Advertisement

Tag: Yogindra Maravanthe

ಲಂಡನ್ನಿನ ಸ್ಮರಣೆಯಲ್ಲಿ ದೇಶಭಕ್ತ ತಾತ್ವಿಕರು…

ನ್ಯಾಯಾಂಗ ಹೋರಾಟದ ಸೋಲು ತಿಲಕರ ಖ್ಯಾತಿಯನ್ನು ವರ್ಚಸ್ಸನ್ನು ಹೆಚ್ಚಿಸಿತ್ತು. ದಂತಕತೆಯಾಗಿದ್ದ ಪ್ರಸಿದ್ಧ ಪತ್ರಿಕೋದ್ಯಮಿ ಬೆಂಜಮಿನ್ ಹಾರ್ನಿಮನ್ ಸಂಪಾದಕತ್ವದ “ಬಾಂಬೆ ಕ್ರೋನಿಕಲ್” ಪತ್ರಿಕೆ “ಬ್ರಿಟಿಷ್ ಜ್ಯೂರಿ ಮತ್ತು ನ್ಯಾಯಾಧೀಶರು ಲೋಕಮಾನ್ಯ ತಿಲಕರ ಬಗ್ಗೆ ಹೇಳಿದುದನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಜನರ ಪ್ರೀತಿಯ ಹೃದಯಸಿಂಹಾಸನದಿಂದ ತಿಲಕರನ್ನು ಕೆಳಗಿಳಿಸುವಲ್ಲಿ ಕೋರ್ಟಿನ ನಿರ್ಣಯಗಳೆಲ್ಲ ನಿರರ್ಥಕ” ಎಂದು ಬರೆದಿತ್ತು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯ ಕೊನೆಯ ಕಂತಿನಲ್ಲಿ ಯೋಗೀಂದ್ರ ಮರವಂತೆ ಬರಹ

Read More

ಬಾರ್ಡೋಲಿಯ ಸರ್ದಾರರ ಬ್ಯಾರಿಸ್ಟರ್ ದಿನಗಳು

ಹೈಸ್ಕೂಲಿನಲ್ಲಿ ಕೋಲಿನಿಂದ ಯಾವಾಗಲೂ ಮಕ್ಕಳನ್ನು ವಿಪರೀತ ಹೊಡೆಯುತ್ತಿದ್ದ, ವಿದ್ಯಾರ್ಥಿಗಳಿಗೆ ದೊಡ್ಡ ದಂಡ ವಿಧಿಸುತ್ತಿದ್ದ ಶಿಕ್ಷಕರೊಬ್ಬರ ವರ್ತನೆಯನ್ನು ಪ್ರತಿಭಟಿಸಿ ಗಲಾಟೆ ಮಾಡಿದ್ದರು. ಸಹವಿದ್ಯಾರ್ಥಿಗಳನ್ನು ಸಂಘಟಿಸಿ ತರಗತಿ ಬಹಿಷ್ಕರಿಸಿದ್ದರು. ಪಟೇಲರು ಸಂಘಟಿಸಿದ ಶಾಲಾದಿನಗಳ ಮೊದಲ ಮುಷ್ಕರ ಮೂರನೆಯ ದಿನಕ್ಕೆ ಕಾಲಿಟ್ಟಾಗ, ಹುಡುಗನ ನಾಯಕತ್ವ ಮತ್ತು ಸಂಘಟನೆಯನ್ನು ಗುರುತಿಸಿದ ಪ್ರಾಂಶುಪಾಲರು ಮಧ್ಯ ಪ್ರವೇಶಿಸಿ, ವಿದ್ಯಾರ್ಥಿಗಳನ್ನು ಮುಂದೆಂದೂ ಆ ಅಧ್ಯಾಪಕರು ಕಟುವಾಗಿ ಶಿಕ್ಷಿಸದಿರುವ ಆಶ್ವಾಸನೆ ನೀಡಿದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ

Read More

ಯುದ್ಧಕಾಲದ ಸಿಗಾರುಪ್ರಿಯ ನಾಯಕ

1932ರಲ್ಲಿ ಚರ್ಚಿಲ್ ತನ್ನ ಪೂರ್ವಜರ ಇತಿಹಾಸ ಹುಡುಕಿ ಬರೆಯಲು ಯುರೋಪ್ ತಿರುಗಾಟದಲ್ಲಿದ್ದಾಗ ಜರ್ಮನಿಯಲ್ಲಿ ಹಿಟ್ಲರ್‌ನನ್ನು ಭೇಟಿಯಾಗಲು ಬಯಸಿದ್ದರು. ಹಿಟ್ಲರ್ ಭೇಟಿಗೆ ಪೂರ್ವದಲ್ಲಿ ತಾನು ಕೇಳಬೇಕೆಂದುಕೊಂಡ ಪ್ರಶ್ನೆಗಳನ್ನು ಬರೆದೂ ತಪುಪಿಸಿದ್ದರು. ಅವುಗಳಲ್ಲೊಂದು ಯಹೂದಿ ದ್ವೇಷದ ಕುರಿತಾದ “ಯಾವುದೇ ಮನುಷ್ಯ ತಾನು ಎಲ್ಲಿ ಹುಟ್ಟುವೆ ಎಂದು ಹೇಗೆ ನಿರ್ಧರಿಸಲು ಸಾಧ್ಯ?” ಎಂಬುದಾಗಿತ್ತು. ಇಂತಹ ಪ್ರಶ್ನೆಗಳೇ ಅಂದು ಇಬ್ಬರು ನಾಯಕರ ಭೇಟಿ ರದ್ದಾಗಲು ಕಾರಣ ಆಗಿರಬೇಕು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ

Read More

ಕೊನೆಯ ಸಿಖ್ ದೊರೆಯ ಹತಾಶ ಚರಿತೆ

ತಾಯಿಯಿಂದ ದೂರವಾಗಿ ಕೆಲವು ವರ್ಷಗಳ ನಂತರ, ನೇಪಾಳದಲ್ಲಿ ಆಕೆ ತಲೆಮರೆಸಿಕೊಂಡಿರುವುದು ಗೊತ್ತಾಗಿತ್ತು. ದುಲೀಪ್ ಸಿಂಗ್ ಅಮ್ಮನಿಗೆ ಹಲವು ಪತ್ರಗಳನ್ನು ಬರೆದಿದ್ದ. ನಿರಂತರ ಕೋರಿಕೆಯ ನಂತರ ಕೊಲ್ಕತ್ತಾದಲ್ಲಿ ತಾಯಿ-ಮಗನ ಭೇಟಿಗೆ ವ್ಯವಸ್ಥೆ ಮಾಡಲಾಯಿತು. 13 ವರ್ಷಗಳ ನಂತರ ಕಾಣಸಿಕ್ಕ ಮಗ ನಯವಾಗಿ ಮುಖ ಕ್ಷೌರ ಮಾಡಿಕೊಂಡು “ಜಂಟಲ್ಲ್ಮ್ಯಾನ್” ಆಗಿದ್ದನ್ನು ನೋಡಿ, ಸಿಖ್ ಸಾಮ್ರಾಜ್ಯ ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ದುಃಖ ಪಂಜಾಬಿ ಅಸ್ಮಿತೆಯನ್ನು ಅಳಿಸಿಕೊಂಡ ಮಗನಿಂದ ಆಯಿತು ಎಂದಿದ್ದಳಂತೆ ಜಿಂದಾ ಕೌರ್.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಕೊನೆಯ ಸಿಖ್ ದೊರೆ ದುಲೀಪ್ ಸಿಂಗ್ ಜೀವನದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಇಲ್ಲಿ ಉಳಿದರು ಹೀಗೆ ನಡೆದರು ಅಂಬೇಡ್ಕರ್

ಗಾಂಧೀಜಿ ಹಳ್ಳಿಗಳನ್ನು ಭಾರತದ ಬೆನ್ನೆಲುಬು, ನಾಗರಿಕತೆಯ ತೊಟ್ಟಿಲು ಎಂದು ವೈಭವೀಕರಿಸಿದರೆ ಅಂಬೇಡ್ಕರರಿಗೆ ಅವು ಜಾತ್ಯಾಧಾರಿತ ತಾರತಮ್ಯವನ್ನು ಸ್ಥಿರಗೊಳಿಸಿ ಆಳುವ ಕೂಪಗಳಾಗಿ ಕಾಣುತ್ತಿದ್ದವು. ಒಡಹುಟ್ಟಿದವರಿಗೆ ಸೇವೆಗಳು ನಿರ್ಬಂಧಿಸಲಾದ, ಕೆಲವು ಜಾತಿಗಳವರನ್ನು ಹೀನರೆಂದು ತಿಳಿಯುವ ಹಳ್ಳಿಯಲ್ಲಿ ಅವರು ವಾಸಿಸಿದವರು. ಪಟ್ಟಣಗಳು ಅವಕಾಶಗಳನ್ನು ಒದಗಿಸುವ, ಶಿಕ್ಷಣಕ್ಕೆ ಉತ್ತೇಜನ ನೀಡುವ ಜಾತಿಯನ್ನು ಆಧರಿಸದೇ ಉದ್ಯೋಗ ಬದುಕು ನೀಡುವ ತಾಣಗಳಾಗಿ ಕಂಡಿದ್ದವು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಲಂಡನ್‌ ವಾಸದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ದಿಟದ ದೀವಿಗೆ”: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಆತ್ಮಕಥನದ ಪುಟಗಳು

ನನ್ನ ಅಮ್ಮನ ಪ್ರಾಯದ ಊರಿನ ಹುಡುಗಿಯರಿಗಿಂತ ಹೆಚ್ಚು ಚಟುವಟಿಕೆ, ಸೂಕ್ಷ್ಮಬುದ್ಧಿ, ಇನ್ನೊಬ್ಬರ ಜತೆ ನಡೆದುಕೊಳ್ಳುವ ರೀತಿ ಅನೇಕರಿಗೆ ವಿಸ್ಮಯವನ್ನು ಉಂಟುಮಾಡುತ್ತಿತ್ತು. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು.…

Read More

ಬರಹ ಭಂಡಾರ