Advertisement

Category: ಸರಣಿ

ಕೆಂಪು ಟಿಟ್ಟಿಭ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೆಂಪು ಟಿಟ್ಟಿಭ, ಗೂಡು ಕಟ್ಟುವ ಪರಿ, ವಿಚಿತ್ರ ಮತ್ತು ವಿಶಿಷ್ಟ! ಮಾರ್ಚ್‌ನಿಂದ ಆಗಸ್ಟ್ ತಿಂಗಳುಗಳಲ್ಲಿ ಇವುಗಳ ಸಂತಾನಾಭಿವೃದ್ಧಿ. ಗಂಡು ಮತ್ತು ಹೆಣ್ಣು ಹಕ್ಕಿಗಳು ಸೇರಿ, ನೇರವಾಗಿ ನೆಲದ ಮೇಲೆಯೇ ಗೂಡನ್ನು ನಿರ್ಮಿಸುತ್ತವೆ. 3-4 ಮೊಟ್ಟೆಗಳನ್ನು ಇಟ್ಟು, ಮರಿ ಮಾಡುತ್ತದೆ. ಮೊಟ್ಟೆಗಳು ಕಂದು ಬಣ್ಣದ ಮೇಲೆ ವಿವಿಧ ಗಾತ್ರದ ಗಾಢ ಮಣ್ಣಿನ ಚುಕ್ಕೆಗಳಿದ್ದು, ಗೂಡುಗಳು ಮತ್ತು ಮೊಟ್ಟೆಗಳು ಅವುಗಳಿರುವ ನೆಲದ ಬಣ್ಣ ಹಾಗೂ ಸುತ್ತಲಿನ ವಸ್ತುಗಳನ್ನು ಹೋಲುವುದರಿಂದ ಅವುಗಳನ್ನು ಗುರುತಿಸುವುದು ಬಹಳ ಕಷ್ಟ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂಪು ಟಿಟ್ಟಿಭ ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಎಸ್. ಗಂಗಾಧರಯ್ಯ ಅನುಭವ ಕಥಾನಕ “ಕಾಡ ಕಕ್ಕೆ” ಇಂದಿನಿಂದ…

ನಾನು ಸೋಮ್ಲಾನಾಯಕ್‌ರನ್ನು ಎಷ್ಟು ಹಚ್ಚಿಕೊಂಡಿದ್ದೆ ಅಂದರೆ ಅವರೊಂದಿಗೆ ಕೆಲವೊಮ್ಮೆ ಅವರುಗಳು ಮಲಗುತ್ತಿದ್ದ ಆ ಹೊಂಗೆಯ ಮರದಡಿಯಲ್ಲೇ ಮಲಗುತ್ತಿದ್ದೆ. ಬೇಸಿಗೆಯ ಬೆಳದಿಂಗಳಿನಲ್ಲಿ ಆ ಏಕಾಂತ, ಆ ಹಾಲು ಚೆಲ್ಲಿದಂತ ಬೆಳದಿಂಗಳು, ಹೊಂಗೆ ಸೀಗೆ ಹೂಗಳ ಆಹ್ಲಾದಕರ ಘಮಲು ಇಂದಿಗೂ ಮಾಸಿಲ್ಲ. ಆ ತಂಗಾಳಿ, ಅದರೊಂದಿಗೆ ಅಡ್ಡಾಡುತ್ತಿದ್ದ ಯಾರದೋ ಹೊಲದಲ್ಲಿ ಹಾಕಿರುತ್ತಿದ್ದ ಮಂದೆಯಿಂದ ಕುರಿ, ಮೇಕೆಗಳ ಕೂಗು, ನಾಯಿಗಳ ಬೊಬ್ಬಿರಿಯುವಿಕೆ, ಕುರಿಗಾಹಿಗಳು ಹಾಡುತ್ತಿದ್ದ ಹಾಡುಗಳು, ಜಲ್ಲೆ ಗಾಡಿಯವರ ಅರ್ಥವಾಗದ ಭಾಷೆಯ ಮಾತುಗಳ ಸಂಗೀತ ಮಾಧುರ್ಯ ಇಂದಿಗೂ ಮರೆಯಾಗಿಲ್ಲ.
ಕನ್ನಡದ ಕತೆಗಾರ ಎಸ್.‌ ಗಂಗಾಧರಯ್ಯ ಬರೆಯುವ ಅನುಭವ ಕಥನ “ಕಾಡ ಕಕ್ಕೆ” ಇಂದಿನಿಂದ

Read More

ನಂಬಿ ಕೆಟ್ಟವರಿಲ್ಲವೋ ಮನುಜ….: ಬಸವನಗೌಡ ಹೆಬ್ಬಳಗೆರೆ ಸರಣಿ

ಅವನ ಮಾತು ಕೇಳಿದ ಮನಸ್ಸು ಇನ್ನೊಂದು ರೀತಿ ಯೋಚನೆ ಮಾಡಲು ಶುರು ಮಾಡ್ತು. ಸುಮ್ಮನೇ ಕೆಲಸಕ್ಕೆ ಸೇರದೇ ಮೆಡಿಕಲ್ ರೆಪ್ ಕೆಲಸದಲ್ಲಿ ಮುಂದುವರೆದರೆ ಹೇಗೆ? ಎಂದು ಯೋಚಿಸಿದೆ. ಇದಕ್ಕೆ ಪೂರಕವಾಗಿ ಹಲವಾರು ನನ್ನ ಮೆಡಿಕಲ್ ರೆಪ್ ಗೆಳೆಯರು ಅಲ್ಲಿ ಪೆನ್ಶನ್ ಇಲ್ವಂತೆ. ಸುಮ್ನೇ ಇಲ್ಲೇ ಇದ್ಬಿಡು ಎಂದರು. ನಾನು ಇದೇ ರೀತಿ ಮಾಡಬೇಕು ಎಂದುಕೊಂಡರೆ ನಮ್ಮ ಸಂಬಂಧಿಕರು ಇದಕ್ಕೆ ಒಪ್ಪಲಿಲ್ಲ. ಸರ್ಕಾರಿ ಕೆಲಸ ಸಿಗೋಕೂ ಪುಣ್ಯ ಮಾಡಿರಬೇಕು ಈ ರೀತಿ ಮಾಡಿ ತಿನ್ನೋ ಅನ್ನದಾಗೆ ಕಲ್ಲು ಹಾಕಿಕೊಳ್ಳಬೇಡ ಎಂದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೆರಡನೆಯ ಕಂತು ನಿಮ್ಮ ಓದಿಗೆ

Read More

ಅರಾ ಮಿತ್ರರನ್ನು ಅರಸಿ…: ಎಚ್. ಗೋಪಾಲಕೃಷ್ಣ ಸರಣಿ

ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಡಿಪಾರ್ಟ್ಮೆಂಟ್ ಇರುತ್ತೆ ಅಂತ ಮೊದಲೇ ತಿಳಿದುಕೊಳ್ಳದ ನನ್ನ ಬುದ್ಧಿಗೆ ಎಕ್ಕಡದಲ್ಲಿ ಬಾರಿಸಬೇಕು ಎಂದುಕೊಂಡು ನೇರ ನಡೆದೆ. ಎಡಕ್ಕೆ ತಿರುಗಿದೆ. ಅಲ್ಲಿ ಕನ್ನಡ ವಿಭಾಗ ಅಂತ ಬೋರ್ಡ್ ಕಾಣಿಸಲಿಲ್ಲ. ತೆರೆದ ಬಾಗಿಲು, ಒಳಗಡೆಯಿಂದ ನಗುವಿನ ಪ್ರವಾಹ ಹರಿದು ಬರುತ್ತಿತ್ತು, ಜತೆಗೆ ಕನ್ನಡದಲ್ಲಿ ಮಾತು ಮಾತು. ರೂಮಿನ ಒಳಗೆ ನಡೆದೆ. ಮೂರು ಜನ ಟೇಬಲ್ಲಿನ ಆಕಡೆ ಇಬ್ಬರು ಈಕಡೆ ಒಬ್ಬರು ಕೂತಿದ್ದರು. ಮೂರೂ ಜನ ಸೂಟು ಟೈ ಧಾರಿಗಳು! ಅದರಿಂದ ಗುಂಪಿನಲ್ಲಿ ಮಿತ್ರ ಸಾರ್ ಇಲ್ಲ ಎನ್ನುವುದು ಖಚಿತ ಆಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೬ನೇ ಬರಹ ನಿಮ್ಮ ಓದಿಗೆ

Read More

ಒಡಪು ಗೌರಮ್ಮ ಮತ್ತು ಆಕಿ: ಸುವರ್ಣ ಚೆಳ್ಳೂರು ಸರಣಿ

ಆ ದಾರಿಯೊಳಾಗ ನಡಕೊಂತ ಹೋಗೊದಂದ್ರ ಅದೊಂಥರಾ ಸಮಾಧಾನ ಅನ್ಸೋದು, ಆಕಡೆ ಈಕಡಿಗೆ ಹಸರು, ಗಿಡಗಳು ಅದರಾಗೂ ಹುಂಚಿ ಹೂವು ಬಿಟ್ಟಾಗ ಅದನ್ನ ಹರದು ತಿನ್ನಾಕ ಇನ್ನಷ್ಟು ಖುಷಿ ಆಗ್ತಿತ್ತು. ಆ ದಾರಿ ನಡಕ ಹೋದಾಗೆಲ್ಲಾ ಆ ಒಡಪಿನ ಕಟ್ಟಿ ಕಾಣ್ತಿತ್ತು. ಊರು ಬಿಟ್ಟು ದೂರ ಇದ್ದ ಆ ಕಟ್ಟಿ ಹತ್ರ ಗೌರಮ್ಮಜ್ಜಿ ಯಾವಾಗಲೂ ಇರ್ತಿದ್ಲು. ಆಕಿಗೆ ಗೊತ್ತಿರುವಷ್ಟು ಒಡಪುಗಳು ಆ ಊರಿನ್ಯಾಗ ಯಾರಿಗೂ ಗೊತ್ತಿರ್ಲಿಲ್ಲ, ಊರಾಗ ಯಾವ್ದನ ಮದುವಿ ಆದ್ರ ಅಕಿನ ಎಲ್ಲಾರೂ ಕರಿತಿದ್ರು, ಹಂಗಾಗಿ ಆಕಿ ಒಡಪು ಗೌರಮ್ಮ ಅಂತ ಕರಿತಿದ್ರು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಹನ್ನೊಂದನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ