Advertisement

Category: ಜೂನಿಯರ್ ಸಂಪಿಗೆ

ಕಳ್ಳನಿದ್ರೆ ಮತ್ತು ಕ್ಯಾಮೆರಾಗೂ ಕಾಣದ ಕಳ್ಳ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ನಾವು ಹೀಗೆ ಆಳವಾಗಿ ನಿದ್ದೆ ಮಾಡಿದಾಗ, ನಮ್ಮ ಮಾಂಸಖಂಡಗಳು ರಿಪೇರಿ ಆಗ್ತಾ ಇರತ್ವೆ, ನಮ್ಮ ಮೆದುಳಿನ ಸುತ್ತ ಒಂದು ಲಿಕ್ವಿಡ್ ಇರತ್ತಲ್ಲ. ಅದು ಮೆದುಳಿನ ಮತ್ತು ಸ್ಪೈನಲ್ ಕಾರ್ಡ್ ಸುತ್ತ ಓಡಾಡಿ, ಕೊಳೆಯಾದ ಪಾತ್ರೆ ತೊಳೆಯೋ ಹಾಗೆ ತೊಳೆದು, ಬೇಡದ ವೇಸ್ಟ್ ಅಂಶಗಳನ್ನ ತೆಗೆದು ಕ್ಲೀನ್ ಮಾಡತ್ತೆ. ಮಕ್ಕಳಂತೂ ನಿದ್ದೇಲೇ ಬೆಳೀತಾರೆ ಅಂತಾರಲ್ಲ ಹಿರಿಯರು? ಅದು ನಿಜಾನೇ. ನಿದ್ದೆಯ ಮೂರನೇ ಹಂತ ಇದ್ಯಲ್ಲ, ಆಗ ದೇಹದಲ್ಲಿ ಬೆಳವಣಿಗೆಗೆ ಬೇಕಾದ ಗ್ರೋಥ್ ಹಾರ್ಮೋನುಗಳು ಬಿಡುಗಡೆಯಾಗತ್ವೆ. ಅದರಿಂದಲೇ ನೀವು ಎತ್ತರವಾಗ್ತೀರ, ಅಂಗಾಂಗಗಳು ಬೆಳೆಯತ್ವೆ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಇಪ್ಪತ್ತನೆಯ ಕತೆ

Read More

ಮರಳಿ, ಹೊರಳಿ ಮರಳ ಕಡೆಗೆ!: ಕ್ಷಮಾ ವಿ ಭಾನುಪ್ರಕಾಶ್ ಕಥಾ ಸರಣಿ

ಅಷ್ಟರಲ್ಲಿ ವರ್ಣ, “ಅಲ್ಲ ಕಾವ್ಯಕ್ಕಾ, ಹಾಗಾದ್ರೆ, ನದಿಯ ಮರಳೇ ಯಾಕೆ ಬೇಕು? ಸಮುದ್ರದ ಮರಳು ಜಾಸ್ತಿ ಇದ್ಯಲ್ಲ? ಇದನ್ನೇ ಬಿಲ್ಡಿಂಗ್ ಕಟ್ಟೊಕೆ ಬಳಸಬಹುದಲ್ಲಾ?” ಎಂದಳು. ಆಗ ಕಾವ್ಯ, “ಅದು ಆಗಲ್ಲ ವರ್ಣ. ನದಿಯ ಸಣ್ಣಕಣಗಳ ಮರಳು ಸಿಮೆಂಟ್ ಜೊತೆ ಮಿಕ್ಸ್ ಆದ ಹಾಗೆ, ಸಮುದ್ರದ್ದು ಆಗಲ್ಲ. ಜೊತೆಗೆ ಸಮುದ್ರದ ಮರಳಲ್ಲಿ ಹೆಚ್ಚು ಉಪ್ಪಿನಂಶ ಇರತ್ತಲ್ವಾ? ಅದ್ರಲ್ಲೂ ಮುಖ್ಯವಾಗಿ ಕ್ಲೋರೈಡ್ ಕಣಗಳು ಇರತ್ವೆ. ಅವು, ಕಟ್ಟಡಗಳಲ್ಲಿ ಬಳಸೋ ಕಬ್ಬಿಣದ ರಾಡ್ ಇರತ್ತಲ್ಲಾ? ಅದನ್ನೆಲ್ಲಾ ತುಕ್ಕು ಹಿಡಿಸಿಬಿಡತ್ತೆ. ಅದಕ್ಕೇ ಆದಷ್ಟೂ ಸಮುದ್ರದ ಮರಳನ್ನ ಕಟ್ಟಡಗಳಲ್ಲಿ ಉಪಯೋಗಿಸಲ್ಲ.” ಎಂದಳು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹತ್ತೊಂಭತ್ತನೆಯ ಕತೆ

Read More

ಬೆಳದಿಂಗಳ ಹಾಡಿಗೆ ಭೂಮಿಯ ಲಾಸ್ಯ: ಕ್ಷಮಾ ವಿ ಭಾನುಪ್ರಕಾಶ್ ಕಥಾ ಸರಣಿ

ಆಗ ಪ್ರಕಾಶ್, “ಹೌದು, ಹೀಗೆ ಭೂಮಿಯ ತಿರುಗುವಿಕೆಯಿಂದ, ಚಂದ್ರ ಸೂರ್ಯರ ಗುರುತ್ವಾಕರ್ಷಣೆಯಿಂದ ನಮ್ಮ ಭೂಮಿ ತಿರುಗುವಾಗ ಒಂದೆಡೆ ಸಮುದ್ರದಲ್ಲಿ ಉಬ್ಬರ, ಅದರ ವಿರುದ್ಧ ದಿಕ್ಕಲ್ಲಿ ಇಳಿತ ಇರತ್ತೆ. ಅದಕ್ಕೇ ನಾವು ಈಗ ಭೂಮಿಯ ಚಿತ್ರ ಬರೆಯೋವಾಗ, ಗುಂಡಗೆ ಗೋಲವಾಗಿ ಬರೆಯೋದಿಲ್ಲ. ಅದನ್ನ ‘ಸ್ಫೆರಾಯ್ಡ್’ ಅಂದ್ರೆ ಗೋಳಾಭವಾಗಿ ಬರೀತೀವಿ. ಅಂದ್ರೆ ಒಂದೆಡೆ ಸಮುದ್ರದ ಉಬ್ಬರದಿಂದ ಉಬ್ಬಿದ, ಮತ್ತೊಂದೆಡೆ ಸಮುದ್ರದ ಇಳಿತದಿಂದ ಸಪಾಟಾದ ಗೋಳಾಭವಾಗಿ ಚಿತ್ರಿಸ್ತೀವಿ.” ಎಂದ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನೆಂಟನೆಯ ಕತೆ

Read More

ಭೂಮಿಯ ಒಡಲು, ತೀರದ ಕಡಲು!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ವಿಭಾ, “ಅಲ್ಲಾ ಕಾವ್ಯಕ್ಕ, ಆಕ್ಸಿಜನ್‌ಗೂ, ಸಮುದ್ರಕ್ಕೂ ಏನು ಸಂಬಂಧ? ಮರಗಿಡಗಳು ತಾನೇ ಆಮ್ಲಜನಕ ನೀಡೋದು ನಮ್ಗೆ?” ಎಂದು ಮರು ಪ್ರಶ್ನಿಸಿದಳು. ಆಗ ಕಾವ್ಯ, “ಅಲ್ಲ, ಪ್ರತೀ ವರ್ಷ ‘ಪರಿಸರ ದಿನ’ ಬಂದಾಗ್ಲೂ, ಭಾಷಣಗಳಲ್ಲಿ ಕೇಳಿರ್ತೀವಿ, ಲೇಖನಗಳನ್ನ ಓದಿರ್ತೀವಿ, ಮರಗಳನ್ನ ಕಡೀಬಾರ್ದು. ಮರಗಳೇ ಇಲ್ದೇ ಇದ್ರೆ ನಮಗೆ ಉಸಿರಾಡೋಕೆ ಆಮ್ಲಜನಕ ಎಲ್ಲಿಂದ ಸಿಗತ್ತೆ ಅಂತ! ನಿಜಾ, ಮರಗಳನ್ನ ಕಡೀಬಾರ್ದು. ಪ್ರತೀ ಮರವೂ ತನ್ನದೇ ರೀತೀಲಿ ವಿಶಿಷ್ಟ ಮತ್ತು ಭೂಮಿಗೆ, ಭೂಮಿಯ ಸಣ್ಣ ಪುಟ್ಟ ಕಣ್ಣಿಗೆ ಕಾಣದ ಜೀವಿಗಳಿಂದಾ ಬೃಹತ್ ಜೀವಿಗಳವರೆಗೂ ಎಲ್ಲರಿಗೂ ನೂರಾರು ರೀತಿಯಲ್ಲಿ ಮರಗಳು ಮುಖ್ಯ. ಆದ್ರೆ, ಮರಗಿಡಗಳಿಗಿಂತ್ಲೂ ಹೆಚ್ಚು ಆಮ್ಲಜನಕವನ್ನ ಸಮುದ್ರವು ವಾತಾವರಣಕ್ಕೆ ಕೊಡುಗೆ ನೀಡತ್ತೆ. ಅದು ಹೇಗೆ ಗೊತ್ತಾ?
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನೇಳನೆಯ ಕತೆ

Read More

ಬೀಜಾವೃತ ಅಪಘಾತ ವೃತ್ತಾಂತ!: ಕ್ಷಮಾ ವಿ ಭಾನುಪ್ರಕಾಶ್ ಕಥಾ ಸರಣಿ

ವಿಭಾ, “ಅಲ್ಲ ಬಾವ, ಬೀಜಗಳು ಇಲ್ಲದ ಕಲ್ಲಂಗಡಿ, ದ್ರಾಕ್ಷಿ ಇವೆಲ್ಲಾ ತಿನ್ನಕ್ಕೇನೋ ಚೆನ್ನಾಗಿರತ್ತೆ. ಆದ್ರೆ, ಒಂದು ಸಲ ಹಣ್ಣು ಬಿಟ್ರೆ, ಆ ಗಿಡದ ಕಥೆ ಮುಗೀತಾ? ಬೀಜಗಳೇ ಇಲ್ದೇ ಆ ಗಿಡ ಮರಿ ಹಾಕೋದು ಹೇಗೆ? ಅಂದ್ರೆ, ಹೊಸ ಗಿಡ ಬೆಳೆಯೋದು ಹೇಗೆ? ಪ್ರಕೃತಿ ಇಂಥಾ ಕೆಲ್ಸ ಯಾಕೆ ಮಾಡ್ತು ಅಂತ ಆಶ್ಚರ್ಯ ಆಗತ್ತೆ” ಎಂದಳು. ಆಗ ಪ್ರಕಾಶ್, “ನೀನು ಹೇಳಿದ್ದು ನಿಜವೇ ವಿಭಾ. ಯಾವುದೇ ಪ್ರಭೇದವಾಗ್ಲೀ, ತನ್ನ ಉಳಿವಿನ ಕಡೆ, ತನ್ನ ಸಂತತಿಯನ್ನ ಬೆಳೆಸೋ ಕಡೆ ಸಹಜವಾಗಿಯೇ ಗಮನ ಇರತ್ತೆ. ಪ್ರತೀ ಜೀವಿಯ, ಪ್ರತೀ ‘ಸ್ಪೀಶೀ’ ಅಂದ್ರೆ ಪ್ರಭೇದದ ಮೂಲಭೂತ ಕೆಲಸ ಅದು. ಆದ್ರೆ, ನಿಸರ್ಗದಲ್ಲಿ ಕೂಡ ಕೆಲವೊಮ್ಮೆ ‘ಆಕ್ಸಿಡೆಂಟ್’ ಆಗತ್ತೆ!” ಎಂದ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನಾರನೆಯ ಕತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ