Advertisement

Tag: ಬೆಂಗಳೂರು

ಎಲ್ಲವೂ…. ಮರಳು ಮರಳೂ…: ಎಚ್. ಗೋಪಾಲಕೃಷ್ಣ ಸರಣಿ

ಮನೆಗೆ ಬರಬೇಕಾದರೆ ಮತ್ತೊಂದು ಯೋಚನೆ ತಲೆ ಕೆಡಿಸಿತು. ಸೈಟ್ ಮಧ್ಯ ಮಾರ್ಕ್ ಮಾಡ್ತಾ ಇದಾನೆ. ಮಧ್ಯದಿಂದ ಯಾರಾದರೂ ಮಾರ್ಕ್ ಮಾಡ್ತಾರಾ? ನಾನು ದಾಖಲು ಮಾಡ್ತಿರೋ ಈ ಪ್ರಸಂಗ ನಾಲ್ಕೂ ಕಾಲು ದಶಕದ ಹಿಂದೆ. ಅಂದರೆ ಆಗಿನ್ನೂ ಮೊಬೈಲ್ ಫೋನು, ಲ್ಯಾಂಡ್ ಲೈನ್ ಫೋನು ಇವೆಲ್ಲಾ ಇರದಿದ್ದ ಕಾಲ. ಏನಾದರೂ ಸಮಸ್ಯೆ, ಅದಕ್ಕೆ ಪರಿಹಾರ ಬೇಕು ಅಂದರೆ ಒಂದು ಮುಖಾಮುಖಿ ಮಾತು, ಇಲ್ಲ ಅಂದರೆ ಪೋಸ್ಟ್ ಮೂಲಕ ಕಾರ್ಡು ಅಥವಾ ಇನ್ ಲ್ಯಾಂಡ್ ಲೆಟರ್, ಇಲ್ಲಾ ಕಾಗದದಲ್ಲಿ ಬರೆದು ಅದನ್ನ ಕವರ್‌ನಲ್ಲಿ ಇಟ್ಟು ಪೋಸ್ಟ್ ಡಬ್ಬಕ್ಕೆ ಹಾಕಿ ಉತ್ತರಕ್ಕೆ ಕಾಯೋದು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ನಾಲ್ಕನೆಯ ಕಂತು

Read More

ಇದು ನಿಮ್ದೇ ಸೈಟು ತಾನೇ!: ಎಚ್. ಗೋಪಾಲಕೃಷ್ಣ ಸರಣಿ

ನಾವು ಮನೆ ಮುಗಿಸಿ ವಾಸಕ್ಕೆ ಅಂತ ಬಂದಮೇಲೂ ಸಹ ಈ ಮನೆ ಕೇಸು ತುಂಬಾ ದಿವಸ ಎಳೆಯಿತು. ಸೈಟಿನ ಮೂಲ ಓನರ್ ಪರ್ಯಾಯ ಸೈಟಿಗೆ ಒಪ್ಪಿಗೆ ಕೊಡದೇ ಇದ್ದದ್ದು ಮತ್ತು ಅದೇ ಸೈಟು ತಮಗೆ ಬೇಕು ಅಂತ ಇರಾದೆ ವ್ಯಕ್ತ ಪಡಿಸಿದ್ದು ಕೇಸು ಎಳೆಯಲು ಅವಕಾಶ ಆಯಿತು. ಸೊಸೈಟಿ ಮಧ್ಯೆ ಪ್ರವೇಶ ಮಾಡಿ ಅಲ್ಟರ್ನೇಟ್ ಸೈಟು ಕೊಡ್ತೀವಿ ಅಂದರೂ ಕೊಸರಾಟ ಮುಂದುವರೆದು ಸುಮಾರು ಇಪ್ಪತ್ತು ವರ್ಷ ಕೇಸು ನಡೆದು ಕೊನೆಗೆ ಒಂದು ಕಾಂಪ್ರಮೈಸ್ ಡೀಲ್ ಆಯ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಹತ್ತು ಮಹಡಿಯ ಭರ್ಜರಿ ಪ್ಲಾನು….: ಎಚ್.ಗೋಪಾಲಕೃಷ್ಣ ಸರಣಿ

ಬೆಳಗಿಂದ ಸಂಜೆವರೆಗೂ ನನ್ನ ಸಂಗಡವೆ ಇತ್ತು ಅದು. ಮಧ್ಯಾಹ್ನ ನಿದ್ದೆ ಕೂಡ ಮಾಡದೇ ನನ್ನ ಜತೆಗೆ ಇದ್ದುಬಿಡ್ತು. ಮನೆಗೆ ಹೊರಡ್ತಾ ಮಗೂನ ಮುದ್ದಿಸಿದೆ. “ಮಗು ತುಂಬಾ ಮುದ್ದು, ನನ್ನನ್ನ ತುಂಬಾ ಹಚ್ಚಿಕೊಂಡಿದೆ “ಅಂದೆ. ಬೆಳಿಗ್ಗೆಯಿಂದ ನನ್ನ ಸಂಗಡವೇ ಇತ್ತು. ಪುಟ್ಟ ಕೂಸು, “ಅಂಕಲ್‌ನ ಒಬ್ಬರನ್ನೇ ಬಿಡಬೇಡ, ಸಿಕ್ಕಿದ್ದೆಲ್ಲಾ ಜೇಬಲ್ಲಿ ಹಾಕ್ಕೊಳತ್ತೆ ಅದು, ಅದರ ಹಿಂದೇನೆ ಇರು ಅಂತ ಅಜ್ಜಿ ಹೇಳಿತ್ತು…” ಅಂತ ಸತ್ಯ ಬಯಲು ಮಾಡಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಬೇಡದ್ದಲ್ಲೇ ಸೈಟು ಖರೀದಿಸಿದ್ದು: ಎಚ್. ಗೋಪಾಲಕೃಷ್ಣ ಸರಣಿ

ತೆಪ್ಪಗೆ ಜೇಬಿಂದ ಎರಡು ಹತ್ತರ ನೋಟು ಬಿಡಿಸಿ ಕೊಟ್ಟೆ. ಇನ್ನೂ ಬೇಕು.. ಅಂದ. ಮೂರು ನೋಟು ಅವನ ಕೈ ಸೇರಿದ ಮೇಲೆ ಅದನ್ನು ಅವನ ಜೇಬಿಗೆ ತುರುಕಿಕೊಂಡ. ನಂತರ ನನ್ನ ಬೆರಳು ಬಾಂಡ್ ಪೇಪರಿನ ಮೇಲೆ ಬಲವಾಗಿ ಊರಿ ಅವನ ಭಾರ ಎಲ್ಲಾ ಬಿಟ್ಟು ಹೊರಳಿಸಿದ. ಅವನು ಎಷ್ಟು ಕೋಪ ರೋಷದಿಂದ ಬೆರಳನ್ನು ಹೊರಳಿಸಿದ್ದ ಅಂದರೆ ಒಂದು ಕಾಲ ಮೇಲೆ ನಿಂತು ಇಡೀ ಅವನ ತೂಕವನ್ನು ನನ್ನ ಬೆರಳಿಗೆ ಹೊರೆಸಿದ್ದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಸೈನ್‌ ಹಾಕೋ ಫ್ರೆಂಡು…: ಎಚ್. ಗೋಪಾಲಕೃಷ್ಣ ಸರಣಿ

ಏನು ನೀನಿಲ್ಲಿ… ಅಂತ ಕೇಳಿದವರಿಗೆ ನನ್ನ ಹುಡುಕಾಟ ವಿವರಿಸಿ ವಿವರಿಸಿ ಬಾಯಿಪಾಠ ಆಗಿತ್ತು. ಬರೀ ಜಾಲಹಳ್ಳಿ ಅಂತ ಇದ್ದರೆ ಹುಡುಕೋದು ಅಸಾಧ್ಯ. ಆದರೂ ಇಂತ ಕಡೆ ಕೇಳು ಅಂತ ಅವರು ಸಿಕ್ಕಿದ ಜಾಗದಿಂದ ಒಂದು ಕಿಮೀ ದೂರ ಇರುವ ಮತ್ತೊಂದು ಜಾಗಕ್ಕೆ ಕಳಿಸಿ ಕೈ ತೊಳೆದವರು ಹೆಚ್ಚು. ಎಷ್ಟು ಉತ್ಸಾಹದಿಂದ ಬೆಳಿಗ್ಗೆ ಸೈಕಲ್ ಹತ್ತಿ ಹೊರಟಿದ್ದೆನೋ ಅಷ್ಟರ ನೂರು ಪಾಲು ಬೇಸರದಿಂದ ಮನೆಗೆ ವಾಪಸ್ ಆದೆ. ಅಣ್ಣನಿಗೆ ಈ ವಿಷಯ ವರದಿ ಮಾಡಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೇಳನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ