Advertisement

Category: ಸರಣಿ

‘ನೆಟ್ ವರ್ಕ್’ ಬಿಸಿಲ್ಗುದುರೆ ಏರಬಯಸಿ ಹೊರಟು!: ಬಸವನಗೌಡ ಹೆಬ್ಬಳಗೆರೆ ಸರಣಿ

ಈ ರೀತಿ ನೆಟ್ವರ್ಕ್ ಮಾರ್ಕೆಟಿಂಗ್ ಕಂಪನಿಗೆ ಜಾಯಿನ್ ಆದಾಗ ಮೊದಮೊದಲು ಜಾಯಿನ್ ಆದವರಿಗೆ ಮಾತ್ರ ಹಣ ಸಿಗುತ್ತೆ. ಕೊನೆಗೆ ಜಾಯಿನ್ ಆದವರ ಕೈಗೆ ಚಿಪ್ಪೇ ಗತಿ!! ಆ ರೀತಿ ಆದಂತಹ ಪರಿಸ್ಥಿತಿ ನನ್ನದಾಗಿತ್ತು ಅವರು ಎಷ್ಟೇ ಪ್ರೇರಣೆ ಮಾಡೋಕೆ ಬಂದ್ರು ನಾನು ಮಾತ್ರ ಆ ಕಂಪನಿಗೆ ಮತ್ತೆ ಸೇರಿಸೋ ಸುದ್ದಿಗೆ ಹೋಗಲಿಲ್ಲ. ಆದರೂ ಎಲ್ಲೋ ಒಂದು ಕಡೆ ನಾನು ಏಳು ಜನರನ್ನು ಸೇರಿಸಿದ ಒಂದು ಪಾಪಪ್ರಜ್ಞೆ ನನ್ನನ್ನು ಕಾಡ್ತಾ ಇತ್ತು. ಇವರೂ ಅಷ್ಟೇ. ಹಣದ ಬಗ್ಗೆ ನನ್ನನ್ನು ಕೇಳಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ

Read More

ಪ್ರಾಚೀನ ಬೆಳ್ಳಿ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಅಗುಚಾದಲ್ಲಿ ಅದಿರು ಫ್ರೀಬರ್ಗೈಟ್‌ನ (ಹೆಚ್ಚು ಗಟ್ಟಿ ಅದಿರು) ಸಂಕೀರ್ಣ ಮಿಶ್ರಣವಾಗಿದ್ದು ಇದನ್ನು ಬೆಳ್ಳಿಯ ಪ್ರಮುಖ ಮೂಲವೆಂದು ಪರಿಗಣಿಸಲಾಗಿದೆ. ದರಿಬಾ ಮತ್ತು ಅಗುಚಾ ಎರಡೂ ಗಣಿಗಳಲ್ಲಿ ಮೇಲ್ಮೈಯಲ್ಲಿ ದೊರಕುವ ನಿಕ್ಷೇಪಗಳು ಶಿಥಿಲೀಕರಣಗೊಂಡು ಕಬ್ಬಿಣ ಅಂಶದಿಂದ ಮಿಶ್ರಣಗೊಂಡಿವೆ. ದರಿ ಬಾದ ಹಲವಾರು ಗಣಿಗಳ ಮೇಲ್ಮೈ ನಿಕ್ಷೇಪಗಳಲ್ಲಿ ಗ್ರ್ಯಾಫೈಟ್ ಮೈಕಾ ಶಿಸ್ಟ್‌ನಲ್ಲಿ ಬೆಳ್ಳಿ ದೊರಕುತ್ತದೆ. ಇದೇ ರೀತಿಯ ಗಣಿಗಳು ಅಗುಚಾ ಪ್ರದೇಶದಲ್ಲೂ ಕಂಡುಬಂದಿವೆ. ಈ ಗಣಿಗಳು ಬಹುಶಃ ಪ್ರಾಚೀನ ಭಾರತದ ಆರಂಭಿಕ ಗಣಿ ಕಾರ್ಯಗಳಾಗಿದ್ದು ನಂತರ ಅವು ಆಳದ ಭೂಗತ ಗಣಿಗಳಾಗಿ ಮಾರ್ಪಟ್ಟಿವೆ.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿಯ

Read More

ಬ್ರಹ್ಮದ್ವೇಷಿಗಳ ಮನೆಯಲ್ಲಿ ದೀಕ್ಷಿತರ ಫೋಟೋ: ಕೆ. ಸತ್ಯನಾರಾಯಣ ಕಥಾ ಸರಣಿ

ಸಂಸ್ಥಾನದಲ್ಲಿ ಚಿಗರಿಗೌಡರ ಮನೆತನ ನೂರಕ್ಕೆ ನೂರರಷ್ಟು, ಬ್ರಹ್ಮದ್ವೇಷಕ್ಕೂ ಪ್ರಸಿದ್ಧವಾಗಿತ್ತು. ಅರಮನೆಯಂತಹ ಬಂಗಲೆ ಕೋಟೆಯೊಳಗಿದ್ದು, ಕೋಟೆಯ ಆವರಣದಲ್ಲಿದ್ದ ದೇವಸ್ಥಾನಗಳಿಗೆ ಬ್ರಾಹ್ಮಣರನ್ನು ಮಾತ್ರ ಅರ್ಚಕರನ್ನಾಗಿ ಇಟ್ಟುಕೊಳ್ಳದೆ, ನಾಥ ಸಂಪ್ರದಾಯದ ಮಠಗಳಲ್ಲಿ ತರಬೇತಿ ಪಡೆದವರನ್ನು ಅರ್ಚಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಹೋಮ-ಹವನಕ್ಕೆ ಪ್ರಯಾಗದಿಂದಲೇ ಕ್ಷತ್ರಿಯ ಮಠಗಳಿಗೆ ಸೇರಿದ ಋತ್ವಿಕರನ್ನು ಕರೆಸುತ್ತಿದ್ದರು. ನೂರಾರು ಬ್ರಾಹ್ಮಣ ವಿರೋಧಿ ಸಂಸ್ಥೆಗಳಿಗೆ, ಸಂಘಟನೆಗಳಿಗೆ ಅನುದಾನ ಕೊಡುತ್ತಿದ್ದರು. ಬ್ರಾಹ್ಮಣರಿಗೆ ಅವರ ಬಗ್ಗೆ ಅಸಹಾಯಕ ಸಿಟ್ಟು, ತಿರಸ್ಕಾರ ಎಲ್ಲವೂ ಇತ್ತು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Read More

ಗಂಟೆಹಳ್ಳಿ ಗಿಡ, ಕಾಡಿನಲ್ಲಿ ಒಂದಿರುಳು ಮತ್ತು ತಿಮ್ಮಣ್ಣನ ಮಳಕ: ಎಸ್. ಗಂಗಾಧರಯ್ಯ ಅನುಭವ ಕಥನ

ಮೆಲ್ಲಗೆ ಮರ ಹತ್ತಿದೆವು. ನಿದ್ದೆ ಅನ್ನೋದು ಸುತರಾಂ ಹತ್ತಿರ ಸುಳಿಯುತ್ತಿಲ್ಲ. ಕಾಡಿನ ಸಣ್ಣಪುಟ್ಟ ಪ್ರಾಣಿ ಪಕ್ಷಿ ಕ್ರಿಮಿಕೀಟಗಳು ತಮ್ಮ ದಿನಚರಿ ಶುರುವಿಟ್ಟುಕಂಡಿದ್ದವು. ಅಬ್ಬಾ ಆ ಕತ್ತಲೆ. ಆ ಆತಂಕದ ಆ ಚಣಗಳು. ಈಗಲೂ ಮೈ ಜುಮ್ ಅನ್ನುತ್ತೆ. ಹಂಗೆ ಕೂತಿದ್ದ ನನಗೆ ಅದ್ಯಾವ ಮಾಯದಾಗೆ ನಿದ್ದೆ ಬಂದಿತ್ತೋ ಕಾಣೆ ಏನಾಗುತ್ತಿದೆ ಅಂತ ಗೊತ್ತಾಗೋದರೊಳಗೆ ಕೊಂಬೆಯನ್ನು ಅವುಚಿಕಂಡು ಕೂತಿದ್ದ ನಾನು ಏಕ್ದಂ ಕೆಳಕ್ಕೆ ಬಿದ್ದುಬಿಟ್ಟೆ. ಹಂಗೆ ಬಿದ್ದ ರಭಸಕ್ಕೆ ಚೀರಾಡುವುದರೊಳಗೆ ಕೆಳಗಿದ್ದ ಕೂಳೆಯೊಂದು ಎಡಗಾಲಿನ ಮಾಂಸಖಂಡಕ್ಕೆ ದೊಸಕ್ಕನೆ ಹೊಕ್ಕಂಡುಬಿಟ್ಟಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ತನೆಯ ಕಂತು

Read More

ಮಂತ್ರಗಳು… ಪ್ರಶಸ್ತಿಗಳು… ಮತ್ತು ನಾನು: ಎಚ್. ಗೋಪಾಲಕೃಷ್ಣ ಸರಣಿ

ಅದೆಷ್ಟೋ ವರ್ಷಗಳ ನಂತರ ತನ್ನ ವರದಿಯನ್ನು ಈ ಸಮಿತಿ ಅಂದಿನ ಅಧಿಕಾರಸ್ತ ಪ್ರಭುಗಳಿಗೆ ಸಲ್ಲಿಸಿತು. ಕೊನೆಗೂ FFC ವರದಿ ಸರ್ಕಾರಕ್ಕೆ ಸಲ್ಲಿಕೆಯಾದರೂ ಅದನ್ನು ಓದಲು ಟಿಪ್ಪಣಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಕಾರಣ ವರದಿ ಐದುನೂರಾ ಅರವತ್ತ ಮೂರು ಕೇಜಿ ಭಾರ ಇದ್ದು ಅದನ್ನು ಮೂರು ಟ್ರಕ್‌ನಲ್ಲಿ ಸಾಗಿಸಲಾಗಿತ್ತು. ಈ ಸಮಿತಿಗೆ ಖರ್ಚು ಮಾಡಲಾದ ಹಣ ಸರ್ಕಾರಕ್ಕೆ ಲೆಕ್ಕ ಇರಲಿಲ್ಲ ಮತ್ತು ಟೀಕಾಕಾರರು ಮಾತು ಆಡದಿರಲು ಸರ್ಕಾರ ಅದೇ ಸಮಿತಿಗೆ ವರದಿಯನ್ನು ಎರಡು ಪುಟದಲ್ಲಿ ಕೊಡುವಂತೆ ಆದೇಶಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೬ನೇ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ