ಅಮ್ಮನ ದ್ಯಾವ್ರು: ಸುಮಾ ಸತೀಶ್ ಸರಣಿ
ಅವು ಈಗಿನ್ ಕಾಲುದ್ ಗುಲಾಬಿ ಅಲ್ಲ್ ಕಣೇಳಿ. ರೋಜಾ ಬಣ್ದವು. ತೆಳ್ಳುಗಿರಾ ರೆಕ್ಕೆಗ್ಳು. ಬಲ್ ನಾಜೂಕು. ಗಟ್ಟಿಯಾಗಿ ಒತ್ತಿದ್ರೆ ಬಾಡೋಗೋಂತವು. ಚಿಕ್ಕದಾದ್ರೆ ಐದು ಪೈಸಾ. ದೊಡ್ಡವು ಹತ್ತು ಪೈಸಾ. ಸ್ಯಾನೇ ದೊಡ್ಡವು ನಾಕಾಣೆ. ಮನ್ಯಾಗೆ ಇರಾ ಚಿಲ್ರೆ ಹುಡುಕೀ ಹುಡುಕೀ ಅಮ್ಮ ರಾತ್ರೀನೇ ರೆಡಿ ಇಕ್ಕಿರ್ತಿತ್ತು. ಮದ್ಲೇ ಗೊತ್ತಿರ್ತಿತ್ತಲ್ಲ. ಆದ್ರೂ ಸತ ಗುಲಾಬಿ ಸ್ಯಾನೆ ಇದ್ರೆ ಆಸೆ. ಅವುನ್ ತಾವ ಕೊಸರಾಡೋದು. ಇನ್ನೊಂದು ಹಾಕು, ಇದು ಚಿಕ್ದು, ಇದು ರೆಕ್ಕೆ ಕಿತ್ತೋಗದೆ, ಬಾಡೋಗದೆ, ಸಿಕ್ಕಾಪಟ್ಟೆ ಕಾಸು ಯೋಳ್ತೀಯಾ. ನಾಳಿಂದ ಬ್ಯಾಡಾಕ್ಕೆ ಬ್ಯಾಡ ಇಂಗೆ ನಮ್ಮಮ್ಮುನ್ ಕೂಗಾಟ. ಅವ್ನೂ ಕಮ್ಮಿ ಇರ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ ನಿಮ್ಮ ಓದಿಗೆ
						