Advertisement

Tag: kendasampige

ಒಂದು ನೊಣದ ಕಥೆ….

ಅಂದು ಬೆಳಿಗ್ಗೆ ಕೋರ್ಟಿಗೆ ಹೋದ ನನಗೆ ಕಟ ಕಟೆಯಲ್ಲಿ ಮುಖಾಮುಖಿಯಾಗಿದ್ದು ಆಗ ಬೆಂಗಳೂರಿನಲ್ಲಿ ಇದ್ದಂತಹ ಇಬ್ಬರು ಪ್ರಸಿದ್ಧ, ಘಟಾನುಘಟಿ ಕ್ರಿಮಿನಲ್ ವಕೀಲರುಗಳಲ್ಲಿ ಒಬ್ಬರು. ಶವಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ನಾನು ನೀಡುತ್ತ ಹೋದಂತೆ ಅವರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಕೆಲವು ದಿವಸಗಳ ಹಿಂದೆಯಷ್ಟೇ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬಂದಿದ್ದ ನಾನು ಪರೀಕ್ಷೆಗೆಂದು ಬಹಳಷ್ಟು ಓದಿದ್ದೆ. ಆದ್ದರಿಂದ ಪಾಟೀ ಸವಾಲು ಎದುರಿಸುತ್ತ, ಸಾವು ಸಂಭವಿಸಿ ಅಂದಾಜು ಎಷ್ಟು ದಿನಗಳಾಗಿರಬಹುದು ಎಂಬುದನ್ನು ಹೇಳಿದೆ. ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ ಹೊಸ ಬರಹ. 

Read More

ನಾಟಕವೆಂದರೆ ಶೃತಿಗೆ ಅಣಿಗೊಳಿಸಿದ ವೀಣೆಯಂತೆ

ರಂಗದ ಕಾಯಕ ಅಂದರೆ ಮೊದಲು ನಮ್ಮ ಮನೋಧರ್ಮ ಗುರುತಿಸಿಕೊಂಡು ನಾಟಕ ಕಟ್ಟಿ ಅದು ಪ್ರೇಕ್ಷಕರ ಕಣ್ಣುಗಳ ಫ್ರೇಮಿನಲ್ಲಿ ಸರಿಯಾಗಿ ಫಿಟ್ಟಾಗುತ್ತದೆಯೇ ಎಂದು ಅಂದಾಜು ಮಾಡಿಕೊಳ್ಳಬೇಕು. ನಂತರ ಜನರಿಗೆ ಕಾಯಬೇಕು. ಪಾರ್ಕಿಂಗ್ ಕಡೆ ಕಣ್ಣು ಹಾಯಿಸುತ್ತಿರಬೇಕು. ಇಷ್ಟಾದ ಮೇಲೆ ಭರ್ಜಿಯ ಮೊನೆಗಳಿಗೆ ಮೈ ಒಡ್ಡಿ ನಿಲ್ಲಬೇಕು ಮತ್ತು ನೋವಿನಲ್ಲೂ ನಗಬೇಕು. ನಗಲು ಸಾಧ್ಯವಾಗದಿದ್ದರೆ ಮನಸ್ಸಿನ ಹದ ಕೆಡುತ್ತದೆ. ಮನಸ್ಸು ಕೆಟ್ಟರೆ ಬದುಕಿನ ನೋಟಕ್ರಮದ ಜಾಡು ತಪ್ಪುತ್ತದೆ. ಒಟ್ಟು ಚಿತ್ರವೇ ಕಲಕಿಹೋಗುತ್ತದೆ.
‘ರಂಗ ವಠಾರ’ ಅಂಕಣದಲ್ಲಿ ಮತ್ತೆ…

Read More

ಉಳಿದು ಬದುಕುವುದನ್ನೇ ಆಯ್ಕೆ ಮಾಡಿಕೊಂಡವನ ಕಥೆ

ಒಮ್ಮೊಮ್ಮೆ ಯೋಚಿಸಿದರೆ ನಮ್ಮ ಅಳತೆಗಳನ್ನು ಯೋಜನೆಗಳನ್ನು ಮೀರಿ ಜೀವನದಲ್ಲಿ ಏನೋ ಘಟಿಸುತ್ತಿರುತ್ತದೆ. ಒಮ್ಮೊಮ್ಮೆ ಅದಕ್ಕೊಂದು ಅರ್ಥವೇ ಇರುವುದಿಲ್ಲ. ತರಗೆಲೆಯಂತೆ ತೂರಿ ಎತ್ತೆತ್ತಲೋ ಹಾರಿ ಮತ್ತೆಲ್ಲೋ ಮತ್ಯಾವುದೋ ಮಣ್ಣಿನಲ್ಲಿ ಸೇರಿ ಕೊಳೆತು ಹೋಗಿಬಿಡುವ ಹಾಗೆ ಅನಿಸುತ್ತದೆ. ಬದುಕೇ ಹಾಗೆ! ಹುಡುಕುವಾಗ ನಾವು ಹುಡುಕುತ್ತಿರುವುದು ಸಿಗುವುದಿಲ್ಲ. ಹುಡುಕುವುದನ್ನು ನಿಲ್ಲಿಸಿದಾಗ ಧುತ್ತೆಂದು ತಂದು ಎಸೆಯುತ್ತದೆ. ಈ ಬದುಕಿಗೆ ಅರ್ಥ ಎನ್ನುವುದು ಇದೆಯೇ? ಈ ಬದುಕು ಅರ್ಥಗಳ ಹಂಗನ್ನು ಮೀರಿಕೊಳ್ಳಲು ಪ್ರಯತ್ನಿಸುತ್ತಿರುವ ಕವಿತೆಯೇ?

Read More

ಅಪರಾಧಕ್ಕೆ ತಕ್ಕ ಶಿಕ್ಷೆ ಅಂದರೇನರ್ಥ?

ಬಿಸಿಲು, ಉಪವಾಸ, ಸುತ್ತಲಿನ ಕೊಳಕು, ದೊಡ್ಡವರ ಸಣ್ಣತನ… ಮುಂತಾದವುಗಳಿಂದ ಅವನು ಬೇಸತ್ತಿದ್ದಾನೆ. ಇವನ ಒಳಿತು ಮತ್ತು ಭವಿಷ್ಯಕ್ಕಾಗಿ ತಂಗಿ ದುನ್ಯಾ ಸಿರಿವಂತನಾದ ಲೂಷನ್‍ನನ್ನು ಇಷ್ಟವಿಲ್ಲದಿದ್ದರೂ ವರಿಸಲು ಸಿದ್ಧವಾಗಿರುವ ವಿಷಯ ಈಗಷ್ಟೇ ಅವನಿಗೆ ತಾಯಿಯ ಪತ್ರದಿಂದ ತಿಳಿದಿದೆ. ಏನನ್ನಾದರೂ ಗಂಭೀರವಾಗಿ ಯೋಚಿಸುವಾಗ ಕೈಕಟ್ಟಿ ಅತ್ತಿಂದಿತ್ತ ಸರಸರನೆ ಓಡಾಡುವ ತಂಗಿಯ ಚಿತ್ರ ಅವನ ಕಣ್ಣ ಮುಂದಿದೆ.
ಕಾವ್ಯಾ ಓದಿದ ಹೊತ್ತಿಗೆ ಅಂಕಣದಲ್ಲಿ ಫ್ಯದೊರ್ ದಾಸ್ತಯೇವ್ಸ್ಕಿಯ ಪ್ರಸಿದ್ಧ ಕಾದಂಬರಿ “ಕ್ರೈಂ ಅಂಡ್‌ ಪನಿಷ್ಮೆಂಟ್‌” ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

Read More

ಇಲ್ಲದ ಸಲ್ಲದ ಭ್ರಮೆಗಳು ಮತ್ತು ಸ್ವಯಂ ಚಿಕಿತ್ಸೆ ತಂದೊಡ್ಡುವ ಆಪತ್ತುಗಳು

ಟಿವಿಯಲ್ಲಿ ಕೆಲವು ಖಾಯಿಲೆಯ ಕುರಿತಾಗಿ ಬರುವ ಮಾತುಗಳನ್ನು, ಪೇಪರಿನಲ್ಲಿ ಬರುವ ವಿಷಯಗಳನ್ನು ಓದಿ ಮತ್ತು ಗೂಗಲ್ ಸರ್ಚ್‌ನಲ್ಲಿ ಬರುವ ವಿವರಗಳನ್ನು ನೋಡಿಕೊಂಡು ತಮಗೆ ಆ ಕಾಯಿಲೆ ಇದೆ ಮತ್ತು ಈ ರೋಗ ಇದೆ ಎಂದು ತಪ್ಪಾಗಿ ನಿಶ್ಚಯಿಸಿಬಿಡುವ ಬೃಹಸ್ಪತಿಗಳು ಕೂಡ ನಮ್ಮಲ್ಲಿ ಇದ್ದಾರೆ.  ಅಷ್ಟೇ ಅಲ್ಲ, ಕೆಲವೊಮ್ಮೆ ಕಾಯಿಲೆಗಳಿಗೆ ಸ್ವಯಂ ಔಷಧಿ ಸೇವಿಸುವ ಪರಿಪಾಠ  ಇತ್ತೀಚೆಗೆ ಹೆಚ್ಚಾಗಿದೆ. ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ  ಡಾ. ಕೆ.ಬಿ. ಸೂರ್ಯಕುಮಾರ್ ಬರಹ 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ