ದಾಂಪತ್ಯ ವ್ಯವಸ್ಥೆಯ ಕಟು ವಿಮರ್ಶೆ
ಹಾಗೆ ನೋಡಿದರೆ ಸ್ವಾತಂತ್ರ್ಯ ಚಳವಳಿ- ಮುಖ್ಯವಾಗಿ ರಾಷ್ಟ್ರೀಯತೆಯ ಉಚ್ಛ್ರಾಯದ ಸಂದರ್ಭದಲ್ಲಿ ಹೆಣ್ಣಿನ ಸ್ಥಾನಮಾನ, ಶಿಕ್ಷಣ ಮೊದಲಾದವುಗಳ ಬಗ್ಗೆ ಬಹಳ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯಿತು. ಕನ್ನಡದ ಮೊದಲ ಕಾದಂಬರಿಗಳಲ್ಲಿ ಮತ್ತು ಭಾರತದ ಇತರ ಭಾಷೆಗಳ ಆರಂಭದ ಕಾದಂಬರಿಗಳಲ್ಲೂ ಹೆಣ್ಣಿನ ಪ್ರಶ್ನೆ ಬಹಳ ಮುಖ್ಯವಾಗಿ ಚರ್ಚಿತವಾಯಿತು. ಹಾಗಿದ್ದರೂ ಹೆಣ್ಣಿನ ಸ್ಥಿತಿಯಲ್ಲಿ ನಿರ್ಣಾಯಕವಾದ ಬದಲಾವಾಣೆ ಯಾಕೆ ಸಾಧ್ಯವಾಗಲಿಲ್ಲ? ಸ್ವಾತಂತ್ರ್ಯ ಚಳವಳಿ ತನ್ನ ತೀವ್ರತೆಯನ್ನು ಮುಟ್ಟಿದರೂ, ರಾಷ್ಟ್ರೀಯವಾದಿ ಭಾವನೆಗಳು ಪರಾಕಾಷ್ಠೆಗೆ ತಲುಪುತ್ತಿದ್ದರೂ ಸ್ತ್ರೀ ಸ್ವಾತಂತ್ರ್ಯದ ಪ್ರಶ್ನೆ ಯಾಕೆ ಇದ್ದಕ್ಕಿದ್ದಂತೆ ಗೌಣವಾಯಿತು ಎಂಬ ಬಗ್ಗೆ ಪಾರ್ಥಾ ಚಟರ್ಜಿಯಂಥ ಚಿಂತಕರು ಆಳವಾದ ಚಿಂತನೆ ನಡೆಸಿದ್ದಾರೆ.
Read More