Advertisement

Month: May 2024

‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಡಾ. ಪಾರ್ವತಿ ಜಿ.ಐತಾಳ್ ಕತೆ

ನೀನು ಪುಟ್ಟ ಮಗುವಿದ್ದಾಗ ಎಂಥ ರಚ್ಚೆ ಹಿಡಿದು ಅಳುತ್ತಿದ್ದರೂ ಮನೆಯ ಮುಂದಿನ ಕೈತೋಟದಲ್ಲಿ ಪರ‍್ರೆಂದು ಹಾರುತ್ತ ಚೀಂವ್ ಚೀಂವ್ ಎನ್ನುತ್ತಿದ್ದ ಪುಟ್ಟ ಗುಬ್ಬಚ್ಚಿಗಳನ್ನು ನೋಡುತ್ತಲೇ ಅಳು ನಿಲ್ಲಿಸಿ ಜೋರಾಗಿ ನಗುತ್ತಿದ್ದೆ. ಈಗಲೂ ಕಿಟಕಿಯ ಹೊರಗೆ ಅವೇ ಸುಂದರ ಗುಬ್ಬಚ್ಚಿಗಳು ಚಿಲಿಪಿಲಿಗುಟ್ಟುತ್ತ ನಿನ್ನ ನೆನಪನ್ನು ಉಕ್ಕೇರಿಸುತ್ತಿವೆ. ನೀನು ನನ್ನ ತೋಳಲ್ಲೆ ಇದ್ದೀಯೇನೋ ಎಂಬ ಭ್ರಮೆಯನ್ನು ಹುಟ್ಟಿಸುತ್ತಿವೆ. ತೋಟದಲ್ಲಿ ಅರಳಿರುವ ಬಣ್ಣ ಬಣ್ಣದ ಹೂಗಳು ಕಣ್ಣುಗಳು ಹೋದಲ್ಲೆಲ್ಲ ನನ್ನನ್ನೇ ನಿಟ್ಟಿಸುತ್ತಿವೆ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಡಾ. ಪಾರ್ವತಿ ಜಿ.ಐತಾಳ್ ಕತೆ “ಬಲಿಪಶುಗಳು”

Read More

ಬೇಸಿಗೆ ರಜೆಯೆಂದರೆ …: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದ ಬೇಸಿಗೆಯ ಕಡುಬಿಸಿಯನ್ನು ತಪ್ಪಿಸಿಕೊಳ್ಳಲು ಕೆಲವರು ತಂಪು ಪ್ರದೇಶಗಳನ್ನು ಆಯ್ದುಕೊಳ್ಳುತ್ತಾರೆ. ಆದರೆ ಮುಂಚಿತವಾಗಿಯೇ ಬೇಸಿಗೆಯ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡೇ ಅನೇಕ ಆಸ್ಟ್ರೇಲಿಯನ್ ಸಂಸ್ಥೆಗಳು, ಸರಕಾರದ ಪ್ರವಾಸೀ ಇಲಾಖೆಗಳು ದೇಶದ ಉದ್ದಗಲಕ್ಕೂ ಹಾಸಿ ಹರಡಿರುವ ನೂರಾರು ಪ್ರವಾಸಸ್ಥಳಗಳ ಬಗ್ಗೆ ಆಕರ್ಷಕ ಜಾಹಿರಾತುಗಳನ್ನು ಕೊಡುತ್ತಾ, ಹಲವಾರು ತರಹದ ರಿಯಾಯ್ತಿಗಳು, ಸೌಲಭ್ಯಗಳ ಆಮಿಷವೊಡ್ಡುತ್ತಾರೆ. ಇವು ಮಧ್ಯಮ ವರಮಾನದ ಕುಟುಂಬಗಳನ್ನು ಕೈಬೀಸಿ ಕರೆಯುತ್ತವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಬೆಂಗಳೂರ “ಶೌಚಾಲಯ”ದ ಇತಿಹಾಸ: ಎಚ್. ಗೋಪಾಲಕೃಷ್ಣ ಸರಣಿ

ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಸಚಿವ ಮಂಡಳಿಯಲ್ಲಿ ಬಸವ ಲಿಂಗಪ್ಪ ಅವರು ನಗರಾಡಳಿತ ಸಚಿವರು. ಅರಸು ಅವರ ಹಾಗೆಯೇ ಇವರದು ಸಹ ಕೆಲವು ಕ್ರಾಂತಿಕಾರಿ ಯೋಜನೆಗಳಿದ್ದವು. ಅವುಗಳಲ್ಲಿ ಒಂದು ಮಲ ಹೊರುವ ಪದ್ಧತಿಯನ್ನು ನಿಲ್ಲಿಸುವುದು. ಇವರ ಆಡಳಿತ ಅವಧಿಯಲ್ಲಿಯೇ ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಆಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಅಂಕುಡೊಂಕಿನ ಪಯಣ: ಡಾ. ಎಂ ಉಷಾ ಕಾದಂಬರಿಯ ಪುಟಗಳು

ಮೊದಲೇ ಅಸಮಧಾನಗೊಂಡಿದ್ದ ಪುಟ್ಟಮ್ಮನಿಗೆ ಮಕ್ಕಳ ಈ ಕಳ್ಳಾಟದಿಂದ ಪಿತ್ತ ನೆತ್ತಿಗೇರಿತು. ಕಂಕುಳಲ್ಲಿದ್ದ ಮಲ್ಲಿಯನ್ನು ಕೆಳಕ್ಕೆ ಕುಕ್ಕಿದವಳೆ ಸರೋಜಳ ಮೇಲೆ ಮುಗಿಬಿದ್ದಳು. ‘ಮನೆ ಕೆಲಸ ಮಾಡದು ಬುಟ್ಟು ಸೂಳೆರಂಗೆ ಅಲಂಕಾರ ಮಾಡ್ಕತಾ ಕೂತಿದಿಯಾ ಇಲ್ಲಿ? ಯಾವ ನಾಯಕಸಾನಿ ಕೊಟ್ಲೆ ಇದ್ನ ನಿಂಗೆ… ʼ ಎಂದು ಸಿಕ್ಕಸಿಕ್ಕಲ್ಲಿ ಬಡಿಯ ತೊಡಗಿದಳು. ಈ ಬಾರಿ ಗೌರಿಹಬ್ಬಕ್ಕೆಂದು ರಾಜಶೇಖರ ದಾಕ್ಷಾಯಿಣಿಗೆ ಹೊಸ ಸ್ನೋಪೌಡರ್ ಡಬ್ಬಿಗಳನ್ನು ತಂದುಕೊಟ್ಟಿದ್ದನ್ನು ಗಮನಿಸಿದ ಸರೋಜ ಚಿಕ್ಕಮ್ಮನಲ್ಲಿ ಹಳೆಯ ಡಬ್ಬಿಯನ್ನು ಕೇಳಿ ಪಡೆದಿದ್ದಳು. ಇವತ್ತು ಹಬ್ಬದ ದಿನವಾಗಿದ್ದುದು ಮತ್ತು ಕೆಲಸದಲ್ಲಿ ಮುಳುಗಿ ಹೋಗಿರುವ ಅಮ್ಮ ಗಮನಿಸುವುದಿಲ್ಲ ಎನ್ನುವ ಧೈರ್ಯದಲ್ಲಿ ಹಚ್ಚಿಕೊಂಡಿದ್ದಳು.
ಡಾ. ಎಂ. ಉಷಾ ಹೊಸ ಕಾದಂಬರಿ “ಬಾಳ ಬಟ್ಟೆ”ಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ರಶ್ಮಿ ಹೆಗಡೆ ಬರೆದ ಈ ದಿನದ ಕವಿತೆ

“ಎಲ್ಲರಿಗೂ ಕಾಂಬುವಳು
ಶ್ರಮಿಕನಿಗೆ ದಕ್ಕುವಳು- ಜಾಸ್ತಿ
ವರುಷವೆಲ್ಲ ಕಹಿಯುಂಡವನಿಗಿನ್ನಿಷ್ಟು
ಮತ್ತೇರಿಸುವಳು ಕಹಿಯೊಳಗಿನ ಮದಿರೆಯಾಗಿ
ಸೋತವ ಪಾಲಿನ ಅಮೃತಮಾಸವಿದು
ಇವಳೇ ಅಖಂಡ ಸುಖ
ಅಬ್ಬಾ ಅಂತೂ ಮುಗಿತಪ್ಪ ಬಿಕರಿಗಿಟ್ಟ ವರ್ಷ”- ರಶ್ಮಿ ಹೆಗಡೆ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ