ರವಿಶಂಕರ್ ಎಸ್. ಎಲ್. ಮತ್ತು ಇಟಗಿ ಮಹಾಬಲೇಶ್ವರ ಭಟ್ಟ, ಜಂಟಿಯಾಗಿ ಬರೆದ ಕತೆ “ಮನ್ವಂತರ”
ಯಕ್ಷಗಾನ ಬಿಟ್ಟು ಗಂಭೀರವಾಗಿ ಯಾವುದಾದರೂ ನೌಕರಿ ಸೇರಿಕೊಂಡು ದುಡಿಯಬೇಕು ಇದು ನಮ್ಮ ತಂದೆಯ ವರಾತ. ಯಕ್ಷಗಾನ ಕಲಾವಿದನಿಗೇನು ಸಮಾಜದಲ್ಲಿ ಗೌರವವಿಲ್ಲ. ಅಷ್ಟಾಗಿ ಈಗಿನ ಕಾಲದಲ್ಲಿ ಯಕ್ಷಗಾನದವನಿಗೆ ಯಾರು ಹೆಣ್ಣು ಕೊಟ್ಟಾರು. ರಾತ್ರಿಯಿಡೀ ನಿದ್ದೆ ಬಿಡುವುದು, ಹಗಲು ನಿದ್ದೆ ಮಾಡುವುದು ಗೂಬೆಯಂತೆ. ಇದೇನು ಅಂಥಹ ಪುರುಷಾರ್ಥ ಸಾಧನೆಯ ಹಾದಿಯಲ್ಲ. ಇವುಗಳೆಲ್ಲ ನನ್ನ ತಂದೆಯವರ ಹಳವಂಡ. ತಂದೆಯವರ ಈ ಧೋರಣೆಯು ನನಗೇನೂ ಪರಿಣಾಮ ಬೀರದು. ಯಾಕೆಂದರೆ ಅವರು ಯಾವುದನ್ನೂ ಗಂಭೀರವಾಗಿ ಸ್ವೀಕರಿಸಿದವರಲ್ಲ. ಮನಸ್ಸಿಗನಿಸಿದ್ದನ್ನು ಕಾರಿಕೊಂಡಾರು. ಅಲ್ಲಿಗೆ ಮುಗಿಯಿತು. ನನ್ನ ಈಗಿನ ಸ್ಥಿತಿ ತಿಳಿದರೆ ಬಿರುಸಾದ ಬಾಣಗಳು ಬಂದಾವು ಅವರ ಬತ್ತಳಿಕೆಯಿಂದ.
ರವಿಶಂಕರ್ ಎಸ್. ಎಲ್. ಮತ್ತು ಇಟಗಿ ಮಹಾಬಲೇಶ್ವರ ಭಟ್ಟ, ಜಂಟಿಯಾಗಿ ಬರೆದ ಕತೆ “ಮನ್ವಂತರ” ನಿಮ್ಮ ಈ ಭಾನುವಾರದ ಓದಿಗೆ

