Advertisement

Category: ಸಾಹಿತ್ಯ

ಮಂಜುನಾಯಕ ಚಳ್ಳೂರು ಬರೆದ ಕತೆ “ಫೂ….”

ಆ ಹೊತ್ತು ಅವಳು ಹುಚ್ಚಿಯಂತೆ ಕಾಣುತ್ತಿದ್ದಳು ನನಗೆ. ಮುಖದ ತುಂಬ ಕೈಯಾಡಿಸಿದಳು. ತಲೆ ಸವರಿದಳು. ಯಾಕೋ ಎಷ್ಟೊತ್ತಾದರೂ ನನ್ನ ಬಿಡಲೇ ಇಲ್ಲ. ಅವ್ವ ಅಲ್ಲಿಂದಲೇ, `ಸಾಕ್ ಹೋಗು ಚಂದ್ರಪ್ಪಾ. ಬುಟ್ರ ಲಂಗದಾಗ್ ಸುರುಗ್ಸ್ಯಂತಾಳ್ ಈ ಅಡಾವುಡಿ ನಿನ್ನಾ…’ ಎಂದಳು. ಅತ್ತೆ, `ಯೇ ಮಂಗಾ.. ಬಾಯೈತಂತ ಏನೇನರ ಬೊಗಳ್ಬ್ಯಾಡ. ನನ ಹೊಟ್ಯಾಗ್ ಹುಟ್ಬೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ.’ ಎಂದುತ್ತರಿಸಿದಳು. ಆಗವಳ ಕೈಗಳು ನಡುಗುತ್ತಿದ್ದವು. ಕೆಂಡದಂತೆ ಬೆಚ್ಚಗಾಗಿದ್ದವು.
ಮಂಜುನಾಯಕ ಚಳ್ಳೂರು ಅವರ “ಫೂ..” ಕಥಾಸಂಕಲನದ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಓದಿಗೆ

Read More

ಮಂಜುನಾಯಕ ಚಳ್ಳೂರ ಕಥಾಲೋಕ…

“ಧಾರವಾಡದಲ್ಲಿ ಪಿಯುಸಿಯಲ್ಲಿದ್ದಾಗ ‘ಗಾಳಿಪಟ’ ಎಂಬ ಕತೆ ಬರೆದಿದ್ದೆ‌‌. ಅದಕ್ಕೂ ಮುನ್ನ ‘ಗೋಧಾವರಿ’ ಎಂಬ ಕತೆಯನ್ನು ಬರೆದು ಸ್ನೇಹಿತರ ಮುಂದೆ ಇಟ್ಟಾಗ, ಹಾಸ್ಟೇಲಿನ ದೋಸ್ತರೆಲ್ಲ ಅದನ್ನು ಓದಿ “ಚೊಲೋ ಬರ್ದಿ” ಎಂದು ಬೆನ್ನುತಟ್ಟಿದ್ದರು‌. ತುಷಾರ ಕಥಾ ಸ್ಪರ್ಧೆಗೆಂದು ಬರೆದಿದ್ದ ಕತೆ ಅದು. ಕೈಬರಹದಲ್ಲಿದ್ದ ಆ ಕತೆಯ ಪ್ರತಿಯನ್ನು, ಮತ್ತೊಮ್ಮೆ ಓದಿ ಕೊಡುವುದಾಗಿ ನನ್ನಿಂದು ಇಸಿದುಕೊಂಡು ಹೋದ ದೋಸ್ತ ಇನ್ನೂ ವಾಪಸ್ ಕೊಟ್ಟಿಲ್ಲ. ಮಂಜುನಾಯಕ ಚಳ್ಳೂರರ “ಫೂ” ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಿಕ್ಕಿದ್ದು ಇದೇ ಸಂದರ್ಭದಲ್ಲಿ ಅವರ ಕಥಾಲೋಕದ ಕುರಿತು ರೂಪಶ್ರೀ ಕಲ್ಲಿಗನೂರ್‌ ಬರಹ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಾಲತಿ ಪಟ್ಟಣಶೆಟ್ಟಿ ಬರೆದ ಕಥೆ

ಇವಾ ಹಿಂಗ್ಯಾಕ ಇದ್ದಾನ? ನನ್ನ ನೋಡಿದ್ರ ನಗೋದಿಲ್ಲಾ ಮಾತಾಡೊದಿಲ್ಲಾ? ಅವ್ವನೂ ಯಾವಾಗ್ಲೂ ಹಿಂಗs ಇರತಾಳ…. ಬ್ಯಾಂಕಿನಿಂದ ಬಂದಾಕಿನs ಮಲಗಿ ಬಿಡತಾಳ…. ನಾ ಯಾರ ಕೂಡ ಮಾತಾಡಬೇಕು?…. ಮುಂಜಾನಿಂದ ಊಟಿಲ್ಲಾ…. ಹಂಗs ಕೂತಾಳ; ಅಪ್ಪಾ ತಾ ಮಾತ್ರ ಹೊರಗ ಊಟಾ ಮಾಡಿ ಬರತಾನ, ಆಕೀಗೆ ಊಟಾ ಮಾಡು ಅಂತ ಸುದ್ದಾ ಹೇಳೋದಿಲ್ಲಾ…. ಛೇ ಎಂಥಾ ಅಪ್ಪಾ ಇವಾ….?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಾಲತಿ ಪಟ್ಟಣಶೆಟ್ಟಿ ಬರೆದ ಕಥೆ “ನಾ ಯಾಕ ಹುಟ್ಟಿದೆನೋ…… ?” ನಿಮ್ಮ ಓದಿಗೆ

Read More

ರಾಮು ಮತ್ತು ‘ತಾಯಿ’: ಸವಿತಾ ನಾಗಭೂಷಣ ಬರಹ

ಇದಾದ ಆರು ತಿಂಗಳ ನಂತರ ರಾಮು ಅವರ ಮನೆಗೆ ಹೋದಾಗ ಅವರು ಮೂಲೆ ಅಂಗಡಿಯಿಂದ ಕೊಬ್ಬರಿ ಮಿಠಾಯಿ ಖರೀದಿಸಿ ತಂದು ಕೊಟ್ಟರು. “ಅಲ್ರೀ.. ಮೂವರೂ ಶುಗರ್ ಪೇಷಂಟು…” ಅಂತ ನಾಗಭೂಷಣ ರಾಗ ಎಳೆಯಲು… “ತಿನ್ನಿ ಕಮ್ಮಿ ಆಗುತ್ತದೆ” ಎಂದು ರಾಮು ನಕ್ಕರು. ನಾನು, “ನನಗೆ ಅವಕಾಶ ಸಿಕ್ಕಾಗಲೆಲ್ಲಾ ಕವಿಗೋಷ್ಟಿ / ಕಾವ್ಯ ಕಮ್ಮಟಗಳಲ್ಲಿ ನಿಮ್ಮ ‘ತಾಯಿ’ ಕವನ ಓದುತ್ತಿರುವೆ” ಎಂದು ರಾಮುವಿಗೆ ಹೇಳಿದೆ. ನಾಗಭೂಷಣ ‘ಹೌದೌದು ನಿಮ್ಮ”ತಾಯಿ”ಯನ್ನು ಅಮರ ಮಾಡಬೇಕೆಂದು ಸಂಕಲ್ಪ ಮಾಡಿದ್ದಾಳೆ! ಎಂದರು.
ರಾಮು ಅವರ ಕುರಿತು ಸವಿತಾ ನಾಗಭೂಷಣ ಬರಹ

Read More

ಹಿರಿಯ ಪತ್ರಕರ್ತ ಹಾಗೂ ಕವಿ ರಾಮು ಇನ್ನಿಲ್ಲ

ಹಿರಿಯ ಪತ್ರಕರ್ತ ಹಾಗೂ ಕವಿ ರಾಮು(69) ಮಂಗಳವಾರ ಮುಂಜಾನೆ ತೀರಿಕೊಂಡರು. ವಿಭಿನ್ನ ನೆಲೆಗಟ್ಟಿನ ಅವರ ಕವಿತೆಗಳ ಕಾರಣಕ್ಕೆ ಮತ್ತು ಅವರ ಆಪ್ತತೆಯ ಕಾರಣಕ್ಕೆ ಮೈಸೂರಿನ ಹಾಗೂ ಮೈಸೂರಿಗೆ ಆಗಮಿಸುತ್ತಿದ್ದ ಸಾಹಿತ್ಯದ ಬಂಧುಗಳೆಲ್ಲ ಅವರನ್ನು ಆಗಾಗ ಭೇಟಿಯಾಗುತ್ತಲೆ ಇರುತ್ತಿದ್ದರು.
ಅಗ್ನಿಸೂಕ್ತ, ರಾಮು ಕವಿತೆಗಳು, ವಿಷ್ಣುಕ್ರಾಂತಿ ಮತ್ತು ಇತರೆ ಕವಿತೆಗಳು ಇವರ ಪ್ರಕಟಿತ ಕವನ ಸಂಕಲನಗಳು.
ರಾಮು ಅವರನ್ನು, ಅವರ ವ್ಯಕ್ತಿತ್ವದ ಕುರಿತು ಕವಯತ್ರಿ ರೂಪಾ ಹಾಸನ ಬರೆದ ಕವಿತೆಯೊಂದು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ