Advertisement

Category: ಸರಣಿ

ಗತಕಾಲದ ಚಿನ್ನದ ಗಣಿ ಕೊಲಂಬಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಕೊಲಂಬಿಯಾದಲ್ಲಿ ದೊಡ್ಡವರು ಮಾತ್ರವಲ್ಲ, ಚಿಕ್ಕ ಮಕ್ಕಳೂ ಸಹ ಕಾಫಿಪ್ರಿಯರು. ಊಟದ ನಂತರವೂ ಸಹ ಕಾಫಿ ಕುಡಿಯುವ ಅಭ್ಯಾಸವನ್ನು ಇವರು ಇಟ್ಟುಕೊಂಡಿದ್ದಾರೆ. ರಾತ್ರಿಯ ಊಟದ ನಂತರ ಹೆತ್ತವರೇ ತಮ್ಮ ಮಕ್ಕಳಿಗೆ ಕಾಫಿಯನ್ನು ಕುಡಿಯುವುದಕ್ಕೆ ಕೊಡುತ್ತಾರೆ. ಇದನ್ನು ‘ಕಾಫಿ ಕಾನ್ ಲೆಚೆ’ ಎಂದು ಕೊಲಂಬಿಯನ್ ಭಾಷೆಯಲ್ಲಿ ಕರೆಯಲಾಗುತ್ತದೆ. ಅಂದರೆ ‘ಹಾಲಿನ ಜೊತೆಗೆ ಕಾಫಿ’ ಎಂದರ್ಥ. ಮಕ್ಕಳಿಗೆ ಹಾಲಿನ ಜೊತೆಗೆ ಬೆರೆಸಿದ ಲೈಟಾದ ಕಾಫಿಯನ್ನು ಕೊಡುವ ದೊಡ್ಡವರು ಸ್ಟ್ರಾಂಗ್ ಕಾಫಿಯನ್ನೇ ಕುಡಿಯುತ್ತಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಹಸೆಮಣೆಯೇರಿದ ತಾಯಿ…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಪದ್ಮನಾಭನ್, ಸುಮತಿ ಕೊರಳಿಗೆ ತಾಳಿ ಕಟ್ಟುತ್ತಾನೆ. ಮದುವೆ ನಡೆಸುತ್ತಿದ್ದ ಹಿರಿಯಾತ ಎದ್ದು ಕುಂಡದ ಸುತ್ತಲೂ ಏಳು ಸುತ್ತುಗಳನ್ನು ಹಾಕುವಂತೆ ಹೇಳುತ್ತಾರೆ. ಸೆಲ್ವಿ ನಿಧಾನವಾಗಿ ಹೊಟ್ಟೆಯನ್ನು ಹಿಡಿದುಕೊಂಡು ಎದ್ದುನಿಂತು ಗಂಡನ ಹಿಂದೆ ನಡೆಯುತ್ತಾಳೆ. ಸುತ್ತಲೂ ನೆರೆದಿದ್ದವರೆಲ್ಲ ಸೆಲ್ವಿಯ ಹೊಟ್ಟೆಯನ್ನೇ ನೋಡುತ್ತಾರೆ. ಸೆಲ್ವಿ ಕ್ಲಾಸ್‌ಮೇಟ್ ಸ್ವಾಮಿ ಗುಂಪು ಮತ್ತು ಹುಡುಗಿಯರ ಗುಂಪು ಬೆರಗಾಗಿ ನೋಡುತ್ತಾರೆ. ಮದುವೆ ಮುಗಿದು ಎಲ್ಲರೂ ಅವರನ್ನು ವಿಶ್ ಮಾಡಿ ಪಕ್ಕದಲ್ಲಿದ್ದ ಪೆಂಡಾಲ್ ಒಳಕ್ಕೆ ಊಟಕ್ಕೆ ಹೊರಡುತ್ತಾರೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ತಿರುವುಗಳ ಪಯಣದಲ್ಲೊಂದು ಒಲವಿನ ಬೆಳಕು: ರಾಮ್ ಪ್ರಕಾಶ್ ರೈ ಕೆ ಸರಣಿ

ಮಣಿರತ್ನಂ ಜಾನರ್ ಎಂದು ಕರೆಯಬಹುದಾದ ಶೈಲಿಯ ಕಥಾನಕವಿದು. ಅಲೈಪಾಯುದೆ, ರೋಜಾ, ಓಕೆ ಕಣ್ಮಣಿ ತೆರನಾದ ಚಿತ್ರ. ಇಲ್ಲಿ ಅಬ್ಬರಗಳಿಲ್ಲ. ಅನುರಾಗದ ಅತೀ ಸರಳ ವಿಜೃಂಭಣೆಯಿದೆ. ಬದುಕಿನ ನೈಜ ಮಾಧುರ್ಯವಿದೆ. ವಿಷಾದವಿದೆ, ನಿರ್ವಾತವಿದೆ. ನೋವು ನಲಿವಿನ ಸ್ಯಾಂಡ್ ವಿಚ್ ಕೂಡ. ನಿರ್ದೇಶಕ ಅಶೋಕ್ ತಮ್ಮ ಮೊದಲ ಪ್ರಯತ್ನದಲ್ಲಿ ಕೆಂಪು ಹೊಳೆಯ ತಟದ ಮೇಲೆ ನಡೆದ ಚಾರಣಿಗರ ನಾಪತ್ತೆಯ ಬಗ್ಗೆ ಮಾತನಾಡಿದ್ದರು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ದಿಯಾ’ ಸಿನಿಮಾದ ವಿಶ್ಲೇಷಣೆ

Read More

ಚುಟುಕು ಹೇಳಿ ನಾನು ಎಲ್ಲರ ಮುಂದೆ ಚುಟುಕಾಗಿದ್ದು!!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಾನು ಹೀಗೆ ಹೇಳಿದ ನಂತರ ಎಲ್ಲರೂ ನನ್ನ ಚುಟುಕನ್ನು ಮೆಚ್ಚುತ್ತಾರೆ ಎಂದುಕೊಂಡಿದ್ದೆ. ಆದರೆ ಆಗಿದ್ದೆ ಬೇರೆ. ಸಾಹಿತ್ಯದ ಬಗ್ಗೆ ಆಸಕ್ತಿಯಿದ್ದ ಬಿಕೆಎಂ ಸರ್ ಎದುರಿಗೆ ಹೇಳಿದ್ದರೆ ಅವರು ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಆದರೆ ಅವರು ನನಗೆ ಹಿಗ್ಗಾ ಮುಗ್ಗಾ ಬಯ್ದರು. ಹುಡುಗಿಯರು ಜಗತ್ತಿನಲ್ಲಿ ನಾನೇನೋ ದೊಡ್ಡ ತಪ್ಪು ಮಾಡಿದ್ದ ರೀತಿಯಲ್ಲಿ ನನ್ನನ್ನು ನೋಡಲು ಶುರು ಮಾಡಿದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಬಣ್ಣವೆಂದರೆ…. ಕಲರ್ ಎಂದಷ್ಟೇ ಅಲ್ಲ!: ಸುಮಾವೀಣಾ ಸರಣಿ

ಪೂರ್ವಾಂಗನೆ ಪಶ್ಚಿಮಾಂಗನೆಗೆ ಬಣ್ಣಗಳ ಕುರಿತು ಕವಿ ಜಿ.ಎಸ್ ಎಸ್ ಹೇಳುತ್ತಾರಲ್ಲ… ಕಣ್ಣಿನಲ್ಲಿ ಕಪ್ಪು ವರ್ಣದ ಭಾಗ ಇಲ್ಲದೆ ಇದ್ದಿದ್ದರೆ ಹತ್ತಿಯ ನಡುವೆ ಕಪ್ಪು ಬೀಜಗಳು ಇಲ್ಲದೆ ಇದ್ದಿದ್ದರೆ, ಕಪ್ಪಾದ ಕತ್ತಲು ಇಲ್ಲದೆ ಇದ್ದಿದ್ದರೆ, ಕಪ್ಪು ಮೋಡ ಕವಿದು ಮಳೆ ಬಾರದೆ ಇದ್ದಿದ್ದರೆ ಮನುಷ್ಯ ಸುಖವಾಗಿ ಎಲ್ಲಿರುತ್ತಿದ್ದ? ಕಪ್ಪು ಕೇಶರಾಶಿ ಇಲ್ಲದೆ ಇದ್ದರೆ ಹೇಗೆ ಸುಂದರವಾಗಿ ಕಾಣುತ್ತಿದ್ದ? ಕಪ್ಪು ಬಣ್ಣವನ್ನು ವ್ಯಕ್ತಿತ್ವ ಗುರುತಿಸುವಲ್ಲಿ ಇರಬೇಕೇ ಹೊರತು ಬದುಕಿನ ಪರಿಭಾಷೆಗಳಲ್ಲಿ ಒಡಮೂಡುವ ಪರಿಪ್ರೇಕ್ಷಗಳಿಂದಲ್ಲ ಎನ್ನುವುದೆ ನನ್ನ ಅನಿಸಿಕೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನಾಲ್ಕನೆಯ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ