ಕುವೆಂಪು – ಕನ್ನಡದ ಭಾವಸೆಲೆ ಹಾಗೂ ವೈಚಾರಿಕ ದಿಕ್ಸೂಚಿ: ಡಾ.ಎಲ್.ಜಿ.ಮೀರಾ ಅಂಕಣ
ಕವಿಯಲ್ಲದವರ ಮಟ್ಟಿಗೆ ಸಾಧಾರಣ ಬೆಟ್ಟಗುಡ್ಡ ಅನ್ನಿಸಿಬಿಡಬಹುದಿದ್ದ ಕುಪ್ಪಳ್ಳಿಯ ಒಂದು ಸ್ಥಳವು ಈ ರಸಋಷಿಯ ಕಣ್ಣಲ್ಲಿ ಅತ್ಯಂತ ಪ್ರೀತಿಯ `ಕವಿಶೈಲ’ವಾದದ್ದು ಅವರಿಗಿದ್ದ ಅಮಿತ ಪ್ರಕೃತಿಪ್ರೇಮಕ್ಕೆ ಸಾಕ್ಷಿ. ಅವರೆಲ್ಲೇ ಇದ್ದರೂ ಅವರ ಮನಸ್ಸು ಸದಾ ಕಾಲ ತಮ್ಮ ಪ್ರೀತಿಯ ಮಲೆನಾಡನ್ನು ಧ್ಯಾನಿಸುತ್ತಿತ್ತು. “ನಾನು ಭೌತಿಕವಾಗಿ ಮೈಸೂರಿನಲ್ಲಿದ್ದರೂ ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮಲೆನಾಡಿನಲ್ಲಿರುತ್ತೇನೆ. ಪ್ರತಿ ನಿತ್ಯ ಹಲವು ಸಾರಿ ನವಿಲುಕಲ್ಲಿಗೆ ಹೋಗಿ ಬರ್ತೀನಿ, ಕವಿಶೈಲದಲ್ಲಿ ಕುಳಿತು ಧ್ಯಾನ ಮಾಡ್ತೀನಿ. ತುಂಗಾತೀರದ ಮರಳು ಗುಡ್ಡೆಯ ಮೇಲೆ ಅಲೆದಾಡ್ತೀನಿ” ಎಂದವರು ಅವರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ಮೂರನೆಯ ಬರಹ

