“ಕೊರವಂಜಿ” ಹಾಕಿಕೊಟ್ಟ ಹಾಸ್ಯೋತ್ಸವದ ಹಾದಿ…: ಎಚ್. ಗೋಪಾಲಕೃಷ್ಣ ಸರಣಿ
1996ರ ಹಾಸ್ಯೋತ್ಸವವನ್ನು ನಾ. ಕಸ್ತೂರಿ ಅವರ ನೆನಪಿಗೆ ಮಾಡಿದ್ದು. ನಾ. ಕ ಅವರನ್ನು ಕುರಿತ ಎರಡು ಪುಸ್ತಕಗಳು ಅಂದು ಕನ್ನಡ ಪ್ರಕಟಣಾ ಪ್ರಪಂಚದಲ್ಲಿಯೇ ಒಂದು ವಿನೂತನ ದಾಖಲೆ ನಿರ್ಮಿಸಿದವು. ಗೋಪಾಲಕೃಷ್ಣ (ನಾನು) ಮತ್ತು ಕೃಷ್ಣಸುಬ್ಬರಾವ್ ಸಂಪಾದಿಸಿದ್ದ ‘ಕೊರವಂಜಿ ಕಸ್ತೂರಿ’ಹಾಗೂ ಶ್ರೀ ಚಂದ್ರ ಮೋಹನ್ ಜತೆಗೆ ಕೃಷ್ಣಸುಬ್ಬರಾವ್ ಸಂಪಾದಿಸಿದ್ದ ‘ಕೊರವಂಜಿ ಶತಕಂ’ ಎರಡೇ ಗಂಟೆಗಳ ಅವಧಿಯಲ್ಲಿ ಸಂಪೂರ್ಣ ಮಾರಾಟಗೊಂಡವು! ಇದರ ಮಹತ್ವ ನಮ್ಮ ಅರಿವಿಗೆ ಬಂದದ್ದು ತಡವಾಗಿ. ತಡವಾಗಿ ಅಂದರೆ ಕೆಲವು ವರ್ಷಗಳ ನಂತರ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೧ನೇ ಬರಹ ನಿಮ್ಮ ಓದಿಗೆ
ಖಗರತ್ನ: ಡಾ. ಎಸ್.ವಿ. ನರಸಿಂಹನ್ ಸರಣಿ
ಮಳೆಗಾಲ ಬಂತೆಂದರೆ, ಕೀಟಗಳ ಸಂಖ್ಯೆಯೂ ಹೆಚ್ಚಾಗಿ, ಮರಿಹಕ್ಕಿಗಳಿಗೆ ವಿಫುಲವಾದ ಆಹಾರ ದೊರಕುವುದರಿಂದ, ಖಗರತ್ನಗಳು ಈ ಋತುವಿನಲ್ಲಿ ಗೂಡು ಕಟ್ಟುತ್ತವೆ. ಗೂಡು ಕಟ್ಟುವ ಸಂಪೂರ್ಣ ಜವಾಬ್ದಾರಿ ಹೆಣ್ಣು ಹಕ್ಕಿಯದ್ದು. ಗಂಡು ಹಕ್ಕಿಯದೇನಿದ್ದರೂ ಕೇವಲ ಮೇಲ್ವಿಚಾರಣೆ! ಒಂದು ಕೊಂಬೆಯ ತುದಿಯಲ್ಲಿ, ಕಸ-ಕಡ್ಡಿ, ಒಣಗಿದ ನಾರು-ಬೇರು ಹಾಗೂ ಪುಷ್ಕಳವಾದ ಜೇಡರ ಬಲೆಯನ್ನು ಬಳಸಿ ಕಟ್ಟುವ ಗೂಡು. ಇದು ಹೊರಗಿನಿಂದ ಒರಟಾಗಿ ಕಂಡರೂ, ಒಳಗೆ ಮುದ್ದಾದ, ಮೃದುವಾದ, ನೇತಾಡುವ ಗೂಡು. ಆಶ್ಚರ್ಯವೆಂದರೆ, ಮಳೆಯಿಂದ ರಕ್ಷಣೆಗಾಗಿ, ಅದರ ಬಾಗಿಲ ಮೇಲೊಂದು ಚಜ್ಜ!
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ
ಭಲೇ ಸ್ವಾಮೀಜಿ ಎಂದ ಮಾರ್ಕ್ ಟುಲಿ: ಕೆ. ಸತ್ಯನಾರಾಯಣ ಕಥಾ ಸರಣಿ
ಹೋಟೆಲಿಗೆ ಬಂದ ನಂತರ, ಟುಲಿ ಇದ್ದಕ್ಕಿದ್ದಂತೆ ಮೌನವಾಗಿಬಿಟ್ಟರು. ಒಂದೈದು ನಿಮಿಷ ಕಣ್ಣುಮುಚ್ಚಿ ಧ್ಯಾನಿಸುತ್ತಿರುವಂತೆ ಕಂಡರು. ಏಸಿ ಆರಿಸಿ, ಕಿಟಕಿ ಬಾಗಿಲು ತೆರೆದರು. ಚಿಂತಾಕ್ರಾಂತರಾಗಿ ಆಕಡೆ, ಈ ಕಡೆ ಹೆಜ್ಜೆ ಹಾಕುತ್ತಾ, ಕಿಟಕಿಯ ಹೊರಗಡೆ ಕಾಣುವ ವಾಹನಗಳ ಓಡಾಟ, ಜನಗಳ ಗಡಿಬಿಡಿಯನ್ನೇ ಗಮನವಿಟ್ಟು ನೋಡುತ್ತಿದ್ದರು. ಕ್ಷಣ ಕ್ಷಣಕ್ಕೂ ಮುಖದಲ್ಲಿ ಗಾಂಭೀರ್ಯ ಹೆಚ್ಚುತ್ತಿತ್ತು. ಒಂದೆರಡು ಸಲ ಮುಖ ಕಿವುಚಿಕೊಂಡ ಹಾಗಾಯಿತು. ಟೀಪಾಯ್ ಬಳಿ ಬಂದು ಗ್ಲಾಸಿಗೆ ನೀರು ಬಗ್ಗಿಸಿಕೊಂಡು ಕುಡಿದರು. ಆದರೂ ಸಮಾಧಾನಗೊಂಡಂತೆ ಕಾಣಲಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಹೀನ ಸುಳಿ ಹೋರಿಕರ ಮತ್ತು ಸಾಟಿಬುಗುರಿಯವರು: ಎಸ್. ಗಂಗಾಧರಯ್ಯ ಅನುಭವ ಕಥನ
ಅವತ್ತು ಹೊಲದಲ್ಲಿ ಆ ಪುಣ್ಯಾತ್ಮ ಕರುವಿನ ಮೈಲ್ಲಿ ಹೀನಸುಳಿಯನ್ನು ಪತ್ತೆ ಹಚ್ಚಿದ ಲಾಗಾಯ್ತಿನಿಂದ ಅದನ್ನು ಮಾರಾಟ ಮಾಡುವುದು ಕಷ್ಟವಂತೂ ಆಯ್ತು. ನೋಡಲು ಬಂದವರು `ಹೇಳಂಗಿದ್ರೆ ಈ ಕರ ಐತಲ್ಲ ಇದ್ರ ಯಾಪಾರ ಹೇಳಿ’ ಅಂತ ಇನ್ನೊಂದು ಕರುವನ್ನು ತೋರಿಸುತ್ತಿದ್ದರು. ಯಾರೋ ಅಪರೂಪಕ್ಕೊಬ್ಬ `ಹಣೇಲಿ ಬರ್ದದ್ದು ಆಗ್ಲಿ ತಗಂತೀನಿ. ನೋಡಿ ಸರ್ಯಾಗಿ ಗಿಟ್ಟಂಗೆ ಹೇಳು ಮತ್ತೆ ಯಾಪಾರಾನಾ’ಅಂತ ಆರಕ್ಕೆ ಮೂರರಂಗೆ ಬೇಕಾಬಿಟ್ಟಿ ಕೇಳುತ್ತಾ ರೋಸುತ್ತಿದ್ದರು. ಹಿಂಗೆ ಹೋರಿಗೆ ಹೀನಸುಳಿಯ ಇದೆ ಅಂತ ತಿಳಿಯುತ್ತಲೇ ಯಂಗಾರಾ ಮಾಡಿ ಸಸ್ತಕ್ಕೆ ಅಮಿಕ್ಕಂಡು ಬಿಡಬಹುದು ಅಂತ ಸುಮಾರು ಜನ ಸಾಟಿ ಬುಗುರಿಯವರು ಬಂದು ಬಂದು ನೋಡಿಕೊಂಡು ಹೋಗುತ್ತಿದ್ದರು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”
ಮೇಷ್ಟ್ರಾಗಿ ಹೇಳಿದ ಆ ಸುಳ್ಳು!!: ಬಸವನಗೌಡ ಹೆಬ್ಬಳಗೆರೆ ಸರಣಿ
ಮಾರನೇ ದಿನದಿಂದ ಆ ತರಗತಿಯ ಮಕ್ಕಳಲ್ಲಿ ವಿಶೇಷ ಬದಲಾವಣೆ ಕಂಡಿತು. ಅದೂ ಇದೂ ನೆಪ ಹೇಳಿ ಶಾಲೆಗೆ ಚಕ್ಕರ್ ಹಾಕುತ್ತಿದ್ದವರೆಲ್ಲ ಇಂದು ಶಾಲೆಗೆ ಬಂದಿದ್ದರು ಕೊಟ್ಟ ಹೋಂ ವರ್ಕ್ ಮುಗಿಸಿದ್ದರು. ಈ ವಿಷಯವು ಕಾಡ್ಗಿಚ್ಚಿನಂತೆ ನಮ್ಮ ಶಾಲೆಯ ಇತರೆ ತರಗತಿಯ ಮಕ್ಕಳಿಗೂ ಹಬ್ಬಿತು. ಅವರೂ ಸಹ ಬುದ್ಧಿ ಶಕ್ತಿ ಹೇಳಲು ಪೀಡಿಸತೊಡಗಿದರು. ನನ್ನ ಈ ಮಾತನ್ನು 8 ನೇ ತರಗತಿಯ ಮಕ್ಕಳೂ ಸಹ ನಂಬಿದ್ದರು!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತಾರನೆಯ ಕಂತು ನಿಮ್ಮ ಓದಿಗೆ
ಊರ ಹೆಸರು “ಸೀತಾಪುರ”: ಕೆ. ಸತ್ಯನಾರಾಯಣ ಕಥಾ ಸರಣಿ
ದ್ವೇಷಕ್ಕೋ, ಜಿದ್ದಿಗೋ, ಶೇಕದಾರ್ ನಮ್ಮ ಪುರಾತನ ಗ್ರಾಮವಾದ ಗೊಬ್ಬಳಿಪುರದ ಬಗ್ಗೆ ಅಪಪ್ರಚಾರ ಶುರುಮಾಡಿದ. ಪುರದ ಹೆಣ್ಣುಮಕ್ಕಳೆಲ್ಲ ಸೀತಾದೇವಿ ತರ, ತೀರಾ ಅಯೋಧ್ಯೆಗೇ ಮದುವೆ ಮಾಡಿಕೊಟ್ಟಿದ್ದರೂ ಹುಡುಗೀರ ಕೆಟ್ಟ ಜಾತಕದಿಂದಾಗಿ ಯಾವ ಮದುವೇನೂ ನಾಲ್ಕು ದಿನ ಕೂಡ ನಿಲ್ಲೋಲ್ಲ. ನಿಂತರೂ ರಾಮನಿಗೆ ಆದ ಹಾಗೆ ಇವರನ್ನು ಕೊಟ್ಟ ಮನೆಯಲ್ಲೂ ಏಳಿಗೆ ಕಂಡು ಬರೋಲ್ಲ. ಸಂಸಾರದೊಳಗೆ ಇದ್ದರೂ ಗೊಬ್ಬಳಿ ಮುಳ್ಳಿನ ತರಹ ಆಳವಾಗಿ ಊರಿ ಹಿಂಸೆ ಮಾಡ್ತಾರೆ. ಮುಳ್ಳು ತೆಗೆಯೋಕೂ ಕಷ್ಟ. ತೆಗೆದರೂ ಗಾಯ ಹಾಗೇ ಉಳಿದಿರುತ್ತೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಕಣಗಾಲ ಮತ್ತು ಕಳ್ಳರು: ಎಸ್. ಗಂಗಾಧರಯ್ಯ ಅನುಭವ ಕಥನ
ಮೂರ್ತಿ ಚಕ್ಕನೆ ಎದ್ದವನೇ ನನ್ನನ್ನು `ಲೇ ಆ ಕಡಿಂದ ಓಡಿ ಬಾರೋ’ ಅಂತ ನನಗೆ ಕೂಗಿ ಹೇಳುತ್ತಾ ಕಳ್ಳನ ಹಿಂದೆ ಬಿದ್ದ. ನಾನು ಕೂತಲ್ಲಿಂದ ಬೇಗನೇ ಮೇಲೆದ್ದರೂ ಇದು ನಾನು ನೋಡಿದ್ದ ಮೊದಲ ಕಳ್ಳ ಹಾಗೂ ಕಳ್ಳತನವಾದ್ದರಿಂದ ಒಂಚೂರು ಗಲಿಬಿಲಿಗೊಂಡು ಅವರತ್ತ ತಕ್ಷಣ ಓಡಲಾಗಲಿಲ್ಲ. ಅವರಿಬ್ಬರೂ ಆಗಲೇ ನಮ್ಮ ಹೊಲವನ್ನು ದಾಟಿದ್ದರು. ಪಕ್ಕದ ಹೊಲದಲ್ಲಿ ಮೂರ್ತಿಯ ಕೂಗು ಕೇಳಿಸುತ್ತಿತ್ತು. ನಾನು ಉಸುರುಯ್ದುಕೊಂಡು ನಮ್ಮ ಹೊಲದ ಬದಿಗೆ ಬರುವಷ್ಟರಲ್ಲಿ ಮೂರ್ತಿ ಹಿಂದಿರುಗಿ ಬರುತ್ತಿದ್ದ. `
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಎಂಟನೆಯ ಕಂತು
“ಹಾಸ್ಯೋತ್ಸವ” ಹೇಗಾಯ್ತು ಗೊತ್ತ?: ಎಚ್. ಗೋಪಾಲಕೃಷ್ಣ ಸರಣಿ
ನಮ್ಮ ಇಡೀ ಜೀವಮಾನದ ಮತ್ತು ಮುಂದಿನ ಹತ್ತೋ ಹನ್ನೆರಡು ಜನ್ಮದ ದುಡಿತ ಅದಕ್ಕೆ ಹಾಕಬೇಕು ಅನಿಸ್ತಾ? ಕೈನಲ್ಲಿ ಬಿಡಿಕಾಸು ಅಥವಾ ಒಂದೇ ಒಂದು ನಯಾಪೈಸೆ, ಇಲ್ಲದಿರುವಾಗ ಇಂತಹ ತಿಕ್ಕಲು ತಿಕ್ಕಲು ಐಡಿಯಾಗಳು ಮನಸಿಗೆ ಬರುತವೆ ಅಂತ ಒಬ್ಬರು ಗೊಣಗಿದರಾ….? ಕೈತುಂಬ ಕಾಸಿದ್ದು ಯಾವದಾದರೂ ಮಂತ್ರಿ ಪಂತ್ರಿನ ಇನ್ವಾಲ್ವ್ ಮಾಡಿದ್ದರೆ ಅಂವ ಲಾರಿಗಳಲ್ಲಿ ತುಂಬಿ ಜನರನ್ನ ಸಪ್ಲೈ ಮಾಡಬಹುದು! ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೦ನೇ ಬರಹ ನಿಮ್ಮ ಓದಿಗೆ
ಕೊಳದ ಬಕ: ಡಾ. ಎಸ್.ವಿ. ನರಸಿಂಹನ್ ಸರಣಿ
ಕೊಳದ ಬಕಗಳು ಕೊಳ, ಕೆರೆ, ಗದ್ದೆ, ಕೆರೆ-ಕಾಲುವೆ, ಮುಂತಾದ ಪ್ರದೇಶಗಳಲ್ಲಿ ಹಾಗೂ ಜೊಂಡು-ಕೆಸರು ಇರುವೆಡೆಗಳಲ್ಲಿ, ಒಂಟಿಯಾಗಿ, ಅಥವಾ ತಮ್ಮ ಕುಟುಂಬಕ್ಕೆ ಸೇರಿದ ಇತರ ಹಕ್ಕಿಗಳೊಂದಿಗೆ ಗುಂಪಿನಲ್ಲಿ, ಬೇಟೆಯರಸುವುದನ್ನು ಕಾಣಬಹುದು. ಒಂದಿಷ್ಟೂ ಅಲುಗಾಡದೆ, ಒಂಟಿಕಾಲಿನ ಮೇಲೆ ನಿಂತು, ತದೇಕಚಿತ್ತದಿಂದ ಬೇಟೆಯಾಡುವ ಕೊಳದ ಬಕ, ಕೆಲವು ಸಾರಿ ಕೊಕ್ಕಿನಲ್ಲಿ ಸಣ್ಣ ಎರೆಹುಳವನ್ನು ಹಿಡಿದುಕೊಂಡು ಅದನ್ನು ನೀರಿನಲ್ಲಿ ಹಾಕಿ, ಸುತ್ತ ಮುತ್ತಲ ಮೀನುಗಳನ್ನು ಆಕರ್ಷಿಸುವ ಪರಿ ನಿಜಕ್ಕೂ ಕುತೂಹಲಕಾರಿ!
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಕೊಳದ ಬಕ” ಹಕ್ಕಿಯ ಕುರಿತ ಬರಹ ಇಲ್ಲಿದೆ










