Advertisement

Tag: ಸುಕನ್ಯಾ ಕನಾರಳ್ಳಿ

ಭಯ, ಭಕ್ತಿ, ಮತ್ತು ಬೆರಗು!: ಸುಕನ್ಯಾ ಕನಾರಳ್ಳಿ ಅಂಕಣ

ಕತ್ತಲೆಯ ಭಯದಲ್ಲಿ ಲಬೋ ಲಬೋ ಬಾಯಿ ಬಡಿಯುವಾಗಲೇ ಕಣ್ಣಿನ ಅಂಚಿನಿಂದ ಬೀದಿ ಬೆಳಕಲ್ಲಿ ಎಳೆ ಎಳೆಯಾಗಿ ಬೀಳುತ್ತಿದ್ದ ಮಳೆ ಕಾಣಿಸಿ ಅಳು ಥಟ್ಟನೆ ನಿಂತೇ ಹೋಗಿತ್ತು. ಹಿಂದೆ ಕತ್ತಲೆಯ ಪರದೆ. ಅದರ ಮೇಲೆ ನೀಳವಾಗಿ ಬೀಳುತ್ತಿದ್ದ ಹೊಳೆವ ಮಳೆಯ ವೈಭವ! ನನ್ನ ಎಳೆಯ ಮನಸ್ಸಿಗೆ ಬೆರಗೋ ಬೆರಗು. ಬುದ್ಧಿ ಬೆಳೆಯುವ ಮುಂಚೆಯೇ ಕತ್ತಲೆ, ಗುಮ್ಮ, ದೆವ್ವ ಇತ್ಯಾದಿಗಳ ಬಗ್ಗೆ ಬೆಚ್ಚಿ ಬೀಳುತ್ತಿದ್ದ ಮನಸ್ಸಿಗೆ ಕತ್ತಲೆಯ ಸೌಂದರ್ಯ ಮತ್ತು ಮಳೆಯ ಲಾಲಿತ್ಯ ತಾಗಿ ಮೌನವಾಗಿ ನಿಂತುಬಿಟ್ಟಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಇದು ಮಾತು-ಅಕ್ಷರ-ದೃಶ್ಯಗಳ ಲಂಪಟ ಕಾಲ!: ಸುಕನ್ಯಾ ಕನಾರಳ್ಳಿ ಅಂಕಣ

ಶಬ್ದಲಜ್ಜೆಯೂ ಸೇರಿದಂತೆ ಹಲವಾರು ಬಗೆಯ ಲಜ್ಜೆಗಳ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ಇರುವಂತೆ ಅನ್ನಿಸುತ್ತದೆ. ಮೊನ್ನೆ ನಮ್ಮ ಅಪಾರ್ಟ್ಮೆಂಟಿನ ಸರದಾರನೊಬ್ಬ ಒಂದು AI ವಿಡಿಯೋ ಹಾಕಿ, ‘ನೋಡಿ, ಎಲ್ಲ ಬಗೆಯ ಸುರಕ್ಷೆ ಇರುವ ಫ್ಲಾಟಿಗೆ ಸಹ ಪೂರ್ತಿಯಾಗಿ ಮುಖವಾಡ ತೊಟ್ಟ ಮಂದಿ ನುಗ್ಗಿರುವ ರೀತಿ!’ ಎಂದು ತತ್ತರಬತ್ತರ ಬೇತುಕೊಂಡಿದ್ದು ನೋಡಿ ನಗು ಬಂದಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ನಾಲ್ಕನೆಯ ಬರಹ

Read More

ಹೆಣ್ಣು ನೋಡಲೆಂದು ಬಂದವರು!: ಸುಕನ್ಯಾ ಕನಾರಳ್ಳಿ ಅಂಕಣ

ಅದೂ ಸರಿಯೇ. ಅಂತಾರಾಷ್ಟ್ರೀಯ ಕರೆ ದುಬಾರಿ ತಾನೇ? ಟಿಪಿಕಲ್ ಅಮೆರಿಕನ್ ಎಂದು ಗೊಣಗಿಕೊಂಡು ನಾನು ಸುಮ್ಮನಾದರೂ ಮನೆಯಲ್ಲಿ ರಂಪವಾಗುವುದೇನೂ ತಪ್ಪಲಿಲ್ಲ. ‘ಅಲ್ಲಿಂದಾ ಫೋನ್ ಮಾಡಿದವನ ಹತ್ತಿರ ಒಳ್ಳೆಯ ಮಾತಾಡೋದು ಬಿಟ್ಟು, ನಾನು ಕರಮಿ, ನಾನು ಕುಳ್ಳಿ, ನಾನು ಡುಮ್ಮಿ ಅಂತ ಹೇಳಿಕೊಳ್ತಾಳಲ್ಲ ನಿನ್ನ ಮಗಳು, ಏನನ್ನಬೇಕು ಇದಕ್ಕೆ?’ ಎಂದು ಚಂದ್ರಣ್ಣ ತಲೆ ಮೇಲೆ ಕೈಹೊತ್ತುಕೊಂಡಿದ್ದರು. ‘ಅಲ್ಲಿಂದಾ ಫೋನ್ ಮಾಡಿದವನ ಪ್ರಶ್ನೆ ಅಷ್ಟು ಸ್ಪಷ್ಟವಾಗಿದ್ದರೆ ಇಲ್ಲಿಂದಾ ಮಾತಾಡುವ ನನ್ನ ಉತ್ತರ ಸಹ ಸ್ಪಷ್ಟವಾಗಿರಬೇಕು ತಾನೇ?’ ಎಂದು ವಿಶಾಲಮ್ಮನ ಹತ್ತಿರ ನಾನು ಬೇತುಕೊಂಡಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಕಾಸರವಳ್ಳಿ, ಕಾಯ್ಕಿಣಿ ಮತ್ತು ಟ್ರಾಫಿಕ್!: ಸುಕನ್ಯಾ ಕನಾರಳ್ಳಿ ಅಂಕಣ

ನಮ್ಮ ಅಪಾರ್ಟ್ಮೆಂಟಿನ ತನಕವೂ ಇದ್ದ ಪೊಲೀಸರನ್ನು ಕಂಡಾಗ ಮಾತ್ರ ಇದು ಜಯಂತ ಎಫೆಕ್ಟ್ ಅಲ್ಲ ಅಂತ ಅರಿವಾಗಿತ್ತು. ಸೆಕ್ಯೂರಿಟಿ ಹತ್ತಿರ ನಿಲ್ಲಿಸಿ ಏನ್ರೀ ಇದು ಅವಾಂತರ ಎಂದು ವಿಚಾರಿಸಿದೆ. ‘ಅಯ್ಯೋ, ಮೇಡಮ್. ಸಿಎಂ ಬರ್ತಾ ಇದಾರೆ. ಪಕ್ಕದ ಹೋಟೆಲ್ಲಿನಲ್ಲಿ ಪ್ರಜಾವಾಣಿ ವಾರ್ಷಿಕ ಸಾಧಕಿಯರಿಗೆ ಅಭಿನಂದನೆ ಸಮಾರಂಭ ಇದೆ. ನಿಮ್ಮ ಹೆಸರು ಸಹ ಒಂದಲ್ಲಾ ಒಂದು ದಿನ ಬರುತ್ತೆ ನೋಡ್ತಾ ಇರಿ,’ ಎಂದು ರೇಗಿಸಿದಾಗ, ‘ಆ ಹೊತ್ತಿಗೆ ನಾನು ಇರೊಲ್ಲ. ಇದ್ದರೂ ಹೋಗೊಲ್ಲ,’ ಎಂದು ಉಡಾಫೆಯಿಂದ ನಕ್ಕು ಗೇಟನ್ನು ದಾಟಿ ಒಳಹೊಕ್ಕು ಸಮಾಧಾನದ ನಿಟ್ಟುಸಿರು ಬಿಟ್ಟೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಮನೆಯೊಳಗಿನ-ಈಕೆ  ಮತ್ತು  ಹೊರಗಿನ-ಆಕೆ!: ಸುಕನ್ಯಾ ಕನಾರಳ್ಳಿ ಅಂಕಣ

ಮನೆಯೊಳಗಿನ ಈಕೆ ಮನೆಯಿಂದ ಆಚೆ ಹೋಗಿ ದುಡಿದರೂ ಸಹ ಮನೆಯನ್ನು ನಿಭಾಯಿಸುವುದು ಕೊನೆಗೂ ಈಕೆಯ ಹೊಣೆಯಾಗಿ ಉಳಿದುಕೊಂಡಿದೆ ಎನ್ನುವುದೂ ಸಹ ನಿಜ. ಅಲ್ಲೋ ಇಲ್ಲೋ ಗಂಡ ಮಕ್ಕಳಿಂದ ಸಹಾಯ ಸಿಗಬಹುದೇನೋ. ಅದು ಕೇವಲ ಸಹಾಯ ಅಷ್ಟೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೊಂದನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ