Advertisement
ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ಅಲೆಯುತ್ತಿದೆ ಗುರುತಿಲ್ಲದ ಪತ್ರ
ಹುಟ್ಟಿಗೊ ಹೊಟ್ಟು ಸುರುವಿ
ಬದುಕಿಗೊ ಕತ್ತರಿಯಾಡಿಸಿ
ಸುತ್ತ ಸುತ್ತುವ ಒಣಡಬರಿಯ ಮಾತು
ಹುಚ್ಚಾಗಿಸುತ್ತದೆ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ಡೋ.ರ. ಬರೆದ ಈ ದಿನದ ಕವಿತೆ

“ಇದ್ದರು ಇರದ೦ತಿರುವವರು
ಕೂಡಿಟ್ಟರು ಕೊಡದವರು
ಬೆಳೆದರೆ ಬುಡ ಕಡಿಯುವವರು
ಗೆದ್ದಾಗ ಗುಮ್ಮನಂತೆ
ಬೆನ್ನ ಹತ್ತಿ ಬರುವವರು
ಹೆಣದ ಮೇಲಿನ ಶೃಂಗಾರದಷ್ಟೆ ನಿಗೂಢವಾಗಿ ಕಾಣುವರೇಕೆ?”- ಡೋ.ರ. ಬರೆದ ಈ ದಿನದ ಕವಿತೆ

Read More

“ಜಿನ್ನ್‌ ಮತ್ತು ಪರ್ಷಿಯನ್‌ ಕ್ಯಾಟ್‌” ಕಥೆಗಳು….

ಈ ಕಥೆಗಳ ಗಮನ ಸೆಳೆಯುವ ಇನ್ನೂ ಕೆಲವು ಅಂಶಗಳೆಂದರೆ, ನಾಟಕೀಯತೆ, ಕಥಾವರಣದಲ್ಲಿ ಬಿಚ್ಚಿಕೊಳ್ಳುವ ಒಂದು ಬಗೆಯ ನಿಗೂಢತೆ ಮತ್ತು ಜನಪ್ರಿಯ ಕಥನ ಪರಂಪರೆಯಿಂದ ಪಡೆದ ಪ್ರಭಾವ. ಬೆಳೆಯುತ್ತಿರುವ ಲೇಖಕನೊಬ್ಬನಿಗೆ ಯಾವ ಅಂಶವೂ ವರ್ಜ್ಯವಲ್ಲ. ಮಾತ್ರವಲ್ಲ, ತನ್ನ ಕಥನ ಸಾಮರ್ಥ್ಯವನ್ನು ಕಂಡುಕೊಳ್ಳಲು ನಡೆಸುವ ಪ್ರಯೋಗ ಕೂಡ ಮುಖ್ಯ. ಮುನವ್ವರ್ ಅಂತಹ ಕಂಡುಕೊಳ್ಳುವಿಕೆಯ ಪ್ರಯತ್ನದಲ್ಲಿದ್ದಾರೆ.
ಮುನವ್ವರ್‌ ಜೋಗಿಬೆಟ್ಟು ಕಥಾಸಂಕಲನ”ಜಿನ್ನ್‌ ಮತ್ತು ಪರ್ಷಿಯನ್‌ ಕ್ಯಾಟ್‌”ಗೆ ಕೇಶವ ಮಳಗಿ ಬರೆದ ಪ್ರವೇಶಿಕೆ

Read More

ಚೈತ್ರಾ ಶಿವಯೋಗಿಮಠ ಅನುವಾದಿಸಿದ ಮಾಯಾ ಆಂಜೆಲೋ ಮೂರು ಕವಿತೆಗಳು

“ಕರಿಮುಸುಡಿಯ ಗಂಡಸರು
ಮುದಿ ಗಂಡಸರು
ಎಲ್ಲದರಲ್ಲೂ ಮೂಗು ತೂರಿಸುವ
ಚಿಗುರು ಮೀಸೆಯ ಗಂಡಸರು
ಸುಮ್ಮನೆ ಗಮನಿಸಿ
ಗಂಡಸರು ಸದಾ ಎಲ್ಲಿಗೋ ಹೋಗುತ್ತಲೇ ಇರುತ್ತಾರೆ
ಗೊತ್ತಿತ್ತು ಅವರಿಗೆ
ಅಲ್ಲಿಯೇ ಇದ್ದ ಹದಿಹರೆಯದ
ನಾನೊಬ್ಬಳು ಅವರಿಗಾಗಿ ಹಸಿದಿದ್ದೇನೆಂದು”- ಚೈತ್ರಾ ಶಿವಯೋಗಿಮಠ ಅನುವಾದಿಸಿದ ಮಾಯಾ ಆಂಜೆಲೋ ಮೂರು ಕವಿತೆಗಳು

Read More

ಇಲ್ಲಿ ಬಳ್ಳಿ, ಹೂವು, ಮೋಡ ಕೂಡ ಮಾತನಾಡುತ್ತವೆ: ಡಾ. ವಿಜಯಾ ಬರಹ

‘ಹೊರದಾರಿ’ಯಲ್ಲಿ ಬರುವ ದತ್ತು ಮಗುವಿನ ಸಮಸ್ಯೆ ಅನೇಕ ಸತ್ಯ ಘಟನೆಗಳನ್ನು ನೆನಪಿಸಿತು. ಇಂಥ ಸಮಸ್ಯೆಗಳಿಂದಲೇ ಇರಬೇಕು. ಈಗ ನಿಯಮಗಳು ತುಂಬಾ ಬಿಗಿಯಾಗಿವೆ. ಸುಲಭವಿಲ್ಲ ಮಗುವೊಂದನ್ನು ಪಡೆಯುವುದು. ಅದೇನೇ ಇರಲಿ ವಾಚ್ಯವಾಗಿ ಹೇಳದಿದ್ದರೂ ಹೆಣ್ಣು ಮಗುವೊಂದು ಮಾತ್ರ ಇನ್ನೊಂದು ಕರುಳಿನ ಕೂಗನ್ನು ಗ್ರಹಿಸಬಲ್ಲದು ಎಂದು ತೋರಿದ್ದೀರಿ. ಎಲ್ಲಕ್ಕಿಂತ ಮಿಗಿಲಾಗಿ ನನಗೆ ನೀವು ಕೊಡುವ ವಿವರಗಳು ಆಪ್ತವಾದವು. ಗಿಡ ಮರ ಬಳ್ಳಿಗಳ ಜೊತೆ ಮಾತಾಡಿಬಿಡುತ್ತೀರಿ!
ಎ.ಎನ್. ಪ್ರಸನ್ನ ಕಥಾ ಸಂಕಲನ “ದಾಸವಾಳ” ಕುರಿತು ಡಾ. ವಿಜಯಾ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ