ಜಗಳ ನಮ್ಮ ಮನೆದೇವರು
ಜಗಳಗಳೆಂದರೆ ಎಲ್ಲರಿಗೂ ಪ್ರತ್ಯಕ್ಷವಲ್ಲದಿದ್ದರೂ ಪರೋಕ್ಷವಾಗಿಯಾದರೂ ಇಷ್ಟವಾಗುತ್ತದೆ. ಹಸಿವು ನಿದ್ದೆಯ ಅಗತ್ಯವಿದ್ದಂತೆ, ಮನಸ್ಸಿಗೆ ಒಂದಿಷ್ಟು ಜಗಳದ ಅವಶ್ಯಕತೆಯೂ ಇದೆಯೇನೋ. ಆದರೆ ಅದು ಮನುಷ್ಯನ ಬದುಕಿಗೇ ಕುತ್ತು ತಂದಾಗ ಸಮಸ್ಯೆಗಳು ಬೆಳೆಯಲಾರಂಭಿಸುತ್ತವೆ. ಗುಬ್ಬಿಯನ್ನು ಕಂಡರೆ ಅಕ್ಕರೆ ಮೂಡಿದಂತೆ, ಬೆಕ್ಕುಗಳನ್ನು ಕಂಡರೆ ಮುದ್ದು ಬಂದಂತೆ, ಜಗಳಗಳಿಗೂ ಸಾಮಾನ್ಯವಾದುದೊಂದು ಕಾರಣವಿದೆಯೇ.. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ
ನಿಂತ ಶಹನಾಯಿಯ ನಾದ: ಕಣವಿಯವರ ಕವಿತೆಯೊಂದರ ಕುರಿತು
ಸೃಷ್ಟಿಯ ನಿಗೂಢತೆಯ ಬಗ್ಗೆ ಸದಾ ವಿಸ್ಮಯವನ್ನು, ಕುತೂಹಲವನ್ನೂ ಹೊಂದಿದ್ದ, ಆ ವಿಸ್ಮಯವನ್ನು ಕಾವ್ಯಸಾಲುಗಳಲ್ಲಿ ಪ್ರತಿಬಿಂಬಿಸುತ್ತಿದ್ದ, ಹಿರಿಯ ಕವಿ ಚೆನ್ನವೀರಣ ಕಣವಿ ತೀರಿಕೊಂಡಿದ್ದಾರೆ. ಚೆಂಬೆಳಕಿನ ಕವಿ, ಸುನೀತಗಳ ಸಾಮ್ರಾಟ, ನಾಡೋಜ ಮುಂತಾದ ಅನೇಕ ಬಿರುದುಗಳು ಅವರಿಗೆ ಸಂದಿದ್ದರೂ ಅವರು, ಕನ್ನಡ ಭಾವಗೀತೆ ಪರಂಪರೆಯ ಶ್ರೇಷ್ಟ ಕವಿಗಳಲ್ಲಿ ಒಬ್ಬರು. ಅವರ ಕಾವ್ಯದಲ್ಲಿ ಭಾವತೀವ್ರತೆಗೇ ಆದ್ಯತೆ.
‘ಪೃಥ್ವಿ ತೂಗಿದೆ ಸೂರ್ಯಚಂದ್ರರಿಗೂ ಜೋಕಾಲಿ’ ಎಂದು ಬರೆದ ಕವಿ ಅವರು. ಅವರು ಬರೆದ ‘ಬಿಸ್ಮಿಲ್ಲಾರ ಶಹನಾಯಿ ವಾದನ ಕೇಳಿ’ ಕವಿತೆಯ ಕುರಿತು ಲೇಖಕಿ…
ನಮ್ಮೂರ ಆಸ್ಪತ್ರೆಯ ನೆನಪುಗಳು
ನಾನೆಷ್ಟೇ ಬೇಡವೆಂದುಕೊಂಡರೂ ನಮ್ಮ ಶಾಲೆಯ ಕಡೆಯಿಂದ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಕರೆದೊಯ್ಯುತ್ತಿದ್ದರು. ಸಾಲದ್ದಕ್ಕೆ ಅದು ಬೇರೆ ಚುಚ್ಚುಮದ್ದುಗಳ ಕಾಲ! ಸರ್ಕಾರೀ ಶಾಲೆಯಾದ್ದರಿಂದ, ಸರ್ಕಾರದ್ದೇ ನಿರ್ದೇಶನದ ಮೇರೆಗೆ ಹೇಳದೇ ಕೇಳದೇ ನಮ್ಮನ್ನು ಇದ್ದಕ್ಕಿದ್ದಂತೆ ಆಸ್ಪತ್ರೆಗೆ ನಡೆಸಿಕೊಂಡುಹೋಗಿ ವೈದ್ಯರ ಕೋಣೆಯ ಹೊರಗೆ ಸಾಲಾಗಿ ನಿಲ್ಲಿಸಿಬಿಡುತ್ತಿದ್ದರು. ನನಗಂತೂ ಈ ಇಂಜಕ್ಷನ್ ಎಂದರೆ ಇನ್ನಿಲ್ಲದ ಭಯ. ಎಂದಿನಂತೆ ನಡೆಯುತ್ತಿದ್ದ ತರಗತಿಯ ಮಧ್ಯೆ ಇದ್ದಕ್ಕಿದ್ದಂತೆ ಒಳಪ್ರವೇಶಿಸಿದ ಮುಖ್ಯಶಿಕ್ಷಕರು ‘ಎಲ್ಲರೂ ಸಾಲಾಗಿ ಆಸ್ಪತ್ರೆಯ ಕಡೆ ನಡೆಯಿರಿ. ಯಾರೂ ಗಲಾಟೆ ಮಾಡಬಾರದು’ ಎಂದು ಉಗ್ರ ದನಿಯಲ್ಲಿ ಘೋಷಿಸಿಬಿಟ್ಟರು.
ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ!
ಅನಂತಮೂರ್ತಿ ಬರೆಯುತ್ತಿದ್ದ ಪತ್ರಗಳನ್ನು ನಾನು ಜೋಪಾನವಾಗಿ ಇಡಬೇಕಿತ್ತು. ಎಂಥ ಪತ್ರಗಳವು! ಅವರು ಚೆನ್ನೈ ಹೋಗಿದ್ದಾಗ ಅಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯನ್ನು ನೆನೆದು ಪುಳಕಿತರಾಗಿ ನನಗೆ ಬರೆದ ಪತ್ರದಲ್ಲಿ ಒಂದು ಕವನವನ್ನೇ ಬರೆದು ಕಳುಹಿಸಿದ್ದರು: `ಮತ್ತೆ ಮಳೆ ಹೊಯ್ಯುತ್ತಿದೆ!’ ಒಮ್ಮೆ `ಓದು’ ಅಂತ ಗೋಪಾಲಕೃಷ್ಣ ಅಡಿಗರ `ಭೂಮಿಗೀತ’ ಕವನವನ್ನು ಕಳುಹಿಸಿಕೊಟ್ಟಿದ್ದರು. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಅಧ್ಯಾಯವೊಂದು ನಿಮ್ಮ ಓದಿಗೆ
‘ದೆವ್ವವಿದೆ ಎಂದು ಸಾಬೀತು ಮಾಡಲಾಗದು, ಇಲ್ಲವೆಂದೂ ಹೇಳಲಾಗದು’
ಮೊಲದ ಕಾಲನ್ನು ಜೇಬಿನಲ್ಲಿಟ್ಟುಕೊಂಡು ಓಡಾಡಿಕೊಂಡಿದ್ದರೆ ಒಳ್ಳೆಯ ಕತೆ ಬರೆಯಲಾಗುವುದಿಲ್ಲ ಎನ್ನುವ ಲೇಖಕ ಐಸಾಕ್ ಬಾಷೆವಿಸ್ ಸಿಂಗರ್ ಬರೆದಿದ್ದು ಯಿದ್ದಿಷ್ ಭಾಷೆಯಲ್ಲಿ. ಜಗತ್ತಿನಲ್ಲಿ ಅತೀ ಕಡಿಮೆ ಜನರು ಮಾತನಾಡುವ ಭಾಷೆಯಿದು. ಆದರೆ ಇದೇ ಭಾಷೆಯಲ್ಲಿ ಅವನು ಸೃಷ್ಟಿಸಿದ ಸಾಹಿತ್ಯ ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡಿತು. ಅನುವಾದದ ಮೂಲಕವೇ ಬಹುದೊಡ್ಡ ಓದುಗ ಸಮುದಾಯ ಅವನಿಗೆ ಒಲಿಯಿತು. ನೊಬೆಲ್ ಪ್ರಶಸ್ತಿಯೂ ಬಂತು. 1968ರಲ್ಲಿ ಮತ್ತೊಬ್ಬ ಲೇಖಕ ಹೆರಾಲ್ಡ್ ಪ್ಲೆಂಡರ್ ‘ಪ್ಯಾರಿಸ್ ರಿವ್ಯೂ’ ಪತ್ರಿಕೆಗಾಗಿ ನಡೆಸಿದ ಸಂದರ್ಶನದಲ್ಲಿ ಸಿಂಗರ್…
ನಡಿಗೆಯ ದಾರಿ ಕರುಣಿಸಿದ ದುಪ್ಪಟ್ಟು ಖುಷಿ
ಕಾಲಚಕ್ರದ ಉರುಳುವಿಕೆಯಡಿ ಸಿಲುಕಿ ಇಂದು ವಾತಾವರಣದಲ್ಲಿ ಬದಲಾವಣೆಗಳಾಗಿವೆ. ಮುಂಜಾನೆಯ ನೀರವತೆಗೆ ಭಂಗ ತರುವ ವಾಹನಗಳ ಓಡಾಟ ಆರಂಭವಾಗಿರುತ್ತದೆ. ವಿಶಾಲ ಭತ್ತದ ಗದ್ದೆಗಳೆಲ್ಲ ಸೈಟುಗಳಾಗಿ ಪರಿವರ್ತಿತವಾಗಿ ಇಂದು ಅಲ್ಲಿ ಕಟ್ಟಡಗಳು ಮೇಲೆದ್ದಿವೆ. ಸೇತುವೆ ಮೇಲಿನ ಮುದ್ದು ಪಾರಿವಾಳಗಳು ಗುಬ್ಬಚ್ಚಿಗಳು ಎಲ್ಲಿ ಹೋದವೋ. ರಸ್ತೆ ಅಗಲೀಕರಣಕ್ಕಾಗಿ ಇಕ್ಕೆಲದ ಮರಗಳ ಬಲಿಯಾಗಿದೆ. ಇಷ್ಟಾದರೂ ಇಲ್ಲಿ ಅರಸುವ ಕಣ್ಣುಗಳಿಗೆ ಬರವಿಲ್ಲದಂತೆ ಪ್ರಕೃತಿ ತನ್ನ ಸೊಬಗನ್ನು ಕಣ್ತುಂಬಿ ಮನವನ್ನು ಸಂತೈಸುವಷ್ಟು ಉದಾರಿ.
ಯಕ್ಷಗಾನ ಪಠ್ಯ: ಪ್ರಮಾದಗಳ ಹೊಣೆ ಯಾರದ್ದು?
ಉತ್ತರ ಕನ್ನಡದ ಕರ್ಕಿ ಯಕ್ಷಗಾನ ಮಂಡಳಿ ಮರಾಠಿ ರಂಗಭೂಮಿಯ ಉದಯಕ್ಕೆ ಪ್ರೇರಣೆಯಾಗಿದೆ ಎಂದು ಮರಾಠಿ ರಂಗಭೂಮಿಯ ಇತಿಹಾಸಕಾರರೇ ಒಪ್ಪಿಕೊಂಡಿರುವಾಗ ಕನ್ನಡದ ಹೆಮ್ಮೆಯ ಕಲೆಯಾದ ಯಕ್ಷಗಾನದ ಇತಿಹಾಸದಲ್ಲಿ ಇದರ ಉಲ್ಲೇಖವಿಲ್ಲದಿರುವುದು ಬಲು ದೊಡ್ಡ ದೋಷ. ಪದ್ಮಶ್ರೀಯಂತಹ ರಾಷ್ಟ್ರ ಮಟ್ಟದ ಉನ್ನತ ಪ್ರಶಸ್ತಿಯ ಉಲ್ಲೇಖವೇ ಇಲ್ಲದಿರುವುದು ಮತ್ತೊಂದು ಕೊರತೆ. ವೇಷ ಕ್ರಮದ ಕುರಿತು ಪಠ್ಯದಲ್ಲಿ ಮಾಹಿತಿಯನ್ನು ನೀಡುವಾಗ ವಿವಿಧ ದೃಷ್ಟಿಕೋನದಿಂದ ಮಾಹಿತಿ ಸಂಗ್ರಹಿಸಿ ಉಲ್ಲೇಖಿಸದಿದ್ದರೆ ತಪ್ಪಾಗುತ್ತದೆ. ಯಕ್ಷಗಾನ ಪಠ್ಯಪುಸ್ತಕದಲ್ಲಿರುವ ಲೋಪಗಳ ಕುರಿತು ಬರೆದಿದ್ದಾರೆ ಕಡತೋಕಾ ಗೋಪಾಲಕೃಷ್ಣ ಭಾಗವತ.
ಯಕ್ಷಗಾನ ಪಠ್ಯ: ಕಲೆಗೆ ತೊಡಕುಂಟು ಮಾಡುವ ಪ್ರಮಾದಗಳು
ಕರ್ನಾಟಕದ ಕರಾವಳಿಯುದ್ಧಕ್ಕೂ ಸೊಂಪಾಗಿ ವಿಕಾಸಗೊಂಡಿರುವ ಯಕ್ಷಗಾನ ಕಲೆಯು ಅಪಾರ ವೈವಿಧ್ಯವನ್ನು ಹೊಂದಿದೆ. ಈ ವೈವಿಧ್ಯತೆಯ ಕಾರಣದಿಂದಲೇ, ಅದರ ವ್ಯಾಖ್ಯಾನವನ್ನು ಸರಳವಾಗಿ ಮಾಡುವುದು ಕಷ್ಟವಾಗಿಬಿಟ್ಟಿದೆ. ಆಯಾ ಪ್ರದೇಶಗಳ ಪ್ರಭಾವದೊಂದಿಗೆ ವಿಕಾಸ ಹೊಂದಿರುವ ಈ ಕಲೆಯನ್ನು ಏಕರೂಪವಾಗಿ ನೋಡುವುದು ಸಾಧ್ಯವಾಗುತ್ತಿಲ್ಲ. ಇದೀಗ ಯಕ್ಷಗಾನ ಕಲೆಗೊಂದು ಪಠ್ಯಪುಸ್ತಕ ರಚನೆಯಾಗಿದೆ. ಹಾಗಿದ್ದರೆ ಪಠ್ಯಪುಸ್ತಕವು ಈ ಬೃಹತ್ ಕಲಾಪ್ರಕಾರವನ್ನು ಸಾಂದ್ರವಾಗಿ ಗ್ರಹಿಸಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
ಹುಲಿ ಚಿರತೆಗಳ ಹುಡುಕಾಡುತ್ತ ಕಬಿನಿ ಅರಣ್ಯದಲ್ಲಿ..
ಸಫಾರಿಯ ಹುಮ್ಮಸ್ಸು ಎಲ್ಲರಲ್ಲಿಯೂ ಇತ್ತು. ಗಾಡಿಯಲ್ಲಿ ಕುಳಿತವರಲ್ಲಿ ಒಂದಷ್ಟು ಜನ ಆಗಲೇ “ಟೈಗರ್… ಟೈಗರ್…” ಎಂಬ ಜಪ ಮಾಡಲು ಆರಂಭಿಸಿದ್ದರು. ನಾವು ಕುಳಿತಿದ್ದ ಗಾಡಿ ಕಾಡ ಗೇಟಿನ ಒಳಗೆ ನುಗ್ಗಿ ಕಾಲು ಕಿಲೋಮೀಟರ್ ಸಾಗಿತ್ತಷ್ಟೇ.. ದೂರದಲ್ಲಿ ಚಿರತೆಯೊಂದು ಕಾಣಿಸಿತು. ಗಾಡಿ ಅದರತ್ತ ಮೆಲ್ಲಗೆ ತೆರಳಿ ನಾವೆಲ್ಲ ಅದನ್ನು ಕಣ್ಣು-ಕ್ಯಾಮರಾ ಕಣ್ಣಿನೊಳಗೆ ತುಂಬಿಕೊಳ್ಳಬಹುದೇನೋ ಅಂತ ಆಸೆಪಟ್ಟುಕೊಳ್ಳುವಷ್ಟರಲ್ಲಿ ಗಾಡಿಯ ಚಾಲಕ ಅತೀ ಉತ್ಸಾಹದಲ್ಲಿ ಗಾಡಿ ಅದರತ್ತ ಚಲಾಯಿಸಿದ. ವನ್ಯಜೀವಿ ದರ್ಶನಕ್ಕಾಗಿ ಪ್ರವಾಸ ಹೊರಟ ಅನುಭವವನ್ನು ನವಿರಾಗಿ ಬರೆದಿದ್ದಾರೆ ರೂಪಶ್ರೀ ಕಲ್ಲಿಗನೂರ್









