Advertisement

Category: ಸರಣಿ

ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಇರಾಕ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

2003ರಲ್ಲಿ ಇರಾಕ್ ಯುದ್ಧದ ಮೂಲಕ ಈ ನಿರ್ದಯಿಯ ಆಡಳಿತ ಕೊನೆಗೊಂಡಾಗಲೇ ಇರಾಕ್‌ನ ಜನತೆ ನಿರಾಳತೆಯ ನಿಟ್ಟುಸಿರು ಬಿಟ್ಟದ್ದು. ಇರಾಕ್‌ನಲ್ಲಿ ರಾಜಕೀಯ ಸಂಕೀರ್ಣತೆ ಇರುವುದರ ಜೊತೆಗೆ ರಾಜಕೀಯ ವಿಡಂಬನೆಯೂ ಇದೆ. ಅಲ್ಲಿನ ಜನರು ತಮಾಷೆಯ ಮೂಲಕವೇ ರಾಜಕಾರಣಿಗಳಿಗೆ ಚುರುಕು ಮುಟ್ಟಿಸುತ್ತಾರೆ. ಆಡಳಿತ ವ್ಯವಸ್ಥೆಯ ಅಸಮರ್ಥತೆಯಿಂದಾಗಿ ದಿನನಿತ್ಯದ ಜೀವನದಲ್ಲಿ ಉಂಟಾಗುವ ಏರಿಳಿತಗಳನ್ನು ನಿಭಾಯಿಸಬೇಕಾದರೆ ಇಂತಹ ಹಾಸ್ಯಪ್ರವೃತ್ತಿ ಇರಬೇಕಾಗುತ್ತದೆ ಎನ್ನುವುದು ನಿಜ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಧೀಮಂತ ಪತ್ರಕರ್ತ ಐ.ಕೆ. ಜಾಗೀರದಾರ್: ರಂಜಾನ್ ದರ್ಗಾ ಸರಣಿ

ಅವರೆಲ್ಲ ಕುಳಿತ ಕುರ್ಚಿ, ಪ್ಲೇಟು ಮತ್ತು ಆಹಾರದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಅದು ನಾಲ್ಕು ಮಾಸ್ಟರ್ ಬೆಡ್ ರೂಂ ಮನೆಯಾಗಿತ್ತು. ಎಲ್ಲ ಕೋಣೆಗಳನ್ನು ತೋರಿಸಿದರು. ಅವೆಲ್ಲ ಒಂದೇ ಸೈಜಿನ ಕೋಣೆಗಳು. ಪಲ್ಲಂಗ, ಬೆಡ್, ಹೊದಿಕೆ ಹೀಗೆ ಯಾವುದರಲ್ಲೂ ವ್ಯತ್ಯಾಸ ಇರಲಿಲ್ಲ. ಒಂದು ಇಬ್ಬರು ಮಕ್ಕಳ ಕೋಣೆ, ಇನ್ನೊಂದು ಅವರ ಕೋಣೆ, ಮತ್ತೊಂದು ಮನೆಗೆಲಸದ ಹೆಣ್ಣುಮಗಳ ಕೋಣೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 96ನೇ ಕಂತು ನಿಮ್ಮ ಓದಿಗೆ

Read More

ಮರೆವೆಂಬ ಮಾರ್ಜಾಲ, ಪರಿಸ್ಥಿತಿಯೆಂಬ ಮೂಷಿಕ…: ರಾಮ್ ಪ್ರಕಾಶ್ ರೈ ಕೆ ಸರಣಿ

ಲೋಕದ ಕಣ್ಣಿಗೆ ಚಚ್ಚೂ ನಾಪತ್ತೆಯಾದ ಪಟ್ಟಿಯಲ್ಲೇ ಇರಬೇಕಿದೆ. ಏಕೆಂದರೆ ಉಳಿದ ಜೀವಗಳ ಉಸಿರು ಬಂಧನದ ಬೇಗೆಗೆ ಬಿದ್ದು ಸುಡಬಾರದೆಂದರೆ ಆ ಘಟನೆಯನ್ನು ಮರೆಯಲೇ ಬೇಕಿದೆ. ಹೀಗೆ ದಿನ ಕಳೆದಾಗ ಮತ್ತೆ ಅಪ್ಪು ಪಿಳ್ಳೆ ಎಲ್ಲವನ್ನೂ ಮರೆತು ಹೋಗುತ್ತಾರೆ. ಮರಳಿ ತನಿಖೆ, ಮತ್ತದೇ ಕಹಿಯ ಅಂತ್ಯ ಎಲ್ಲವೂ ಮೋಟಾರಿನ ಚಕ್ರದಂತೆ ಮತ್ತದೇ ಆರಂಭ ಅದೇ ಅಂತ್ಯ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಕಿಷ್ಕಿಂದಾ ಕಾಂಡಮ್’ ಸಿನಿಮಾದ ವಿಶ್ಲೇಷಣೆ

Read More

ಕ್ಯಾಂಡಲ್ ಕ್ರಿಕೆಟ್: ಪೂರ್ಣೇಶ್‌ ಮತ್ತಾವರ ಸರಣಿ

ನಮ್ಮ ಅಭ್ಯಾಸ ಅದ್ಭುತವಾಗಿದ್ದರಿಂದ ಒಂದು ಬಾರಿ ಸಾಲದೆಂದು ಬೆಳ ಬೆಳಗ್ಗಿಯೇ ಮೂರು ಮೂರು ಬಾರಿ‌ ನೆಟ್ ಪ್ರಾಕ್ಟಿಸ್ ನಡೆಸಿದ್ದರಿಂದ ಗೆಲುವು ನಮ್ಮದೇ ಆಗಲಿದೆ ಎಂಬ ವಿಶ್ವಾಸ ನಮ್ಮದಾಗಿತ್ತು. ಈ ವಿಶ್ವಾಸದಿಂದಲೇ ಆಟವನ್ನೇನೋ ಆರಂಭಿಸಿದೆವು. ಆದರೆ, ಪಂದ್ಯ ಸಾಗುತ್ತಲೇ ನಮ್ಮ ಎಣಿಕೆಗಳೆಲ್ಲಾ ತಲೆಕೆಳಗಾಗಲಾರಂಭಿಸಿದ್ದವು. ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಆಟದ ಕೊರತೆ ಎಂಬುದಕ್ಕಿಂತ ನಿದ್ರೆಯ ಕೊರತೆಯೇ ಆಗಿತ್ತು. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದ ಪ್ರತಿಫಲವಾಗಿ ನಿದ್ದೆ ಎಲ್ಲರನ್ನೂ ಆವರಿಸಲಾರಂಭಿಸಿತ್ತು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಹನ್ನೊಂದನೆಯ ಬರಹ

Read More

ಊರ ಮಾರಮ್ಮನ ಪರಿಸೆ: ಸುಮಾ ಸತೀಶ್ ಸರಣಿ

ನಾವೂ ಚಿಕ್ಕವರಿರುವಾಗ ಸನಿ ಸನಿವಾರ ಈರಾಪುರಕ್ಕೆ ಕಾಯಮ್ಮಾಗಿ ಹೋಗ್ತಿದ್ವಿ. ಅಲ್ಲಿ ಅಕ್ಕ ಪಕ್ಕದ ಬೀದಿಗ್ಳಾಗೆ ಸನಿ ಮಾತ್ಮ ಮತ್ತೀಗ ಈರಬದ್ರಸೋಮಿ ಗುಡೀಗ್ಳೂ ಅವ್ವೆ. ‌ಈರಬದ್ರನ‌ ಗುಡೀನಾಗೇ ಸಾಮಿಗೆ ಪಂಚಲೋಹುದ್ದು ಕಣ್ಣು ಮೀಸೆ ಮೆತ್ತಿತ್ತು. ಅದ್ನ ನೋಡ್ತಿದ್ದಂಗೇ ಬೋ ಕ್ವಾಪ್ವಾಗವ್ನೆ ಅಂತ ಅನ್ನುಸ್ತಿತ್ತು. ಮುಂದ್ಕಿರಾ ಜಾಗ್ದಾಗೆ ಲಿಂಗಧೀರರ ಬಟ್ಟೆ‌ ಬೊಂಬೇನೂ ಇಕ್ಕಿದ್ರು. ಕಣ್ ಅಳ್ಳಿಸಿಕಂಡು ನೋಡ್ತಿದ್ವು. ಪರಿಸೇನಾಗೆ ಅವ್ರ ಕುಣ್ತ ಕಂಡು‌ ನಮ್ಗೆ ತೇಟು ಬೊಂಬೇನೇ ನೋಡ್ದಂಗಾಗಿ, ಅದೇ ಏನಾರಾ ಎದ್ದು ಬಂದೈತೋ ಏನೋ‌ ಅಂಬಂಗಾಗ್ತಿತ್ತು. ಆದ್ರೆ ಅದು ಆಳೆತ್ರುಕ್ಕಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ