Advertisement

Tag: ಕತೆ

ನವೀನ ಗಣಪತಿ ಬರೆದ ಈ ಭಾನುವಾರದ ಕತೆ

ಮಧ್ಯಾಹ್ನ ಒಂದು ಘಂಟೆಗೇ ತಾನು ಮನೆಯಲ್ಲಿ ಮಾಡಬಹುದಾದ ಎಲ್ಲ ಕೆಲಸಗಳೂ ಮುಗಿದು ಮತ್ತೆಲ್ಲ ಮನಸ್ಸಿಗೆ ಕಿರಿಕಿರಿಯಾಗ ಹತ್ತಿತ್ತು. ನಾಲ್ಕು ದಿನ ದಾವಣಗೆರೆಗೆ ಹೋಗಿ ಮಗಳೊಟ್ಟಿಗೆ ಇದ್ದು ಬರೋಣವೆನಿಸುತ್ತಿತ್ತು. ಆದರೆ ಶಂಭಣ್ಣನನ್ನು ಬಿಟ್ಟು ಎಲ್ಲಿಯೂ ಹೋಗುವಂತಿರಲಿಲ್ಲ. ಮಗಳೂ ವಾರ ವಾರ ಬರುವವಳಲ್ಲ. ಅವಳಿಗೆ ಭಾನುವಾರ ರಜಾದಿನಗಳು ಇದ್ದಾಗಲೇ ಜೋರು ವ್ಯಾಪಾರ. ಇನ್ನು ಆಚೀಚೆ ಎರಡು ಹೆಂಗಸರೊಟ್ಟಿಗೆ ಹರಟೆ – ಮಾತು – ಒಡನಾಟ ಮಾಡೋಣವೆಂದರೆ, ಒಬ್ಬರ ವ್ಯವಹಾರವಾದರೂ ಚೊಕ್ಕಟವಾಗಿದೆಯೇ?
ನವೀನ ಗಣಪತಿ ಬರೆದ ಈ ಭಾನುವಾರದ ಕತೆ “ಧನಲಕ್ಷ್ಮಿ”

Read More

ವಿಜಯಶ್ರೀ ಹಾಲಾಡಿ ಬರೆದ ಈ ಭಾನುವಾರದ ಕತೆ

“ಆ ಮುದ್ಕ ಸಂಕ್ರಪ್ಪ ದೇವಮ್ಮಕ್ಕನ ಗಂಡನೇ ಅಲ್ವಂತೆ. ಅವನೂರಾಗೆ ಬ್ಯಾರೆ ಸಂಸಾರ ಅದೆ. ಈವಮ್ಮಂಗೂ ಮಕ್ಕಳು ಮರಿ ಅವೆ. ಈ ವಯಸ್ನಾಗೆ ಈವಪ್ಪನ ಹಿಂದೆ ಓಡ್‌ಬಂದದೆ. ಸಂಕ್ರಪ್ಪಂಗೆ ರಿಟೈರ್ ಆಯ್ತಂತೆ. ಅದಕ್ಕೇ ಈಗ ಆವಯ್ಯನ್ನ ಬಿಟ್ಟು ಇನ್ನೆತ್ಲಾಗೋ ಹೋಗದೆ; ಘಾಟಿ ಹೆಂಗ್ಸು’ ಓನರ್ ಆಂಟಿಯಂತೂ ತಿಂಗಳೊಪ್ಪತ್ತು ಹೊಸರಾಗ, ಹಳೆರಾಗ ಎಲ್ಲವನ್ನೂ ಬೆರೆಸಿ ಹಾಡಿದರು. ಅಷ್ಟೆಲ್ಲ ಅಕ್ಕರೆಯ ಒರತೆಯಾಗಿರುವ ದೇವಮ್ಮಕ್ಕನ ನಿಜ ಬಣ್ಣ ಹೀಗಿರಬಹುದಾ ಎಂಬ ಅಚ್ಚರಿ ಮಲ್ಲಿಕಾಳಿಗೆ. ವಿಜಯಶ್ರೀ ಹಾಲಾಡಿ ಬರೆದ ಕತೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಕತೆ: ನಕ್ಕ ನಗು

ಅವಳು ಹೀಗೆ ನಗಲು ಪ್ರಾರಂಬಿಸಿದಳೆಂದರೆ ಉಳಿದವರಿಗೆ ಗಾಬರಿಯಾಗುತ್ತಿತ್ತು. ನಕ್ಕು ಸುಸ್ತಾಗಿ ಕಣ್ಣ ತುದಿಯಿಂದ ಹರಿವ ನೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ, ಮುಖ ಕೆಂಪಗೆ ಮಾಡಿಕೊಂಡು, ನೂರರ ವೇಗದಲ್ಲಿ ಓಡುತ್ತಿರುವ ಗಾಡಿ ಸಡನ್ ಬ್ರೇಕ್ ಹಾಕಿದಂತೆ ಸುಮ್ಮನಾಗುತ್ತಿದ್ದಳು. ನಲವತ್ತೈದು ವರುಷದ ಅವಳ ದಾಂಪತ್ಯಕ್ಕೆ ವ್ಯಾಖ್ಯೆ ಬರೆದಂತೆ ಬಂಡೆಕಲ್ಲಿನಂತೆ ಕುಳಿತು ಬಿಡುತ್ತಿದ್ದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಬರೆದ ಕತೆ ‘ನಕ್ಕ ನಗು!

Read More

ಡಾ. ಜ್ಯೋತಿ ಬರೆದ ಈ ಭಾನುವಾರದ ಕತೆ

ನಾನು, ಮಕ್ಕಳೊಂದಿಗೆ ಕಾಡು ಮೇಡು ಸುತ್ತುತ್ತಾ ಕಷ್ಟನಷ್ಟ ಅನುಭವಿಸುವಾಗ ಜೊತೆಗಿದ್ದು, ಅಂತೂ ಈಗ ಗದ್ದುಗೆ ಸಿಕ್ಕ ಮೇಲೆ ವೈರಾಗ್ಯ ಮೂಡಿ, ಅಕ್ಕ ಭಾವನ ಹಿಂದೆ ಹೆಜ್ಜೆಯಿಡುವ ನಿರ್ಧಾರ ಮಾಡಿ, ಕಾಡಿನತ್ತ ಮುಖ ಮಾಡಿದೆ. ನನ್ನ ಮಕ್ಕಳಿಗೆ ತಕ್ಷಣ ನಂಬಲಾಗಲಿಲ್ಲ. ಮೊದಲು ನಾನೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಕುರುಕ್ಷೇತ್ರ ಯುದ್ಧರಂಗ ನೋಡಿದ ಮೇಲೆ ನನಗೆ ವೈರಾಗ್ಯ ಮೂಡಿತು. ಈ ವೈಭೋಗ, ಒಣ ಪ್ರತಿಷ್ಠೆ ಯಾವುದೂ ನನಗೆ ಬೇಕಿಲ್ಲವೆನಿಸಿತು. -ಡಾ.ಜ್ಯೋತಿ ಬರೆದ ಕತೆ ‘ಕುಂತಿಯ ಮುಸ್ಸಂಜೆ ಮಾತು’ ಇಂದಿನ ಓದಿಗಾಗಿ. 

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಟ್‌ ಕತೆ

ಮದುವೆಯಾಗಿ ಬಂದಮೇಲೆ ಮಾಕುಚಿಕ್ಕಿಯ ಮಾತು ಸೊಟ್ಟಗಾಗಲು ಬಹಳ ದಿನ ಹಿಡಿಸಲಿಲ್ಲ, ಕರಿಮಣಿ ಕಟ್ಟಿಕೊಂಡವರೆಲ್ಲ ಉರಿದು ಬೀಳುವುದು ಸಂಪ್ರದಾಯವಿರಬೇಕು ಅಂತ ಆಶ್ಚರ್ಯ ಪರಮುಗೆ. ತನ್ನ ಹಡೆದಬ್ಬೆಯ ಪ್ರೀತಿಯಲ್ಲಿಯೂ ಹೆಚ್ಚೇನೂ ಓಲಾಡಿದವನಲ್ಲ ಪರಮು. ಅಬ್ಬೆ ವರ್ಷಕ್ಕೊಮ್ಮೆ ಹೊಟ್ಟೆ ಡುಬ್ಬ ಮಾಡಿಕೊಂಡು ಹೆರಿಗೆ ನೋವು ಬಂದೊಡನೆ ಕೊಂಕಣಿ ಅಜ್ಜಿಗೆ ಬರ ಹೇಳುವುದು, ಒಂದಲ್ಲ ಒಂದು ಕಾರಣಕ್ಕೆ ಮಗು ಹುಟ್ಟುತ್ತಲೇ ಕೈಲಾಸ ವಾಸಿಯಾಗುವುದು ಇದ್ದಿದ್ದೇ. ಮಗುವಿಲ್ಲದ ಬಾಳಂತನದಲ್ಲಿ ಅಳುವ ಅಬ್ಬೆ, ಕಂಡವರ ಶಿಶುಗಳಿಗೆಲ್ಲ ಹಾಲೂಡಿಸಿ ಎದೆ ಭಾರ ಕಳೆದ ಮೇಲೆ ಮತ್ತೆ ಮೊದಲಿನಂತೆ…

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ