Advertisement

Category: ದಿನದ ಅಗ್ರ ಬರಹ

ಸೂಕ್ಷ್ಮ ವಿಚಾರಗಳನು ಸರಳವಾಗಿ ದಾಟಿಸುವ ಬರಹಗಾರ…

ವಿದ್ಯೆ ಕಡಿಮೆಯಾದರೂ ನಡತೆ ಶುದ್ಧವಾಗಿರಬೇಕು ಎಂಬ ಮಾತಿದೆ. ಜೀವನದಲ್ಲಿ ನಿಜವಾದ ಬಡತನ ಯಾವುದೆಂದರೆ, ಅದು ತನ್ನ ನಡತೆಯನ್ನ ಶುದ್ಧವಾಗಿಟ್ಟುಕೊಳ್ಳದೇ ಇರುವುದು. ಇಲ್ಲಿ ನಡತೆಯೆಂದರೆ ವ್ಯಕ್ತಿಯ ಚಾರಿತ್ರ್ಯ, ವ್ಯಕ್ತಿತ್ವ; ಆ ವ್ಯಕ್ತಿ ಸಮಾಜದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿರುವ ರೀತಿ. ಆ ನಡತೆಯೊಂದು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರಬಲ್ಲದೆನ್ನುವ ಕವಿ ಇರುವುದರಲ್ಲೇ ತೃಪ್ತಿಯನ್ನು ಹೊಂದಿ, ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ನಗುಮುಖದಿಂದ ಬದುಕುವ ರೀತಿಯನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ.
ಜಿ.ಪಿ. ರಾಜರತ್ನಂ ಬರಹಗಳ ಕುರಿತು ಮನು ಗುರುಸ್ವಾಮಿ ಬರಹ

Read More

ಫ್ಲೈಟ್ ತಪ್ಪಿಸಿದ ಮೆಹೆಂದಿ ಮತ್ತು ನಾನು

ಯುವತಿಯೊಬ್ಬಳ ಭಾರೀ ಕನ್ನಡಕದಿಂದ ಪ್ರೇರಿತರಾದ ನಾವು ತಂಪು ಕನ್ನಡಕವನ್ನು ಹುಡುಕಿ ಹಾಕಿಕೊಂಡವು. ತಲೆಯನ್ನೊಮ್ಮೆ ನೇವರಿಸಿಕೊಳ್ಳಬೇಕೆಂದಾಗಲೇ ನಮಗೆ ಹೊಳೆದದ್ದು ನಮ್ಮ ತಲೆಯ ಮೆಹೆಂದಿಗೆ ಜಲಭಾಗ್ಯ ಕರುಣಿಸಿಲ್ಲವೆಂದು. ಅಷ್ಟರಲ್ಲಾಗಲೇ ನಮ್ಮ ಕೈಗೆ ಬೋರ್ಡಿಂಗ್ ಪಾಸ್ ದೊರೆಯಿತು. ಯಾವ ಲೌಂಜಿನಲ್ಲಿ ಕುಳಿತುಕೊಳ್ಳಬೇಕೆಂಬ ವಿವರ ಪಡೆದುಕೊಂಡೆವು. ಹಾಗೆ ಅತ್ತಿಗೆ ನಾದಿನಿಯರಿಬ್ಬರೂ ಒಬ್ಬರ ಮುಖವನ್ನೊಮ್ಮೆ ನೋಡಿಕೊಂಡೆವು… ನಗು ಬರಲಿಲ್ಲ. ನಮ್ಮ ಅವಾಂತರಕ್ಕೆ ಸಿಟ್ಟು ಬರುತ್ತಿತ್ತು. ಲೌಂಜಿನಲ್ಲೊಮ್ಮೆ ನಮ್ಮ ಲಗೇಜನ್ನು ಕುಕ್ಕರಿಸಿ ವಾಶ್ ರೂಮಿಗೆ ದೌಡಿಟ್ಟೆವು.
ಸುಮಾವೀಣಾ ಬರೆದ ಅನುಭವ ಕಥನ ನಿಮ್ಮ ಓದಿಗೆ

Read More

ವಿಶಿಷ್ಟ ದೃಶ್ಯಕಾವ್ಯ ʻನಾನು ಕುಸುಮಾʼ ಪನೋರಮಕ್ಕೆ

ಹೀಗೆ ಎಲ್ಲವೂ ಆಗಿದ್ದ ತಂದೆಯನ್ನು ಕಳೆದುಕೊಂಡ ಮೇಲೆ ಒಂಟಿ ತರುಣಿ ಕುಸುಮ ಮುಂದೆ ಏನಾದಳು ಎಂಬುದನು ಸ್ಮರಿಸಿಕೊಂಡರೆ ಕೈ ಕಾಲುಗಳು ನಡುಗುತ್ತವೆ. ಎಷ್ಟೊಂದು ಸುಂದರವಾಗಿ ಕಾಣುವ ಈ ಜಗತ್ತು ಮತ್ತು ವ್ಯವಸ್ಥೆಯ ಕರಾಳ ಮುಖವನ್ನು ಕಂಡು ಎಂಥವರಲ್ಲೂ ಆಕ್ರೋಶ ಪುಟಿದೇಳುತ್ತದೆ. ಕುಸುಮಳ ಆ ಸ್ಥಿತಿಗೆ ಕಾರಣವಾದವರನ್ನು ಸುಟ್ಟುಹಾಕಬೇಕೆನ್ನುವಷ್ಟು ಸಿಟ್ಟು ಎಲ್ಲ ಸಾತ್ವಿಕ ಮತ್ತು ಸತ್ಯ ಪರವಾದ ಮನಸ್ಸುಗಳಲ್ಲಿ ಉಕ್ಕುತ್ತದೆ! ಆದರೂ ಈ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವೆ ಎಂಬುದೇ ವಿಷಾದದ ಪ್ರಶ್ನೆ!
ಈ ವರ್ಷದ ಪನೋರಮಕ್ಕೆ ಆಯ್ಕೆಯಾದ ʻನಾನು ಕುಸುಮಾʼ ಚಿತ್ರದ ಕುರಿತು ಕುಮಾರ ಬೇಂದ್ರೆ ಬರಹ

Read More

ಪ್ರಜಾಪ್ರಭುತ್ವದ ಆಶಯಕ್ಕೆ ಆಸರೆಯಂತಹ ಬರಹ..

ರವೀಂದ್ರ ಭಟ್ಟರು ನಿರೂಪಿಸಿದ ಪ್ರಸಂಗ ಮತ್ತು ಅಂತಿಮ ಅಭಿಪ್ರಾಯದಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯವಿದೆ. ಮಹಾಭಾರತದ ರಾಜಪ್ರಭುತ್ವವು ಜನಪರವಾಗಿರ ಬೇಕೆಂದು ಅಂದಿನ ಶ್ರೀಕೃಷ್ಣ ಬಯಸಿದಂತೆ, ಪ್ರಜಾಪ್ರಭುತ್ವದ ಇಂದಿನ ಜನರು ಆಗ್ರಹಿಸುತ್ತಾರೆ. ಅಂದಿನ ಶ್ರೀಕೃಷ್ಣನ ಅಭಿಮತ ಮತ್ತು ಇಂದಿನ ಜನರ ಆಗ್ರಹವು, ಪ್ರಭುತ್ವವು ಮೌಢ್ಯಾಚರಣೆಗಳನ್ನು ಮೀರಿದ ಜನಹಿತ ಕೆಲಸಗಳಲ್ಲಿ ಪುಣ್ಯವನ್ನು ಗಳಿಸ ಬೇಕೆಂಬ ನೀತಿಪಾಠವನ್ನು ಒಳಗೊಂಡಿದೆ. ಅಂದಿನ ಪ್ರಸಂಗದಲ್ಲಿರುವ ‘ಶ್ರೀಕೃಷ್ಣ’ ಒಂದು ‘ರೂಪಕ’ವಾಗಿ ಇಂದಿನ ಆಶಯವನ್ನೂ ಅಭಿವ್ಯಕ್ತಿಸುವುದು ಗಮನೀಯ.
ರವೀಂದ್ರ ಭಟ್ಟ ಐನಕೈ ಅವರ “ರಾಜಕಾರಣದಲ್ಲಿ ನಿಂಬೆ – ಹಾಗಲ” ಅಂಕಣ ಬರಹಗಳ ಸಂಕಲನಕ್ಕೆ ಬರಗೂರು ರಾಮಚಂದ್ರಪ್ಪ ಬರೆದ ಮುನ್ನುಡಿ

Read More

ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕತೆ

ಒಳಭಾಗಕ್ಕೆ ತೆರೆದುಕೊಂಡಿದ್ದ ಬಾಗಿಲಿಗೊರಗಿ ನಿಂತುಕೊಂಡ ಪ್ರಿಯಾ ಆಗಸದ ಶೂನ್ಯದಲ್ಲಿ ಮಿನುಗುತ್ತಿರುವ ನಕ್ಷತ್ರಗಳನ್ನು ಅರೆಮುಚ್ಚಿದ ಕಣ್ಣುಗಳಿಂದ ನೋಡುತ್ತಾ ಅಂದಳು “ನಾನು ಕೆಟ್ಟ ಅದೃಷ್ಟದ ಸಂಕೇತ ದಿನೂ. ನೀವು ಹೆಣ್ಣು ನೋಡಲು ಬಂದಾಗ ನಾನು ಏನೇನೋ ಕನಸು ಕಟ್ಟಿದೆ. ಆದ್ರೆ ಅಂದುಕೊಂಡದ್ದೇನೂ ನಿಜವಾಗ್ಲಿಲ್ಲ. ಈಗ ನೋಡು, ಇದೇ ನನ್ನ ಬದುಕು. ಇದೇ ನನ್ನ ಭಾಗ್ಯ” ಎನ್ನುತ್ತಾ ಮುಖವನ್ನು ಅತ್ತ ಹೊರಳಿಸಿ ಗಂಟಲಲ್ಲಿ ಕಟ್ಟಿ ನಿಂತ ಬಿಕ್ಕಳಿಕೆಯನ್ನು ಕಷ್ಟಪಟ್ಟು ತಹಬದಿಗೆ ತಂದುಕೊಂಡಳು.
ಡಾ. ಸುಭಾಷ್‌ ಪಟ್ಟಾಜೆ ಬರೆದ ಈ ಭಾನುವಾರದ ಕತೆ “ಹುಟ್ಟು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ