Advertisement

ಶ್ರೀಧರ್‌ ಎಸ್.‌ ಸಿದ್ದಾಪುರ

ತಡಿಯಂಡ ಮೋಳ್‌ನ ಥಂಡಿಯಲ್ಲಿ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ತೆರೆದ ಜೀಪಿನಲ್ಲಿ ಯಾವುದೋ ಕಪ್ಪು ಬಿಳುಪು ಚಿತ್ರದಂತೆ ತೆರೆ ತೆರೆಯಾಗಿ ಹಾಯುವ ಹಳ್ಳಿಗಳು. ಹೋದವಾಡ, ನಾಪೋಕ್ಲು ನರಿಯಾಂದ, ಕೋಕೇರಿ ಮುಂತಾದ ವಿಚಿತ್ರ ಹೆಸರಿನ ಊರುಗಳು ನಮ್ಮ ಹಿಂದೆ ಓಡಿ ಬರತೊಡಗಿದವು! ನಾವು ಅವುಗಳನ್ನೆಲ್ಲಾ ಬರ ಸೆಳೆವ ತವಕದಲ್ಲಿದ್ದರೂ ಜಲಪಾತವೊಂದರ ಆಕರ್ಷಣೆಗೆ ಮನಸೋತು ಮುಂದೋಡ ತೊಡಗಿದೆವು. ಅಲ್ಲಿನ ಪುಟಾಣಿ ಅಂಗಡಿಗಳು ಯಾವುದೋ ಕಾಲಕ್ಕೆ ನಮ್ಮನ್ನು ಕೊಂಡೊಯ್ದವು. ಬೆಚ್ಚಗಿನ ಹಳ್ಳಿಗಳ ಸುಖವೇ ಸುಖ. ಅಲ್ಲಿನವರ ಭಾಷೆ ಮತ್ತು ಅದರೆಡಗಿನ ಪ್ರೇಮ, ಹಾಕಿ ಹಾಗೂ ಸೈನ್ಯಕ್ಕೆ ಸೇರುವ ಅಭಿಲಾಷೆಗಳನ್ನು ಕಂಡು ನಿಬ್ಬೆರಗಾದೆ. ಪ್ರತಿ ಮನೆಯಲ್ಲೂ ಒಬ್ಬ ಯೋಧ.
ಶ್ರೀಧರ್‌ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಕೊಡಗಿನ ಪ್ರವಾಸದ ಕುರಿತ ಬರಹ ಇಲ್ಲಿದೆ

Read More

ಪ್ರವಾಸಗಳೆಂಬ ಕಿರುದಾರಿಯಲಿ ಸಂಚರಿಸಿ….: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಇಲ್ಲಿಂದ ಪಶ್ಚಿಮಕ್ಕೆ ಹರಿದ ದಾರಿಯೊಂದು ಮಿಸುಕಾಡದೆ ಮಲಗಿತ್ತು. ಕಡಲ ಇಳಿಜಾರಿಗೆ ಸಾಗಿ ಹೋಗಲು ಪುಟಾಣಿ ಕಿಂಡಿ. ಇಲ್ಲಿಂದ ಕಾಣಸಿಗುವ ಸುಂದರ ದೃಶ್ಯಾವಳಿಗಳು ಅರಬ್ಬಿ ಕಡಲಿನ ವಿಹಂಗಮತೆಯನ್ನು, ಜೊತೆಗೆ ಎಂತಹ ಅರಸಿಕರನ್ನೂ ರಸಿಕರನ್ನಾಗಿ ಮಾಡುತ್ತದೆ. ಕಡಲಿನ ಹೆದ್ದಲೆಗಳು ಬಡಿಯುವ ತಾಣದಲ್ಲೊಂದು ಸುಂದರ ಬುರುಜು. ಕ್ಷಣ ಕ್ಷಣವು ಬಡಿವ ಅಲೆಗಳು ತಮ್ಮ ದಡದ ಮೋಹವನ್ನು ಬಿಚ್ಚಿಡುತ್ತವೆ. ಬೃಹತ್ ಬಸಾಲ್ಟ್ ಬಂಡೆಗಳನ್ನು ಉಜ್ಜಿ ತಿಕ್ಕಿ ನುಜ್ಜು ಗುಜ್ಜಾಗಿಸಿದರೂ ಮತ್ತೆ ಬಿಡಲೊಲ್ಲದ ಮೋಹ.
ಶ್ರೀಧರ್‌ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಬೇಕಲ್‌ ಪ್ರವಾಸದ ಕುರಿತ ಬರಹ ಇಲ್ಲಿದೆ

Read More

ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಒತ್ತೊತ್ತಾಗಿ ಬದುಕುವುದಕ್ಕಿಂತ ಕಾಲು ಚಾಚಿ ಪ್ರಕೃತಿಯ ಮಡಿಲಲ್ಲಿ ಒಂದಾಗಿ ಸರಳ ಮನೆಗಳಲ್ಲಿ ಬದುಕುವ ಅಪರಿಮಿತ ಸೌಂದರ್ಯವೇ ಬೇರೆ! ನೂರಾರು ಇಲ್ಲಗಳ ನಡುವಿನ ವಿಶ್ರಾಂತ ಸುಖ. ಇಂತಹ ಹತ್ತಾರು ಅಳಿದ ಮನೆಗಳು ಹೊಳೆ ಹಾರುತ್ತಲೇ ಕಾಣಸಿಕ್ಕವು. ಅಲ್ಲಿಲ್ಲಿ ಪುಟಾಣಿ ವಿಶಾಲ ಅಂಗಳಗಳು. ನಾಗರೀಕತೆಯ, ಮನುಷ್ಯ ವಾಸದ ಕತೆಯನ್ನು ಅರಹುತ್ತದೆ. ಪ್ರಕೃತಿ ಮಡಿಲಲ್ಲಿ ಬದುಕಿದ ಇವರ ಬದುಕಿನ ಸಾಹಸಗಳೆಂತೂ. ಇವರು ಬದುಕಿದ ಕುರುಹಾಗಿ ಅಲ್ಲಲ್ಲಿ ತೆಂಗಿನ ಮರಗಳಿವೆ!
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಕುಂಚಿಕಲ್‌ ಅಬ್ಬಿಯ ಕುರಿತ ಬರಹ ಇಲ್ಲಿದೆ

Read More

ನೇತ್ರಾಣಿಯ ನೆತ್ತಿಯಿಂದ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಜಟ್ಟಿಗನ ದೇವಾಲಯದ ದಾರಿ ಸುಸೂತ್ರವಾಗೇನೂ ಇರಲಿಲ್ಲ. ದೊಡ್ಡ ಬೃಹತ್ ಬಂಡೆಯ ಚಡಿಗಳಲ್ಲಿ ನುಸುಳಿ ದಾಟಬೇಕಿತ್ತು. ಸ್ವಲ್ಪ ಯಾಮಾರಿದರೂ ಪಾತಳಕ್ಕೆ ಇಲ್ಲ ಸಮುದ್ರ ಪಾಲು. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂಡೆಗಳ ದಾಟಿದರೆ ಸಿಗುವ ಏರುದಾರಿಯಲ್ಲಿ ಸಾಗಬೇಕು. ಅಲ್ಲಲ್ಲಿ ದಾರಿ ತಪ್ಪಿಸುವ ಹೊರಳು ದಾರಿಗಳು ಹಲವು. ಹಚ್ಚ ಹಸಿರೊಳಗೆ ದಾರಿ ತಪ್ಪದಂತೆ ನಿಧಾನಕ್ಕೆ ಒಬ್ಬರ ಹಿಂದೊಬ್ಬರು ನಡೆದೆವು.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ನೇತ್ರಾಣಿ ಪ್ರವಾಸದ ಕುರಿತ ಬರಹ ಇಲ್ಲಿದೆ

Read More

ಬೃಹದೀಶ್ವರ ದೇವಾಲಯದ ಬಗೆಹರಿಯದ ನಿಗೂಢಗಳು: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಈ ಎರಡೂ ಮುಖಗಳು ಈ ದೇವಾಲಯಕ್ಕೊಂದು ವಿಕ್ಷಿಪ್ತ ನೋಟ ಒದಗಿಸುತ್ತದೆ. ಹಲವರ ಪ್ರಕಾರ ಇದು ಯುರೋಪಿನ ಮಾರ್ಕೊ ಪೋಲೋ ಮತ್ತು ಆತನ ಮಡದಿಯ ಚಿತ್ರ ಎನ್ನಲಾಗಿದೆ. 1600 ರ ಸುಮಾರಿಗೆ ಇದನ್ನು ಸೇರಿಸಲಾಗಿದೆ ಎನ್ನುತ್ತಾರೆ. ಮಾರ್ಕೊ ಪೋಲೋ ಇಟಲಿಯ ಪ್ರವಾಸಿಗ. ಎಲ್ಲಿಯ ಇಟಲಿ ಎಲ್ಲಿಯ ಭಾರತ. ಆತನ ಚಿತ್ರ ಸೇರಿಸುವ ಉದ್ದೇಶವಾದರೂ ಏನು? ಅದೂ ಒಬ್ಬ ವಿದೇಶಿ ಪ್ರವಾಸಿಗನನ್ನು ದೇವಾಲಯದ ಹೊರ ಭಿತ್ತಿಯಲ್ಲಿ ಬಿತ್ತರಿಸುವ ಉದ್ದೇಶವಾದರೂ ಏನು? ಎಲ್ಲವೂ ನಿಗೂಢ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಬೃಹದೀಶ್ವರ ದೇವಾಲಯದ ಕುರಿತ ಬರಹ ಇಲ್ಲಿದೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ