Advertisement

Tag: kendasampige

ನಾವೇ ಭೂಮಿಯ ವಾರಸುದಾರರೇ?: ಚಂದ್ರಮತಿ ಸೋಂದಾ ಸರಣಿ

ನಮ್ಮ ಬಂಧುವೊಬ್ಬರದು ಅರಣ್ಯದ ನಡುವಿನ ಒಂಟಿ ಮನೆ. ಒಂದು ಬೇಸಿಗೆಯ ಬೆಳದಿಂಗಳ ರಾತ್ರಿಯಲ್ಲಿ ಹುಲಿ ಮತ್ತು ಕಾಡೆಮ್ಮೆ ಎರಡರ ನಡುವೆ ಭಯಂಕರ ಕಾದಾಟ. ಅವರ ಮನೆಯ ಹಿತ್ತಿಲಿನ ಪಕ್ಕದಲ್ಲಿಯೇ ಇವೆರಡರ ಹೋರಾಟವನ್ನು ಆ ಮನೆಯ ಜನರೆಲ್ಲ ಕುತೂಹಲದಿಂದ ಸುಮಾರು ಅರ್ಧಗಂಟೆಗೂ ಹೆಚ್ಚಿನ ಸಮಯ ವೀಕ್ಷಿಸಿದರಂತೆ. ಆ ಪ್ರಾಣಿಗಳ ಹೋರಾಟದ ಜಾಗಕ್ಕೂ ಇವರ ಮಧ್ಯೆ ಕೇವಲ ಒಂದು ಬೇಲಿಯಷ್ಟೆ ಇದ್ದುದು. ಇದು ಎಲ್ಲಿಯೂ ಸುದ್ದಿಯಾಗಲೇ ಇಲ್ಲ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಸಾಮಾಜಿಕ ಸಾಮರಸ್ಯದ ಸೂಚಕ ‘ಭರಮದೇವರು’: ತೇಜಾವತಿ ಡಿ.ಎಸ್.‌ ಬರಹ

ಪುರಾಣ ಕಥೆಗಳು ನಮ್ಮ ಪೂರ್ವಜರ ಕಥೆಗಳೆಂದು ನಂಬಿರುವ ಜನಪದರು ಅವುಗಳನ್ನು ತಮ್ಮ ಜ್ಞಾನ ಮಾರ್ಗಗಳೆಂದು ಒಪ್ಪಿಕೊಂಡಿದ್ದಾರೆ. ಬಹುತೇಕ ಇವು ಮತ ಧರ್ಮಗಳನ್ನಾಧರಿಸಿ ಬೆಳೆಯುತ್ತವೆ. ಬಹು ಸಂಸ್ಕೃತಿಯ ದೇಶವಾಗಿರುವ ನಮ್ಮಲ್ಲಿ ಸೃಷ್ಟಿ ಸ್ಥಿತಿ ಲಯದ ರೂಪಗಳಾದ ತ್ರಿಮೂರ್ತಿಗಳ ಕುರಿತು ಅನೇಕ ಪುರಾಣ ಕಥೆಗಳಿವೆ. ಅದರಲ್ಲಿ ಬ್ರಹ್ಮನನ್ನು ಕುರಿತು ಅವನ ಹುಟ್ಟು, ಶಿರಶ್ಚೇದನ, ಸ್ತ್ರೀ ಸಂಬಂಧ ಆಪಾದನೆಗಳು ಬಹಳಷ್ಟು ಇದ್ದು ಬ್ರಹ್ಮನಿಗೆ ಪೂಜೆ ಸಲ್ಲದಿರಲಿ ಎಂಬ ಶಾಪವಿದೆ. ಇವೆಲ್ಲವೂ ಆಯಾ ಕಾಲಮಾನಕ್ಕೆ ತಕ್ಕಂತೆ ಬ್ರಹ್ಮನ ಪ್ರಸಿದ್ಧಿಯನ್ನು ಕಡಿಮೆ ಮಾಡುವ ಹುನ್ನಾರದಿಂದ ಹುಟ್ಟಿಕೊಂಡ ಕಥೆಗಳಾಗಿ ನಮಗೆ ತೋರುತ್ತವೆ.
ಶ್ರೀರಾಮ ಇಟ್ಟಣ್ಣವರ ಬರೆದ “ಭರಮದೇವರು” ಕೃತಿಯ ಕುರಿತು ತೇಜಾವತಿ ಡಿ.ಎಸ್.‌ ಬರಹ

Read More

ಕೆಂಪೆಂದರೆ ಕೆಟ್ಟದ್ದೂ ಅಲ್ಲ… ಭಯವೂ ಅಲ್ಲ…: ಮಾಲತಿ ಶಶಿಧರ್‌ ಅಂಕಣ

ಆ ತರಗತಿಯಲ್ಲಿ ಬೋಧಿಸಬೇಕಾದ ಪಾಠವನ್ನು ಅಂದಿನ ಮಟ್ಟಕ್ಕೆ ಮುಂದೂಡಿ ಇಂಥ ಅದೆಷ್ಟು ಮಕ್ಕಳು ಹೀಗೆ ಹಿಂಸೆ ಅನುಭವಿಸುತ್ತಿದ್ದಾರೋ ಅನಿಸಿ ನಡೆದ ಎಲ್ಲವನ್ನೂ ಮತ್ತಷ್ಟು ನನ್ನ ಆ ದಿನಗಳ ಉದಾಹರಣೆ ಕೊಟ್ಟು, ಆ ದಿನಗಳಲ್ಲಿ ಆಗುವ ಬದಲಾವಣೆಗಳೇನು, ಹೇಗೆ ಸಿದ್ಧವಿರಬೇಕು, ಸಮಸ್ಯೆಗಳಾದಾಗ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದೆಲ್ಲ ತಿಳಿಸಿ, ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳಿ ಎಂದಿದ್ದೆ. “ಹೊಳೆವ ನದಿ” ಅಂಕಣದಲ್ಲಿ ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ

Read More

ಮಹಮದ್‌ ರಫೀಕ್‌ ಕೊಟ್ಟೂರು ಬರೆದ ಈ ಭಾನುವಾರದ ಕಥೆ “ಅಮೀನಾ”

ಮುರುಳಿಯ ಹೆಸರು ಹೇಳುತ್ತಲೇ ಮೆತ್ತಗಾಗಿದ್ದ ಅಮೀನಾ ತನ್ನ ಕತೆಯನ್ನು ಎಲ್ಲಿಂದ ಆರಂಭಿಸಬೇಕೆಂದು ಯೋಚಿಸಲಾರಂಭಿಸಿದಳು ‘ನಂಗೆ ನೆನಪಿರುವಂತೆ ನನ್ನ ಅಪ್ಪ ಲಾಡ್‌ ಸಾಬ್‌ ಗುಜುರಿ ಕೆಲಸ ಮಾಡುತ್ತಿದ್ದ, ದುಡಿದದ್ದಕ್ಕಿಂತ ಸೈಕಲ್‌ ತುಳಿದದ್ದೇ ಹೆಚ್ಚು. ಸೈಕಲ್ಲು ಚಲಿಸಿದರೆ ನಮ್ಮ ಬದುಕೂ ಚಲಿಸುತ್ತಿತ್ತು. ಅಮ್ಮಿ ಮನೇಲಿ ಬೀಡಿಯ ಜೊತೆ ನಮ್ಮ ಬದುಕನ್ನೂ ಕಟ್ಟುತ್ತಿದ್ದಳು…”
ಮಹಮದ್‌ ರಫೀಕ್‌ ಕೊಟ್ಟೂರು ಬರೆದ ಈ ಭಾನುವಾರದ ಕಥೆ

Read More

ವೆಸ್ಟ್ ಇಂಡೀಸ್ ಕ್ರಿಕೆಟ್ – ಅಂದು, ಇಂದು: ಇ.ಆರ್. ರಾಮಚಂದ್ರನ್ ಅಂಕಣ

ಇಲ್ಲಿನ ಕ್ರಿಕೆಟ್ ಆಟ ಎಷ್ಟು ಮೇಲುಗೈ ಆಗಿತ್ತೆಂದರೆ ಇವರ ವಿರುದ್ಧ ಆಡುವುದಕ್ಕೇ ಟೀಮುಗಳು ಹೆದರುತ್ತಿದ್ದವು! ಇವರ ವೇಗದ ಬೋಲಿಂಗ್‌ನಲ್ಲಿ ಎಷ್ಟು ಶಕ್ತಿ ಇತ್ತೆಂದರೆ ಆಡುವುದು ಇರಲಿ, ರನ್ ಹೊಡೆಯುವುದು ಇರಲಿ, ಏಟು ತಿನ್ನದೆ ಹೇಗೆ ಆಡುವುದು? ಎಂಬ ಶಂಕೆ ಮನಸ್ಸಿನಲ್ಲಿ ಏಳುತ್ತಿತ್ತು. ಭಾರತದ ಆಲ್-ರೌಂಡರ್ ಬಾಪು ನಾದ್ಕರ್ಣಿ ಒಮ್ಮೆ ಹೀಗೆ ಹೇಳಿದ್ದರು…
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಹೊಸ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ