ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ
ನಾವೂ ನಮ್ಮ ಮಕ್ಕಳೂ, ಕೆಲಸಕ್ಕೂ, ಶಾಲೆಗೂ ಸೈಕಲ್ನಲ್ಲೋ ನಡೆದುಕೊಂಡೋ ಹೋಗಬೇಕು. ನೀವು ಹಾಕಿದ ಊಟ ತಿಂದು ಕೊಬ್ಬಿದ ನಾಯಿಗಳು ನಮ್ಮ ಮೇಲೆ ಹಾರಿ ಬೀಳ್ತವೆ. ಮೊನ್ನೆ ಮೊನ್ನೆ ಒಂದು ಸಣ್ಣ ಹುಡುಗನಿಗೆ ಸಿಕ್ಕಾಪಟ್ಟೆ ಕಚ್ಚಿ ನಾವು ಅವನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಇನ್ನು ಮೇಲೆ ನೀವು ಇಲ್ಲಿ ತಂದು ಹಾಕಬೇಡಿ ಎಂದರಂತೆ….
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ನಾಯಿ ನೆರಳು” ನಿಮ್ಮ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪ್ರೇಮಶೇಖರ ಬರೆದ ಕತೆ
ಅವರು ಕಣ್ಣುಗಳನ್ನು ಅರೆಮುಚ್ಚಿಕೊಂಡಿದ್ದರು. ನಾನು ತಲೆತಗ್ಗಿಸಿದೆ. ಅವರು ನನ್ನ ಭುಜ ತಟ್ಟಿದರು. “ಮೊದಲು ನಿಮ್ಮಮ್ಮನ ಲೈಫ್ ಸೆಕ್ಯೂರ್ ಆಗಲಿ” ಅಂದರು. ಸ್ವಲ್ಪ ತಡೆದು “ನಿನ್ನನ್ನ ಮನೇಲೇ ಇರಿಸಿಕೊಳ್ಳೋದಿಕ್ಕೆ ನಿನ್ನ ಹೊಸಾ ತಂದೆಯ ಅಬ್ಜೆಕ್ಷನ್ ಏನೂ ಇಲ್ಲ ಅಂತ ತಿಳಕೋಬೇಕು ನಾವು. ಹಾಗಂತ ನಿಮ್ಮಮ್ಮನ್ನ ಕೇಳು” ಅಂದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪ್ರೇಮಶೇಖರ ಬರೆದ ಕತೆ “ಭೂಮಿ-ಹೆಣ್ಣು” ನಿಮ್ಮ ಓದಿಗೆ
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ
ಹೀಗೆ ಸತ್ತವರನ್ನು ಮಣ್ಣು ಮಾಡಲೆಂದೇ ಇಷ್ಟು ವಿಶಾಲವಾದ ಭೂಮಿಯನ್ನು ಪಾಳು ಬಿಡುವುದು, ಪೋಲು ಮಾಡುವುದು ತಪ್ಪಲ್ಲವೇ? ಇವರೆಲ್ಲ ದಾಯಾದಿಗಳು. ನಮ್ಮ ಹತ್ತಿರ ಮಾತು ಕೂಡ ಆಡುತ್ತಿರಲಿಲ್ಲ, ಈಗಲೂ ಆಡುವುದಿಲ್ಲ. ಕೆಲವು ಮನೆಗಳ ಜೊತೆ ರಾಜಕೀಯ ವೈರ ಕೂಡ ಇದೆ. ಇಂಥವರ ಹಿರೀಕರ ಸ್ಮಾರಕಗಳನ್ನೆಲ್ಲ ನಮ್ಮ ಜಮೀನನಲ್ಲಿ ಯಾಕೆ ಇಟ್ಟುಕೊಳ್ಳಬೇಕು.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ
ದೇವಿಕಾ ನಾಗೇಶ್ ಬರೆದ ಈ ಭಾನುವಾರದ ಕತೆ
ಸಬಿತ ಚಿಕ್ಕಿಗೆ ಬರೆಯುವ ಪತ್ರದಲ್ಲಿ ಪದ್ದಜ್ಜನ ಮಾಮೂಲಿನ ಕ್ಷೇಮ ಸಮಾಚಾರ, ಉಭಯ ಕುಶಲೋಪರಿ, ಅಳಿಯಂದಿರಿಗೆ ಮೊಮ್ಮಕ್ಕಳಿಗೆ ಆಶೀರ್ವಾದದ ಜೊತೆಗೆ ಪತ್ರ ಮುಗಿಯುತಿದ್ದರೆ ಬಾಗಿದೊಡ್ಡನಿಗೆ ಬರೆಯಲು ಬಾಕಿ ಇನ್ನೊಂದಷ್ಟು ವಿಚಾರಗಳು ಇರುತ್ತಿದ್ದವು.
ದೇವಿಕಾ ನಾಗೇಶ್ ಬರೆದ ಈ ಭಾನುವಾರದ ಕತೆ “ಕತೆ ಕತೆ ಕಾರಣ” ನಿಮ್ಮ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಘುನಾಥ ಚ.ಹ. ಕತೆ
ಅಪ್ಪನ ನಂಬಿಕೆಗಳು ಬದಲಾಗಿದ್ದರೂ, ನೈತಿಕವಾಗಿ ಅವರು ಕುಸಿದಿದ್ದರೂ, ಅಪ್ಪ ಬ್ರಾಂದಿ ಅಂಗಡಿಯ ಗಲ್ಲಾದ ಮೇಲೆ ಕೂರುವ ಚಿತ್ರವನ್ನು ಕಲ್ಪಿಸಿಕೊಳ್ಳುವುದು ಮೋಹನನಿಗೆ ತೀರಾ ಅಸಹನೀಯವಾಗಿ ಕಂಡಿತು. ಬ್ರಾಂದಿ ಅಂಗಡಿಯ ಗುತ್ತಿಗೆ ಹಿಡಿದರೆ ಅಪ್ಪ ಇನ್ನೆಂದೂ ಮೊದಲಿನ ದಾರಿಗೆ ಬರುವುದಿಲ್ಲ ಎನ್ನಿಸಿ, ಅಪ್ಪನ ನಿರ್ಧಾರವನ್ನು ವಿರೋಧಿಸಲು ಮೋಹನ ನಿರ್ಧರಿಸಿದ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ರಘುನಾಥ ಚ.ಹ. ಬರೆದ ಕತೆ “ಕಾಲ ದಾರಿಯಲಿ ಹುಲ್ಲು”
ಗುರುರಾಜ್ ಕೆ. ಕುಲಕರ್ಣಿ ಬರೆದ ಈ ಭಾನುವಾರದ ಕತೆ “ರೊಟ್ಟಿ ಕಾರಕೂನ”
ಚೇರಮನ್ನರು ಎದ್ದು ಹೋದ ಮೇಲೆ, ಎಲ್ಲರಿಗಿಂತ ವಯಸ್ಸಿನಲ್ಲಿಯೂ, ಹುದ್ದೆಯಲ್ಲಿಯೂ ಚಿಕ್ಕವನಾಗಿದ್ದ ಸಿಪಾಯಿ ನಾಗಯ್ಯನೇ ಮಾಸ್ತರುಗಳಿಗೆ ಸಮಾಧಾನ ಹೇಳಿದ – “ಸರಾ, ಅವಗ ಮಾಸ್ತರ ಆಗಬೇಕಂದ್ರ ಇನ್ನೂ ಐದಾರು ವರ್ಸ ಕಾಲೇಜು ಕಲತು ಪಾಸ ಮಾಡ್ಬಕು. ಇಲ್ಲ್ಯಾಂದರ ನೀವೆಲ್ಲಾ ಅವರಪ್ಪನ ಮುಸುಡಿ ನೋಡಿ ಪಾಸ ಮಾಡತಿದ್ರಿ, ಶಹರದೂರಾಗ ಯಾರು ಇವ್ನ ಪಾಸು ಮಾಡ್ಬಕು?
ಗುರುರಾಜ್ ಕೆ. ಕುಲಕರ್ಣಿ ಬರೆದ ಕತೆ “ರೊಟ್ಟಿ ಕಾರಕೂನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ನನ್ನ ಮೆಚ್ಚಿನ ನನ್ನ ಕಥಾ ಸರಣಿಯಲ್ಲಿ ಶ್ರೀಧರ ಬನವಾಸಿ ಕತೆ
ಜಿನದತ್ತ ತಿಮ್ಮಪ್ಪನ ಮಾತುಗಳಿಗೆ ಉತ್ತರಿಸಲು ಧೈರ್ಯ ತೋರಲಿಲ್ಲ. ಕಥೆಗಾರನ ಕಲ್ಪನೆ, ಸ್ವಾತಂತ್ರ್ಯವೇನು ಎಂಬುದು ಆ ಪಾತ್ರಕ್ಕೇನು ಗೊತ್ತು? ಒಂದು ಕತೆಯ ಎಲ್ಲ ಪಾತ್ರಗಳು ಕತೆಗಾರ ಹೇಳಿದಂತೆ ಕೇಳಬೇಕು ಅನ್ನುವ ಸತ್ಯ ಆ ತಿಮ್ಮಪ್ಪನಂತವನಿಗೆ ಎಲ್ಲಿ ತಾನೇ ಅರ್ಥವಾಗಬೇಕು. ಅವನಿಗೆ ಇದನ್ನು ಬಿಡಿಸಿ ಹೇಳಿದರೂ ಅರ್ಥ ಮಾಡಿಕೊಳ್ಳುತ್ತಾನೆಯೇ?
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಶ್ರೀಧರ ಬನವಾಸಿ ಬರೆದ ಕತೆ `ಜಿನದತ್ತನೆಂಬ ಕಥೆಗಾರನೂ…’ ನಿಮ್ಮ ಈ ಭಾನುವಾರದ ಓದಿಗೆ
ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಈ ಭಾನುವಾರದ ಕತೆ
ಮುಂದಿನ ಬೆಟ್ಟವನ್ನು ತೋರಿಸಿ ಗುಡದಪ್ಪ ಇದನ್ನು ದಾಟಬೇಕು ಎಂದ. ನಾನು ಹೌಹಾರಿದೆ. ಮತ್ತೆ ಮುಂದಿನ ಬೆಟ್ಟ ಏರತೊಡಗಿದೆವು. ಮೊದಲಿಗಿಂತಲೂ ಸ್ವಲ್ಪ ಕಡಿದಾಗೇ ಇತ್ತು. ದಾರಿಯಿಲ್ಲದ ಕಲ್ಲುಗಳ ನಡುವೆ ದಾರಿ ಹುಡುಕುತ್ತಾ ನಡೆಯುವುದು ಕಷ್ಟವಾಯಿತು.
ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಈ ಭಾನುವಾರದ ಕತೆ “ಡಾಲ್ಮೆನ್‌ಗಳು” ನಿಮ್ಮ ಓದಿಗೆ
ಸಚೇತನ ಭಟ್ ಅನುವಾದಿಸಿದ ಜಪಾನಿನ ಹರುಕಿ ಮುರಕಮಿ ಕತೆ
ಮಧ್ಯರಾತ್ರಿ ನನಗೆ ಎಚ್ಚರವಾದಾಗ ಇಜುಮಿ ಇರಲಿಲ್ಲ. ನಾನು ಹಾಸಿಗೆಯ ಪಕ್ಕದಲ್ಲಿದ್ದ ಗಡಿಯಾರವನ್ನು ನೋಡಿದೆ. ಹನ್ನೆರಡು ಮೂವತ್ತು. ತಡಕಾಡುತ್ತಾ ಲ್ಯಾ೦ಪ್ ಹಚ್ಚಿದೆ. ರೂಮಿನ ಸುತ್ತ ದೃಷ್ಟಿ ಹಾಯಿಸಿದೆ. ನಾನು ಗಾಢ ನಿದ್ರೆಯಲ್ಲಿದ್ದಾಗ ಯಾರೋ ಕದ್ದು ಒಳ ನುಗ್ಗಿ ಸುತ್ತಲೂ ನಿಶ್ಯಬ್ದವನ್ನು ಹರಡಿಟ್ಟು ಹೋದ ಹಾಗೆ ಎಲ್ಲವೂ ಸ್ತಬ್ದವಾಗಿದ್ದವು. ನಾನು ಎದ್ದು ಹೊರಗೆ ಬಂದು ಹಾಲಿನಲ್ಲಿ ಹುಡುಕಾಡಿದೆ. ಇಜುಮಿ ಅಲ್ಲಿರಲಿಲ್ಲ.
ಸಚೇತನ ಭಟ್ ಅನುವಾದಿಸಿದ ಜಪಾನಿನ ಪ್ರಸಿದ್ಧ ಕತೆಗಾರ ಹರುಕಿ ಮುರಕಮಿ ಕತೆ “ಮನುಷ್ಯನನ್ನು ತಿನ್ನುವ ಬೆಕ್ಕುಗಳು”









