್ತಿದ್ದೆವು. ಬರ್ಫಿಯೋ, ಮಿಠಾಯೋ ಇದ್ರೆ, ಅವ್ರು ಭಾಳಾ ಧಾರಾಳ. ಕಡಲೆ ಹುಸ್ಲಿಯೋ, ಕಡಲೆಹಿಟ್ಟೋ ಇದ್ರೆ ಥೋ ಬಿಕನಾಸಿಗಳು ಅಂತ ಬೈಕೊಳ್ಳೋದು. ಎಲ್ಲರ ಮನೆಗೆ ಎಡತಾಕಿದ್ದು ಮುಗಿದ ನಂತರ, ಮನೆಯಲ್ಲಿ ಉಳಿದ ಕಡುಬು, ಉಂಡೆಗಳ ನೈವೇದ್ಯ ನಮ್ಮ ಪಾಲಿಗೇ. ಪಾಪ!
ಗೌರಿ-ಗಣೇಶ ಹಬ್ಬಕ್ಕೆ ಸುಮಾ ಸತೀಶ್‌ ಬರಹ ನಿಮ್ಮ ಓದಿಗೆ

read more
ಬೇಂದ್ರೆಯವರ ಸಣ್ಣ-ಸೋಮವಾರ-ಒಂದು ಓದು: ಚನ್ನಪ್ಪ ಅಂಗಡಿ ಬರಹ

ಬೇಂದ್ರೆಯವರ ಸಣ್ಣ-ಸೋಮವಾರ-ಒಂದು ಓದು: ಚನ್ನಪ್ಪ ಅಂಗಡಿ ಬರಹ

ಇಲ್ಲಿಯವರೆಗೆ ನಿಸರ್ಗದ ಮಡಿಲಲ್ಲಿ ಮಗುವಿನಂತೆ ಲಾಸ್ಯವಾಡಿದ ಕವನ, ಬೆಳೆದು ಎದ್ದು ನಿಲ್ಲುತ್ತದೆ. ಆಧುನಿಕ ಯುಗದ ಪ್ರಗತಿಯ ಕಡೆಗೆ ಹೊರಳುವ ಸಂಕೇತವಾಗಿ ಗೂಡ್ಸ್ ಉಗಿಬಂಡಿ ಬರುತ್ತದೆ. ರೈಲು ಬರುವುದಕ್ಕೆ ಹೋಗುವುದಕ್ಕೆ ತನ್ನದೇ ಆದ ನಿಯಮವಿದೆ. ಆದರೆ ಇದನ್ನು ಅರಿಯದ ಬಾಲಕರು ಅದರತ್ತ ಓಡಿ ಕೈಯಿಂದ ಸಿಗ್ನಲ್ ಕೊಡುತ್ತಾರೆ. ತಮ್ಮ ಸಂಕೇತಕ್ಕನುಸಾರವಾಗಿ ರೈಲು ಚಲಿಸುತ್ತಿದೆಯೆಂದು ಭಾವಿಸಿ ಸಂಭ್ರಮಿಸುತ್ತಾರೆ. ಈ ಮುಗ್ಧತೆಯನ್ನು ಕಾಪಿಟ್ಟುಕೊಳ್ಳುವದು ಕೂಡ ಕವಿಯ ಲಕ್ಷಣ.
ದ.ರಾ. ಬೇಂದ್ರೆ ರಚಿತ “ಸಣ್ಣ ಸೋಮವಾರ” ಕವಿತೆಯ ಕುರಿತು ಚನ್ನಪ್ಪ ಅಂಗಡಿ ಬರಹ ನಿಮ್ಮ ಓದಿಗೆ

read more
ಪಾತ್ರಧಾರಿಯ ಗೈರು: ಜಯಶ್ರೀ ವಸಂತ್‌ ಲಲಿತ ಪ್ರಬಂಧ

ಪಾತ್ರಧಾರಿಯ ಗೈರು: ಜಯಶ್ರೀ ವಸಂತ್‌ ಲಲಿತ ಪ್ರಬಂಧ

ಅವರ ನೆನಪಾಯಿತು…. ಎರಡು ಪಾತ್ರೆಯಲ್ಲಿ ನೀರಿಟ್ಟು… ತೊಳೆದು … ಸಣ್ಣಗೆ …ನಾಜೂಕಾಗಿ ಹೆಚ್ಚಿ… ಮತ್ತೆ ಆ ನೀರು ತೊಳೆದ ನೀರು… ‘ಗಿಡಕ್ಕೆ ಹಾಕ್ರಿ ಜಿ ಕೆ ಜೆ… ಹಾಕ್ತೀರಾ….ಹಾಕಿದ್ರಾ…’ ಇತ್ಯಾದಿ ಪ್ರಶ್ನೆಗಳು. ರೇಗಿ ಹೋಗುತ್ತೆ… ಇವತ್ತು ಏನು ಬೇಡ.. ನೀರಿಲ್ಲೇ ಚೆಲ್ತೀನಿ. ನಾಜೂಕಾಗಿಯೂ ಬೇಡ….ಎಲ್ಲಾ ನಿಯಮಗಳಿಗೂ ರಜೆ… ಆರಾಮ್ ಮಾಡೋಣ ಅಂತ ಹರಡಿಕೊಂಡು ಮಾಡಿದೆ. ಇವತ್ತು ಹಿಟ್ಟು ಉಕ್ಕರಿಸಿದ ರೊಟ್ಟಿ.. ಕಾರಣ ಅದು ಮಾಡಬೇಡ್ರೀ.. ಸುಮ್ಮನೆ ಹಿಟ್ಟೆಲ್ಲಾ ಹರಡಿಕೊಂಡು ರಂಪ ಆಗುತ್ತೆ…. ನಿಮಗೂ ಕಷ್ಟ ಆಗುತ್ತೆ …ಅನ್ನೋ ಕಾಳಜಿ ಮಾಡುವ ಮನುಷ್ಯನ ಗೈರು…
ಜಯಶ್ರೀ ವಸಂತ್‌ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

read more
ಕೇಂದ್ರತ್ಯಾಗಿ ಬಲ ಮತ್ತು ಕರ್ಣನ ಉದಾತ್ತತೆ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಕೇಂದ್ರತ್ಯಾಗಿ ಬಲ ಮತ್ತು ಕರ್ಣನ ಉದಾತ್ತತೆ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಕೃಷ್ಣನ ಸೂಚನೆಯಂತೆ ಕರ್ಣನ ಭೇಟಿಗೆ ಬಂದ ಕುಂತಿ ಮಮತೆಯ ಭಾವದಿಂದಲೇ ಮಾತನಾಡುತ್ತಾ, ತನ್ನ ಮಕ್ಕಳ ಜೊತೆ ಸೇರಿ ಧರಣಿಯನ್ನು ಆಳಬಹುದೆಂಬ ಆಮಿಷವನ್ನು ಒಡ್ಡುತ್ತಾಳೆ. ಆದರೆ ಅನ್ನದ ಋಣಕ್ಕೆ ತಪ್ಪಿ ನಡೆದು ಪ್ರಾಣವನ್ನು ಉಳಿಸಿಕೊಳ್ಳಲಾರೆನೆಂಬ ಆದರ್ಶ ಕರ್ಣನದ್ದಾಗಿರುತ್ತದೆ. ದೇಹ ಶಾಶ್ವತವಲ್ಲ; ಶರೀರವನ್ನು ನಿಮಿತ್ತವಾಗಿಸಿಕೊಂಡು ಸಂಪಾದಿಸಿದ ಕೀರ್ತಿ ಶಾಶ್ವತವಾದದ್ದು ಎನ್ನುವುದು ಅವನ ದೃಢನಂಬಿಕೆ. ಅದನ್ನೇ ತಾಯಿಗೆ ಅರುಹುತ್ತಾನೆ. ಮತ್ತೆ ತಾಯಿ ಶೋಕಿಸಿದಾಗ ಕರ್ಣನಲ್ಲಿ ಮಾತೃಭಕ್ತಿ ಜಾಗೃತವಾಗುತ್ತದೆ. ದಿವ್ಯಾಸ್ತ್ರವನ್ನು ಹಿಡಿಯುವುದಿಲ್ಲ; ಅರ್ಜುನನನ್ನು ಬಿಟ್ಟು ಉಳಿದ ನಾಲ್ಕೂ ಮಕ್ಕಳನ್ನು ಕೊಲ್ಲುವುದಿಲ್ಲ ಎಂದು ತಾಯಿಗೆ ಮಾತು ಕೊಡುತ್ತಾನೆ.
ಡಾ. ವಿಶ್ವನಾಥ ನೇರಳಕಟ್ಟೆ ಬರಹ

read more
ಒಂದು ಪದ್ಯ, ಹತ್ತು ಮುಖ, ಹತ್ತು ಬಾಯಿ ಮತ್ತು ಔಚಿತ್ಯ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಒಂದು ಪದ್ಯ, ಹತ್ತು ಮುಖ, ಹತ್ತು ಬಾಯಿ ಮತ್ತು ಔಚಿತ್ಯ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

‘ವದನ’ ಎನ್ನುವ ಪದಕ್ಕೆ ಮುಖ, ಬಾಯಿ ಎನ್ನುವ ಅರ್ಥವಿದ್ದು, ತಲೆ ಎನ್ನುವ ಅರ್ಥವಿಲ್ಲ. ಆತನಿಗೆ ನಿಜವಾಗಿಯೂ ತಲೆ ಇದ್ದಿದ್ದರೆ ಸೀತೆಯನ್ನು ಅಪಹರಿಸಿ, ಬಳಿಕ ತನ್ನ ಮನಸ್ಸನ್ನು ಸರಿಮಾಡಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ, ಎನ್ನುವ ಭಾವ ಈ ಪದಬಳಕೆಯಲ್ಲಿ ಇದ್ದಂತಿದೆ. ‘ರಾಮಚಂದ್ರ ಚರಿತ ಪುರಾಣ’ದ ಆಧಾರದಲ್ಲಿ ಹೇಳುವುದಾದರೆ, ರಾವಣ ಪರಸ್ತ್ರೀ ವ್ಯಾಮೋಹಿ ಅಲ್ಲವೇ ಅಲ್ಲ. ಹೆಣ್ಣುಮಕ್ಕಳನ್ನು ಗೌರವಪೂರ್ಣವಾಗಿ ಕಾಣುವುದೇ ಅವನ ಸ್ವ-ಭಾವ. ಆದರೆ ಸೀತೆಯ ವಿಚಾರಕ್ಕೆ ಬಂದಾಗ ತನ್ನ ಮೂಲಗುಣವನ್ನೇ ಅವಗಣಿಸಿ ನಡೆದುಕೊಳ್ಳುತ್ತಾನೆ.
ಕವಿ ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ’ದಲ್ಲಿನ ಪದ್ಯವೊಂದರ ಕುರಿತು ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರಹ ನಿಮ್ಮ ಓದಿಗೆ

read more
ಗುಲ್ಜಾರ್ ಎಂಬ ಪ್ರೇಮಕವಿ…: ಸಿಂಧುರಾವ್ ಬರಹ

ಗುಲ್ಜಾರ್ ಎಂಬ ಪ್ರೇಮಕವಿ…: ಸಿಂಧುರಾವ್ ಬರಹ

70 ರ ದಶಕದ ಯಾವ ಚಂದದ ಪ್ರೇಮಗೀತೆ ಕೇಳಿದರೂ ಅದು ಗುಲ್ಜಾರ್ ಬೆರಳ ತುದಿಯಿಂದಲೇ ಬಂದಿರುವುದೇನೋ ಅನ್ನುವಷ್ಟು ತೀವ್ರವಾಗಿ ಮನಸ್ಸಿಗೆ ಕೂರುವಂತೆ ಬರೆದವರು ಗುಲ್ಜಾರ್. ಅವರ ಸಿನಿಮಾಗೀತೆಗಳಷ್ಟೇ ಅವರ ಕವಿತೆಗಳೂ ಬಹಳ ಚಂದಿವೆ. ನನಗೆ ಉರ್ದು ಓದಲು ಬರುವುದಿಲ್ಲ. ನಾನು ಅವರ ಕವಿತೆಗಳ ಇಂಗ್ಲಿಷ್ ಅನುವಾದಗಳ ಓದಿ ಕಂಗಾಲಾಗಿ ಕೂರುತಿದ್ದ ದಿನಗಳಿದ್ದವು. ಆಗಸ್ಟ್‌ ೧೮ರಂದು ಹುಟ್ಟುಹಬ್ಬವನ್ನಾಚರಿಸಿಕೊಂಡ ಕವಿ ಗುಲ್ಜಾರ್‌ ಕುರಿತು ಸಿಂಧುರಾವ್‌ ಟಿ ಬರಹ ನಿಮ್ಮ ಓದಿಗೆ

read more
 ಬಾಂಧವ್ಯದ ಕುಲುಮೆಯಲ್ಲಿ ಅರಳುವ ಸ್ವಾತಂತ್ರ್ಯದ ಓಟ…: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

 ಬಾಂಧವ್ಯದ ಕುಲುಮೆಯಲ್ಲಿ ಅರಳುವ ಸ್ವಾತಂತ್ರ್ಯದ ಓಟ…: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಶಿಬಿರದಲ್ಲಿನ ಜನರ ಆತಂಕ ಭಾರತ ಸರ್ಕಾರದ ಗಾಳಿಗೋಪುರದಂತ ಆಶ್ವಾಸನೆಗಳ ಜೊತೆಗೆ ‘ಬೋಲೋ ಭಾರತ್ ಮಾತಾ ಕಿ ಜೈ’ ಎಂಬ ಕೂಗು, ರಣಭೀಕರದಂತೆ ಕೇಳಿಸುತ್ತಿತ್ತು. ಪಾಕಿಸ್ತಾನದಲ್ಲಿ ಗಳಿಸಿದ ಆಸ್ತಿಯನ್ನು ಅಲ್ಲೇ ಬಿಟ್ಟು ಬಂದವರ ನೋವು ಹೇಳತೀರದು. ಮತ್ತೆ ಭಾರತದಲ್ಲಿ ಹೊಸ ಜೀವನ ಕಟ್ಟಿಕೊಳ್ಳಬೇಕೆಂಬ ಹೆಜ್ಜೆಯ ಭಾರ ಅಧಿಕವಾಗಿತ್ತು. ಆಸ್ತಿ ಪಾಸ್ತಿಗಿಂತ ಹಿರಿಯರು ಬಾಳಿ ಬದುಕಿದ ಮನೆಯನ್ನು ಬಿಟ್ಟು ಬಂದ ಹಿಂದೂ ಮುಸ್ಲಿಮರ ಸಂಕಟದ ಸ್ಥಿತಿ.
“ಸ್ವಾತಂತ್ರ್ಯದ ಓಟ…” ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ