ಬೆಂಗಳೂರು ಮತ್ತು ನೀರು ಸರಬರಾಜು ವ್ಯವಸ್ಥೆ: ಎಚ್. ಗೋಪಾಲಕೃಷ್ಣ ಸರಣಿ
ಗಂಡಸರು ಆಗ ನೀರು ಹಿಡಿಯಲು ಕಬ್ಬಿಣದ ಬಕೆಟ್ ತರುತ್ತಿದ್ದರು. ಅದನ್ನು ಎತ್ತಿ ಒಯ್ಯುವುದು ಗಂಡಿಗೆ ಸುಲಭ. ಆದರೆ ಹೆಂಗಸರಿಗೆ ಇದು ಸರಿ ಬಾರದು. ಕಾರಣ ಬಕೆಟ್ ಕಾಲಿಗೆ ತೊಡರುವುದು. ನಮ್ಮ ಮನೆಗೆ ಬೀದಿ ನಲ್ಲಿಯಿಂದ ನೀರು ಹೊತ್ತು ತರುವ ಕೆಲಸ ಎರಡನೇ ಅಣ್ಣ ರಾಜು ಮಾಡುತ್ತಿದ್ದ. ದಷ್ಟ ಪುಷ್ಟವಾಗಿ ಬೆಳೆದಿದ್ದ ಅವನು ತಲಾ ಮೂವತ್ತು ಲೀಟರ್ ಹಿಡಿಸುವ ಎರಡು ಕಬ್ಬಿಣದ ಬಕೆಟ್ನಲ್ಲಿ ನೀರು ತುಂಬಿಸಿಕೊಂಡು ಒಂದೊಂದು ಕೈನಲ್ಲಿ ಒಂದೊಂದು ಬಕೆಟ್ ಹಿಡಿದು ನೀರು ತರುತ್ತಿದ್ದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಬದುಕು ಇರುವುದು ಬದುಕಲು.. ಕಳೆದುಕೊಳ್ಳಲಲ್ಲ: ಸುಮಾವೀಣಾ ಸರಣಿ
ಹತ್ತನೆ ತರಗತಿಗೆ ಬಂದಾಗ ಇಬ್ಬರೂ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವ ಅವಕಾಶವಿತ್ತು. ಅದೂ ಬೋರ್ಡಿಂಗ್ ಶಾಲೆಯಲ್ಲಿ. ಇಬ್ಬರೆ ಕುಳಿತುಕೊಳ್ಳುವ ಬೆಂಚ್ ನಮಗೆ ಹೇಳಿ ಮಾಡಿಸಿದಂತಿತ್ತು.. ನಮಗೆ ಆಗೆಲ್ಲ ಇಂಕ್ ಪೆನ್ನಿನಲ್ಲೇ ನೋಟ್ಸ್ ಬರೆಸುತ್ತಿದ್ದರು. ಒಂದುವೇಳೆ ಇಂಕ್ ಖಾಲಿಯಾದರೆ ಒಬ್ಬರ ಪೆನ್ನಿನಿಂದ ಇನ್ನೊಬ್ಬರ ಪೆನ್ನಿಗೆ ಇಂಕ್ ಹಾಕಿಕೊಳ್ಳುತ್ತಿದ್ದೆವು. ಗೊರಟೆ ಹೂ, ದುಂಡುಮಲ್ಲಿಗೆ ಮುಡಿಯಲು ಪೈಪೋಟಿ ನಡೆಸುತ್ತಿದ್ದೆವು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ
ಮಂಜು ಎನ್ನುವ ಮುಗ್ಧರೂಪದ ಅವಸಾನ..: ಅನುಸೂಯ ಯತೀಶ್ ಸರಣಿ
ಮಕ್ಕಳ ಮನಸ್ಸು ಬಿಳಿ ಕಾಗದದಂತೆ. ನಾವು ಏನು ತುಂಬಿದರೂ ಅದನ್ನೆ ಬರೆದುಕೊಳ್ಳುತ್ತದೆ. ಹಾಗಾಗಿ ಶಿಕ್ಷಕರಾದವರು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವಾಗ ಬಹಳ ಎಚ್ಚರಿಕೆಯಿಂದ, ಸೂಕ್ಷ್ಮಮತಿಯಾಗಿ ಆರೋಗ್ಯಕರವಾಗಿ ತಿದ್ದಬೇಕು. ಆದ್ದರಿಂದ ಒಂದಷ್ಟು ಕಡಕ್ ದನಿಯನ್ನು ಸೇರಿಸಿ ಇನ್ನೂ ಮುಂದೆ ಅವನನ್ನು ತಿಕ್ಕಲು ಮಂಜ ಅನ್ನಬಾರದು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿಯಲ್ಲಿ ಮಂಜು ಎಂಬ ಹುಡುಗನ ಬಾಳಿನ ಕತೆ
ಕೇರಿಯ ಕುಟುಂಬವೊಂದರ ನೆನಪು: ಮಾರುತಿ ಗೋಪಿಕುಂಟೆ ಸರಣಿ
ಪಕ್ಕದ ಊರಿಗೆ ಒಂದೆರಡು ಬಾರಿ ಹೋದಾಗ ಅವರ ಮನೆಗೆ ನಾವು ಹೋಗಿದ್ದೆವು. ಆದರೆ ಹಿರಿಮಗ ಪಾಂಡುರಂಗನ ಮೇಲೆ ಬಹಳಷ್ಟು ಜವಾಬ್ದಾರಿ ಇತ್ತು. ಆತ ದುಡಿದ… ದುಡಿಯುತ್ತಲೆ ಇದ್ದ. ತಂಗಿಯ ಮದುವೆಯನ್ನು ಬಹಳ ಜೋರಾಗಿಯೆ ಮಾಡಿದ. ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ತಮ್ಮನ ಮದುವೆಯೂ ಆಗಿ ಆತ ಬೇರೆಯಾದನು. ಪಾಂಡುರಂಗ ಎಲ್ಲ ಜವಾಬ್ದಾರಿಗಳ ನಡುವೆ ಒಂದಿಷ್ಟು ಸಾಲಗಾರನಾದ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ
ಸತ್ತ ಕವಿಯ ನೆನೆದು ಅಳುವ ದೇವರು..: ಎಸ್. ಜಯಶ್ರೀನಿವಾಸ ರಾವ್ ಸರಣಿ
ಲ್ಯಾಟ್ವಿಯಾದ ಪ್ರಮುಖ ಕವಿ ಮಾರಿಸ್ ಸಲೇಯ್ಸ್-ರ ಪ್ರಕಾರ ರೊನಲ್ಡ್ಸ್ ಬ್ರಾಯ್ಡಿಸ್-ರು ತಮ್ಮ ನಾಲ್ಕನೆಯ ಸಂಕಲನ “ಜೀರೋ ಸಮ್”-ನಲ್ಲಿ ತಮ್ಮ ಹಿಂದಿನ ಕವನ ಸಂಕಲನಗಳ ಪ್ರತಿಧ್ವನಿಗಳನ್ನು ಸಮತೋಲಿತ ವಿನ್ಯಾಸದಲ್ಲಿ ಹೊಸ ಮೋಟೀಫ಼್-ಗಳೊಂದಿಗೆ ಸಂಯೋಜಿಸುವ ಮೂಲಕ ತನ್ನ ಕಾವ್ಯ-ಕಾರ್ಯದ ಒಂದು ಹಂತಕ್ಕೆ ಮುಕ್ತಾಯದ ಗಂಟು ಹಾಕುತ್ತಾರೆ. ಆದರೆ ನಗುವಿನ ಮೂಲ ಸ್ವರೂಪ ಮತ್ತು ನಗುವ ಸಾಮರ್ಥ್ಯದ ಪ್ರಶ್ನೆಯು ಇಲ್ಲಿಯೂ ಕೇಂದ್ರದಲ್ಲೇ ನೆಲೆಸಿದೆಯೆಂದನ್ನುತ್ತಾರೆ ಸಲೇಯ್ಸ್.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ಜೈಲಿಗೇಕೆ ರಂಗಾಯಣ?: ಕೆ.ಸತ್ಯನಾರಾಯಣ ಸರಣಿ
ಪಾಟೀಲರೇ ಮತ್ತೆ ಮತ್ತೆ ಸಂದರ್ಶನಗಳಲ್ಲಿ ಹೇಳುತ್ತಿದ್ದ ಹಾಗೆ, ಖೈದಿಗಳಿಗೆ ನಟನೆಯಲ್ಲಿ ಇನ್ನಿಲ್ಲದಷ್ಟು ಪ್ರಬುದ್ಧತೆ, ತೀವ್ರತೆ, ತನ್ಮಯತೆ ಬಂದಿತ್ತು. ನಾಟಕದ ಮಾತುಗಳಿಗೆ ಅವರು ನೂರಕ್ಕೆ ನೂರರಷ್ಟು ಜೀವ ತುಂಬುತ್ತಿದ್ದರು. ನಾಟಕ ಪ್ರದರ್ಶನ ಮುಗಿದ ಮೇಲೂ, ಶ್ರೀರಾಮ, ಶ್ರೀಕೃಷ್ಣ, ಧರ್ಮರಾಯ, ವಿಭೀಷಣ, ಬುದ್ಧ, ಇಂಥವರ ವೇಷಭೂಷಣಗಳಲ್ಲೇ ಇರಲು ಆಸೆ ಪಡುತ್ತಿದ್ದರು. ಕೇಂದ್ರ ಕಾರಾಗೃಹದ ಗ್ರಂಥಾಲಯ ಪುರಾತನವಾದದ್ದು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಏಳನೆಯ ಬರಹ ನಿಮ್ಮ ಓದಿಗೆ
ಒಮಾಹಾದಲ್ಲಿ ಟೊಮೆಟೋ ಸಾರು!: ಗುರುಪ್ರಸಾದ ಕುರ್ತಕೋಟಿ ಸರಣಿ
ನಮ್ಮವರಲ್ಲಿ ಹೆಚ್ಚಿನವರು ಅಲ್ಲಿನವರಿಗೆ ತುಂಬಾ ಹೆದರುತ್ತೇವೆ. ಅಮೆರಿಕನ್ನರು ತುಂಬಾ superior ಅಂತ ನಮ್ಮವರು ಭಾವಿಸಿಬಿಡುತ್ತಾರೆ. ಅಲ್ಲಿಗೆ ಹೋದಾಗಲೆ ಅದು ಸುಳ್ಳು ಅಂತ ಗೊತ್ತಾಗುತ್ತದೆ. ಅವರೂ ಕೂಡ ನಮ್ಮಂತೆಯೇ ಮನುಷ್ಯರೇ, ಅವರಿಗೂ ತಮ್ಮ ದೈನಂದಿನ ಆಗುಹೋಗುಗಳ ಬಗ್ಗೆ ಕಳವಳ ಇದೆ, ಅವರಿಗೂ ದುಡ್ಡಿನ ಚಿಂತೆ ಇದೆ, ತಾವು ಒಂದು ವೇಳೆ ಕೆಲಸ ಕಳೆದುಕೊಂಡರೆ ಹೇಗೆ ಎಂಬ ಭಯ ಇದೆ.. ಇತ್ಯಾದಿ..
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಏಳನೆಯ ಬರಹ
ಆಫ್ಲೈನ್ ಹಾಗೂ ಆನ್ಲೈನ್ ಭಿಕ್ಷುಕರು!!: ಬಸವನಗೌಡ ಹೆಬ್ಬಳಗೆರೆ ಸರಣಿ
ಮನೆಯಲ್ಲಿ ಬೆಳೆದ ಭತ್ತದಲ್ಲಿ ಭಿಕ್ಷುಕರಿಗೆಂದೇ, ಭತ್ತ ಕೊಯ್ದು, ತುಳಿಸಿ, ತೂರಿ ಚೀಲದಲ್ಲಿ ತುಂಬಿಕೊಂಡು ಕೊನೆಯಲ್ಲಿ ಮಿಕ್ಕಿದ ಗುಡಿಸಿಟ್ಟುಕೊಂಡ ಭತ್ತವನ್ನು ಚೀಲದಲ್ಲಿ ತುಂಬಿಟ್ಟುಕೊಳ್ಳುತ್ತಿದ್ದರು. ಅದನ್ನು ಮನೆಗೆ ನೀಡಿಸಿಕೊಳ್ಳೋಕೆ ಬರುವ ಭಿಕ್ಷುಕರಿಗೆ ಹಾಕಲು ಇಟ್ಟುಕೊಳ್ಳುತ್ತಿದ್ದರು. ಸಣ್ಣ ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ಭಿಕ್ಷೆ ಬೇಡಿ ಬಂದೋರಿಗೆ ಭತ್ತ ಹಾಕಿದ ನಂತರ ‘ಏನಾದ್ರೂ ತಿನ್ನೋಕಿದ್ರೆ ಕೊಡಪ್ಪ’ ಅಂತಾ ಅವರು ಕೇಳಿದಾಗ ಕರುಳು ಚುರ್ ಎನ್ನುತ್ತಿತ್ತು..
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ನನ್ನ ತವನಿಧಿ…: ರಂಜಾನ್ ದರ್ಗಾ ಬರೆಯುವ ಸರಣಿ
ಜನಸಾಮಾನ್ಯರ ಶಕ್ತಿಯಲ್ಲಿ ಮತ್ತು ಜ್ಞಾನ ಶಕ್ತಿಯಲ್ಲಿ ಅವರಿಗೆ ಅಪಾರವಾದ ನಂಬಿಕೆ ಇದೆ. ಒಬ್ಬ ವಕೀಲನಿಗೆ ತನ್ನ ಕ್ಷೇತ್ರದಲ್ಲಿನ ಎಷ್ಟು ಶಬ್ದಗಳು ಗೊತ್ತಿವೆಯೋ ಅದಕ್ಕಿಂತ ಹೆಚ್ಚಿನ ಶಬ್ದಗಳು ಮೀನುಗಾರನಿಗೆ ಅವನ ಸಮುದ್ರ ಸಂಬಂಧದಿಂದ ಗೊತ್ತಾಗುತ್ತವೆ ಎಂದು ಅವರು ಹೇಳಿದ್ದರು. ಆತನಿಗೆ ವಿವಿಧ ಜಾತಿಯ ಜಲಚರಗಳು, ಗಾಳಿ, ಮೋಡಗಳು, ತೆರೆಗಳು, ಕಾಲ ಮತ್ತು ದಿನಮಾನಗಳ ಪರಿಚಯವಿರುತ್ತದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 68ನೇ ಕಂತು ನಿಮ್ಮ ಓದಿಗೆ









