Advertisement

Tag: ಕೆಂಡಸಂಪಿಗೆ

ಕಣ್ರೆಪ್ಪೆ ಬಡಿದೇ ಹೇಳಿದ ಕತೆಯಿದು, ಅಲ್ಲಲ್ಲ.. ಜೀವನಚರಿತ್ರೆಯ ದೃಶ್ಯಗಳಿವು

ತಮ್ಮ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬ ಪುಸ್ತಕವನ್ನು ಬರೆಯಬೇಕೆಂದ ಅಪೇಕ್ಷೆಯನ್ನು ಕೇಳಿ ಉಳಿದವರಿಗೆ ಆಶ್ಚರ್ಯವಾಗುತ್ತದೆ. ಡೊಮಿನಿಕ್ ಗೆ ಇದು ಅಸಾಧ್ಯವೆನಿಸುವುದಿಲ್ಲ. ಸ್ಪೀಚ್ ಥೆರಪಿಸ್ಟ್ ಹೇಳಿಕೊಟ್ಟ ಪ್ರಕಾರ ಸೂಚನೆಗಳನ್ನು ಅನುಸರಿಸಿ ಅಕ್ಷರಗಳನ್ನು ಹೆಣೆದು ಪದಗಳನ್ನು ಹೊಂದಿಸಿ ಬರೆಯುವವರು ಬೇಕೆಂದು ಬಯಸುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಜೀನ್ ಡೊಮಿನಿಕ್ ಬಾಬಿ ಜೀವನಚರಿತ್ರೆಯನ್ನಾಧರಿಸಿದ ಫ್ರಾನ್ಸ್‌ನ ʻದ ಡೈವಿಂಗ್‌ ಬೆಲ್‌ ಅಂಡ್‌ ದ ಬಟರ್‌ಫ್ಲೈ ʼ ಸಿನಿಮಾ ಕುರಿತ ವಿಶ್ಲೇಷಣೆ

Read More

ವಿಜಯಾ ಮೋಹನ್‌ ಬರೆದ ಈ ಭಾನುವಾರದ ಕತೆ

ಅವಳು ಜೀವ್‌ಮಾನದಾಗೆ, ಅಷ್ಟೊಂದು ಬಳೆ ತೊಟ್ಟುಕೊಂಡಿರ್‍ಲಿಲ್ಲ. ಅವ್ವನ ತವರಲ್ಲಿ, ಅವಳ ಬೆನ್ನಿಂದಲ, ತಮ್ಮನೊಬ್ಬನು ಮೇಷ್ಟ್ರಾಗಿದ್ದವನು. ಊರ ಮಾರಮ್ಮನ ಜಾತ್ರೆಯೊಂದಕ್ಕೆ ಕರಿಸಿಕೊಂಡು. ಏಷ್ಟೊ ವರುಷಕ್ಕೆ ಬಂದಿದ್ದೀಯಕ್ಕ, ಮುಂದುಕ್ಕೆ ಇರೋವರ್ಯಾರೊ? ಸಾಯೋವರ್ಯಾರೊ? ನೀನು ತೊಟ್ಟೇ ತೊಟ್ಟುಕೊಬೇಕೆನುತ, ಬಳೆ ಮಲಾರದವನನ್ನ ಕರೆಸಿ. ಒಂದೊಂದು ಕ್ಯೆಗೆ ಎರೆಡೆರೆಡು ಡಸನ್ನಿನಷ್ಟು, ನೂರು ರೂಪಾಯಿನ ಬಳೆ ತೊಡಿಸಿ, ನೆಟ್ಟಗಿನ್ನ ಹದಿನೈದು ದಿನವಾಗಿರಲಿಲ್ಲ. ಏನು ತಗದ್ರು ತಗೀತೀನಿ, ಕ್ಯೆಯ್ಯಾಗಳ ಬಳೆ ಮಾತ್ರ ಬಿಚ್ಚಲ್ಲ ಸಾ, ನೋಡಿಸಾ ಮುತ್ಯೆದೆ ಬಳೆ ಬಿಚ್ಚುಸಬ್ಯಾಡಿ ಸಾ, ಒಡಿಬ್ಯಾಡ್ರಿ ಸಾ, ಅನುತ ಇನ್ನಿಲ್ಲದಂಗೆ ಬೇಡಿಕೊಂಡ್ಲು.

Read More

ಕಿಕ್ಕಿರಿದ ಭಾಷೆಗಳ ಕಾಡಿನಲ್ಲಿ ಓಡಾಡಿದ ಜಿ.ಎನ್.ದೇವಿ ಅವರೊಡನೆ ಮಾತುಕತೆ

ಪ್ರೊ. ಜಿ. ಎನ್. ದೇವಿ ಅಂತರರಾಷ್ಟ್ರೀಯ ಖ್ಯಾತಿಯ ಭಾಷಾ ವಿದ್ವಾಂಸರು. ಬರೋಡಾದ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ದೇವಿಯವರು ಮೂಲತಃ ಸಾಹಿತ್ಯ ವಿಮರ್ಶಕರು. ತಮ್ಮ‌ ವೃತ್ತಿಗೆ ರಾಜೀನಾಮೆ ನೀಡಿ, ಆದಿವಾಸಿಗಳ ಭಾಷೆಗಳ ಅಧ್ಯಯನವನ್ನು ಕೈಗೆತ್ತಿಕೊಂಡವರು. ಪ್ರಪಂಚದ ಎಲ್ಲಾ ಬುಡಕಟ್ಟು ಭಾಷೆಗಳ ಗಣತಿ ಮಾಡುವ ಬೃಹತ್ ಕಾರ್ಯಯೋಜನೆಯ ಜವಾಬ್ದಾರಿಯನ್ನು ದೇವಿಯವರಿಗೆ  ಯುನೆಸ್ಕೋ ವಹಿಸಿದೆ. ಭಾಷೆಗಳ ಕುರಿತು…

Read More

ಮುಸುಕಿನ ಮರೆಯ ಪಾಡು

ನಾವು ಹುಟ್ಟಿ ಬೆಳೆದಿದ್ದ ಊರಲ್ಲಿ ಚಿಕ್ಕಪ್ಪ ಎಂಬುವವನೊಬ್ಬ ಇದ್ದ. ರಭಸವಾದ ಕುಡುಕ. ಎಣ್ಣೆ ಕೊಡಿಸಿದರೆ ಎಲ್ಲಾ ನ್ಯಾಯವನ್ನು ತಲೆಕೆಳಗೆ ಮಾಡುತ್ತಿದ್ದ. ಆ ಮನೆಯಲ್ಲಿ ನನ್ನ ತಮ್ಮನಿಗೂ ನನಗೂ ಭಾಗ ಬರಬೇಕಿತ್ತು. ನಾನದರತ್ತ ತಿರುಗಿಯೂ ನೋಡಿರಲಿಲ್ಲ. ತಮ್ಮ ಬೆಂಗಳೂರು ಸೇರಿ ಅಲ್ಲೇ ಸಂಸಾರ ಹೂಡಿ ಒಂದು ಪುಟ್ಟ ಮನೆಯನ್ನು ಮಾಡಿಕೊಂಡಿದ್ದ. ಅವನಿಗೂ ಅಂತಹ ಆಸಕ್ತಿ ಇರಲಿಲ್ಲ. ಆದರೆ ನನ್ನಕ್ಕ ಬಿಟ್ಟಿರಲಿಲ್ಲ. ನಾವು ಭಾಗ ಕೊಡುವುದಿಲ್ಲ ಎಂದು ಅವನ ಮಗ ಹಾಗೂ ಹೆಂಡತಿ ಎಗರಾಡುತ್ತಿದ್ದರು.
ಮೊಗಳ್ಳಿ ಗಣೇಶ್‌ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಮೂರನೆಯ ಕಂತು

Read More

ಮರೆಯಲಾಗದ ಆ ನಾಲ್ಕು ರಾತ್ರಿಗಳು

ಹಗಲಿನಲ್ಲಿ ಎಲ್ಲೆಲ್ಲೋ ಹಂಚಿಹೋಗಿದ್ದ ಇವರನ್ನೆಲ್ಲ ಹೀಗೆ ಒಂದೇ ಸೂರಿನಡಿ ಸೇರಿಸಿದ್ದ ಇರುಳು ಎಷ್ಟೊಂದು ಬಲಶಾಲಿ ಅಂದುಕೊಳ್ಳುತ್ತಲೇ ಸಣ್ಣಗೆ ತೂಕಡಿಕೆ. ಅಲ್ಯಾರೋ ಕೆಮ್ಮಿದ ಸದ್ದು. ಮತ್ಯಾರೋ ಮಗುವನ್ನು ತಟ್ಟಿದ ಸಪ್ಪಳ. ಇನ್ಯಾರೋ ಯಾರಿಗೋ ಗದರಿದ ದನಿ. ಮಧ್ಯೆ-ಮಧ್ಯೆ ಹೆಗ್ಗಣಗಳ ಓಡಾಟ. ಅಪರೂಪಕ್ಕೆ ರೈಲಿನ ಕೂಗು. ಮೈಕಿನ ಅನೌನ್ಸ್‌ಮೆಂಟು… ಎಲ್ಲವೂ ಬೇರಾವುದೋ ಲೋಕದ್ದು ಎನ್ನುವಂಥ ಮಂಪರು. ಮುಂಜಾನೆ ಎಚ್ಚರಾದಾಗ ಪಕ್ಕದಲ್ಲೇ ಹಮಾಲಿ ಮಂದಿಯ ಗುಂಪೊಂದು ಸೇರಿತ್ತು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ