ಅಜ್ಜನೂ, ಗಿಳಿಯೂ ಇಬ್ಬರೂ ವಾಪಸ್ಸು ಬರಲಿಲ್ಲ…: ಜುಲೇಖಾ ಬೇಗಂ ಜೀವನ ವೃತ್ತಾಂತ
ಅಂತೂ ಕಡಿದಾದ ಮಾರ್ಗದಲ್ಲಿ ಸಾಗಿ, ಜಾತ್ರೆಯಲ್ಲಿ ಸುತ್ತಾಡಿದೆವು. ತೇರಿನ್ನೂ ಎಳೆದಿರಲಿಲ್ಲ, ಕಾಯುವಷ್ಟು ವ್ಯವಧಾನವಿಲ್ಲದೆ ಸುಸ್ತಾಗುತ್ತಿದೆಯೆಂದು ಮತ್ತೆ ಅವರನ್ನು ಕರೆತಂದೆ. ಅರವತ್ತರ ವಯಸ್ಸಿನ ಡಾಕ್ಟರಜ್ಜನನ್ನು ಈ ರೀತಿಯಾಗಿ ನಡೆಸಿಕೊಂಡಿದ್ದಕ್ಕೆ ಮನೆ ಜನರಿಗೆಲ್ಲ ಸಿಟ್ಟು. ಅಷ್ಟು ದೂರದವರೆಗೆ ನಡೆಸಿ, ರಥೋತ್ಸವವನ್ನೂ ತೋರಿಸದೆ ಗಡಿಬಿಡಿಯಲ್ಲಿ ಕರೆದುಕೊಂಡು ಬಂದದ್ದಕ್ಕೆ ಎಲ್ಲರೂ ಬೈಯುವವರೇ. ಅಂದು ಸಮಯವಾಗುತ್ತಿದೆಯೆಂದು ಡಾಕ್ಟರಜ್ಜ ದದೇಗಲ್ಲಿಗೆ ಹೊರಟರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಎರಡನೆಯ ಕಂತು
