Advertisement

Tag: kendasampige

ಆಕ್ಸಿಡೆಂಟೂ… ಅಜ್ಜಿಯ ಆರೈಕೆಯೂ: ಸುಮಾವೀಣಾ ಸರಣಿ

ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡು ಬಿಟ್ಟಳು. ನನಗೋ ಕೋಪವೆಂದರೆ ಕೋಪ. “ನಾನು ಪಾಯಸ ಕುಡಿದಿದ್ದೇನೆ’’ ಅಂದರೆ ಕೇಳಲೇ ಇಲ್ಲ. ಗಲ್ಲ ಸವರಿ, ತಲೆ ಸವರಿ “ಊಟ ವೇಸ್ಟ್ ಮಾಡಬಾರದು….!” ಎನ್ನುತ್ತಾ ತಿನ್ನಿಸಲು ಬಂದರೆ ನಾನು ತಿನ್ನುತ್ತೇನೆಯೇ? ಸಾಧ್ಯನಾ? ತುತ್ತನ್ನಷ್ಟೇ ತಿಂದೆ ಕೋಪದಿಂದ. ತನ್ನ ಕೈಯ್ಯಲ್ಲೇ ನನ್ನ ಬಾಯೊರೆಸಿ “ಜಾಗ್ರತೆ ಈಗ್ ಹೋಗು ಸಂಜೆ ಬೇಗ ಸೈಡಲ್ಲಿ ಬಾ” ಎಂದು ಟಾಟಾ ಹೇಳಿಬಿಟ್ಟಳು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಹೋಮ್‌ವರ್ಕ್‌ ಎಂದರೇನು?: ಅನುಸೂಯ ಯತೀಶ್ ಸರಣಿ

ಆ ಮೂವರು ಮಕ್ಕಳು ನಮ್ಮ ಶಾಲೆಯಲ್ಲಿ ಹೋಮ್ ವರ್ಕ್ ಮಾಡದೇ ಬರುವ ಶುದ್ಧ ಸೋಂಬೇರಿಗಳು. ಇವರದು ಮುಗಿಯದ ಅನುದಿನದ ಕಥೆ. ಅವರನ್ನ ನಿತ್ಯ ಹೀಗೆ ಕಾರಣಗಳನ್ನು ಹುಡುಕಿ ವಹಿಸಿಕೊಳ್ಳುತ್ತಾ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುತ್ತಿರುವ ವ್ಯಾಮೋಹಿ ಅಮ್ಮಂದಿರು ಅವರು ಎಂದರು. ಈ ಮಾತು ಕೇಳಿ ನನ್ನ ಕೈಗೆ ಸಿಕ್ಕಂತಾಗಿದ್ದ ಆಕಾಶ ತಲೆ ಮೇಲೆ ಅಪ್ಪಳಿಸಿದಂತಾಯಿತು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ಕತೆ

ಸೂರ್ಯನಿಗೋ ಯಾರು ಹುಟ್ಟಿದರೆಷ್ಟು? ಯಾರು ಸತ್ತರೆಷ್ಟು? ಅವನ ಕೆಲಸ ಅವನದ್ದೇ. ಬೆಳಗಿನ ಮೋಟಾರು ಗಾಡಿ ಬಂದು ಹೋದ ಸದ್ದಾಯಿತು. ಬಸವಣ್ಣನ ಅಣ್ಣನ ಮಗ ಮಲ್ಲೇಶ ಬಾಗಿಲಲ್ಲಿ ಬಂದು ನಿಂತಿದ್ದ. ನಿಧಾನಕ್ಕೆ ಬಸವಣ್ಣನ ಬಳಿಗೆ ಬಂದ. ಬೆನ್ನು ಸವರಿದ. ಅವರಿಬ್ಬರೆ ತಾನೆ ಗೋಪುವನ್ನು ಕೊನೆಯ ಬಾರಿಗೆ ನೋಡಿದವರು. ಕಾಣುತ್ತಿದ್ದಂತೇ ಕೈಜಾರಿ ಬಿದ್ದ ಗೋಪು ಅಪ್ಪಾ ಅಪ್ಪಯ್ಯಾ ಎಂದು ಕೂಗಿದ್ದೊಂದೇ ಗೊತ್ತು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ಕತೆ “ಭೂಮಿಯೊಳಗಿದೆ ಬದುಕು” ನಿಮ್ಮ ಓದಿಗೆ

Read More

ಕಾರೂ… ಕಾರ್‌ ಬಾರೂ..: ಗುರುಪ್ರಸಾದ ಕುರ್ತಕೋಟಿ ಸರಣಿ

ಕಾರನ್ನ ಮನೆಗೆ ನಾನೇ ಓಡಿಸಿಕೊಂಡು ಬಂದೆ. ಜೊತೆಗೆ ಅಜ್ಜಂಪುರ ಸರ್ ಕೂಡ ಬಂದರು. ಅವರ ಧೈರ್ಯ ಮೆಚ್ಚಲೇಬೇಕು! ನನಗೆ ಅಮೆರಿಕೆಯಲ್ಲಿ ಮೊದಲೇ ಕಾರ್ ಓಡಿಸಿದ ಅನುಭವ ಇತ್ತು. ಹಿಂದೆ ಒಂದೆರಡು ಬಾರಿ ಕೆಲವು ತಿಂಗಳಿಗೆ ಅಂತ ಅಮೆರಿಕೆಯ ಯುಟಾ (Utah) ಗೆ ಹೋಗಿದ್ದಾಗ ಅಲ್ಲಿ ನನ್ನ ಮ್ಯಾನೇಜರ್ ನನಗೆ ಒತ್ತಾಯ ಮಾಡಿ ಕಾರ್ ಓಡಿಸಲು ರೂಡಿ ಮಾಡಿಸಿದ್ದು ಈಗ ಪ್ರಯೋಜನಕ್ಕೆ ಬಂದಿತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಎಂಟನೆಯ ಬರಹ

Read More

ಏನು ಬರೆಯುವುದು?: ಎಂ.ವಿ. ಶಶಿಭೂಷಣ ರಾಜು ಬರಹ

ತಮ್ಮ ಖಯಾಲಿಗೋ, ಸಾಮಾಜಿಕ ಜವಾಬ್ದಾರಿಯಿಂದಲೋ, ಸಮಾಜಕ್ಕೆ ತನ್ನದೊಂದು ಅಳಿಲ ಸೇವೆ ಎಂದೋ ಪ್ರಖ್ಯಾತಗೊಳ್ಳಲೋ ಬರೆಯುವರಿಗೆ ಸ್ವಲ್ಪ ಭಯ ಇದ್ದೇ ಇರುತ್ತದೆ. ಏಕೆಂದರೆ ಸಹಾಯ ಮಾಡಿಸಿಕೊಂಡವರೇ ಎದುರು ತಿರುಗುವುದು, ಹಿಂದೆ ಕೆಟ್ಟದಾಗಿ ಆಡಿಕೊಳ್ಳುವುದು, ಕಷ್ಟಕೊಡುವುದು ಹೀಗೆ ಅನೇಕ ರೀತಿಯಲ್ಲಿ ನೋವು ಕೊಡುವುದರಿಂದ, ನನಗ್ಯಾಕೆ ಇಲ್ಲದ ಉಸಾಬರಿ ಎಂದುಕೊಳ್ಳುವವರು ಸಂಖ್ಯೆ ಹೆಚ್ಚಾಗುತ್ತಿದೆ.
ಎಂ.ವಿ. ಶಶಿಭೂಷಣ ರಾಜು ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ