Advertisement

ಪುಸ್ತಕ ಸಂಪಿಗೆ

ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ: ಸಂಗೀತ ರವಿರಾಜ್ ಬರಹ

ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ: ಸಂಗೀತ ರವಿರಾಜ್ ಬರಹ

ಇಲ್ಲಿನ ಕವಿತೆಗಳಲ್ಲಿ ಅತಿರಂಜಿತ ಕಲ್ಪನೆಗಳಿಗಿಂತ ತನ್ನ ನಡುವಿನ ಬದುಕನ್ನೇ ಭಿನ್ನವಾಗಿ ಅವಲೋಕಿಸುತ್ತ, ಆ ಮೂಲಕವೇ ತನ್ನ ಭಾವನೆಗಳನ್ನು ಮಿಳಿತಗೊಳಿಸಿ ಕವಿತೆಯಲ್ಲಿ ಸ್ಪುರಿಸುತ್ತಾರೆ. ಕಾವ್ಯದಿಂದಲೇ ಏನನ್ನೋ ಗೆಲ್ಲಬಯಸುತ್ತೇನೆ ಎಂಬ ಸಣ್ಣ ಆಸೆಯಿಂದ, ಜೊತೆಗೆ ಆಸ್ಥೆಯಿಂದ ಹೇಳುವಂಥದನ್ನು ಹೇಳಿಕೊಂಡಿದ್ದಾರೆ. ಮಾತಿಗಿಂತ ಕಾವ್ಯವೇ ತನ್ನ ಅಭಿವ್ಯಕ್ತಿ ಮಾಧ್ಯಮ ಎನಿಸುವಂತಹ ಜೀವಂತಿಕೆಯ ಸಾಲುಗಳು ಕವಿತೆಗಳಲ್ಲಿವೆ.
ಜಗದೀಶ್‌ ಜೋಡುಬೀಟಿ ಕವನ ಸಂಕಲನ “ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ” ಕುರಿತು ಸಂಗೀತ ರವಿರಾಜ್‌, ಚೆಂಬು ಬರಹ

read more
ಅಚ್ಚಿಯ ಮದುವೆ….: ಚಂದ್ರಮತಿ ಸೋಂದಾ ಕಾದಂಬರಿಯ ಪುಟಗಳು

ಅಚ್ಚಿಯ ಮದುವೆ….: ಚಂದ್ರಮತಿ ಸೋಂದಾ ಕಾದಂಬರಿಯ ಪುಟಗಳು

ಊರಲ್ಲಿ ಗೌಡ್ರ ಮನೆ ಅಂತ ಇದ್ದಿದ್ದೆ ಎರಡು. ಗಂಡುಹುಡುಗ್ರು ಶಾಲಿಗೆ ಬಂದ್ರೂ ಅವ್ರ ಹೆಣ್ಮಕ್ಳನ್ನ ಕಳುಸ್ತಿರ್ಲೆ. ಬ್ರಾಹ್ಮಣ ಹೆಣ್ಮಕ್ಳಷ್ಟೆ ಶಾಲಿಗೆ ಹೋಗ್ತಿದ್ದ. ಅಚ್ಚಿ ಕಲಿಯದ್ರಲ್ಲಿ ಹುಷಾರಿತ್ತು. ಗೊತ್ತಾಗದಿದ್ನ ಕೇಳಕ್ಕೆ ಅಣ್ಣ ಹ್ಯಾಂಗೂ ಮನೇಲಿದ್ದ. ಎರಡನೇ ತರಗತಿ ಮುಗದಾಗ ಕೂಸು ದೊಡ್ಡಾತು ಅಂತ ಸೀರೆ ಉಡಸಕ್ಕೆ ಶುರುಮಾಡಿದ್ದ. ಇಲ್ಲಿವರಿಗೆ ಅಕ್ಕಯ್ಯದಿಕ್ಳು ಹಾಕಿಬಿಟ್ಟ ಅಂಗಿನ ಅಮ್ಮ ಸರಿಮಾಡಿಕೊಡ್ತಿತ್ತು, ಅದ್ನೇ ಅಚ್ಚಿ ಮನೇಲಿ ತೊಟ್ಗಳ್ತಿತ್ತು. ಶಾಲಿಗೆ ಹೋಪ್ಲೆ ಅಂತ ತಂದಿದ್ದ ಎರಡೂ ಅಂಗಿ ಹರದುಹೋಗಿತ್ತು. ಅಂಟವಾಳಕಾಯಿ ಹಾಕಿ ಬಟ್ಟೆ ತೊಳದ್ರೂ ಚೊಕ್ಕ ಆಗದು ಅಷ್ಟರಲ್ಲೇ ಇತ್ತು.
ಡಾ. ಚಂದ್ರಮತಿ ಸೋಂದಾ ಹೊಸ ಕಾದಂಬರಿ “ದುಪಡಿ”ಯ ಕೆಲವು ಪುಟಗಳು ನಿಮ್ಮ ಓದಿಗೆ

read more
ಕೊನಾರ್ಕ್‌ನ ಭವ್ಯ ಸೂರ್ಯ ದೇವಾಲಯ: ಡಾ. ಜೆ. ಬಾಲಕೃಷ್ಣ ಬರಹ

ಕೊನಾರ್ಕ್‌ನ ಭವ್ಯ ಸೂರ್ಯ ದೇವಾಲಯ: ಡಾ. ಜೆ. ಬಾಲಕೃಷ್ಣ ಬರಹ

ಈಗ ಶಿಖರವೇ ಇಲ್ಲದಿರುವ ಮುಖ್ಯ ದೇಗುಲದ ಉಳಿದಿರುವ ಪೀಠ ಭಾಗದ ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಕ್ಲೋರೈಟ್ ಶಿಲೆಯಿಂದ ನಿರ್ಮಿಸಿರುವ ಸೂರ್ಯನ ಮೂರು ಪಾರ್ಶ್ವ ದೇವತಾ ವಿಗ್ರಹಗಳಿವೆ. ಆ ವಿಗ್ರಹಗಳ ಮೇಲಿನ ಒಡವೆ, ಆಭರಣಗಳ ಕುಸರಿ ಕಲೆಯಂತೂ ಚಿನಿವಾರನ ಕುಸರಿ ಕಲೆಯಷ್ಟೇ ಸೂಕ್ಷ್ಮ ಹಾಗೂ ಸುಂದರವಾಗಿವೆ. ವಿಶೇಷವೆಂದರೆ ಈ ಪಾರ್ಶ್ವ ದೇವತೆಗಳು ಬೂಟುಗಳನ್ನು ಧರಿಸಿವೆ.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಬರಹ ನಿಮ್ಮ ಓದಿಗೆ

read more
ಅಂಕುಡೊಂಕಿನ ಪಯಣ: ಡಾ. ಎಂ ಉಷಾ ಕಾದಂಬರಿಯ ಪುಟಗಳು

ಅಂಕುಡೊಂಕಿನ ಪಯಣ: ಡಾ. ಎಂ ಉಷಾ ಕಾದಂಬರಿಯ ಪುಟಗಳು

ಮೊದಲೇ ಅಸಮಧಾನಗೊಂಡಿದ್ದ ಪುಟ್ಟಮ್ಮನಿಗೆ ಮಕ್ಕಳ ಈ ಕಳ್ಳಾಟದಿಂದ ಪಿತ್ತ ನೆತ್ತಿಗೇರಿತು. ಕಂಕುಳಲ್ಲಿದ್ದ ಮಲ್ಲಿಯನ್ನು ಕೆಳಕ್ಕೆ ಕುಕ್ಕಿದವಳೆ ಸರೋಜಳ ಮೇಲೆ ಮುಗಿಬಿದ್ದಳು. ‘ಮನೆ ಕೆಲಸ ಮಾಡದು ಬುಟ್ಟು ಸೂಳೆರಂಗೆ ಅಲಂಕಾರ ಮಾಡ್ಕತಾ ಕೂತಿದಿಯಾ ಇಲ್ಲಿ? ಯಾವ ನಾಯಕಸಾನಿ ಕೊಟ್ಲೆ ಇದ್ನ ನಿಂಗೆ… ʼ ಎಂದು ಸಿಕ್ಕಸಿಕ್ಕಲ್ಲಿ ಬಡಿಯ ತೊಡಗಿದಳು. ಈ ಬಾರಿ ಗೌರಿಹಬ್ಬಕ್ಕೆಂದು ರಾಜಶೇಖರ ದಾಕ್ಷಾಯಿಣಿಗೆ ಹೊಸ ಸ್ನೋಪೌಡರ್ ಡಬ್ಬಿಗಳನ್ನು ತಂದುಕೊಟ್ಟಿದ್ದನ್ನು ಗಮನಿಸಿದ ಸರೋಜ ಚಿಕ್ಕಮ್ಮನಲ್ಲಿ ಹಳೆಯ ಡಬ್ಬಿಯನ್ನು ಕೇಳಿ ಪಡೆದಿದ್ದಳು. ಇವತ್ತು ಹಬ್ಬದ ದಿನವಾಗಿದ್ದುದು ಮತ್ತು ಕೆಲಸದಲ್ಲಿ ಮುಳುಗಿ ಹೋಗಿರುವ ಅಮ್ಮ ಗಮನಿಸುವುದಿಲ್ಲ ಎನ್ನುವ ಧೈರ್ಯದಲ್ಲಿ ಹಚ್ಚಿಕೊಂಡಿದ್ದಳು.
ಡಾ. ಎಂ. ಉಷಾ ಹೊಸ ಕಾದಂಬರಿ “ಬಾಳ ಬಟ್ಟೆ”ಯ ಕೆಲವು ಪುಟಗಳು ನಿಮ್ಮ ಓದಿಗೆ

read more
`ವ್ಯವಹಾರ ಚತುರ’ ಉಲುವಾಟು ಮಂಗಗಳು: ಡಾ. ಜೆ. ಬಾಲಕೃಷ್ಣ ಬರಹ

`ವ್ಯವಹಾರ ಚತುರ’ ಉಲುವಾಟು ಮಂಗಗಳು: ಡಾ. ಜೆ. ಬಾಲಕೃಷ್ಣ ಬರಹ

ಅಧ್ಯಯನದ ಮತ್ತೊಂದು ಪ್ರಮುಖ ಅಂಶವೆಂದರೆ, ಗಂಡು ಮಂಗಗಳು ಹೆಚ್ಚು ಕದಿಯುತ್ತಿದ್ದವು ಹಾಗೂ ಹದಿಹರೆಯದ ಗಂಡು ಮಂಗಗಳು ಈ ಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದವು. ವಿಜ್ಞಾನಿಗಳು ಹೇಳುವಂತೆ ಹದಿಹರೆಯದ ಮಂಗಗಳು ಹೆಚ್ಚು ಅಪಾಯಕ್ಕೆ ಒಡ್ಡಿಕೊಳ್ಳುವ ನಡವಳಿಕೆ ಹೊಂದಿರುತ್ತವೆ. ಈ ರೀತಿಯ ನಡವಳಿಕೆಯನ್ನು ಉಲುವಾಟು ಮಂಗಗಳು ಮೊದಲಿಗೆ ಹೇಗೆ ಕಲಿತವು ಎಂಬುದೇ ಅಚ್ಚರಿಯ ವಿಷಯವಾಗಿದೆ. ಬಹುಶಃ ಪ್ರಾರಂಭದಲ್ಲಿ ಮನುಷ್ಯರ ಪ್ರಭಾವವಿದ್ದರೂ ಇರಬಹುದು, ಆದರೆ ನಂತರ ಅದು ಹೇಗೆ ಒಂದು `ಸಾಂಸ್ಕೃತಿಕ ನಡವಳಿಕೆ’ಯಾಗಿ ಸಮುದಾಯದಲ್ಲಿ ಪ್ರಸಾರವಾಗಿದೆ ಎನ್ನುವುದರ ಕುರಿತು ಇನ್ನೂ ಹೆಚ್ಚಿನ ಮನೋವೈಜ್ಞಾನಿಕ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ಫ್ಯಾನಿಯವರು.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಕೆಲವು ಬರಹಗಳ ಸರಣಿ ನಿಮ್ಮ ಓದಿಗೆ

read more
ಕಾಲವೇ ಕಾಪಾಡಿ ಪೋಷಿಸಿದ ತಲೆಮಾರಿನ ಕಥೆ: ನಾರಾಯಣ ಯಾಜಿ ಬರಹ

ಕಾಲವೇ ಕಾಪಾಡಿ ಪೋಷಿಸಿದ ತಲೆಮಾರಿನ ಕಥೆ: ನಾರಾಯಣ ಯಾಜಿ ಬರಹ

ಕಾದಂಬರಿಯ ಪಾತ್ರಗಳು ಎರಡನೆಯ ಭಾಗದಲ್ಲಿ ಮುಖಾಮುಖಿಯಾಗುತ್ತವೆಯಾದರೂ ಅದು ತೀವ್ರತೆಗೆ ಎಡೆಮಾಡುವುದಿಲ್ಲ. ಅಲ್ಲೆಲ್ಲ ಒಂದು ಪಾತ್ರ ಸುಮ್ಮನೆ ಆ ಸ್ಥಳವನ್ನು ಬಿಟ್ಟು ದೂರಸರಿಯುತ್ತದೆ. ಚಿದಂಬರನ ಕಾಲಘಟ್ಟದಲ್ಲಿ ಅರವತ್ತರ ನಂತರದ ಸಾಮಾಜಿಕ ನಡವಳಿಕೆಯನ್ನು ಕಾಣಬಹುದು. ಮೊದಲ ಹಂತದಲ್ಲಿ ಗೋವಿಂದ ಮತ್ತು ಸವಿತಾ ದಂಪತಿಗಳ ಶ್ರಮ ಎದ್ದು ಕಾಣಿಸಿದರೆ ಎರಡನೆಯ ಭಾಗದಲ್ಲಿ ಚಿದಂಬರ ಮತ್ತು ಗಿರಿಜಾ ದಂಪತಿಗಳು ಆ ಪಾತ್ರವನ್ನು ನಿರ್ವಹಿಸಿದ್ದಾರೆ. ಇಬ್ಬರದ್ದೂ ಹೋರಾಟದ ಬದುಕು.
ರಾಜಶೇಖರ ಜೋಗಿನ್ಮನೆ ಕಾದಂಬರಿ “ಕೇಳು ಧನಂಜಯ..” ಕುರಿತು ನಾರಾಯಣ ಯಾಜಿ ಬರಹ

read more
ಮಹಿಳಾ ಕಾವ್ಯ- ಅಲಕ್ಷಿತ ಮಹಿಳಾ ಸಾಹಿತ್ಯ ಚರಿತ್ರೆಯ ಆಕರ: ಸಬಿಹಾ ಭೂಮಿಗೌಡ

ಮಹಿಳಾ ಕಾವ್ಯ- ಅಲಕ್ಷಿತ ಮಹಿಳಾ ಸಾಹಿತ್ಯ ಚರಿತ್ರೆಯ ಆಕರ: ಸಬಿಹಾ ಭೂಮಿಗೌಡ

ಕವಯಿತ್ರಿಯರ ಸ್ಮೃತಿಯಲ್ಲಿ ಮತ್ತು ಅನುಭವದಲ್ಲಿ ಅಮ್ಮನ ಪಾತ್ರ, ಕಾರ್ಯ, ಲೋಕದೃಷ್ಟಿಗಳು ವಿಶಿಷ್ಟವಾಗಿವೆ. ಅಮ್ಮನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲು ಅವಳು ಮನೆಯಿಂದ ಹೊರಹಾಕುವ ಕಸವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಹಿರಿಯ ಕವಯಿತ್ರಿ! ಅಮ್ಮ ತನ್ನ ಮನೆಯ, ಮನದ, ಸಂಬಂಧದ ಯಾವ ವಸ್ತು ವಿಚಾರಗಳನ್ನೂ ಅವುಗಳಿಂದ ಪುನರ್ ಬಳಕೆ ಸಾಧ್ಯವಿಲ್ಲ ಎನಿಸುವವರೆಗೂ ಹೊರಹಾಕುವುದಿಲ್ಲ, ಅನಂತರವೇ ವಿವಿಧ ಲಕೋಟೆಗಳಲ್ಲಿ ಹಾಕಿ ಮನೆ, ಮನದಿಂದ ಹೊರ ಅಟ್ಟುತ್ತಾಳೆ ಎಂಬ ಚಿಂತನೆಯು ಹೊಸ ಒಳನೋಟವನ್ನು ನೀಡುತ್ತದೆ.
ಪ್ರೊ. ಸಬಿಹಾ ಭೂಮಿಗೌಡ ಸಂಪಾದಿಸಿದ “ಕನ್ನಡ ಮಹಿಳಾ ಕಾವ್ಯ” ಕೃತಿಗೆ ಬರೆದ ಅವರ ಮಾತುಗಳು ಇಲ್ಲಿವೆ…

read more
ಸಹಜತೆಯ ಚೆಲುವಿನ ಕಥೆಗಳು: ಅನುಪಮಾ ಪ್ರಸಾದ್‌ ಕೃತಿಗೆ ಕೇಶವ ಮಳಗಿ ಮಾತುಗಳು

ಸಹಜತೆಯ ಚೆಲುವಿನ ಕಥೆಗಳು: ಅನುಪಮಾ ಪ್ರಸಾದ್‌ ಕೃತಿಗೆ ಕೇಶವ ಮಳಗಿ ಮಾತುಗಳು

ಸಂಕಲನದ ಕಥೆಗಳು ವಿಷಯ, ವ್ಯಾಪ್ತಿ ಹಾಗೂ ಹರಹುಗಳ ದೃಷ್ಟಿಯಿಂದಲೂ ಗಮನಾರ್ಹ. ಅನುಭವದಿಂದ ಮಾಗಿದ ಕಥೆಗಾರ್ತಿಯ ಈ ಬಗೆಯ ಸೂಕ್ಷ್ಮ ಆಯ್ಕೆಯಿಂದಾಗಿ ಸಂಕಲನಕ್ಕೊಂದು ಸಹಜ ವೈವಿಧ್ಯತೆ ದೊರಕಿ ಓದುಗರು ಪ್ರತಿ ಕಥೆಯ ವಾಚನದಲ್ಲಿಯೂ ಹೊಸ ಅನುಭವವನ್ನು ಪಡೆಯಬಲ್ಲರು. ಯಾವುದೇ ಸಂವೇದನಾಶೀಲ ಲೇಖಕ ಇಂಥದ್ದನ್ನು ಸಾಧಿಸುವುದು ಗರಿಮೆಯ ಸಂಗತಿಯೇ. ಇಲ್ಲಿನ ಹದಿಮೂರು ಕಥೆಗಳು ಓದುಗರಿಗೆ ನೀಡುವ ಅನುಭವ, ಲೋಕದೃಷ್ಟಿ, ಆರ್ದ್ರತೆಯ ಸ್ಪರ್ಶದಿಂದಾಗಿ ಅವರು ನಮ್ಯವಾಗಬಲ್ಲರು. ಅರೆಚಣ ಚಿಂತಿತರಾಗಬಲ್ಲರು.
ಅನುಪಮಾ ಪ್ರಸಾದ್‌ ಕಥಾ ಸಂಕಲನ “ಚೋದ್ಯ”ಕ್ಕೆ ಕೇಶವ ಮಳಗಿ ಬರೆದ ಮಾತುಗಳು

read more
ಹೊನ್ನೆಯ ಹಾಡಿನಂಥಾ ಆತ್ಮಕಥನ: ಕೆ.ಎನ್.ಲಾವಣ್ಯ ಪ್ರಭಾ ಬರಹ

ಹೊನ್ನೆಯ ಹಾಡಿನಂಥಾ ಆತ್ಮಕಥನ: ಕೆ.ಎನ್.ಲಾವಣ್ಯ ಪ್ರಭಾ ಬರಹ

ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತು ಆಕಾಶವಾಣಿ ಗಾಯಕಿಯಾಗಿ ಭಾವಗೀತೆಯನ್ನು ಪಿ. ಕಾಳಿಂಗರಾವ್ ಅವರ ಜೊತೆಯಲ್ಲಿ ಹಾಡಿ ಪ್ರಚಾರ ನೀಡಿದ್ದು ಮೊದಲಿಗೆ ಲೀಲಾವತಿಯವರೇ. ಭಾವಗೀತೆ ಭಕ್ತಿಗೀತೆ ಕೀರ್ತನೆಗಳು ವಚನಗಳು ಗಜಲ್‌ಗಳು ಜನಪದಗೀತೆಗಳು, ರವೀಂದ್ರ ಸಂಗೀತ ಹೀಗೆ ಬೇರೆ ಭಾಷೆಯ ಇತರ ಪ್ರಾಕಾರಗಳನ್ನೂ ಕಲಿತು ಹಾಡಿರುವುದಲ್ಲದೇ ಮಕ್ಕಳ ಕತೆಗಳು ರಂಗರೂಪಕಗಳು ಎಲ್ಲಾ ರೀತಿಯಲ್ಲಿ ಅವರು ಆಕಾಶವಾಣಿಯಲ್ಲಿ ಕೆಲಸ ನಿರ್ವಹಿಸುತ್ತಲೇ ಮುಂದೆ ಆಕಾಶವಾಯ ಸಂಗೀತ ಸಂಯೋಜಕಿಯೂ ಆಗುತ್ತಾರೆ.
ಎಚ್. ಆರ್. ಲೀಲಾವತಿ ಆತ್ಮಕಥನ “ಹಾಡಾಗಿ ಹರಿದಾಳೆ” ಕೃತಿಯ ಕುರಿತು ಕೆ.ಎನ್.ಲಾವಣ್ಯ ಪ್ರಭಾ ಬರಹ

read more

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ