ಜೀವಕ್ಕಿಂತ ದೊಡ್ದು ಯಾವ್ದು?: ಸುಧಾ ಆಡುಕಳ ಅಂಕಣ

ಗುಲಾಬಿಯ ಸಾವಿನಿಂದಾಗಿ ಡಾಕ್ಟರಮ್ಮನಿಗೆ ಹೊಳೆಸಾಲಿನ ಸ್ಥಿತಿಗತಿಯ ಬಗ್ಗೆ ಒಂದಿಷ್ಟು ಅರ್ಥವಾಗಿತ್ತು. ಅವರಲ್ಲಿ ಅರಿವನ್ನು ಮೂಡಿಸುವುದು ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟೇ ಮಹತ್ವದ ಕಾರ್ಯವೆಂದು ತಿಳಿದ ಅವರು ಮಾಸ್ರ‍್ರು ಕರೆದಾಗ ದೂಸರಾ ಮಾತನಾಡದೇ ಬರಲೊಪ್ಪಿದ್ದರು. ಸೇರಿದ್ದ ಎಲ್ಲ ಅಮ್ಮಂದಿರಿಗೆ ಅರ್ಥವಾಗುವ ಭಾಷೆಯಲ್ಲಿ ಮುಟ್ಟು, ಕಿಟ್ಟುಗಳ ಒಳಗುಟ್ಟುಗಳನ್ನು ಬಿಡಿಸಿ ಹೇಳಿದರು. ಮುಟ್ಟೆಂದು ಮುಟ್ಟದೇ ಮೀನಮೇಷ ಎಣಿಸಿ ಆಸ್ಪತ್ರೆಗೆ ತರಲು ತಡವಾಗಿ ಅಸುನೀಗಿದ ಗುಲಾಬಿಯ ನೆನಪಿನಲ್ಲಿ ಒಂದಿಷ್ಟು ಹೊತ್ತು ಮೌನಪ್ರಾರ್ಥನೆ ಮಾಡಿಸಿ ಅಗಲಿದ ಜೀವದ ಘನತೆಯನ್ನು ಎತ್ತಿಹಿಡಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More