ಪ್ರಕೃತಿಯ ರಿಯಲ್ ಡೆಮೋ: ಸುಮಾವೀಣಾ ಸರಣಿ
ಇಲ್ಲಿನ ಜನರು ಮಳೆಗಾಲಕ್ಕೆ ಪ್ರತ್ಯೇಕ ಶಾಪಿಂಗ್ ಮಾಡಬೇಕು. ಜರ್ಕಿನ್ಸ್, ರೇನ್ಕೊಟ್, ಕೊಡೆಗಳು, ಸ್ಕಾರ್ಫ್‌ಗಳು, ಸ್ವೆಟರ್‌ಗಳು, ಟೋಪಿಗಳು, ಟಾರ್ಪಲ್ಸ್ ಮೆಡಿಸಿನ್ಸ್, ಜೇನು ಇತ್ಯಾದಿ. ಇದರ ಜೊತೆಗೆ ಸೌದೆಯನ್ನು ಹಾಕಿಸಿಕೊಳ್ಳುವುದು. ಒಂದು ಜೀಪ್ ಇಲ್ಲವೆ ಮಿನಿ ಲಾರಿಯಲ್ಲಿ ಒಂದು ಅಟ್ಟಿ ಎರಡು ಅಟ್ಟಿ ಸೌದೆ ಹೀಗೆ ಹಾಕಿಸಿಕೊಂಡರೆ ಅದನ್ನು ಒಡೆಯಲು ಜನ ಇರುತ್ತಿದ್ದರು. ‘ಕೊಡ್ಲಿ ಸೌದೆಯನ್ನು ಒಡೆಯಲು ಬಳಸುವ ಪರಿಕರ. ‘ಕೊಡ್ಲಿ’ ಪದದಲ್ಲಿ ಒತ್ತಕ್ಷರ ಬಿಡಿಸಿ ಹೊಸದೊಂದು ‘ಅ’ ಸ್ವರವನ್ನು ಸೇರಿಸಿದರೆ ‘ಕೊಡಲಿ’ ಆಗುತ್ತದೆ ನಮ್ಮ ಶಿಷ್ಟ ಭಾಷೆಯನ್ನು ‘ಕೊಡಲಿ’ ಎಂದರೆ ‘ನೀಡಲಿ’ ಎಂದರ್ಥ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ